Posts

Showing posts with the label ಪ್ರಾಣಿ ಸಂಪತ್ತಿನ ಕೀಲಿ ಕೈ ಪ್ರಾಣಿಗಳ ಆರೋಗ್ಯ

ಪ್ರಾಣಿ ಸಂಪತ್ತಿನ ಕೀಲಿ ಕೈ ಪ್ರಾಣಿಗಳ ಆರೋಗ್ಯ

ಪ್ರಾಣಿ ಸಂಪತ್ತಿನ ಕೀಲಿ ಕೈ ಪ್ರಾಣಿಗಳ ಆರೋಗ್ಯ ಡಾ. ಎಂ.ಜೆ ಖಾನ್, ಅಗ್ರಿಕಲ್ಚರ್ ಟುಡೇ VOLUME XXV | ISSUE 7 | JULY 2022 ಪಶುಸಂಗೋಪನಾ ಉದ್ಯಮವು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರಿಕೃತವಾಗಿದ್ದು, ಇದು ಲಾಭದಾಯಕ ಉದ್ಯೋಗವನ್ನು ನೀಡುತ್ತದೆ ಜೊತೆಗೆ ವರ್ಷ ಪೂರ್ತಿ ಆದಾಯವನ್ನು ನೀಡುತ್ತದೆ, ಈ ವಲಯದ ಉದ್ಯಮಿದಾರ ಹಿತಾಸಕ್ತಿಯನ್ನು ಜತನದಿಂದ ಕಾಪಾಡಬೇಕಾದ ಅವಶ್ಯಕತೆ ಇದೆ. ಪಶುಸಂಗೋಪನಾ ಉದ್ಯಮ ವಲಯವು, ಫಲಿತಾಂಶ ಮತ್ತು ಕಾರ್ಯಕ್ಷಮತೆಯಲ್ಲಿ ಸ್ಥಿರ ಉದ್ಯಮ ವಲಯವಾಗಿ ಗುರುತಿಸಿಕೊಂಡಿದೆ. ಸಮಾಜದ ದುರ್ಬಲ ವರ್ಗ ಮತ್ತು ಕಡೆಗಣನೆಗೊಳಗಾದ ಹಿಂದುಳಿದ ವರ್ಗದ ಜನರ ಉದ್ಯಮದ ಉತ್ತಮ ಆಯ್ಕೆಯಾಗಿದೆ. ಪ್ರಾಣಿಗಳ ಆರೋಗ್ಯವು, ಪ್ರಾಣಿಗಳ ಸಂಪತ್ತಿನ ಪ್ರಮುಖ ಅಂಶವಾಗಿದ್ದು ಪ್ರಾಣಿಗಳ ಆರೋಗ್ಯಕ್ಕೆ ಸೂಕ್ತ ಕ್ರಮವಹಿಸಬೇಕು. ನಾವು ಆರ್ಥಿಕವಾಗಿ ಪ್ರಾಣಿಗಳ ಮೇಲೆ ಅವಲಂಭಿತರಾಗಲು ಬಯಸಿದಲ್ಲಿ, ಅವುಗಳನ್ನು ರಕ್ಷಿಸಬೇಕು, ಪೋಷಿಸಬೇಕು ಹಾಗೂ ಅಗತ್ಯ ಪೋಷಕಾಂಶಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. “ಒನ್ ಹೆಲ್ತ್ ಒಂದೇ ಆರೋಗ್ಯ” ಪರಿಕಲ್ಪನೆಯನ್ನು ಏಕರೂಪವಾಗಿ ಎಲ್ಲ ರಾಷ್ಟ್ರಗಳಲ್ಲಿ ತರಲಾಗುತ್ತಿದೆ. ಜನರ, ಪ್ರಾಣಿಗಳ, ಮತ್ತು ಪರಿಸರ ವ್ಯವಸ್ಥೆ ಆರೋಗ್ಯವನ್ನು ಸಮರ್ಥನೀಯವಾಗಿ ಸಮತೋಲನಗೊಳಿಸಿ ಉತ್ತಮಗೊಳಿಸುವ ಏಕೀಕೃತ ವಿಧಾನವನ್ನು ಬಳಸಲು ನಾವು ಬದ್ಧರಾಗಿರಬೇಕು. ಮನುಷ್ಯರು, ಪ್ರಾಣಿಗಳು ಮತ್ತು ಪರಿಸರ ವ್ಯವಸ್ಥೆಯು ಒಂದಕ್ಕೊಂದು ನ