Posts

Showing posts from July, 2018

No Confidence motion at 6 pm 20.07.2018

           ಭಾರತ ದೇಶದಲ್ಲಿ 15 ವರ್ಷಗಳ ನಂತರ ಲೋಕಸಭೆಯಲ್ಲಿ ಆಡಳಿತ ರೂಡ ಪಕ್ಷದ ವಿರುದ್ದ " No Confidence motion '' ಗೆ ಕರೆಕೊಟ್ಟಿದೆ. No confidence motion ಗೆ ಲೋಕ ಸಭೆಯ ಯಾವುದೇ ಸದಸ್ಯ ಯಾವುದೇ ಕಾರಣವನ್ನು ನೀಡದೇ ಪ್ರಸ್ತುತ  ಇರುವ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಲೋಕಸಭಾ ಸಭಾಪತಿಗಳಿಗೆ ಮನವಿ ಸಲ್ಲಿಸಬಹುದಾಗಿದೆ. ಇದು ಕನಿಷ್ಠ 50 ಜನ  ಲೋಕಸಭಾ ಸದಸ್ಯರ ಸಹಕಾರವಿದ್ದಲ್ಲಿ ಲೋಕ ಸಭಾ ಸಭಾಪತಿಗಳು ಮನವಿಯನ್ನು ಸ್ವೀಕರಿಸುತ್ತಾರೆ. ಸರಕಾರವು ಈ ಸಂದರ್ಭದಲ್ಲಿ ಅಸ್ತಿತ್ವವನ್ನು ಬಹುಸಂಖ್ಯೆಯನ್ನು ಪ್ರದರ್ಶಿಸ ಬೇಕು ಇಲ್ಲದಿದ್ದಲ್ಲಿ ರಾಜಿನಾಮೆಯನ್ನು ನೀಡಬೇಕಾಗುತ್ತದೆ. ಸಂವಿಧಾನದ 75 ನೇ ವಿಧಿಯು " The Council of Minister shall be collectively responsible to the house of people"  ಈ ಕುರಿತು ಸ್ಪಷ್ಟೀಕರಣವನ್ನು ನೀಡುತ್ತದೆ.             ಪ್ರಥಮ ಬಾರಿಗೆ 1963 ನೇ ಇಸವಿಯಲ್ಲಿ No confidence Motion ಗೆ ಕರೆ ನೀಡಲಾಗಿದ್ದಿತು. ಇಲ್ಲಿಯವರೆಗೆ ಒಟ್ಟು 26 ಬಾರಿ ವಿರೋಧ ಪಕ್ಷಗಳು ಕರೆ ನೀಡಿವೆ. ಹಾಗೂ ದಿನಾಂಕ 20.07.2018 ರಂದು ನಡೆಯುವುದು 27 ನೇ ಯದಾಗಿರುತ್ತದೆ. ಶ್ರೀಮತಿ ಇಂದಿರಾಗಾಂಧಿಯವರ ಅಧಿಕಾರವಧಿಯಲ್ಲಿ 15 ಬಾರಿ No confidence Motion ಗೆ ಕರೆ ನೀಡಲಾಗಿರುತ್ತದೆ. 1963 ಶ್ರೀ ಜವಾಹರ ಲಾಲ್ ನೆಹರು ರವರ  ಆಡಳಿತರೂಡ ಸರ್ಕಾರದ ವಿರುದ್ದ