Posts

Showing posts from September, 2015

ಶ್ರೀಯುತ ಚಂದ್ರಶೇಖರ ಪಾಟಿಲ ರವರೇ ನಾನು ತಿಳಿದಂತೆ ವೀರಶೈವ ಧರ್ಮ

ದಿನಾಂಕ 14/09/2015 ರಂದು ರಾತ್ರಿ ಟಿವಿ ಚಾನೆಲ್  ಒಂದರಲ್ಲಿ ಮಾನ್ಯ ಬುದ್ಧಿ ಜೀವಿಗಳು, ಹಿರಿಯ ಲೇಖಕರು, ವಿಮರ್ಶಕರು ಆದ ಶ್ರೀ ಚಂದ್ರಶೇಖರ ಪಾಟಿಲ್ ಇವರು ಚರ್ಚೆಯೊಂದರಲ್ಲಿ ಭಾಗವಹಿಸಿದ್ದರು. ಚರ್ಚೆ ಶ್ರೀ ಎಂ.ಎಂ ಕಲಬುರ್ಗಿ ರವರ ಹತ್ಯೆಯ ಕುರಿತಾಗಿದ್ದಿತು. ವೀರಶೈವ ಧರ್ಮದ ಬಗ್ಗೆ ಚಂಪಾ ರವರು ಸಂಕುಚಿತ ಮನೋಭಾವದಿಂದ ಮಾತಾನಾಡಿದ್ದು ನೋಡಿ ಖೇದವಾಯಿತು.  " :ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಎಂದು ಶ್ರೀ ಗುರು ಗಂಗಾಧರರು ಜಗಕ್ಕೆ ಕರೆ ನೀಡಿದ್ದಾರೆ. ವೀರಶೈವ  ಎಂದರೆ ಯಾರು? ವಿಕಲ್ಪ ರಹಿತನಾದವನು ಶೈವ. ವೀರ ಶೈವ ಧರ್ಮದ ಬಗ್ಗೆ ಮಾತಾನಾಡುವವರು ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಧರ್ಮವೇ ತಪ್ಪು ಎನ್ನುವುದಾದರೇ ತಾವು ಪಾಲಿಸುತ್ತಿರುವ ಧರ್ಮ ಯಾವುದು? ನೀವು ಯಾವ ಧರ್ಮಕ್ಕೂ ಸೇರದವರಾಗಿದ್ದೀರಾ? ಯಾವ ದೇಶದಲ್ಲಿ ಯಾವ ಜಾತಿಯಲ್ಲಿ ಧರ್ಮ ಹಾಸುಹೊಕ್ಕಾಗಿಲ್ಲ. ಲಿಂಗ ಪೂಜೆಯ ಮಹತ್ವ ಲಿಂಗ ಪೂಜೆಯನ್ನು ಮಾಡುವವರಿಗೆ ಗೊತ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ನಡೆಯುತ್ತಾರೆ. ಪೂಜಿಸುತ್ತಾರೆ.  ಶ್ರೀ ಬಸವಣ್ಣನವರು ಲಿಂಗ ಪೂಜೆ ಮಾಡಲಿಲ್ಲವೇ? ಬಸವಣ್ಣನವರ ಮೇಲೆ ತಮಗೆ ಗೌರವವಿಲ್ಲವೇ?
दिल कहता है तुम ही हो मेरे प्यारे साती 

ನೇರ ನಿಷ್ಠುರವಾದಿ ಎಂ.ಎಂ. ಕಲಬುರ್ಗಿ

ಶ್ರೀ. ಎಂ.ಎಂ ಕಲಬುರ್ಗಿಯವರ ಕೊಲೆ ಸಮಾಜದಲ್ಲಿ ಈ ದಿನ ನೆಲೆಸಿರುವ ಅರಾಜಕತೆಯ ಪ್ರತೀಕ ಎಂಬಂತಿದೆ. ನೇರ, ನಿಷ್ಠುರವಾಗಿ ನುಡಿಯುವುದಕ್ಕಿಂತ ಮಹಾತ್ಮ ಗಾಂಧಿಜಿಯವರ ಕುರು, ಕಿವುಡ, ಮೂಕ ಕೋತಿಗಳ ತರಹ ಇರಬೇಕೆ ಎಂಬ ಸಂಧಿಗ್ಧ ಪ್ರಶ್ನೆ ಏರ್ಪಟ್ಟಿದೆ.  ಲಂಚಕೋರ ಭ್ರಷ್ಟ ಸರ್ಕಾರದ ಕೆಲ ಅಧಿಕಾರಿಗಳು, ಇವರುಗಳಿಗೆ ಬೆಂಗಾವಲಾಗೋ ಪುಡಾರಿಗಳು ಜೀವನವೇ ಒಂದು ಜಿಗುಪ್ಸೆ. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಲೇಖಕ ವರ್ಗದಲ್ಲಿ, ಸಮಾಜದ ಜನತೆಯಲ್ಲಿ ಈ ಬಗ್ಗೆ ಬಹು ವಿಧವಾಗಿ ಚರ್ಚೆಗಳಾಗ ಬೇಕಿತ್ತು. ಸಾಮಾನ್ಯರನ್ನು ಅಸಮಾನ್ಯರನ್ನಾಗಿ ಕೇಸುಗಳಿಗೆ ಟ್ವಿಸ್ಟ ಕೊಡೊ ಟಿ.ವಿ.ಚಾನೆಲ್ ಗಳು ಈ ಬಗ್ಗೆ ಎಚ್ಚು ಚರ್ಚೆಗೆ ಆ ಸ್ಪದ ನೀಡದಿರುವುದು ಕೂಡ ಬೇಜಾರು ತರುವಂತಹ ಸಂಗತಿ. ಅಪರಾಧ ವೆಸಗಿರುವವರನ್ನು ಶೀಘ್ರವಾಗಿ ಪೋಲಿಸರು ಬಂಧಿಸ ಬೇಕು. ಮತ್ತು ಎಂ.ಎಂ ಕಲಬುರ್ಗಿಯವರಮತಹ ಸಜ್ಜನ ಹಿರಿಯ ನಿಷ್ಠುರವಾದಿಗಳಿಗೆ ಪೋಲಿಸರು ಆರಕ್ಷಣೆ ನೀಡಬೇಕು. ಇಂದು ರಾಷ್ಟದಾದ್ಯಂತ ಅರಾಜಕತೆ ತಾಂಡವವಾಡಲು ಸನ್ನಿವೇಶಗಳು ಪ್ರೇರೇಪಿಸುತ್ತಿವೆ. ರಿಸರ್ವೇಶನ್, ಡಿ.ಎನ್.ಎ, ನದಿ ಜೋಡಣೆ, ಹತ್ಯಾಚಾರ, ಕೋಮು ಗಲಭೆ, ರೈತರ ಆತ್ಮ ಹತ್ಯೆ ಜೊತೆಗೆ ಬೆಳೆದಾಗ ಬೆಲೆ ಸಿಗದೇ ರೈತನಿಗೆ ಕಣ್ಣೀರು ತರಿಸಿದ ಈರುಳ್ಳಿ ಇಂದು ಗ್ರಾಹಕರಿಗೆ ಕಣ್ನೀರು ತರಿಸುತ್ತಿದೆ. ದೇಶದ ಪ್ರಗತಿ ಒಂದೆಡೆ ಶ್ರಮಿಸುತ್ತಿದ್ದರೆ ಮತ್ತೊಂದೆಡೆ ಅಧಿಕಾರ ದಾಹದಿಂದ ರಾಜ್ಯ ರಾಷ್ಟ್ರದಲ್ಲಿ ಕೋಲಾಹಲ ಸೃ