ಆಶಾ ರಘು - ಹೀಗೊಂದು ಕನಸಾಯಿತು

ಆಶಾ ರಘು ಅವರು ಡಿಸೆಂಬರ್ 29 ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. "ಹೀಗೊಂದು ಕನಸಾಯಿತು… ಇಂದು ಬೆಳಗಿನ ಜಾವ ನನ್ನವರು ಕನಸಿನಲ್ಲಿ ಕಾಣಿಸಿಕೊಂಡರು. ಬಹಳ ಸಹಜವಾಗಿದ್ದರು. ನನಗೆ ಅವರು ತೀರಿಕೊಂಡ ಮೇಲೆ ನೋಡಲು ಬಂದಿದ್ದಾರೆಂಬ ಸಂಪೂರ್ಣ ಅರಿವಿತ್ತು. ಸಡಗರದಲ್ಲಿ ಮಾತನಾಡಿಸಿದೆ. ಉಳಿದವರನ್ನು ಕನಸಿನಲ್ಲೇ 'ಕಾಣ್ತಿದ್ದಾರಾ ನಿಮಗೆ?' ಅಂತೆಲ್ಲಾ ಕೇಳಿದೆ. ಅವರು ತಿಣುಕಾಡಿದರು. ಆದರೆ ಮಗಳು ನೇರವಾಗಿ ಬಂದು ತನ್ನಪ್ಪನನ್ನು ತಟ್ಟಿ, 'How are you?' ಅಂತ ಮಾತನಾಡಿಸಿದಳು. ಅವರೂ ಅವಳೊಂದಿಗೆ ಮಾತನಾಡಿಸಿದರು. ಕನಸಿನಲ್ಲಿ ನನ್ನ ತಲೆಗೂದಲು ತುಂಡಾಗಿತ್ತು. ನನ್ನ ಕೂದಲಲ್ಲಿ ಬೆರಳಾಡಿಸಿ ಯಾವುದೋ ಶ್ಯಾಂಪೂ ಹೆಸರು ಹೇಳಿದರು. ನಾನು ನಕ್ಕೆ. ನಂತರ 'ನಾನು ಈಗ ಫ್ರಾಂಸಿಗೆ ಹೋಗ್ತಿದ್ದೀನಿ' ಅಂದರು. 'ಮಾರಿಷಸ್' ಅಂತಾ ಕೂಡಾ ಜೊತೆಗೆ ಸೇರಿಸಿದರೋ ಅಂತ ಅರೆಬರೆ ನೆನಪು. ಇಷ್ಟಾಗುವುದರಲ್ಲಿ ಸಂತೋಷಕ್ಕೆ ಫಳ್ಳನೆ ಕಣ್ಣು ಬಿಟ್ಟುಬಿಟ್ಟೆ! ಸಂತೋಷಕ್ಕೆ ಮೊದಲು, ಆ ನಂತರ ಅವರ ಫೋಟೋ ನೋಡಿಕೊಂಡು ಭಾವವುಕ್ಕಿ ಅತ್ತೂ ಅತ್ತೂ ಕೆಡವಿದೆ. ಫ್ರಾಂಸಿಗೆ ಹೋದರೆ ನಿಜಕ್ಕೂ ಸಿಕ್ಕರೂ ಸಿಗಬಹುದು ಅನ್ನುವ ಲಹರಿಯಲ್ಲಿಯೇ ಇನ್ನೂ ಇದ್ದೇನೆ!" ಸ್ವರ್ಗದಲ್ಲಿ ಗಂಡನೊಂದಿಗೆ ಇರಲು ಹೋದರು. _-------------- ಹಿರಿಯರು ಒಂದು ಮಾತು ಹೇಳ್ತಾರೆ ಸತ್ತವರ ಜೊತೆಗೆ ನಾವು ಸಾಯೋಕೆ ಆಗುತ್ತಾ ಅಂತ ಒಬ್ಬ ಒಳ್ಳೆ ಸಾಹಿತಿ, ಬರಹಗಾರ್ತಿ, ಸಂಭಾಷಣಗಾರ್ತಿ ವಿಶ್ಲೇಷಕಿ, ಆಧ್ಯಾತ್ಮಿಕ ಚಿಂತಕಿ ಕಿರುತೆಯಲ್ಲಿ ಸಹ ನಿರ್ದೇಶನ ಮಾಡಿದವರು ಆಶಾ ರಘು ಸಾವಿಗೆ ಶರಣಾಗಿರುವುದು ಒಂದು ಕಡೆ ಬೇಸರ ಇನ್ನೊಂದು ಕಡೆ ಕೋಪ ಬೇಸರ ಏಕೆಂದ್ರೆ ಆಕೆಯು ಪತಿಯ ಅಗಲಿಕೆಯನ್ನು ಸಹಿಸದೆ ಬೇಸರದಿಂದ ಹೀಗೆ ಆತ್ಮ *ತ್ಯೆ ಮಾಡಿಕೊಂಡಿದ್ದಾರೆ ಅವರ ಮನಸ್ಥಿತಿ ಹೇಗಿತ್ತೋ ಏನೊ ಇದು ಬೇಸರ ಕೋಪ ಏನು ಅಂದ್ರೆ ಎಲ್ಲ ವಿಷಯಗಳನ್ನು ವಿಶ್ಲೇಷಣೆ ಮಾಡೋ ಚಿಂತನೆ ಮಾಡೋ ಈಕೆಗೆ ತನ್ನ ಮಗಳು ನೆನಪಿಗೆ ಬರಲಿಲ್ಲವೇ?? ಮದುವೆಯಾಗಿ ಒಂದು ಅಂತ ಕಳೆದ ಮೇಲೆ ತಂದೆ ತಾಯಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳೋದು ಮಕ್ಕಳ ಮೇಲೆ ಅಲ್ವಾ? ಮಗಳ ಮುಖ ನೋಡಿಯಾದ್ರೂ ಜೀವನ ಮಾಡಬಹುದಿತ್ತಲ್ಲ ಅದು ಒಂದು ರೀತಿ ಕೋಪ ಬರುತ್ತೆ ಯಾಕೆಂದ್ರೆ ವಿಚಾರವಂತರು, ಜ್ಞಾನವುಳ್ಳವರೇ ಹೀಗೆ ಮಾಡಿಕೊಂಡ್ರೆ ಸಾಮಾನ್ಯ ಜನರ ಪಾಡೇನು?? ಆದ್ರೂ ಒಬ್ಬ ಸೃಜನಶೀಲ ಮಹಿಳೆ ನಮ್ಮನ್ನೆಲ್ಲ ಅಗಲಿರುವುದು ಬೇಸರದ ವಿಷಯ ಆಶಾ ರಘು ಇವರಿಗೆ ಭಾವ ಪೂರ್ಣ ಶ್ರದ್ದಾಂಜಲಿ 💐🙏 source:facebook collection

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk