Posts

Showing posts with the label vedavyasa

ಶ್ರೀಮದ್ಭಾಗವತ

ನಾನು ಓದಿದ ಪುಸ್ತಕ - ಶ್ರೀಮದ್ಭಾಗವತ - ಸಂಗ್ರಹಕಾರರು ; ಶ್ರೀ.ಟಿ.ಕೆ. ವೇಣುಗೋಪಾಲದಾಸರು; ಪ್ರಕಾಶಕರು- ಗುರುರಾಜ ಪ್ರಕಾಶನ- ಬೆಂಗಳೂರು. ಶ್ರೀ ಮದ್ಭಾಗವತವು ಶ್ರೀ ವೇದವ್ಯಾಸರು ರಚಿಸಿದ ಮೇರು ಕೃತಿಯಾಗಿದೆ. ಶ್ರೀ ವೇದವ್ಯಾಸರ ಮನದಾಳದ ಕೊರತೆಯನ್ನು ನೀಗಿದ, ನಾರದರಿಂದ ಸೂಚಿಸಲ್ಪಟ್ಟ ಈ ಗ್ರಂಥವು 18000 ಶ್ಲೋಕವುಳ್ಳ,೧೮ನೆಯ ಗ್ರಂಥವಾದ, ಮುಕ್ತಿಪ್ರದವಾದ ಅಂದರೆ ಜೀವನು ಪರಮಾತ್ಮನನ್ನು ಹೊಂದಲು ಬೇಕಾದ ೧೮ ಮೆಟ್ಟಿಲುಗಳ ಸಾಧನೆಗೆ ಪ್ರಮುಖವಾದ ಈ ಗ್ರಂಥವು ೧೮ ರ ವೈಶಿಷ್ಟ್ಯವನ್ನು ಹೊಂದಿದೆ. ಶ್ರೀಮದ್ಭಾಗವತವು ಒಂದು ವಿಜ್ಞಾನ, ಒಂದು ಕಲೆ. ಅಣು, ಪರಮಾಣು, ಭೂಮಂಡಲ, ಬ್ರಹ್ಮಾಂಡದ ಜೊತೆಗೆ ಭೂಮಂಡಲದ ರಚನೆ, ಆಕಾಶ, ಆಕಾಶ ಕಾಯಗಳು, ಗ್ರಹ, ನಕ್ಷತ್ರ,ಸೂರ್ಯ, ಸಮಯ, ಘಳಿಗೆ, ಭೂಮಂಡಳವನ್ನಾಳಿದ ರಾಜರುಗಳು, ವಿವಿಧ ಯುಗಗಳು, ಶ್ರೀಕೃಷ್ಣ, ರಾಮಾಯಣ, ಮಹಾಭಾರತ, ಯಯಾತಿ ಮೊದಲಾದವುಗಳನ್ನು ಒಳಗೊಂಡು ಜೀವನ್ಮುಕ್ತಿಗೆ ಶ್ರೇಷ್ಠವಾದ "ಭಕ್ತ್ಯ ಭಾಗವತಂ ಶಾಸ್ತ್ರಂ" - ಮುಕ್ತಿಗೆ ಭಕ್ತಿಯೇ ಕಾರಣವೆಂಬುದು ಸ್ಪಷ್ಟ ನುಡಿ.ಜೀವನದಲ್ಲಿ ಶಾಂತಿ, ನೆಮ್ಮದಿ ಹಾಗೂ ಮುಖ್ಯವಾಗಿ ಕೊನೆಯಲ್ಲಿ ಮುಕ್ತಿಯನ್ನು ಬಯಸುವವರಿಗೆ ಭಕ್ತಿಯನ್ನು ವೃದ್ಧಿಮಾಡುವ ಗ್ರಂಥ ಪುರಾಣವಾಗಿದೆ. ೧೨ ಸ್ಕಂಧಗಳನ್ನುಳ್ಳದ್ದಾಗಿದೆ. ೦೧ ನೇ ಸ್ಕಂಧ - ೨೦ ಅಧ್ಯಾಯಗಳು- 02 ನೇ ಸ್ಕಂಧ- ೧೦ ಅಧ್ಯಾಯಗಳು ೦೩ ನೇ ಸ್ಕಂಧ-...