COVID-19 ಕರೋನ ವೈರಸ್ ಕುರಿತು WHO ಕನ್ನಡ ಅನುವಾದ
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಪತ್ತೆಯಾದ ಅಪರಿಚಿತ ಕಾರಣದ ನ್ಯುಮೋನಿಯಾವನ್ನು ಚೀನಾದ ವಿಶ್ವ ಆರೋಗ್ಯ ಸಂಸ್ಥೆ ದೇಶೀಯ ಕಛೇರಿ 31 ಡಿಸೆಂಬರ್ 2019 ರಂದು covid-19 ಮೊದಲು ವರದಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ 30 ಜನವರಿ 2020 ರಂದು ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿ ಎಂದು ಘೋಷಿಸಲಾಯಿತು.
Corona Virus ವೈರಸ್ ಗಳ ಒಂದು ದೊಡ್ಡ ಕುಟುಂಬದ ಭಾಗವಾಗಿದೆ. ಇವುಗಳು ಸಾಮಾನ್ಯ ನೆಗಡಿಯಿಂದ ಇಡಿದು ತೀವ್ರತರವಾದ ಖಾಯಿಲೆಗಳಾದ Middle East Respiratory Syndrome (MERS-CoV) and Severe Acute Respiratory Syndrome (SARS-CoV) ಗಳಿಗೆ ಕಾರಣವಾಗಿವೆ.
Corona Virus ವೈರಸ್ ಗಳ ಒಂದು ದೊಡ್ಡ ಕುಟುಂಬದ ಭಾಗವಾಗಿದೆ. ಇವುಗಳು ಸಾಮಾನ್ಯ ನೆಗಡಿಯಿಂದ ಇಡಿದು ತೀವ್ರತರವಾದ ಖಾಯಿಲೆಗಳಾದ Middle East Respiratory Syndrome (MERS-CoV) and Severe Acute Respiratory Syndrome (SARS-CoV) ಗಳಿಗೆ ಕಾರಣವಾಗಿವೆ.
Covid-19 Coronavirus disease ಹೊಸದಾಗಿ ಪತ್ತೆಯಾದ ವೈರಾಣು ತಳಿಯಾಗಿದ್ದು ಈ ಮೊದಲು ಮಾನವರಲ್ಲಿ ಪತ್ತೆಯಾಗಿರುವುದಿಲ್ಲ.
zoonosis:a disease that can be transmitted from animals to people or, more specifically, a disease that normally exists in animals but that can infect humans. There are multitudes of zoonotic diseases. ಇವು ಬಹುಸಂಖ್ಯೆಯಲ್ಲಿವೆ ಉದಾಹರಣೆಗೆ: anthrax, ascariasis, brucellosis, plague, echinococcosis, Lassa fever, listeriosis, Lyme disease, monkeypox, psittacosis, rabies, salmonellosis, trichinosis, toxoplasmosis, typhus, West Nile fever. ಏಡ್ಸ್ ಅನ್ನು ಎಚ್.ಐ.ವಿ ಹೆಚ್ಚಿಸಿದ ರೀತಿ ಹಾಗೂ SARS ಸ್ಫೋಟಕ್ಕೆ ಕಾರಣವಾದ ಕರೋನಾ ವೈರಸ್ ರೀತಿ ಇವು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಬಹುದು, ತುಲನಾತ್ಮಕವಾಗಿ ತೀಕ್ಷ್ಣವಾಗಿರಬಹುದು.
ಕರೋನಾ ವೈರಸ್ ಮೃಗಗಳಿಗೆ, ಪ್ರಾಣಿಗಳಿಗೆ ಸಂಬಂಧಿಸಿದುದಾಗಿದೆ. ಪ್ರಾಣಿಗಳ ಮತ್ತು ಮಾನವರ ನಡುವೆ ಹರಡುತ್ತವೆ. ವಿಸ್ತೃತವಾದ ಅಧ್ಯಯನದಿಂದ ಕಂಡುಬಂದಿದ್ದೇನೆಂದರೆ SARS ಕರೋನಾ ವೈರಸ್ ಸಿವೆಟ್ ಬೆಕ್ಕುಗಳಿಂದಲೂ MERS ಕರೋನಾ ವೈರಸ್ dromedary ಒಂಟೆಗಳಿಂದ ಮನುಷ್ಯರಿಗೆ ಹರಡಿರುತ್ತದೆ. ಪ್ರಾಣಿಗಳಲ್ಲಿ ಹಲವಾರು ಕರೋನಾ ವೈರಸ್ ಗಳು ಇರುವುದು ಗಮನಕ್ಕೆ ಬಂದಿದ್ದು ಇವುಗಳು ಮನುಷ್ಯನಿಗೆ ಈ ಸೋಂಕುಗಳು ಹರಡಿರುವುದಿಲ್ಲ.
COVID-19 ಸೋಂಕಿನ ಸಾಮಾನ್ಯ ಚಿಹ್ನೆಗಳೆಂದು ಉಸಿರಾಟದ ಲಕ್ಷಣಗಳು, ಜ್ವರ, ಕೆಮ್ಮು, ಉಸಿರಾಟದಲ್ಲಿ ಕುಂಠಿತವಾಗುವುದು ಮತ್ತು ಉಸಿರಾಟದ ತೊಂದರೆಗಳು. ಹೆಚ್ಚು ತೀವ್ರವಾದ ಸಂದರ್ಭಗಳಲ್ಲಿ ಇದು ನ್ಯುಮೋನಿಯಾ ಸೋಂಕಿಗೆ, ಪ್ರಯಾಸಕರವಾದ ಹಾಗೂ ತೊಂದರೆದಾಯಕ ಉಸಿರಾಟದ ಲಕ್ಷಣಗಳಿಗೆ, ಮೂತ್ರಪಿಂಡ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಮಾಣಿತ ಶಿಫಾರಸುಗಳೆಂದರೆ :
&; ನಿಯಮಿತವಾಗಿ ಕೈ ತೊಳೆಯುವುದು,
&; ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು,
&; ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸುವುದು.
&; ಕೆಮ್ಮು ಮತ್ತು ಸೀನುವಿಕೆಯಂತಹ ಉಸಿರಾಟದ ಕಾಯಿಲೆಯ ಲಕ್ಷಣಗಳನ್ನು ತೋರಿಸುವ ಯಾರೊಂದಿಗೂ ನಿಕಟ ಸಂಪರ್ಕವನ್ನು ತಪ್ಪಿಸಿ ಕನಿಷ್ಠ 3 ಅಡಿ ಹಂತರವನ್ನು ಕಾಯ್ದಿರಿಸಿ. ಯಾರಾದರೂ ಕೆಮ್ಮಿದಾಗ ಅಥವಾ ಸೀನುವಾಗ ಅವರು ಮೂಗು ಅಥವಾ ಬಾಯಿಯಿಂದ ಸಣ್ಣ ದ್ರವದ ಹನಿಗಳು ಸಿಡಿಯುತ್ತವೆ, ಅದು ವೈರಸ್ ಅನ್ನು ಹೊಂದಿರಬಹುದು. ನೀವು ತುಂಬಾ ಹತ್ತಿರದಲ್ಲಿದ್ದರೆ, ನೀವು ಕೂಡ COVID-19 ವೈರಸ್ ಉಸಿರಾಡಬಹುದು.
&;ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ : ಕೈಗಳು ಅನೇಕ ಮೇಲ್ಮೈಗಳನ್ನು ಸ್ಪರ್ಶಿಸುತ್ತವೆ ಮತ್ತು ಈ ಸಂದರ್ಭಗಳಲ್ಲಿ ವೈರಸ್ ಗಳನ್ನು ತೆಗೆದುಕೊಳ್ಳಬಹುದು. ಕಲುಷಿತಗೊಂಡ ನಂತರ, ಕೈಗಳು ನಿಮ್ಮ ಕಣ್ಣು, ಮೂಗು ಅಥವಾ ಬಾಯಿಗೆ ವೈರಸ್ ಅನ್ನು ವರ್ಗಾಯಿಸಬಹುದು. ಅಲ್ಲಿಂದ, ವೈರಸ್ ನಿಮ್ಮ ದೇಹವನ್ನು ಪ್ರವೇಶಿಸಬಹುದು ಮತ್ತು ನಿಮ್ಮನ್ನು ರೋಗಿಗಳನ್ನಾಗಿ ಮಾಡಬಹುದು.
&; ಆರೋಗ್ಯಯುತ ಉಸಿರಾಟದ ನೈರ್ಮಲ್ಯ ಪದ್ದತಿಯನ್ನು ಅಭ್ಯಾಸ ಮಾಡಿ : ನೀವು ಮತ್ತು ನಿಮ್ಮ ಸುತ್ತಮುತ್ತಲಿನ ಜನರು ಆರೋಗ್ಯಯುತ ಉಸಿರಾಟದ ನೈರ್ಮಲ್ಯ ಪದ್ದತಿಯನ್ನು ನೈರ್ಮಲ್ಯವನ್ನು ಅನುಸರಿಸುತ್ತೀರಾ ಎಂದು ಖಚಿತಪಡಿಸಿಕೊಳ್ಳಿ. ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಗಿದ ಮೊಣಕೈ ಅಥವಾ ವಸ್ತ್ರದಿಂದ, ಟಿಶ್ಯೂ ಪೇಪರ್ನಿಂದ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಇದರರ್ಥ. ನಂತರ ಬಳಸಿದ ಟಿಶ್ಯೂ ಪೇಪರ್ ಅನ್ನು ತಕ್ಷಣ ವಿಲೇವಾರಿ ಮಾಡಿ.
&;ನಿಮಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ, ಮೊದಲು ವೈದ್ಯಕೀಯ ಆರೈಕೆ ಮಾಡಿ:
&; ನಿಮಗೆ ಅನಾರೋಗ್ಯ ಅನಿಸಿದರೆ ಮನೆಯಲ್ಲೇ ಇರಿ.
&; ನಿಮಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ, ವೈದ್ಯಕೀಯ ಚಿಕಿತ್ಸೆ ಪಡೆಯಿರಿ ಮತ್ತು &; ವೈದ್ಯಕೀಯ ಚಿಕಿತ್ಸೆಗೆ ಮುಂಚಿತವಾಗಿ ಕರೆ ಮಾಡಿ.
&; ನಿಮ್ಮ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ದೇಶನಗಳನ್ನು ಅನುಸರಿಸಿ.
&;ವೈದ್ಯಕೀಯ ಸಲಹೆಯನ್ನು ಪಾಲಿಸಿರಿ
COVID-19 ಹರಡುತ್ತಿರುವ (ಕಳೆದ 14 ದಿನಗಳು) ಪ್ರದೇಶಗಳಲ್ಲಿರುವ ಅಥವಾ ಇತ್ತೀಚೆಗೆ ಭೇಟಿ ನೀಡಿದ ವ್ಯಕ್ತಿಗಳು ಅನುಸರಿಸಬೇಕಾದ ರಕ್ಷಣಾ ಕ್ರಮಗಳು
&;ಮೇಲೆ ವಿವರಿಸಿದ ಮಾರ್ಗದರ್ಶನವನ್ನು ಅನುಸರಿಸಿ.
&;ನೀವು ಚೇತರಿಸಿಕೊಳ್ಳುವವರೆಗೂ ತಲೆನೋವು ಮತ್ತು ಸ್ವಲ್ಪ ಸ್ರವಿಸುವ ಮೂಗಿನಂತಹ ಸೌಮ್ಯ ಲಕ್ಷಣಗಳಿದ್ದರೂ ಸಹ ನೀವು ಅನಾರೋಗ್ಯ ಅನುಭವಿಸಲು ಪ್ರಾರಂಭಿಸಿದರೆ ಮನೆಯಲ್ಲಿಯೇ ಇರಿ. ಏಕೆಂದರೆ ಇತರರೊಂದಿಗೆ ಸಂಪರ್ಕವನ್ನು ತಪ್ಪಿಸುವುದು ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಭೇಟಿ ನೀಡುವುದರಿಂದ ಈ ಸೌಲಭ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ಸಂಭವನೀಯ COVID-19 ಮತ್ತು ಇತರ ವೈರಸ್‌ಗಳಿಂದ ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಲು ಸಹಾಯ ಮಾಡುತ್ತದೆ.
&; ಉಸಿರಾಟದ ಸೋಂಕು ಅಥವಾ ಇತರ ಗಂಭೀರ ಸ್ಥಿತಿಯ ಕಾರಣದಿಂದಾಗಿ ನೀವು ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಬೆಳೆಸಿಕೊಂಡರೆ ವೈದ್ಯಕೀಯ ಸಲಹೆಯನ್ನು ಕೂಡಲೇ ಪಡೆಯಿರಿ. ಮುಂಚಿತವಾಗಿ ವೈದ್ಯಕೀಯ ಸಹಾಯವಾಣಿಗೆ ಕರೆ ಮಾಡಿ ಮತ್ತು ನಿಮ್ಮ ಇತ್ತೀಚಿನ ಪ್ರಯಾಣದ ಬಗ್ಗೆ ಅಥವಾ ಪ್ರಯಾಣಿಕರೊಂದಿಗೆ ಸಂಪರ್ಕವನ್ನು ನಿಮ್ಮ ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಿ. ಏಕೆಂದರೆ ಮುಂಚಿತವಾಗಿ ಕರೆ ಮಾಡುವುದರಿಂದ ನಿಮ್ಮ ಆರೋಗ್ಯ ಕಾರ್ಯಕರ್ತರು ನಿಮಗೆ ಸರಿಯಾದ ಆರೋಗ್ಯ ಸೌಲಭ್ಯಕ್ಕೆ ತ್ವರಿತವಾಗಿ ನಿರ್ದೇಶಿಸಲು ಅನುವು ಮಾಡಿಕೊಡುತ್ತದೆ. COVID-19 ಮತ್ತು ಇತರ ವೈರಸ್‌ಗಳು ಹರಡುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ.
&; ಒಬ್ಬರನ್ನೊಬ್ಬರು ಶುಭಾಷಯಗಳನ್ನು ತಿಳಿಸಲು ಹಾಗೂ ಕುಶಲೋಪರಿ ವಿಚಾರಿಸಲು ಭಾರತೀಯ ಪದ್ದತಿಯಾದ ನಮಸ್ತೆ ಬಳಸಿ.
Comments