Posts

Showing posts with the label ravi belagere

ಹಾಯ್‌ ಬೆಂಗಳೂರು, ಓ- ಮನಸೇ, ರವಿ ಬೆಳಗೆರೆ - Words Magician

  ಹಾಯ್‌ ಬೆಂಗಳೂರು, ಓ- ಮನಸೇ, ರವಿ ಬೆಳಗೆರೆ – ಪದ್ಮನಾಭನಗರ ಕಛೇರಿಯಲ್ಲಿ ತಡರಾತ್ರಿ ಹೃದಯಾಘಾತದಿಂದ ದಿನಾಂಕ 12/11/2020 ರಂದು 12.15 ಕ್ಕೆ ಮರಣ. 1995 ರಲ್ಲಿ ಹಾಯ್‌ ವೆಂಗಳೂರು ಪ್ರಾರಂಭ, ಸುಮಾರು 50 ಕ್ಕೂ ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕೃತರು. ಬನಶಂಕರಿ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ. ಪ್ರಾರ್ಥನಾ ಶಾಲೆಯ ಸ್ಥಾಪಕ ರವಿ ಬೆಳಗೆರೆ, ಹಾವೇರಿ ಜಿಲ್ಲೆಯಲ್ಲಿ ಇಂದು ದಿನಾಂಕ 13/11/2020 ಮೆಡಿಕಲ್‌ ಕಾಲೇಜು ಉದ್ಘಾಟನೆಯಾದ ದಿನ. ರವಿ ಬೆಳಗೆರೆ, ಹೆಸರಿಗೆ ತಕ್ಕಂತೆ ಪತ್ರಿಕೋದ್ಯಮ ರಂಗದಲ್ಲಿ ಪ್ರಜ್ವಲಿಸಿ, ಪತ್ರಿಕೋದ್ಯಮವನ್ನಾಳಿದ ಧೃವತಾರೆ. ರವಿ ಬೆಳಗೆರೆ ಒಂದು ಆದಮ್ಯ ಚೇತನ. ಪತ್ರಿಕಾ ಲೋಕದ ತನಿಖಾ ಪತ್ರಿಕೋದ್ಯಮಕ್ಕೆ ಒಂದು ಹೊಸತನವನ್ನು ನೀಡಿದ ರವಿ ಬೆಳಗೆರೆ , ಓ ಮನಸೇ ಎಂದು ನಮ್ಮನ್ನು ಕಾಡಿದ ರವಿ ಬೆಳಗೆರೆ ಇಂದು ನಮ್ಮೊಡನಿಲ್ಲ. ತುಂಬಾ ಬೇಜಾರು ಕಂಡ್ರಿ, ಏನನ್ನು ಕಳೆದುಕೊಂಡಂತೆ, ಯಾರೋ ಸಂಬಂಧಿಯನ್ನು ಕಳೆದುಕೊಂಡಂತೆ. ಹಾಯ್‌ ಬೆಂಗಳೂರು ಎಂಬ ಪತ್ರಿಕೆಯ ಮೂಲಕ ರವಿ ಬೆಳಗೆರೆ ಎಂಬ ಪತ್ರಕರ್ತರನ್ನು ಹಚ್ಚಿಕೊಂಡು ಅವರ ಅಭಿಮಾನಿಯಾಗಿ ಗೌರವಿಸಿದ್ದು ಒಂದು ಒಳ್ಳೆಯ ನಡೆ. ಪತ್ರಿಕಾ ರಂಗದಲ್ಲಿ ತನ್ನದೇ ಒಂದು ಓದುಗ ವೃಂದವನ್ನು ಹೊಂದಿದ್ದ ಬಹು ಬೇಡಿಕೆಯ ಲೇಖಕ, ರವಿ ಬೆಳಗೆರೆ. ರವಿ ಬೆಳಗೆರೆ ಬರೆಯಲು ಕುಳಿತರೆ