Hangal Kumareshwara

ದಿನಾಂಕ 03-03-2017 ರಂದು ಹಾವೇರಿ ಶ್ರೀ ಹುಕ್ಕೇರಿ ಮಠದ ಪರಮ ಪೂಜ್ಯ ಲಿಂ. ಶ್ರೀ ಶಿವಲಿಂಗ ಮಹಾಶಿವಯೋಗಿಗಳ (1918- 2017)ವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ , ಶ್ರೀ. ಮ.ನಿ.ಪ್ರ ಅಭಿನವ ಸಿದ್ಧಾರೂಢ ಸ್ವಾಮಿಗಳು, ಷಣ್ಮುಖಾರೂಢ ಮಠ, ವಿಜಯಪುರ  ಇವರ ನುಡಿನಮನದಿಂದ ಆಯ್ದ ನುಡಿ ಮುತ್ತುಗಳು. 

1909 ರಲ್ಲಿ ಸನ್ಯಾಸಿಗಳಿಗೆ ದೀಕ್ಷೇ ನೀಡುವ ಮಹಾಮಂದಿರ ಶಿವಯೋಗಮಂದಿರವನ್ನು ಕಟ್ಟಿದ ಕೀರ್ತಿ ಶ್ರೀ.ಹಾನಗಲ್ ಕುಮಾರ ಮಹಾಶಿವಯೋಗಿಗಳಿಗೆ ಸೇರುತ್ತದೆ. ನಾಡಿನಲ್ಲಿ ಕಾವಿ ಬಟ್ಟೆ ಕಂಗೊಳಿಸುತ್ತಿದ್ದರೆ, ವೀರ ಸನ್ಯಾಸಿಗಳಿಗೆ ನಿರಂತರವಾಗಿ ದೀಕ್ಷೆ ನೀಡಿದ ಕೀರ್ತಿ ಹಾನಗಲ್ ಕುಮಾರ ಯೋಗಿಗಳಿಗೆ ಸಲ್ಲಬೇಕು. 

ಈ ನಾಡಿನ ಸಾಹಿತ್ಯವಾಗಿರುವ ವಚನ ಸಾಹಿತ್ಯ, ಶ್ರೀ.ನಿಜಗುಣ ಶಿವಯೋಗಿಗಳ ಶಾಸ್ತ್ರ ಗ್ರಂಥಗಳು ಈ ನಾಡಿನ ಪ್ರತಿಯೊಂದು ಮನೆ ಮನಗಳಲ್ಲಿ ಬೆಳಗಬೇಕು ಎನ್ನುವ  ಭವ್ಯವಾದ ಕನಸನ್ನು ಶ್ರೀ ಹಾನಗಲ್ ಕುಮಾರ ಯೋಗಿಗಳು ಹೊಂದಿದ್ದರು. 

ಸಮಾಜದಲ್ಲಿ 1904 ದಾರಿದ್ರ್ಯದಿಂದ ಕೂಡಿದ ದಿನಗಳು, ಹಿಂದುತ್ವ ಎನ್ನುವ ಕಲ್ಪನೆ ಇಲ್ಲದ ಕಾಲ, ವೀರಶೈವರನ್ನೆಲ್ಲ ಒಗ್ಗೂಡಿಸುವ ಪ್ರಯತ್ನ ಮೊದಲ ಬಾರಿಗೆ ಮಾಡಿದ ಧೀಮಂತ ವೀರ ಸನ್ಯಾಸಿ.

ತಮ್ಮ 63 ನೇ ವರ್ಷದಲ್ಲಿ  ಹಾನಗಲ್ ಕುಮಾರೇಶ್ವರರು ತಮ್ಮ 1930 ರಲ್ಲಿ  ಲಿಂಗೈಕ್ಯರಾದ ವರ್ಷ.ಇವರನ್ನು ಕಾರಣಿಕ ಪುರುಷ, ಯುಗದ  ಉತ್ಸಾಹ, ಯುಗ ಪುರುಷ ಎನ್ನುತ್ತೇವೆ.

ಚನ್ನ ಕವಿಗಳು ಒಂದು ಹಾಡು ಹಾಡುತ್ತಾರೆ ಶ್ರೀ ಕುಮಾರೇಶ್ವರರ ಬಗ್ಗೆ " ಚಿನ್ನದಾರುತಿ ಶ್ರೀ ಕುಮಾರಗೆ ಬನ್ನಿ ಬೆಳಗುವೆ ಚಿನ್ಮಯಾತ್ಮಗೆ" , ಆ ಮಂಗಳ ಗೀತೆಯನ್ನು ಕೇಳಿದಂತಹ ಶ್ರೀ ಕುಮಾರೇಶ್ವರರು "ಚನ್ನಯ್ಯ ಇದು ಒಂದು ಸಾರಿ ನನ್ನ ಬಗ್ಗೆ ಇದ್ದ ಕವಿತೆಯನ್ನು ಬರೆದು ಹಾಡಿದೆ ಇನ್ನೊಮ್ಮೆ ನೀನು ಹಾಡಿದ್ದೆ ಕರೆಯಾದರೆ ನಿನಗೆ ಗುರುಲಿಂಗ ಜಂಗಮರ ಆಣೆ ಇದೆ, ನಿನ್ನ ಪ್ರಾಣಕ್ಕೆ ಕುತ್ತಿದೆ" ಎನ್ನುವ ಮಾತುಗಳಿಂದ ಚನ್ನ ಕವಿಗಳಿಗೆ ಶಾಪವನ್ನು ನೀಡುತ್ತಾರೆ. ತಮ್ಮನ್ನು ಹೊಗಳಿ ಹಾಡನ್ನು ಬರೆದ ಕವಿಗೆ ಶಾಪವಿತ್ತ  ಒಬ್ಬನೇ ಒಬ್ಬ ಶಿವಯೋಗಿ ಎಂದರೆ ಹಾನಗಲ್ ಕುಮಾರ ಯೋಗಿಗಳು. ಆದ್ದರಿಂದ ಹಾನಗಲ್ ಶ್ರೀ ಕುಮಾರ ಸ್ವಾಮಿಗಳ ಕುರಿತು ಹೆಚ್ಚಿನ ಲೇಖನ ಲಭ್ಯವಿಲ್ಲವೆಂದು ತಿಳಿಸಿದರು.

150 ನೇ ವರ್ಷದ ಜನ್ಮ ಆಚರಣೆ ಡಿಸೆಂಬರ್ 2017 ರಲ್ಲಿ ಹುಬ್ಬಳ್ಳಿಯಲ್ಲಿ ಆಚರಣೆ ಮಾಡಲು ನಿರ್ಧರಿಸಿದ್ದು ಇದಕ್ಕೆ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಕರೆಸುವ ಪ್ರಯತ್ನವನ್ನು ಶ್ರೀ ಉದಾಸಿಯವರು ಮತ್ತು ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾಡಬೇಕು ಎಂದು ತಿಳಿಸಿದರು. 




ಹಾವೇರಿ ಸದಾ

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva