ಶಿವ ಅಷ್ಟೋತ್ತರ ಶತ ನಾಮಾವಳಿ
*ಇಷ್ಟಾರ್ಥ ಸಿದ್ಧಿಗಾಗಿ ನಿತ್ಯ ಪಠಿಸಿ ಶಿವ ಅಷ್ಟೋತ್ತರ ಶತ ನಾಮಾವಳಿ..!* ಪ್ರತಿನಿತ್ಯ ನಾವು ಶಿವ ಅಷ್ಟೋತ್ತರ ಶತ ನಾಮಾವಳಿಯನ್ನು ಪಠಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುತ್ತದೆ. ಜೀವನದ ನೋವುಗಳು ದೂರಾಗಿ ಸಂತೋಷ, ಶಾಂತಿ ಸಿಗುತ್ತದೆ. ಶಿವನನ್ನು ಒಲಿಸಿಕೊಳ್ಳುವುದು ತುಂಬಾ ಸರಳ. ಭಕ್ತಿಯೊಂದಿದ್ದರೆ ಆತ ಯಾರಿಗೆ ಬೇಕಾದರೂ ಒಲಿಯುವಾತ. ಶಿವನಿಗೆ ಆಡಂಭರದ ಪೂಜೆ - ಪುನಸ್ಕಾರಗಳ ಅವಶ್ಯಕತೆಯಿಲ್ಲ. ಶ್ರದ್ಧಾ - ಭಕ್ತಿಯಿಂದ, ನಿಷ್ಕಲ್ಮಶ ಮನಸ್ಸಿನಿಂದ ಒಮ್ಮೆ ಓಂ ಎಂದರೆ ಸಾಕು ಆತ ನಿಮ್ಮತ್ತ ತಿರುಗಿ ನೋಡುವನು. ಶಿವನನ್ನು ಒಲಿಸಿಕೊಳ್ಳಲು ಓಂ ಮಾತ್ರವಲ್ಲ, ಅನೇಕ ಮಂತ್ರಗಳು, ಸ್ತೋತ್ರಗಳು ಇವೆ. ಆದರೆ ಅವುಗಳಲ್ಲಿ ಪ್ರಮುಖವಾದುದ್ದು, ಶಿವನಿಗೆ ಅತ್ಯಂತ ಪ್ರಿಯವಾದ ಆತನ 108 ನಾಮಗಳ ಅಷ್ಟೋತ್ತರ ನಾಮಾವಳಿಗಳು. ಇದನ್ನೇ ಶಿವ ಅಷ್ಟೋತ್ತರ ಶತ ನಾಮಾವಳಿಗಳೆಂದು ಕರೆಯಲಾಗುತ್ತದೆ. ಶಿವ ಅಷ್ಟೋತ್ತರ ಶತ ನಾ...