ಸಮತಳ, ಸೌತ್ಲ, ಸರಸ್ವತಿಪುರ
ಗ್ರಾಮದ ಹೆಸರು ಸಮತಳ, ಸೌತ್ಲ ಅಲ್ಲ.ಸರಸ್ವತಿಪುರವೆಂಬ ಹೆಸರು ಇದ್ದದ್ದು ತಿಳಿದು ಬರುತ್ತದೆ. ಇದು ಭಾರತ ದೇಶದ, ಕರ್ನಾಟಕ ರಾಜ್ಯದ ಮಲೆನಾಡಿನ ಕಾಫಿ ಜಿಲ್ಲೆ ಎಂದು ಪ್ರಸಿದ್ಧವಾದ ಚಿಕ್ಕಮಗಳೂರು ಜಿಲ್ಲೆಯ, ತರೀಕೆರೆ ತಾಲೂಕಿನ ಐತಿಹಾಸಿಕ ಅಮೃತೇಶ್ವರ ದೇವಾಲಯವಿರುವ ಅಮೃತಾಪುರ ಹೋಬಳಿಯಲ್ಲಿದೆ. ಇದು ಒಂದು ಪುಟ್ಟ ಗ್ರಾಮ. ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ತಿಮ್ಮಪ್ಪನ ದೇವಸ್ಥಾನ, ಶ್ರೀ ಪತ್ರೆ ಮರದ ಸಿದ್ದೇಶ್ವರ ಗುಡಿಯಿದೆ. ಆಲದಮರದಮ್ಮ, ಬೇವಿನ ಮರದಮ್ಮ, ಸಂತೆ ದಿಬ್ಬದ ಅಮ್ಮ ನೆಲೆಸಿದ್ದಾರೆ. ಪ್ರತಿ ವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ, ಇಲ್ಲಿ ನಡೆಯುವ ಜಾತ್ರೆಯು ವಿಶೇಷವಾಗಿದೆ. ಜಾತ್ರೆಗೆ ಮೊದಲು ದೇವರ ಕಲ್ಲತ್ತಿಗಿರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಆಯ್ದ ಕೆಲವರು ಮಾತ್ರ ಮೇಗಲ ಗಿರಿಗೆ ತೆರಳುತ್ತಾರೆ. ಮೇಗಲ ಗಿರಿಯ ದಾರಿಯು ದುರ್ಗಮವಾದುದಾಗಿದೆ. ಮೇಗಲಗಿರಿಯಲ್ಲಿ ನೆಲೆಸಿರುವ ಶ್ರೀ ವೀರಭದ್ರೇಶ್ವರ ದೇವರಿಗೆ ಪೂಜೆ ಮಾಡಲಾಗುತ್ತದೆ, ಪೂಜೆ ಸಲ್ಲಿಸಿ ಅಲ್ಲಿ ದೊರೆಯುವ ನೀರು ಮತ್ತು ದರ್ಭೆಯೊಂದಿಗೆ ಮತ್ತೆ ಕೆಳಗೆ ಬರುತ್ತಾರೆ. ಮೇಗಲಗಿರಿಗೆ ತೆರಳಿದವರು ವಾಪಸ್ಸು ಬರುವುದರೊಳಗಾಗಿ ಅಡುಗೆ ಮಾಡಲಾಗುತ್ತದೆ. ಪ್ರಸಾದವನ್ನು ಸ್ವಾಮಿಗೆ ಅರ್ಪಿಸಲು ಎಲ್ಲಾ ತಯಾರಿ ನಡೆದಿರುತ್ತದೆ. ಮೇಗಲಗಿರಿಯಿಂದ ಬಂದ ನಂತರ ...