Posts

Showing posts with the label outreach session

ನಗರ ಆರೋಗ್ಯ ಪೋಷಣೆ ದಿನಗಳು ಮತ್ತು ಮಾಸಿಕ ಹೊರ ವಲಯ ಕಾರ್ಯಚಟುವಟಿಕೆಗಳಲ್ಲಿ ಚರ್ಚಿಸಬೇಕಾದ ವಿಷಯಗಳು

ಎ.ಎನ್.ಎಂ ರವರು ಆಶಾ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಭಾಗಿತ್ವದಲ್ಲಿ ಕೊಳಗೇರಿ, ದುರ್ಬಲ ಜನಸಮಖ್ಯೆ ವಾಸಿಸುವ ಸಮುದಾಯದ ರಚನೆಯಿರುವ (ಅಂಗನವಾಡಿ ಕೇಂದ್ರಗಳು, ಶಾಲೆ, ರೈಲು ನಿಲ್ದಾಣ, ಬಸ್ ಸ್ಟಾಪ್,   ಕಡೆ) ಸೇವೆಗಳನ್ನು ನೀಡುತ್ತಾರೆ. ಕೆಳಕಾಣಿಸಿದ ಸೇವೆಗಳನ್ನು ಒಳಗೊಂಡಿರುತ್ತದೆ. ಅ. ತಾಯಿ ಆರೋಗ್ಯ: ಗರ್ಭಿಣಿ ಪರೀಕ್ಷೆ ಮತ್ತು ಮುಂಚಿತವಾಗಿ ಗರ್ಭಿಣಿ ನೋಂದಣಿ ಮಾಡಿಸುವುದು. ಗುಣಮಟ್ಟ ಮತ್ತು ನಿಖರತೆಯೊಂದಿಗೆ ಪ್ರಸವ ಪೂರ್ಣ ಸೇವೆಗಳನ್ನು ಸಂಪೂರ್ಣವಾಗಿ ಒದಗಿಸುವುದು. ಪೂರ್ಣ ಪ್ರಮಾಣದಲ್ಲಿ ತಾಯಿ ಮತ್ತು ಮಗುವಿನ ಕಾರ್ಡ ತೀವ್ರ ಗಂಡಾಂತರ ಹೆರಿಗೆಯ ಮಹಿಳೆಯರನ್ನು/ ಹೆರಿಗೆಯ ಸಂದರ್ಭದಲ್ಲಿ ತೊಂದರೆಗಳಾಗಬಹುದಾದ ಲಕ್ಷಣಗಳನ್ನು ಹೊಂದಿರುವವರು/ಮತ್ತು ತುರ್ತು ಆರೈಕೆಯ  ಅವಶ್ಯಕತೆ ಇರುವ ಮಹಿಳೆಯರನ್ನು ಬೇರೆಡೆಗೆ ಉಲ್ಲೇಖಿಸುಹುದು. ಸುರಕ್ಷಿತ ಗರ್ಭಪಾತಕ್ಕೆ ನೋಂದಾಯಿತ ಗರ್ಭಪಾತ ನೋಂದಣಿ ಕೇಂದ್ರಗಳಿಗೆ ರೆಫರ್/ಉಲ್ಲೇಖ ಮಾಡುವುದು. ವಿವಿಧ ವಿಷಯಗಳ ವ್ಯಾಪ್ತಿಯ ಕುರಿತು ಸಮಾಲೋಚಿಸುವುದು:  ಹೆಣ್ಣುಮಕ್ಕಳ ವಿದ್ಯಾರ್ಹತೆ, ಮದುವೆಯ ವಯಸು,ಗರ್ಭಾವಸ್ಥೆಯಲ್ಲಿ ಆರೈಕೆ, ಗರ್ಭಾವಸ್ಥೆಯಲ್ಲಿ ಎದುರಾಗಬಹುದಾದ ಗಂಡಾಂತರಗಳು, ಹೆರಿಗೆ ಅವಧಿಗೆ ಪೂರ್ವಭಾವಿ ಸಿದ್ದತೆ, ಆಹಾರದಲ್ಲಿ ಪೋಷಕಾಂಶಗಳ ಪಾತ್ರ, ಸಾಂಸ್ಥಿಕ ಹೆರಿಗೆ, ಸರಕಾರಿ ಆಸ್ಪತ್ರೆ ಹೆರಿಗೆ, ಜನನಿ ಸುರಕ್ಷಾ ಯೋಜನೆ- ಜನನಿ ಶಿಶು ಸುರಕ...