ವೈಮಾನಿಕ ದುರಂತದಲ್ಲಿ ಅಂತ್ಯ ಕಂಡ ರಾಜಕಾರಣಿಗಳು

-ಅಜಿತ್ ಪವಾರ್ -ವಿಜಯ್ ರೂಪಾನಿ 2025: ಅಹಮದಾಬಾದ್‌ನಿಂದ ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಜನರು ಸಾವನ್ನಪ್ಪಿದ್ದರು. ಲಂಡನ್‌ನ ಗ್ಯಾಟ್ವಿಕ್‌ಗೆ ಪ್ರಯಾಣಿಸುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಬಿದ್ದು ಭಾರೀ ದುರಂತ ಸಂಭವಿಸಿತ್ತು. 68 ವರ್ಷದ ವಿಜಯ್ ರೂಪಾನಿ ಬಿಜೆಪಿ ನಾಯಕರಾಗಿದ್ದರು. 2016 ರಿಂದ 2021 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. -ಸಂಜಯ್ ಗಾಂಧಿ (1980):ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಹಾಗೂ ಉತ್ತರಾಧಿಕಾರಿ ಎಂದೇ ಪರಿಗಣಿಸಲಾಗಿದ್ದ ಸಂಜಯ್ ಗಾಂಧಿ ಸಂಜಯ್ ಗಾಂಧಿ ಜೂನ್ 23, 1980 ರಂದು ದೆಹಲಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. 33 ವರ್ಷದ ಅವರು ಎರಡು ಆಸನಗಳ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ದುರಂತ ಸಂಭವಿಸಿತ್ತು. ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ ಪರೀಕ್ಷಾ ಹಾರಾಟದ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು. -ಮಾಧವರಾವ್ ಸಿಂಧಿಯಾ (2001): ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ ಮಾಧವರಾವ್ ಸಿಂಧಿಯಾ ಅವರು ಸಹ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. ಗ್ವಾಲಿಯರ್ ರಾಜಮನೆತನದ ಸದಸ್ಯರೂ ಆಗಿದ್ದರು. ಸೆಪ್ಟೆಂಬರ್ 30, 2001 ರಂದು ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಭೋಗಾಂವ್‌ನಲ್ಲಿ ನಡೆದ ಚಾರ್ಟರ್ಡ್ ವಿಮಾನ ಅಪಘಾತ ದುರಂತದಲ್ಲಿ ಇವರು ಮೃತಪಟ್ಟಿದ್ದರು. -ಜಿಎಂಸಿ ಬಾಲಯೋಗಿ (2002): ಅಂದಿನ ಲೋಕಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರಾಗಿದ್ದ ಜಿಎಂಸಿ ಬಾಲಯೋಗಿ ಅವರು ಮಾರ್ಚ್ 3, 2002 ರಂದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಮೃತಪಟ್ಟಿದ್ದರು. -ದೋರ್ಜಿ ಖಂಡು (2011): ಅರುಣಾಚಲ ಪ್ರದೇಶದ ಆಗಿನ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಏಪ್ರಿಲ್ 30, 2011 ರಂದು ಚೀನಾ ಗಡಿಯ ಬಳಿಯ ದೂರದ ಪ್ರದೇಶದಲ್ಲಿ ತಮ್ಮ ಪವನ್ ಹನ್ಸ್ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ಅಪಘಾತಕ್ಕೀಡಾಗಿತ್ತು. ಐದು ದಿನಗಳ ನಂತರ ಅವಶೇಷಗಳು ಪತ್ತೆಯಾಗಿತ್ತು. -ವೈಎಸ್ ರಾಜಶೇಖರ ರೆಡ್ಡಿ (2009): ದಕ್ಷಿಣ ಭಾರತದ ಪ್ರಮುಖ ರಾಜಕಾರಣಿ ಹಾಗೂ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿಯಾಗಿದ್ದ ವೈಎಸ್‌ಆರ್ ಎಂದೇ ಜನಪ್ರಿಯರಾಗಿದ್ದ ವೈಎಸ್ ರಾಜಶೇಖರ ರೆಡ್ಡಿ ಅವರು ಸೆಪ್ಟೆಂಬರ್ 2, 2009 ರಂದು ನಲ್ಲಮಲ ಬೆಟ್ಟಗಳಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಒಂದು ದಿನದ ನಂತರ ಬೃಹತ್ ಶೋಧ ಕಾರ್ಯಾಚರಣೆಯ ನಂತರ ಅಪಘಾತದ ಸ್ಥಳವನ್ನು ಪತ್ತೆ ಮಾಡಲಾಗಿತ್ತು. -ಓಪಿ ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005): ಕೈಗಾರಿಕಾ ಮತ್ತು ಹರಿಯಾಣ ವಿದ್ಯುತ್ ಸಚಿವರಾಗಿದ್ದ ಒಪಿ ಜಿಂದಾಲ್ ಹಾಗೂ ಮಾಜಿ ಕೇಂದ್ರ ಸಚಿವ ಸುರೇಂದರ್ ಸಿಂಗ್ ಅವರೊಂದಿಗೆ ಮಾರ್ಚ್ 31, 2005 ರಂದು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. -ಗುರ್ನಾಮ್ ಸಿಂಗ್ (1973): ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮೇ 31, 1973 ರಂದು ದೆಹಲಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. -ಬಲವಂತ್ರಾಯ್ ಮೆಹ್ತಾ (1965): 1965 ರ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಾಯುಪಡೆಯ ಜೆಟ್ ತಪ್ಪಾಗಿ ತಮ್ಮ ನಾಗರಿಕ ವಿಮಾನವನ್ನು ಹೊಡೆದುರುಳಿಸಿ ಗುಜರಾತ್‌ನ ಎರಡನೇ ಮುಖ್ಯಮಂತ್ರಿ ಬಲವಂತ್ರಾಯ್ ಮೆಹ್ತಾ ಅವರು ಸಾವನ್ನಪ್ಪಿದರು. ಇದು ಅವರು ಭಾರತ - ಪಾಕಿಸ್ತಾನ ಗಡಿಯ ಬಳಿ ನೀಡಿದ ಅಧಿಕೃತ ಭೇಟಿಯ ಸಂದರ್ಭವಾಗಿತ್ತು. -ಬಿಪಿನ್ ರಾವತ್ ಸಾವು: ಭಾರತೀಯ ರಾಜಕಾಣಿಗಳಷ್ಟೇ ಅಲ್ಲದೇ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು ಸಹ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. 2021ರ ಡಿ. 8ರಂದು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಎಂಐ-17 ವಿ5 ಪತನವಾಗಿತ್ತು. ಹೆಲಿಕಾಪ್ಟರ್ ಚಾಲನೆ ಮಾಡುತ್ತಿದ್ದ ಪೈಲಟ್ ಅವರು ಮಾಡಿದ ಸಣ್ಣ ಲೋಪದಿಂದಾಗಿ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ದುರಂತದಲ್ಲಿ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಜನರ ಸಾವನ್ನಪ್ಪಿದ್ದರು. ಇನ್ನು 2017ರಿಂದ 2022ರವರೆಗೆ ಭಾರತೀಯ ವಾಯು ಸೇನೆಯಲ್ಲಿ 34 ಅಪಘಾತಗಳು ಸಂಭವಿಸಿರುವುದು ವರದಿಯಾಗಿದೆ. source:https://dhunt.in/13gdsA

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk