Posts

Showing posts with the label haveri

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Image
ಓಂ ಶ್ರೀ ಗುರು ಚನ್ನ ಬಸವವೇಶ್ವರ ಸ್ವಾಮಿ, ಶ್ರೀ ಗುರು ಬಸವೇಶ್ವರ ಸ್ವಾಮಿ, ಓಂ ಶ್ರೀ ಪತ್ರೆಕಲ್ಲು ಸಿದ್ದೇಶ್ವರ ಸ್ವಾಮಿ, ಶ್ರೀ ಮುದ್ರೆಕಲ್ಲೇಶ್ವರ ಸ್ವಾಮಿ , ಶ್ರೀ ಗುರು ಮೂಕಪ್ಪ ಶಿವಯೋಗಿ ಪ್ರಸೀದಃ ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ,  ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ    ಕಿರು ಪರಿಚಯ                                 “ಹಲವು ಮಾತೇನು ನೀನೊಲಿದು ಪಾದವನಿಟ್ಟ                                    ನೆಲವೇ ಸುಕ್ಷೇತ್ರ/ಜಲವೇ ಪಾವನ ತೀರ್ಥ                                    ಸುಲಭ ಶ್ರೀಗುರುವೇ ಕೃಪೆಯಾಗು”        ಭಾರತ ಆಧ್ಯಾತ್ಮದ ತವರೂರು, ದಿವ್ಯ ಶಕ್ತಿಯ ಪುಣ್ಯಭೂಮಿ. ಅಂತಹ ದಿವ್ಯ ಪರಂಪರೆಯ ಸಾಲಿನಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕ ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಗಳ ಮಠವು ಒಂದು. ಮಹಾಮಹಿಮರಾದ ಮೂಕಪ್ಪ ಶಿವಯೋಗಿಗಳು ಪರಮ ವೈರಾಗಿಗಳು, ಲಿಂಗಲೀಲಾ ವಿಲಾಸಿಗಳು, ಪವಾಡಪುರುಷರು, ವಿಶ್ವಕಲ್ಯಾಣಕ್ಕೆ ಅಂತಃಶಕ್ತಿಯನ್ನು, ತಪಃಶಕ್ತಿಯನ್ನು ಅನುಗ್ರಹಗೈದವರು, ಮೌನದಿಂದಲೇ ಮಹದೇವನನ್ನು ಕಂಡವರು, ಮೌನಿಯಾಗಿ ತಪಗೈದು ಶಿವಯೋಗಿ ಸಿದ್ಧನೆನಿಸಿದವರು ಶ್ರೀ ಗುರು ಮೂಕಪ್ಪ ಶಿವಯೋಗಿಗಳು.         ಇಂತಹ ಮಹಿಮರ ಶ್ರೀಮಠಕ್ಕೆ ಪೀಠಾಧಿಪತಿಗಳಾದವರು ಕಾಯಕ ಜೀವಿಗಳು, ಕ್ರೀಯಾಶೀಲ ವ್ಯಕ್ತಿತ್ವವುಳ್ಳ ಶ್ರ

Hangal Kumareshwara

ದಿನಾಂಕ 03-03-2017 ರಂದು ಹಾವೇರಿ ಶ್ರೀ ಹುಕ್ಕೇರಿ ಮಠದ ಪರಮ ಪೂಜ್ಯ ಲಿಂ. ಶ್ರೀ ಶಿವಲಿಂಗ ಮಹಾಶಿವಯೋಗಿಗಳ (1918- 2017)ವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ , ಶ್ರೀ. ಮ.ನಿ.ಪ್ರ ಅಭಿನವ ಸಿದ್ಧಾರೂಢ ಸ್ವಾಮಿಗಳು, ಷಣ್ಮುಖಾರೂಢ ಮಠ, ವಿಜಯಪುರ  ಇವರ ನುಡಿನಮನದಿಂದ ಆಯ್ದ ನುಡಿ ಮುತ್ತುಗಳು.  1909 ರಲ್ಲಿ ಸನ್ಯಾಸಿಗಳಿಗೆ ದೀಕ್ಷೇ ನೀಡುವ ಮಹಾಮಂದಿರ ಶಿವಯೋಗಮಂದಿರವನ್ನು ಕಟ್ಟಿದ ಕೀರ್ತಿ ಶ್ರೀ.ಹಾನಗಲ್ ಕುಮಾರ ಮಹಾಶಿವಯೋಗಿಗಳಿಗೆ ಸೇರುತ್ತದೆ. ನಾಡಿನಲ್ಲಿ ಕಾವಿ ಬಟ್ಟೆ ಕಂಗೊಳಿಸುತ್ತಿದ್ದರೆ, ವೀರ ಸನ್ಯಾಸಿಗಳಿಗೆ ನಿರಂತರವಾಗಿ ದೀಕ್ಷೆ ನೀಡಿದ ಕೀರ್ತಿ ಹಾನಗಲ್ ಕುಮಾರ ಯೋಗಿಗಳಿಗೆ ಸಲ್ಲಬೇಕು.  ಈ ನಾಡಿನ ಸಾಹಿತ್ಯವಾಗಿರುವ ವಚನ ಸಾಹಿತ್ಯ, ಶ್ರೀ.ನಿಜಗುಣ ಶಿವಯೋಗಿಗಳ ಶಾಸ್ತ್ರ ಗ್ರಂಥಗಳು ಈ ನಾಡಿನ ಪ್ರತಿಯೊಂದು ಮನೆ ಮನಗಳಲ್ಲಿ ಬೆಳಗಬೇಕು ಎನ್ನುವ  ಭವ್ಯವಾದ ಕನಸನ್ನು ಶ್ರೀ ಹಾನಗಲ್ ಕುಮಾರ ಯೋಗಿಗಳು ಹೊಂದಿದ್ದರು.  ಸಮಾಜದಲ್ಲಿ 1904 ದಾರಿದ್ರ್ಯದಿಂದ ಕೂಡಿದ ದಿನಗಳು, ಹಿಂದುತ್ವ ಎನ್ನುವ ಕಲ್ಪನೆ ಇಲ್ಲದ ಕಾಲ, ವೀರಶೈವರನ್ನೆಲ್ಲ ಒಗ್ಗೂಡಿಸುವ ಪ್ರಯತ್ನ ಮೊದಲ ಬಾರಿಗೆ ಮಾಡಿದ ಧೀಮಂತ ವೀರ ಸನ್ಯಾಸಿ. ತಮ್ಮ 63 ನೇ ವರ್ಷದಲ್ಲಿ  ಹಾನಗಲ್ ಕುಮಾರೇಶ್ವರರು ತಮ್ಮ 1930 ರಲ್ಲಿ  ಲಿಂಗೈಕ್ಯರಾದ ವರ್ಷ.ಇವರನ್ನು ಕಾರಣಿಕ ಪುರುಷ, ಯುಗದ  ಉತ್ಸಾಹ, ಯುಗ ಪುರುಷ ಎನ್ನುತ್ತೇವೆ. ಚನ್ನ ಕವಿಗಳು ಒಂದು ಹಾಡು ಹಾಡುತ್ತಾರೆ ಶ