ಎನ್.ಎಚ್.ಎಂ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿ ಷರತ್ತು ಮತ್ತು ನಿಬಂಧನೆಗಳು
ಎನ್.ಎಚ್.ಎಂ ಅಡಿಯಲ್ಲಿ ಪ್ರಾಥಮಿಕ
ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ
ಶುಶ್ರೂಷಕಿ
ಷರತ್ತು
ಮತ್ತು ನಿಬಂಧನೆಗಳು
1. ನರ್ಸಿಂಗ್ ವಿದ್ಯಾರ್ಹತೆಯನ್ನು ಕರ್ನಾಟಕ ಸರ್ಕಾರದಿಂದ
ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು.
2. ಗುತ್ತಿಗೆ ಆಧಾರ ಮೇಲೆ ಆಯ್ಕೆ ಮತ್ತು ನೇಮಕವು ಒಂದು
ವರ್ಷದ ಅವಧಿಗೆ ಸೀಮಿತವಾಗಿರುತ್ತದೆ.
3. ಆಯ್ಕೆಯನ್ನು ನಿರ್ದಿಷ್ಟವಾದ ಪ್ರಾಥಮಿಕ ಆರೋಗ್ಯ
ಕೇಂದ್ರಗಳಿಗೆ ಮಾಡಿಕೊಳ್ಳುವುದರಿಂದ, ಬೇರೆ ಯಾವುದೇ ಸ್ಥಳಕ್ಕೆ/ಪ್ರಾ.ಆ.ಕೇಂದ್ರಕ್ಕೆ ಅಭ್ಯರ್ಥಿಯ
ಬೇಡಿಕೆಯ ಮೇಲೆ ಸ್ಥಳಾಂತರಕ್ಕೆ/ನಿಯೋಜನೆಗೆ ಅವಕಾಶವಿರುವುದಿಲ್ಲ.
4. ಆಯ್ಕೆಯನ್ನು ಜಿಲ್ಲಾ ಆರೋಗ್ಯ ಸಂಘದಿಂದ ನಿಯಮಾನುಸಾರ
ಹಾಗೂ ಸಾಮರ್ಥ್ಯ ಆಧಾರಿತ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಿ, ಸಂಬಂಧಿಸಿದ ಆರೋಗ್ಯ ಕೇಂದ್ರಗಳ ಆರೋಗ್ಯ
ರಕ್ಷಾ ಸಮಿತಿಯಿಂದ ನೇಮಕಾತಿಯ ಆದೇಶ ನೀಡಬೇಕು.
5. ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಮೂಲ ದಾಖಲೆಗಳನ್ನು
ಅಂದರೆ ವಿದ್ಯಾರ್ಹತೆಯ ಅಂಕಪಟ್ಟಿ/ದೃಡೀಕರಣ ಪತ್ರ ಜನ್ಮ ದಿನಾಂಕದ ದಾಖಲೆ ಇತ್ಯಾದಿಗಳನ್ನು ಆರೋಗ್ಯ
ರಕ್ಷಾ ಸಮಿತಿಯ ಮುಂದೆ ಹಾಜರು ಪಡಿಸತಕ್ಕದ್ದು.
6. ಗುತ್ತಿಗೆ ಆಧಾರದ ಶುಶ್ರೂಷಕಿಯರನ್ನುಯಾವುದೇ ಸಮಯದಲ್ಲಿ
ಯಾವುದೇ ಕಾರಣವಿಲ್ಲದೆ ಒಂದು ತಿಂಗಳ ನೋಟಿಸ್ ನೀಡಿ ಅಥವಾ ಒಂದು ತಿಂಗಳ ಸಂಭಾವನೆ ನೀಡಿ ಕರ್ತವ್ಯದಿಂದ
ಬಿಡುಗಡೆ ಮಾಡಬಹುದು.
7. ಕಾರ್ಯಕ್ಷಮತೆಯ ಬಗ್ಗೆ ದೂರು ಬಂದಲ್ಲಿ ಒಂದು ವಾರದ
ನೋಟಿಸ್ ಕೊಟ್ಟು ಅಭ್ಯರ್ಥಿಗೆ ಸ್ಪಷ್ಟನೆ ನೀಡಲು ಅವಕಾಶ ನೀಡಿ ಕರ್ತವ್ಯದಿಂದ ಬಿಡುಗಡೆ ಮಾಡಬಹುದು.
8. ದುರ್ನಡತೆಯಿಂದಾಗಿ ನಷ್ಟ ಉಂಟಾದಲ್ಲಿ ಅದನ್ನು ಸರ್ಕಾರಕ್ಕೆ
ತುಂಬಿಕೊಡುವ ಷರತ್ತಿಗೆ ಬದ್ದರಾಗಿರಬೇಕು.
9. ಗುತ್ತಿಗೆ ಆಧಾರದ ನೌಕರರ ಯಾವುದೇ ಆಯ್ಕೆಯನ್ನು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅನುಮೋದನೆ ಇಲ್ಲದೇ ಮಾಡುವಂತಿಲ್ಲ.
10. ಗುತ್ತಿಗೆ ಆಧಾರದ ಮೇಲೆ ಆಯ್ಕೆಗೊಂಡ ಸಿಬ್ಬಂದಿಯವರು
ಖಾಯಂ ನೇಮಕಾತಿಗಾಗಲೀ, ವಿಶ್ರಾಂತಿ ವೇತನಕ್ಕಾಗಲೀ, ನಿವೃತ್ತ ಉಪದಾನ, ವೇತನ ಶ್ರೇಣಿ ಅಥವಾ ಇನ್ನಿತರ
ಯಾವುದೇ ಭತ್ಯೆಗಳನ್ನು ಪಡೆಯಲು ಹಕ್ಕನ್ನು ಹೊಂದಿರುವುದಿಲ್ಲ ಮತ್ತು ಆರ್ಹರಿರುವುದಿಲ್ಲ ಹಾಗೂ ಈ ಕುರಿತು
ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
11. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು
ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶನಾಲಯವು
ಕಾಲಕಾಲಕ್ಕೆ ವಹಿಸಿದ ಕರ್ತವ್ಯ ಜವಾಬ್ದಾರಿಗಳನ್ನು ಅವರುಗಳು ತಪ್ಪದೇ ನಿರ್ವಹಿಸತಕ್ಕದ್ದು.
12. ಆಯ್ಕೆ ಹೊಂದಿದ ಸಿಬ್ಬಂದಿಗಳು ತಾತ್ಕಾಲಿಕ ಸರ್ಕಾರಿ
ನೌಕರರಿಗೆ ಸಿಗುವ ರಜೆಗಳನ್ನು ಪಡೆಯಲು ಮಾತ್ರ ಆರ್ಹರಿರುತ್ತಾರೆ. ಅಂದರೆ, ಪ್ರತಿಯೊಂದು ತಿಂಗಳ ಪೂರ್ಣಪ್ರಮಾಣದ
ಸೇವೆ ಪೂರೈಸಿದರೆ ಒಂದು ದಿನದ ಸಾಂದರ್ಭಿಕ ರಜೆ ಗಳಿಕೆಯಾಗುತ್ತದೆ. ಅಂತಹ ರಜೆಯನ್ನು ಬಿಡಿಯಾಗಿ ಅಥವಾ
ಒಟ್ಟಾಗಿ ಮೇಲಾಧಿಕಾರಿಗಳ ಅಪ್ಪಣೆಯಂತೆ ಪಡೆಯಬಹುದು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಹೊಂದಿರುವ ಸಿಬ್ಬಂದಿಗಳು
ಒಂದು ವರ್ಷದಲ್ಲಿ 10 ದಿನಗಳ ವೈದ್ಯಕೀಯ ರಜೆ ಪಡೆಯಲು ಆರ್ಹರಿರುತ್ತಾರೆ. ಮಹಿಳಾ ಸಿಬ್ಬಂದಿಗಳು
180 ದಿನಗಳ ವೇತನ ಸಹಿತ ಪ್ರಸೂತಿ ರಜೆ ಪಡೆಯಲು ಆರ್ಹರಿರುತ್ತಾರೆ (ಪ್ರಸ್ತುತ ಮೊದಲೆರಡು ಹೆರಿಗೆಗಳಿಗೆ
ಅನ್ವಯಿಸುವಂತೆ ಮಾತ್ರ). ಕರಾರನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದಲ್ಲಿ ಅಂತವರ ಕರಾರನ್ನು
ಅಂಗೀಕರಿಸಬಾರದ್ದೆಂದು ತಿಳಿಸಲಾಗಿದೆ.
13. ಆಯ್ಕೆ ಹೊಂದಿದ ಶುಶ್ರೂಷಕಿಯರುಗಳ ಸ್ಥಳಕ್ಕೆ ಇಲಾಖೆಯ
ವತಿಯಿಂದ ಖಾಯಂ ನೌಕರರು ಬಂದಲ್ಲಿ ಕರ್ತವ್ಯದಿಂದ ಬಿಡುಗಡೆ ಹೊಂದಲು ತಕರಾರು ಮಾಡುವಂತಿಲ್ಲ ಹಾಗೂ ಈ
ಬಗ್ಗೆ ಕರ್ನಾಟಕ ನ್ಯಾಯ ಮಂಡಳಿಯಲ್ಲಿ ಅಥವಾ ಇನ್ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವಂತಿಲ್ಲ.
14. ಆಯ್ಕೆ ಹೊಂದಿದ ಶುಶ್ರೂಷಕಿಯರು ಕರ್ತವ್ಯಕ್ಕೆ ಹಾಜರಾಗುವ
ಮೊದಲು ನಿಬಂಧನೆಗಳನ್ನು ಒಪ್ಪಿಕೊಂಡಿರುವಂತೆ ರೂ. 100ಗಳ ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ಆರೋಗ್ಯ
ರಕ್ಷಾ ಸಮಿತಿಗೆ ನೀಡತಕ್ಕದ್ದು.
Comments