Sri Jagadguru 1008 Ujjaini Shrigalu @ Abbe tumkur fair - veerashaiva
ಅಬ್ಬೆತುಮಕೂರು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನಲ್ಲಿದೆ. ಇಲ್ಲಿ ಶ್ರೀ ಗುರು ವಿಶ್ವಾರಾಧ್ಯರ ಮಠವಿದೆ. ಇಲ್ಲಿ ವೀರಶೈವ ಆಚರಣೆಯಿದ್ದು ಎಲ್ಲಾ ಮತ ಧರ್ಮದವರಿಗೂ ಸೇವೆಗೆ ಅವಕಾಶವಿದೆ. 6.3.14 ರಂದು ಅಬ್ಬೆ ತುಮುಕೂರಿನ ಶ್ರೀ ವಿಶ್ವಾರಾಧ್ಯರ ಮಠದಲ್ಲಿ ಜಾತ್ರೆ ನಡೆಯಿತು. ಜಾತ್ರೆಯ ನಿಮಿತ್ತ ವಿಶ್ವ ಶ್ರೀ ಪ್ರಶಸ್ತಿಯನ್ನು ನಾಡಿನ ಖ್ಯಾತ ನ್ಯಾಯಾಂಗ ವ್ಯವಸ್ಥೆಯ ಹಿರಿಯ ಜೀವಕ್ಕೆ ಮನ್ನಣೆ ನೀಡಿದರು. ಜಾತ್ರೆಯಲ್ಲಿ ಯಾದಗಿರಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರನ್ನೊಳಗೊಂಡು ವಿವಿಧ ಮಠಾದೀಶ್ವರರು, ಮಹಾರಾಷ್ಟ್ರ ಸರಕಾರದ ಮಾಜ ಸಚಿವರಾದ ಮೈತ್ರಿಯವರನ್ನೊಳಗೊಂಡು, ಜನ ಸಾಮಾನ್ಯರು ಭಕ್ತರಾಗಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ಜಾತ್ರೆಯ ಮತ್ತೊಂದು ಆಕರ್ಷಣೆ ಎಂದರೆ ವೀರಶೈವ ಪಂಚ ಪೀಠಗಳಲ್ಲೊಂದಾದ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳವರು. ಎಂದಿನಂತೆ ಶ್ರೀ ಗುರುಗಳ ಭಾಷಣ ಕೊನೆಯಲ್ಲಿ ಶುರುವಾಯಿತು. ಭಾಷಣದಲ್ಲಿ ಗುರುಗಳು ಆಡು ಮುಟ್ಟದ ಗಿಡ ಇಲ್ಲ ಎಂಬಂತೆ ತಮ್ಮ ವಾಕ್ ಶಕ್ತಿಯಿಂದ ಸಮಾಜದ ನಾನಾ ಮುಖಗಳ ಪರಿಚಯ ಮಾಡಿಸಿದರು. ಮನೆಯಲ್ಲಿ ದೊಡ್ಡ ಮಗನಾಗಿ ಹುಟ್ಟಬಾರದು. ಮದುವೆ ಮನೆಯಲ್ಲಿ ಊಟಕ್ಕೆ ಕೊನೆಯವನಾಗಿ ಹೋಗಬಾರದು. ಸಭೆಯಲ್ಲಿ ಕೊನೆಯದಾಗಿ ಭಾಷಣ ಮಾಡಬಾರದು. ನನಗೆ ಇಷ್ಟವಾದುದು ಗುರುಗಳು ಜೋಳದ ಬಗೆಗಳ ಬಗ್ಗೆ ನೀಡಿದ ಮಾಹಿತಿ ಜೋಳದಲ್ಲಿ ನಾಲ್ಕು ವಿಧ: 1. ನುಸಿ ಜೋಳ: ನುಸಿಯ ಆಗೆ ಕೆಲ ಜನರು ನುಸುಳಿ ಎಲ್ಲವನ್ನು ತಿಂದು...