Posts

Showing posts with the label shabarigiri

Swamy Ayyappa ಶಬರಿಗಿರಿವಾಸನ ಪ್ರಯಾಣ 2019-20

          ಕೇರಳ ರಾಜ್ಯ ಪ್ರಕೃತಿ ಸೊಬಗಿನ ಅನನ್ಯ ರತ್ನ. ಎತ್ತ ನೋಡಿದರತ್ತ ಹಸಿರಿನಿಂದ ಕಂಗೊಳಿಸುತ್ತ. ತೆಂಗು, ರಬ್ಬರ್, ಟೀ ಗೆ ಹೆಸರುವಾಸಿಯಾದ ರಾಜ್ಯ. ಪ್ರತಿ ಬಾರಿ ಶಬರಿ ಮಲೆಗೆ ಬೇಟಿ ನೀಡಿದಾಗ ಗಮನಿಸುವುದು ಪ್ರಕೃತಿಗೆ ಮಾನವ ಕೊಡುಗೆ ಪ್ರಕೃತಿಯ ನಾಶ. ಹಸಿರು ಕಾಡಿನ ನಡುವೆ ಕಾಂಕ್ರಿಟ್ ಲೋಕ. ಕೇರಳಿಗರು ವೃತ್ತಿಪರ ವ್ಯಾಪಾರಸ್ಥರು. ಏರುಮಲೆಯಲ್ಲಿ ಒಂದು ರೂಪಾಯಿಯ ಶಾಂಪುವಿಗೆ 5 ರೂಪಾಯಿ ಪಡೆಯುವ ವ್ಯಾಪಾರಸ್ತ ಮನೋಭಾವದವರು. ಮಲೆಯಾಳಂ ಭಾಷೆ ಒರತು ಪಡಿಸಿ ಬೇರೆ ಭಾಷೆ ಬಳಸಲು ಆಸಕ್ತಿ ತೋರಿಸದ ವ್ಯಾಪಾರಸ್ತ ಮನೋಭಾವದವರು. ತಟ್ಟೆಯಲ್ಲಿ ಕೈ ತೊಳೆಯುವಂತಿಲ್ಲ.                       ಶಬರಿ ಮಲೆ ಯಾತ್ರೆ ಪ್ರತಿ ವರ್ಷವು ಒಂದು ಹೊಸತನವನ್ನು ನೀಡುತ್ತದೆ. ಪ್ರತಿ ಬಾರಿಯು ಹೊಸತನವನ್ನು ನೀಡುತ್ತದೆ. ಈ ಬಾರಿ ನಮ್ಮ ಪ್ರಯಾಣ ಜಯನಗರ ಟಿ.ಬ್ಲಾಕ್ ನ ಶ್ರೀ. ಕರುಮಾರಿಯಮ್ಮ ದೇವಸ್ಥಾನದಿಂದ ಶುರುವಾಯಿತು. ರಾಹುಕಾಲವನ್ನು ಮುಗಿಸಿಕೊಂಡು ನಮ್ಮ ವಾಹನ ಮುನ್ನಡೆಯಿತು. ವಾಹನ ಚಾಲಕ ಕುಂಕನಾಡಿನವನಾಗಿದ್ದ, ಸಂಬಂಧಿಯಾಗಿದ್ದ. ಅಲ್ಲಿಂದ ಮೈಸೂರಿಗೆ ಪ್ರಯಾಣ ಅಲ್ಲಿ ಸ್ವಲ್ಪ ಒತ್ತು ಕಾಯಲಾಯಿತು ಬೀರೂರು ಹಾಗೂ ಚಿಕ್ಕಾನವಂಗಲದಿಂದ ಬಂದ ಸಂಬಂಧಿಕರನ್ನು ಕರೆದುಕೊಂಡು ಮುನ್ನಡೆಯಲಾಯಿತು. ನಂಜನಗೂಡಿನಲ್ಲಿ ನಂಜುಂಡೇಶ್ವರನ ದರ್ಶನಕ್ಕಾಗಿ ಬೇಟಿ ನೀ...