Chikkanavangala ಶ್ರೀ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ

ಚಿಕ್ಕಾನವಂಗಲ ಗ್ರಾಮವು ತರೀಕೆರೆ ತಾಲೂಕ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ ರಾಜ್ಯದಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 242 ಕಿ.ಮೀ ದೂರದಲ್ಲಿದೆ.  ಹತ್ತಿರದ ರೈಲ್ವೆ ನಿಲ್ದಾಣಗಳೆಂದರೆ ಶಿವನಿ,ಅಜ್ಜಂಪುರ, ಬೀರೂರು, ಕಡೂರು, ತರೀಕೆರೆ. ಇಲ್ಲಿಗೆ ಖಾಸಗಿ ಬಸ್ ಗಳ ಸಂಪರ್ಕವಿರುತ್ತದೆ. ಗ್ರಾಮವು ಗುಡ್ಡದ ಕೆಳಭಾಗದಲ್ಲಿ ಬರುತ್ತದೆ.

ಗ್ರಾಮದಲ್ಲಿ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ.ಭೂಥನಾಥ ದೇವಸ್ಥಾನ, ಶ್ರೀ ಈಶ್ವರ ದೇವಸ್ಥಾನ, ಶ್ರೀ ನವಗ್ರಹಗಳ ದೇವಸ್ಥಾನ, ಶ್ರೀ. ಆಂಜನೇಯ ಸ್ವಾಮಿ ದೇವಸ್ಥಾನಗಳಿವೆ. ಗ್ರಾಮದಲ್ಲಿ ಕೆರೆಗಳಿವೆ, ಬಾವಿಗಳಿವೆ.ಕೊಳವೆ ಬಾವಿಗಳಿವೆ, ಶ್ರೀ ಚನ್ನಬಸವೇಶ್ವರ ಮದುವೆ ಛತ್ರವಿರುತ್ತದೆ.

ಗ್ರಾಮದಲ್ಲಿ ಅಡಿಕೆ, ತೆಂಗು ತೋಟಗಳಿವೆ. ರಾಗಿ, ಹುರುಳಿ, ಭತ್ತ, ಸೂರ್ಯಕಾಂತಿ, ಈರುಳ್ಳಿಯನ್ನು ಬೆಳೆಯುತ್ತಾರೆ. ಇಲ್ಲಿ ಸರಕಾರಿ ಶಾಲೆ ಇದೆ, ಪಂಚಾಯತಿ ಕಛೇರಿ ಇದೆ, ಉಪಕೇಂದ್ರ ಕಟ್ಟಡವಿದೆ. ಪಡಿತರ ಚೀಟಿ ರೇಶನ್ ವಿತರಿಸಲಾಗುತ್ತದೆ.

ಗ್ರಾಮವು  ಶ್ರೀ ಶ್ರೀ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡದಾರ್ಚನೆಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷವು ರಾಮ ನವಮಿಯಂದು ರಥೋತ್ಸವ ಜರುಗುತ್ತದೆ. ಕೆಂಡದಾರ್ಚನೆಯು ರಥೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ನಡೆಯುತ್ತದೆ.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva