ಬಾಹ್ಯಾಕಾಶ ಕ್ಷೇತ್ರದಲ್ಲಿ ISRO ಸಾಧನೆ ಭಾರತದ ಮೈಲಿಗಲ್ಲು
Indian Space Research Organization - ISRO, ವಿಶ್ವ ಬಾಹ್ಯಾಕಾಶ ಜಗತ್ತಿನಲ್ಲಿ ಭಾರತವನ್ನು ಭದ್ರವಾಗಿ ನೆಲೆನಿಲ್ಲಿಸಿ ಚಂದ್ರನಂಗಳದಿಂದ ಮಂಗಳನವರೆಗೆ ಭಾರತದ ಬಾಹ್ಯಾಕಾಶ ಯಾತ್ರೆಯನ್ನು ಚಿರಸ್ಥಾಯಿಯಾಗಿಸಿದ ಸಂಸ್ಥೆ. ಇದು ನಮ್ಮ ಬೆಂಗಳೂರು, ಕರ್ನಾಟಕ ರಾಜ್ಯದಲ್ಲಿರುವುದು ಕನ್ನಡಿಗನಾದ ನನಗೆ ಹೆಮ್ಮೆಯ ವಿಷಯ ಮತ್ತು ವಿಚಾರ. ಈ ದಿನ ಏಕೆ ನಾನು ಈ ಚುಟುಕು ಲೇಖನವನ್ನು ಬರೆಯಲು ತೊಡಗಿದೆ? ಒಂದು ಪ್ರಶ್ನೆ ದಿನಾಂಕ15/02/2017 . ಪ್ರೇಮಿಗಳ ದಿನದ ಮರುದಿನ ಇಸ್ರೋ ತನ್ನ ಉಪಗ್ರಹ ಉಡಾವಣ ವಾಹಕ ಪಿ.ಎಸ್.ಎಲ್.ವಿ -ಸಿ37 ನಿಂದ ನಭದ ಸೌರ ಕಕ್ಷೆಗೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಸೇರಿಸಿತು. ಮಾಧ್ಯಮಗಳು ಮನಸ್ಸು ಮಾಡಿದ್ದಲ್ಲಿ ಈ ವಿಷಯವನ್ನು ಹೆಚ್ಚು ಚರ್ಚೆಯ ವಿಷಯವನ್ನಾಗಿ ಮಾಡಬಹುದಾಗಿದ್ದಿತು. ಈ ವಿಚಾರವಾಗಿ ಉತ್ತಮವಾದ ಚರ್ಚೆ ಮಾಡಬಹುದಾಗಿತ್ತು, ಗಹನವಾದ ವಿಸ್ತೃತವಾದ ಚೆರ್ಚೆಗೆ ಅವಕಾಶವನ್ನು ನೀಡಿ ಶಾಲಾ ಮಕ್ಕಳಲ್ಲಿ ಬಾಹ್ಯಾಕಾಶ ಯಾನದಲ್ಲಿಯ ಅವಕಾಶಗಳ ಬಗ್ಗೆ ಎಚ್ಚು ಬೆಳಕು ಚೆಲ್ಲುವಂತ ಅವಕಾಶವಿದ್ದಿತು. ವಿಜ್ಞಾನಿಗಳನ್ನು ಕರೆಸಿ ಅವರ ಮೂಲಕ ಬಾಹ್ಯಾಕಾಶ ಯಾನದ ಬಗ್ಗೆ , ಗಗನ ನೌಕೆಗಳ ಬಗ್ಗೆ, ಉಪಗ್ರಹ ುಟಾಯಣ ವಾಹನಗಳ ಬಗ್ಗೆ ಚರ್ಚೆ ಇರಬೇಕಿತ್ತು. ಈಗಿನ ಮಕ್ಕೆಳೆ ನಾಳಿನ ಬಾಹ್ಯಾಕಾಶ ತಜ್ಞರು ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಈ ಬಗ್ಗೆ ಒಲವು ಮೂಡಿಸುವಲ್ಲಿ ಮಾಧ್ಯಮಗಳು ಪ್ರಾ...