ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk

ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk

 

ಹಾವೇರಿ ಜಿಲ್ಲಾ, ಹಿರೇಕೆರೂರ ತಾಲೂಕ ಸಾತೇನಹಳ್ಳಿ ಸುಕ್ಷೇತ್ರದ ಪವಾಡ ಪುರುಷ ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು  "ಮಹಾ ಪವಾಡ ಪುರುಷ, ಆಧ್ಯಾತ್ಮದ ಚೇತನ ಕಾಯಕ ಯೋಗಿ , ವೃಷಭ ರೂಪಿ ಶಿವಾಲಿ ಬಸವೇಶ್ವರರನ್ನು ಆರಾಧಿಸುತ್ತಾ, ಲಕ್ಷಾಂತರ ಭಕ್ತ ಶ್ರೇಷ್ಠರಾದ ಬಂಧುಗಳಿಗೆ ಶರಣು ಶರಣಾರ್ಥಿಗಳು"

 

ಹಾವೇರಿ ಜಿಲ್ಲಾ, ಹಿರೇಕೆರೂರ ತಾಲೂಕ ಸಾತೇನಹಳ್ಳಿ  ಗ್ರಾಮ ಇತಿಹಾಸ ಪ್ರಸಿದ್ಧ ಪುಣ್ಯ ಹಾಗೂ ಪಾವನ ಕ್ಷೇತ್ರವಾಗಿದೆ. ಗ್ರಾಮದಲ್ಲಿ ಅನೇಕ ಶಿಲಾ ಶಾಸನಗಳು, ಪುರಾತನ ಕಾಲದ ದೇವಾಲಯಗಳು ಗೋಚರಿಸುತ್ತವೆ.

ಇಂತಹ ಪುಣ್ಯ ಕ್ಷೇತ್ರದಲ್ಲಿ ವೃಷಭರೂಪಿ ಶಿವಾಲಿ ಬಸವಣ್ಣನವರು ಗ್ರಾಮದ ಬಡ ರೈತ ಕುಟುಂಬದ ಶ್ರೀಮತಿ ಶರದವ್ವ ಶ್ರೀ ಬಾನಪ್ಪ ಕಾಯಕದ ಇವರ ಮನೆಯಲ್ಲಿ ಜನಿಸಿದ ಶ್ರೀ ಶಿವಾಲಿ ಬಸವಣ್ಣನವರು ಹನ್ನೊಂದು ವರ್ಷಗಳ ಕಾಲ ಉಳಿಮೆ ಕೆಲಸವನ್ನು ಮಾಡಿರುತ್ತಾರೆ. ಗ್ರಾಮದ ಪಶ್ಚಿಮ ದಿಕ್ಕಿನ ಕಿ.ಮೀ  ದೂರದ ಸಮೀಪ ಶಿವಾಲಿ ಬಸವಣ್ಣನವರ ದೇವಸ್ಥಾನವಿದ್ದು, ಅಲ್ಲಿ ರೈತನು ಉಳಿಮೆ ಕೆಲಸವನ್ನು ಮಾಡಿ ಬಿಸಿಲು ಜಾಸ್ತಿ ಆದ ಸಮಯದಲ್ಲಿ ಮರದ ನೆರಳಿಗೆ ಬೇಸಾಯವನ್ನು ನಿಲ್ಲಿಸಿ ತಾನು ನೀರು ಕುಡಿಯಲು ಹೋದಾಗಕಟ್ಟಿದ ಹಗ್ಗವನ್ನು ಕಿತ್ತುಕೊಂಡು ಗುಡ್ಡದ ಕಡೆಗೆ ಬಸವಣ್ಣ ಓಡಲು ಪ್ರಾರಂಭಿಸಿತು, ಆಗ ರೈತನು ಸಹ ಬಸವಣ್ಣನ ಹಿಂದೆ ಓಡಲು ಪ್ರಾರಂಭಿಸಿದ್ದಾನೆ. ಗುಡ್ಡದ ಬಳಿ ಹೋಗಿ ನಿಂತು ತನ್ನ ಪಾದಗಳಿಂದ ನೆಲವನ್ನು ಕೆದರುತ್ತಾ ಮತ್ತು ಬೆತ್ತದಿಂದ (ಕೋಡಿನಿಂದ) ಚಿಮ್ಮುತ್ತಾ ವಿಚಿತ್ರವಾಗಿ ವರ್ತನೆಯನ್ನು ಮಾಡಲು ಪ್ರಾರಂಭಿಸಿತು. ಇದನ್ನು ಕಂಡ ರೈತ ಸುತ್ತ ಮುತ್ತಲಿನ ಜಮೀನಿನಲ್ಲಿ ಕೆಲಸ ಮಾಎಡುತ್ತಿದ್ದ ರೈತರನ್ನು ಕರೆದು ತೋರಿಸಿದ್ದಾನೆ.. ವಿಚಿತ್ರವಾದ ಮತ್ತು ನೈಜ ಸನ್ನಿವೇಶವನ್ನು ಕಣ್ಣಾರೆ ಕಂಡ ಸುತ್ತ ಮುತ್ತಲಿನ ಹೊಲದ ರೈತರು ಗ್ರಾಮದ ಜನತೆಗೆ ವಿಷಯವನ್ನು ತಿಳಿಸಿರುತ್ತಾರೆ. ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಸುದ್ದಿ ಮಾಧ್ಯಮದವರು ಮತ್ತು ದೂರದರ್ಶನ ವರದಿಗಾರರಿಗೆ ವಿಷಯ ತಿಳಿಸಿ ಎಲ್ಲರ ಸಹಕಾರದಿಂದ ಜೆ.ಸಿ.ಬಿ ಯಂತ್ರದ ಮೂಲಕ ಎಂಟು ಅಡಿ ಮಣ್ಣನ್ನು ತೆಗೆದು ನೋಡಲಾಗಿ, ಸ್ಥಳದಲ್ಲಿ ೧೨ ನೇ ಶತಮಾನದ ಶಿಲಾಶಾಸನ , ಸೂರ್ಯದೇವರ ವಿಗ್ರಹ, ನರಸಿಂಹ ಸ್ವಾಮಿ ವಿಗ್ರಹಗಳು ಹಾಗೂ ಎರಡು ಚೌಕಾಕಾರದ ಗದ್ದುಗೆಗಳು ಕಾಣಿಸಿಕೊಂಡಿವೆ.

ಆಗ ಗ್ರಾಮಸ್ಥರು ಸುತ್ತ-ಮುತ್ತಲಿನ ಮಠಾಧೀಶರನ್ನು ಸ್ಥಳಕ್ಕೆ ಕರೆತಂದು ತೋರಿಸಿದಾಗ, ಅವುಗಳು ನಿರ್ವಿಕಲ್ಪ ಸಮಾಧಿಗಳು( ಜೀವಂತ ಸಮಾದಿ) ಜಾಗದಲ್ಲಿ ಹಿಂದಿನ ಕಾಲದಲ್ಲಿ ಪವಿತ್ರ ಸ್ಥಳವಾಗಿದ್ದು, ಸಮಾಧಿಯಲ್ಲಿರುವ ಮಹಾ ತಪ್ಸವಿಗಳು, ಶಿವಶರಣರು, ಜೀವಂತ ಐಕ್ಯವಾಗಿರುವರೆಂದು ತಿಳಿಸಿರುತ್ತಾರೆ. ಕ್ಷೇತ್ರದಲ್ಲಿ ಲಿಂಗೈಕ್ಯರಾದ ಮಹಾತಪ್ಸವಿಗಳು ಶ್ರೀ ಬಸವಣ್ಣನ ಆತ್ಮದಲ್ಲಿ ಶರನಾಗಿ ಕಾಣಿಸಿಕೊಂಡು, ವೃಷಭರೂಪಿಯ ರೂಪದಲ್ಲಿ ಲೋಕ ಕಲ್ಯಾಣವನ್ನು ಮಾಡಲು ಧರೆಗೆ ಬಂದ ವಿಚಾರ ತಿಳಿಯಿತು.

ಮಠಾಧೀಶರ ಸೂಚನೆಯ ಮೇರೆಗೆ ದಿನಾಂಕ:18/08/2008 ರಂದು ವೃಷಭ ರೂಪಿ ಬಸವಣ್ಣನವರಿಗೆ ಲಿಂಗಧಾರಣೆ, ಕುಂಭಾಭಿಷೇಕ, ಅನ್ನ ಸಂತರ್ಪಣೆಯನ್ನು ನಾಡಿನ ಪ್ರಸಿದ್ಧ ಮಠಾಧೀಶರ ಸಮ್ಮುಖದಲ್ಲಿ ನೆರವೇರಿಸಿ ಅಂದೇ ಬಸವಣ್ಣನಿಗೆ "ಶಿವಾಲಿ ಬಸವಣ್ಣ" ಎಂದು ನಾಮಕರಣ ಮಾಡಿರುತ್ತಾರೆ.

ಪವಾಡ ಪುರುಷ ವೃಷಭರೂಪಿ ಶಿವಾಲಿ ಬಸವಣ್ಣನವರು ಅನೇಕ ಪವಾಡಗಳನ್ನು ಮಾಡಿದ್ದಾರೆ. ಸಾತೇನಹಳ್ಳಿ ಮಧ್ಯಭಾಗದಲ್ಲಿ ಶ್ರೀ ಮಠಕ್ಕೆ ಸೇರಿದ ಜಾಗೆಯನ್ನು ಅಕ್ಕ ಪಕ್ಕದ ಜನರು ಒತ್ತುವರಿ ಮಾಡಿಕೊಂಡಿದ್ದರು. ಆಜಾಗೆಯನ್ನು ಪುನಃ ಮಠಕ್ಕೆ ಬಿಟ್ಟುಕೊಡುವಂತೆ ಭಕ್ತ ಮನಸ್ಸನ್ನು ಪರಿವರ್ತಿಸಿದ್ದಾರೆ. ಈಗ ಜಾಗದಲ್ಲಿ ಸುಂದರವಾದ ಶ್ರೀ ಮಠ ನಿರ್ಮಾಣಗೊಂಡಿದೆ.

"ಪವಾಡದ ಮೇಲೊಂದು ಪವಾಡಗಳು"

ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ

ಬಸವನ ಮೂರ್ತಿಯೇ ಜ್ಞಾನಕ್ಕೆ ಮೂಲ

ಬಸವ ಬಸವ ಎಂಬುದೆ ಭಕ್ತಿಗೆ ಕಾಣಾ ಕಪಿಲಸಿದ್ಧ ಮಲ್ಲಿಕಾರ್ಜುನ.

ಎನ್ನುವಂತೆ ಬಸವೇಶ್ವರರನ್ನು ಭಕ್ತಿಯಿಂದ ಪೂಜಿಸಬೇಕು. ನೆನೆದವರ ಸತ್ಕಾರ್ಯಗಳು ನೆರವೇರುತ್ತವೆ ಎನ್ನುವುದಕ್ಕೆ ಸಾತೇನಹಳ್ಳಿ ಗ್ರಾಮದ ಶ್ರೀಶ್ರೀ ಶ್ರೀ ಶಿವಾಲಿ ಬಸವೇಶ್ವರ ಮೂಕಪ್ಪ ಶ್ರೀಗಳೆ ಉದಾಹರಣೆಯಾಗಿದ್ದಾರೆ.

ಶ್ರೀಗಳಿಗೆ ಬಸವರೂಪಿಯಾಗಿ ನಂಬಿ ಬಂದ ಭಕ್ತ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿದ ನಿದರ್ಶನಗಳು ಹಲವಾರು.

ಹಿರೇಕೆರೂರ ತಾಲೂಕ ಲಿಂಗಾಪುರ ಗ್ರಾಮದ ರೈತ ಕುಟುಂಬದ ಶ್ರೀಮತಿ ಹನುಮವ್ವ ಶ್ರೀ ಫಕೀರಪ್ಪ ಅರಳಿಕಟ್ಟಿ ಇವರ ಗೋವು ಗರ್ಭದಲ್ಲಿ ದಿ:26/01/2015 ನೇ ಸೋಮವಾರ ಸಂಜೆ 07.30ಕ್ಕೆ ನಂದಿ ರೂಪದಲ್ಲಿ ಜನಿಸಿರುತ್ತಾರೆ. ಹಿರಿಯ ಶ್ರೀಗಳ ಸೂಚನೆಯಂತೆ ಜನಿಸಿದ 09 ದಿನಗಳಲ್ಲಿ ಲಿಂಗಾಪುರದಿಂದ ಸಾತೇನಹಳ್ಳಿ ಗ್ರಾಮಕ್ಕೆ ಭವ್ಯ ಮೆರವಣಿಗೆಯ ಮುಖಾಂತರ ಆಗಮಿಸಿ, ಮಡ್ಲೂರಿನ ಶ್ರೀ..ನೊ.ಪ್ರ ಮುರುಘರಾಜೇಂದ್ರ ಸ್ವಾಮಿಗಳು ಹಾಗೂ ಹಿರಿಯ ಮೂಕಪ್ಪಸವಾಮಿಗಳ ಸನ್ನಿಧಾನದಲ್ಲಿ ದಿನಾಂಕ"03/02/2015 ನೇ ಮಂಗಳವಾರ ಲಿಂಗಧಾರಣೆ ಮಾಡಿ ನಂತರ ಕಿರಿಯ ಮೂಕಪ್ಪ ಸ್ವಾಮಿಗಳ ಅಧಿಕಾರವನ್ನು ಪಡೆದರು.

 

ಸಾಲಿಗ್ರಾಮ ಗುರುತಿಸಿದ ಸ್ವಾಮಿಗಳು:

ಬ್ಯಾಡಗಿ ತಾಲೂಕಿನ ಮುತ್ತೂರು ಗ್ರಾಮಕ್ಕೆ ವೃಷಭರೂಪಿ ಶಿವಾಲಿ ಬಸವೇಶ್ವರ ಮೂಕಪ್ಪ ಸ್ವಾಮಿಗಳು ಹೋದ ಸಂದರ್ಭದಲ್ಲಿ ಊರಿಗೆ ಹತ್ತಿರದಲ್ಲಿ ಇರುವ ರೈತರೊಬ್ಬ ಜಮೀನಿನಲ್ಲಿ ಹೋಗಿ ನಿಂತು ಭೂಮಿಯನ್ನು ತಮ್ಮ ಪಾದದಿಂದ ಅಗೆದಿದ್ದಾರೆ (ಕೆದರಿದ್ದಾರೆ). ಆಗ ಅಲ್ಲಿ ನೆರೆದ ಭಕ್ತ ಸಂಕುಲ ಶ್ರೀಗಳ ಆಶೀರ್ವಾದ ಪಡೆದು ಬೂಮಿಯನ್ನು 09 ಅಡಿಯಷ್ಟು ಆಳವಾಗಿ ಅಗೆಯಲಾಗಿ ಸಾಲಿಗ್ರಾಮವೊಂದು ದೊರೆತಿದೆ. ಲಿಂಗ ಆಕಾರದ ಎರಡು ಇಂಚು ಸಾಲಿಗ್ರಾಮವನ್ನು ವೀಕ್ಷಿಸಲು ಜಿಲ್ಲೆಯ ಜನರು ತಂಡೋಪ ತಂಡವಾಗಿ ಗ್ರಾಮಕ್ಕೆ ಆಗಮಿಸಿ, ಪವಾಡವನ್ನು ವೀಕ್ಷಿಸಿ ಬೆರಗಾಗಿದ್ದಾರೆ. ಬಂದ ಭಕ್ತಿರಿಗೆ ಗ್ರಾಮಸ್ಥರಾದ ಚನ್ನಬಸವನಗೌಡ ಪಾಟೀಲರು ಅನ್ನ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಈಗ ಸಾಲಿಗ್ರಾಮವನ್ನು ಗ್ರಾಮದ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ದಿನಿನಿತ್ಯ ಪೂಜೆ ಪುನಸ್ಕಾರ ಮಾಡಲಾಗುತ್ತಿದೆ.

ಪ್ರಕೃತಿಯ ಮಡಿಲಲ್ಲಿ ಮಲೆನಾಡು ಭಾಗ ಎಂದು ಗುರುತಿಸಿಕೊಂಡಿರುವ ಸೊರಬ ತಾಲೂಕಿನ ಕೋಡಿಹಳ್ಳಿ ಎಂಬ ಗ್ರಾಮದಲ್ಲಿ ಪೂಜ್ಯತು ಸಾತೇನಹಳ್ಳಿಯಿಂದ  ಹಳ್ಳಿಗೆ ಭಕ್ತರ ಮನೆಗೆ ಪಾದಪೂಜೆಗೆಂದು ಹೋದಾಗ ರೈತ ಕುಟುಂಬ ಶೇಖರಪ್ಪ ಹುಲಿಯಣ್ಣನವರ ಮನೆಯಲ್ಲಿ ಆಕಳು ಕರುವಿಗೆ ಜನ್ಮ ನೀಡಿ - ತಿಂಗಳು ಗತಿಸಿದರೂ ಕರುವಿನ ಕಣ್ಣು ಕಾಣುತ್ತಿರಲಿಲ್ಲ. ಚೆನ್ನಾಗಿ ಆಹಾರ ತಿನ್ನುತ್ತಿರಲಿಲ್ಲ. ರೈತನಿಗೆ ದೃಶ್ಯದಿಂದ ಬಹಳ ನೋವಾಗಿತ್ತು. ತನ್ನ ನೋವನ್ನು ಶಿವಾಲಿ ಬಸವೇಶ್ವರ ಮೂಕಪ್ಪ ಶ್ರೀಗಳನ್ನು ತಮ್ಮ ಮನೆಗೆ ಪೂಜೆಗೆಂದು ಕರೆದುಕೊಂಡು ಹೋಗಿ ತಮ್ಮ ದಿವ್ಯ ದೃಷ್ಟಿಯಿಂದ ಮೂಸಿ ನೋಡಿ ಕರುವನ್ನು ಸ್ಪರ್ಶಿಸಿದ್ದಾರೆ ಕೂಡಲೇ ಕರುವಿನ ಚಲನ ವಲನದಲ್ಲಿ ಬದಲಾವಣೆ ಗಾಳಿ ಬೀಸಿ ಬೆಳಗಾಗುವುದರೊಳಗಾಗಿ ಕರು ದೃಷ್ಠಿ ಪಡೆದುಕೊಂಡು ಚೆನ್ನಾಗಿ ನಡೆದಾಡಲು ಪ್ರಾರಂಭಿಸಿದೆ. ಇದನ್ನು ಕಣ್ಣಾರೆ ಕಂಡ ರೈತ ಹಾಗೂ ಗ್ರಾಮದ ಜನೆ ಬೆರಗಾಗಿ ಭಕ್ತಿಯಿಂದ ಇವರು ಧರೆಗೆ ಬಂದ ಶಿವ ಎಂದು ಭಕ್ತಿಪೂರ್ವಕವಾಗಿ ಕೊಂಡಾಡಿದ್ದಾರೆ.

ಶಿಡ್ಲಹಳ್ಳಿ ಗ್ರಾಮದ ಭಕ್ತರೆಲ್ಲರೂ ಭಕ್ತಿಯಿಂದ ಶಿವಾಲಿ ಅಜ್ಜನವರನ್ನು ತಮ್ಮ ಗ್ರಾಮಕ್ಕೆ ಗ್ರಾಮದ ಭಿಕ್ಷಾಟನೆಗೆಂದು ಮತ್ತು ಪಾದಪೂಜೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅದೇ ಗ್ರಾಮದ ನಾಗರಾಜ ಕೆ.ಪಿ ಅವರ ಮನೆಗೆ ಪಾದಪೂಜೆಗೆಂದು ಶ್ರೀಗಳು ದಯಮಾಡಿಸಿದ್ದಾರೆ. ದಂಪತಿಗಳು ತಮಗೆ ಆಗುತ್ತಿರುವ ಗ್ರಹಚಾರದ ತೊಂದರೆಯನ್ನು ಶ್ರೀಗಳ ಬಳೀ ಬಿನ್ನಹಿಸಿಕೊಂಡಿದ್ದಾರೆ. ಕೂಡಲೇ ಶ್ರೀಗಳು ನಾಗರಾಜ ಅವರ ಹಿತ್ತಲ ಕಡೆ ಹೋಗಿ ಕಾಲಿನಿಂದ ಧರೆಯನ್ನು ಕೆದರಲು ಪ್ರಾರಂಭಿಸಿದ್ದಾರೆ. ಭಕ್ತರು ಶ್ರೀಗಳ ಆಶರ್ವಾದ ಪಡೆದು ನೆಲವನ್ನು ಅಗೆದು ನೋಡಿದಾಗ ವಾಮಾಚಾರ ಮಾಡಿಸಿ ಹುಗಿದ ಸಾಮಾನುಗಳು ತಾಮ್ರದ ತಾಯತ, ಲಿಂಬು ಹಣ್ಣು, ಕಬ್ಬಿಣದ ಮೊಳೆ, ತಾಂಬೂಲ ದೊರೆತಿರುತ್ತವೆ.ಅವುಗಳನ್ನು ತೆಗೆಯಿಸಿ ಶ್ರೀಗಳು ಸುಟ್ಟುಹಾಕಲು ಸೂಚನೆ ನೀಡಿರುತ್ತಾರೆ. ದೃಶ್ಯ ಕಂಡ ಭಕ್ತ ಸಂಕುಲ ಬೆರಗಾಗಿ ಭಕ್ತಿಯಿಂದ ಧರೆಗೆ ಬಂದ ನಡೆದಾಡುವ ಬಸವೇಶ್ವರ ಎಂದು ಕೊಂಡಾಡಿ ಭಕ್ತಿಯಿಂದ ಶ್ರೀ ಮಠದ ಭಕ್ತರಾಗಿದ್ದಾರೆ. ಅಂದಿನಿಂದ ನಾಗರಾಜರವರ ಆರೋಗ್ಯ ಸುಧಾರಿಸಿದೆ.

 

ಸವಾಲು ಸ್ವೀಕರಿಸಿದ ಶ್ರೀಗಳು:

ಸೊರಬ ತಾಲೂಕಿನ ಸೂರಣಗಿ ಎಂಬ ಪುಟ್ಟ ಗ್ರಾಮಕ್ಕೆ ಶ್ರೀಗಳು ಭಕ್ತರ ಮನೆಗಳಿಗೆ ಪೂಜೆಗೆಂದು ಹೋಗಿರುವಾಗ ಗ್ರಾಮದ ಒಬ್ಬ ರೈತ ಶ್ರೀಗಳಿಗೆ ಸವಾಲು ಹಾಕಿದ್ದಾನೆ. ನೀವು ನಿಜವಾದ ಬಸವೇಶ್ವರರೇ ಆಗಿರುವುದು ನಿಜವಾಗಿದ್ದರೆ ನಮ್ಮ ಮನೆಯನ್ನು ಹುಡುಕಬೇಕು. ತಾಬವು ನಮ್ಮ ಮನೆ ಹುಡುಕಿದರೆ ನನ್ನ ಎರಡು ಎತ್ತುಗಳಲ್ಲಿ ಒಂದನ್ನು ಸಾತೇನಹಳ್ಳಿ ಮಠಕ್ಕೆ ಬಿಟ್ಟುಕೊಡುವುದಾಗಿ ತಿಳಿಸಿದ್ದಾನೆ. ನೆರೆದಿದ್ದ ಸಾವಿರಾರು ಭಕ್ತರ ಮಧ್ಯ ಶ್ರೀಗಳು ಗ್ರಾಮದಿಂದ ಸುಮಾರು . ಕಿ.ಮೀ ದೂರದ ಕಾಡಿನಲ್ಲಿದ್ದ ರೈತನ ಮನೆಯನ್ನು ರಾತ್ರಿ ೦೯ ಗಂಟೆಗೆ ಹುಡುಕಿ ಪವಾಡ ತೋರಿಸಿದ್ದಾರೆ. ಭಕ್ತ ಕೂಡಲೇ ಎಚ್ಚೆತ್ತುಕೊಂಡು ಆಡಿದ ಮಾತು ತಪ್ಪಾಯಿತು, ನೀವು ನಿಜವಾದ ಶಿವಾಲಿ ಬಸವೇಶ್ವರರು ರಂದು ಪಾದಕ್ಕೆ ಬಿದ್ದು ನಮಸ್ಕರಿಸಿ ಎತ್ತನ್ನು ಮಠಕ್ಕೆ ದಾನವಾಗಿ ನೀಡಿದ್ದಾನೆ.

ವೃತ್ತಿಕೊಪ್ಪ: ಗ್ರಾಮಕ್ಕೆ ಶ್ರೀಗಳು ಹೋದಾಗ ಅಲ್ಲಿ ನೆರೆದ ಭಕ್ತರ ಮಧ್ಯ ಒಂದು ಪವಾಡ ನಡೆದಿದೆ. ರೈತರೊಬ್ಬರ ಮಾವಿನ ತೋಟಕ್ಕೆ ಹೋದ ಶ್ರೀಗಳು ತಮ್ಮ ಪಾದದಿಂದ ಧರೆಯನ್ನು ಕೆದರಲು ಪ್ರಾರಂಭಿಸಿದ್ದಾರೆ. ಆಗ ಭಕ್ತರು ಧರೆಯನ್ನು ಅಗೆಯಲು ಅನುಮತಿಯನ್ನು ಕೇಳಿದ್ದಾರೆ. ಕೂಡಲೇ ಶ್ರೀಗಳು ಅದಲ್ಲೆ ಸಮ್ಮತಿಸಿದ್ದಾರೆ. ಭಕ್ತರು ಹಾರೆ-ಗುದ್ದಲಿಯಿಂದ ನೆಲವನ್ನು ತೆಗೆದು ನೋಡಿದಾಗ ಸುಂದರವಾದ ಶಿವಲಿಂಗು ಅಲ್ಲಿ ದೊರೆತಿರುತ್ತದೆ. ಅದನ್ನು ಗ್ರಾಮದಲ್ಲಿ ಶ್ರೀಗಳು ಪ್ರತಿಷ್ಠಾಪಿಸಲು ಸೂಚನೆ ನೀಡಿರುವ ಘಟನೆ ನಡೆದಿದೆ.

 

 

 


Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva