ಎನ್.ಎಚ್.ಎಂ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿ ಷರತ್ತು ಮತ್ತು ನಿಬಂಧನೆಗಳು
  ಎನ್.ಎಚ್.ಎಂ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ    ಶುಶ್ರೂಷಕಿ   ಷರತ್ತು ಮತ್ತು ನಿಬಂಧನೆಗಳು   1.       ನರ್ಸಿಂಗ್ ವಿದ್ಯಾರ್ಹತೆಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು.   2.      ಗುತ್ತಿಗೆ ಆಧಾರ ಮೇಲೆ ಆಯ್ಕೆ ಮತ್ತು ನೇಮಕವು ಒಂದು ವರ್ಷದ ಅವಧಿಗೆ ಸೀಮಿತವಾಗಿರುತ್ತದೆ.   3.      ಆಯ್ಕೆಯನ್ನು ನಿರ್ದಿಷ್ಟವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಡಿಕೊಳ್ಳುವುದರಿಂದ, ಬೇರೆ ಯಾವುದೇ ಸ್ಥಳಕ್ಕೆ/ಪ್ರಾ.ಆ.ಕೇಂದ್ರಕ್ಕೆ ಅಭ್ಯರ್ಥಿಯ ಬೇಡಿಕೆಯ ಮೇಲೆ ಸ್ಥಳಾಂತರಕ್ಕೆ/ನಿಯೋಜನೆಗೆ ಅವಕಾಶವಿರುವುದಿಲ್ಲ.   4.     ಆಯ್ಕೆಯನ್ನು ಜಿಲ್ಲಾ ಆರೋಗ್ಯ ಸಂಘದಿಂದ ನಿಯಮಾನುಸಾರ ಹಾಗೂ ಸಾಮರ್ಥ್ಯ ಆಧಾರಿತ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಿ, ಸಂಬಂಧಿಸಿದ ಆರೋಗ್ಯ ಕೇಂದ್ರಗಳ ಆರೋಗ್ಯ ರಕ್ಷಾ ಸಮಿತಿಯಿಂದ ನೇಮಕಾತಿಯ ಆದೇಶ ನೀಡಬೇಕು.   5.      ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಮೂಲ ದಾಖಲೆಗಳನ್ನು ಅಂದರೆ ವಿದ್ಯಾರ್ಹತೆಯ ಅಂಕಪಟ್ಟಿ/ದೃಡೀಕರಣ ಪತ್ರ ಜನ್ಮ ದಿನಾಂಕದ ದಾಖಲೆ ಇತ್ಯಾದಿಗಳನ್ನು ಆರೋಗ್ಯ ರಕ್ಷಾ ಸಮಿತಿಯ ಮುಂದೆ ಹಾಜರು ಪಡಿಸ...