Posts

Showing posts with the label USSR 1978

Alma -Ata Declaration Kannada Transalation, ಅಲ್ಮ ಅಟಾ ಘೋಷಣೆ

ಓಂ ಶ್ರೀ ಗಣೇಶಾಯ ನಮಃ ಅಲ್ಮ ಅಟಾ ಘೋಷಣೆ ಪ್ರಾಥಮಿಕ ಆರೊಗ್ಯ ಆರೈಕೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ , ಅಲ್ಮ ಅಟಾ , ಯು . ಎಸ್ . ಎಸ್ . ಆರ್ . ದಿನಾಂಕ : 06-12 ಸೆಪ್ಟೆಂಬರ್ - 1978 ಪ್ರಾಥಮಿಕ ಆರೋಗ್ಯ ಆರೈಕೆ ಕುರಿತು 1978 ನೇ ಇಸವಿ ಸೆಪ್ಟೆಂಬರ್ ಮಾಹೆಯ 12 ನೇ ದಿನ ಯು . ಎಸ್ . ಎಸ್ . ಆರ್ನ ಅಲ್ಮ ಅಟಾದಲ್ಲಿ ನಡೆದ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಎಲ್ಲ ಸರ್ಕಾರಗಳು , ಎಲ್ಲ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಕರ್ತರು ಹಾಗೂ ವಿಶ್ವಸಮುದಾಯವು ವಿಶ್ವದ ಜನರ ಆರೋಗ್ಯ ರಕ್ಷಿಸಲು ಮತ್ತು ಪ್ರೋತ್ಸಾಹಿಸಲು ತುರ್ತಾಗಿ ಕ್ರಮ ಕೈಗೊಳ್ಳುವ ಅಭಿಪ್ರಾಯವನ್ನು ಪಡಲಾಯಿತು . ಈ ಕೆಳಕಾಣಿಸಿದ ಘೋಷಣೆಗಳನ್ನು ಮಾಡಲಾಗಿದೆ . 1.       ಆರೋಗ್ಯವು ಕೇವಲ ರೋಗ ಅಥವಾ ದೌರ್ಬಲ್ಯದ ಅನುಪಸ್ಥಿತಿಯಲ್ಲ . ಇದು ಸಂಪೂರ್ಣ ಭೌತಿಕ , ಮಾನಸಿಕ ಹಾಗೂ ಸಾಮಾಜಿಕ   ಯೋಗಕ್ಷೇಮವಾಗಿದೆ . ಇದು ಮಾನವನ ಮೂಲಭೂತ ಹಕ್ಕಾಗಿದ್ದು , ವಿಶ್ವದಾದ್ಯಂತ ಉತ್ಕೃಷ್ಠ ಮಟ್ಟದ ಆರೋಗ್ಯ ಮಟ್ಟವನ್ನು ಸಾಧಿಸುವುದು ಸಾಮಾಜಿಕ , ಆರ್ಥೀಕ ವಲಯದ ಕ್ರಮಗಳ ಮೇಲೆ ಅವಲಂಭಿತವಾಗಿದೆ ಎಂದು ಈ ಸಮ್ಮೇಳನವು ಬಲವಾಗಿ ಪುನರುಚ್ಚರಿಸುತ್ತದೆ . 2.      ಅಭಿವೃದ್ದಿ ಹೊಂದಿದ ಮತ್ತು ವಿಶೇಷವಾಗಿ ಅಭ...