ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk ಹಾವೇರಿ ಜಿಲ್ಲಾ , ಹಿರೇಕೆರೂರ ತಾಲೂಕ ಸಾತೇನಹಳ್ಳಿ ಸುಕ್ಷೇತ್ರದ ಪವಾಡ ಪುರುಷ ವೃಷಭರೂಪಿ ಶ್ರೀ . ಶ್ರೀ . ಶ್ರೀ . ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು " ಮಹಾ ಪವಾಡ ಪುರುಷ , ಆಧ್ಯಾತ್ಮದ ಚೇತನ ಕಾಯಕ ಯೋಗಿ , ವೃಷಭ ರೂಪಿ ಶಿವಾಲಿ ಬಸವೇಶ್ವರರನ್ನು ಆರಾಧಿಸುತ್ತಾ , ಲಕ್ಷಾಂತರ ಭಕ್ತ ಶ್ರೇಷ್ಠರಾದ ಬಂಧುಗಳಿಗೆ ಶರಣು ಶರಣಾರ್ಥಿಗಳು " ಹಾವೇರಿ ಜಿಲ್ಲಾ , ಹಿರೇಕೆರೂರ ತಾಲೂಕ ಸಾತೇನಹಳ್ಳಿ ಗ್ರಾಮ ಇತಿಹಾಸ ಪ್ರಸಿದ್ಧ ಪುಣ್ಯ ಹಾಗೂ ಪಾವನ ಕ್ಷೇತ್ರವಾಗಿದೆ . ಈ ಗ್ರಾಮದಲ್ಲಿ ಅನೇಕ ಶಿಲಾ ಶಾಸನಗಳು , ಪುರಾತನ ಕಾಲದ ದೇವಾಲಯಗಳು ಗೋಚರಿಸುತ್ತವೆ . ಇಂತಹ ಪುಣ್ಯ ಕ್ಷೇತ್ರದಲ್ಲಿ ವೃಷಭರೂಪಿ ಶಿವಾಲಿ ಬಸವಣ್ಣನವರು ಗ್ರಾಮದ ಬಡ ರೈತ ಕುಟುಂಬದ ಶ್ರೀಮತಿ ಶರದವ್ವ ಶ್ರೀ ಬಾನಪ್ಪ ಕಾಯಕದ ಇವರ ಮನೆಯಲ್ಲಿ ಜನಿಸಿದ ಶ್ರೀ ಶಿವಾಲಿ ಬಸವಣ್ಣನವರು ಹನ್ನೊಂದು ವರ್ಷಗಳ ಕಾಲ ಉಳಿಮೆ ಕೆಲಸವನ್ನು ಮಾಡಿರುತ್ತಾರೆ . ಗ್ರಾಮದ ಪಶ್ಚಿಮ ದಿಕ್ಕಿನ ೨ ಕಿ . ಮೀ ದೂರದ ಸಮೀಪ ಶಿವಾಲಿ ಬಸವಣ್ಣನವರ ದೇವಸ್ಥಾನವಿದ್ದು , ಅಲ್ಲಿ ರೈ...
Comments