ಶ್ರೀ ಶೃಂಗೇರಿ ಶಾರದೆ

          ರಮಣೀಯ ಪ್ರಕೃತಿ ಸಂದರ್ಯವುಳ್ಳ ನೆಮ್ಮದಿಯ ಸ್ಪರ್ಶಾನುಭವ ಯೋಗ್ಯವಾಗಿರುವ ಪರ್ವತ ಪ್ರದೇಶ ಹಾಗೂ ಪವಿತ್ರ ಸ್ಥಳವೇ ಶೃಗೇರಿ ಕ್ಷೇತ್ರ. ಇಲ್ಲಿ ಹರಿಯುವ ತುಂಗಾನದಿ ಪವಿತ್ರ ಹಾಗೂ ಶಾಶ್ವತ. ಬೀಸುವ ಗಾಳಿ ಶುದ್ಧ, ಆರೋಗ್ಯ ಪ್ರತೀಕ, ಇಲ್ಲಿ ಪ್ರತಿಯೊಬ್ಬರೂ ದೈಹಿಕ- ಆಧ್ಯಾತ್ಮಿಕವಾಗಿಯೂ ಉನ್ನತಿಗೇರಲು ಸಾಧ್ಯ. 

          ಪರಬ್ರಹ್ಮದ ಸಗುಣರೂಪವನ್ನು ಪ್ರತಿನಿಧಿಸುವ ಶಾರದೆಯೇ ಜಗದ್ಧತ್ರಿಯಾಗಿದ್ಧಾಳೆ. ಇವಳ ಕೈಗಳಲ್ಲಿ ಅಮೃತತ್ವದ ಸಂಕೇತವಾದ  ಅಮೃತ ತುಂಬಿದ ಕಲಶ, ಪರಾವಿದ್ಯೆಯ ಪ್ರತೀಕವಾದ ಪುಸ್ತಕ, ವಿಶ್ವದ ಸ್ಥೂಲ ಹೊನ್ನಕ್ಕೆ ಕಾರಣವಾದ ಬೀಜಾಕ್ಷರಗಳನ್ನು ಪ್ರತಿನಿಧಿಸುವ ಜಪಮಾಲೆ ಮತ್ತು ಜೀವ ಬ್ರಹ್ಮೈಕತ್ವದ ಜ್ಞಾನ ಪ್ರತೀಕವಾದ ಚಿನ್ಮುದ್ರೆಗಳನ್ನು ಧರಿಸಿರುತ್ತಾಳೆ. ಉಪನಿಷತ್ ಗಳ ಜ್ಞಾನದ  ಬ್ರಹ್ಮ ವಿದ್ಯೆಯೇ ಆಗಿದ್ದಾಳೇ. ಈ ದೇವಿಯು ಶ್ರೀ ಚಕ್ರದ ಮೇಲೆ ಕುಳಿತಿರುವಳು. ಶ್ರೀಚಕ್ರದ ಅಧಿಷ್ಠಾತ್ರಿಯು ಶ್ರೀಲಲಿತ ರಾಜರಾಜೇಶ್ವರಿಯಾದರೂ ಆಕೆಯು ಶಾರದೇಯಲ್ಲದೇ ಬೇರಲ್ಲ. ಶ್ರೀ ಶಂಕರಾಚಾರ್ಯರು ಈ ದೇವಿಯನ್ನು ಚಿದಾನಂದ ಲಹರಿ ಎಂದು ಕರೆದಿರುವರು.

          ಶ್ರೀ ಲಲಿತಾ ಪರಮೇಶ್ವರಿಯಲ್ಲಿ ಆನಂದ ತತ್ವಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈಗ ನಾವು ದರ್ಶನ ಮಾಡುತ್ತಿರುವ ಸ್ವರ್ಣಮಯವಾದ ಶ್ರೀ ಶಾರದಾಂಬೆಯ ವಿಗ್ರಹವು ಇದೇ ಪೀಠದ ಹನ್ನೆರಡನೆಯ ಪೀಠಾಧಿಪತಿಗಳಾದ ಶ್ರೀ ವಿದ್ಯಾರಣ್ಯರ ಮಹಾಸ್ವಾಮಿಗಳವರಿಂದ 14 ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿತು. 
               20 ನೇ ಶಾತಮಾನದ ಪ್ರಾರಂಭದಲ್ಲಿ ಶ್ರೀಪೀಠದ ಮೂವತ್ತಮೂರನೇ ಪೀಠಾಧಿಪತಿಗಲಾಗಿದ್ದ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾನುಭವ ನೃಸಿಂಹಭಾರತಿ ಮಹಾಸ್ವಾಮಿಗಳವರು ಭವ್ಯ, ವಿಶಾಲವಾದ ಶಿಲಾಮಯ ದೇವಾಲಯವನ್ನು ಪ್ರಾರಮಭಿಸಿದರು. 
           ನಿರ್ಮಾಣಗೊಂಡ ದೇವಾಲಯದ  ಕಂಬಾಭಿಷೇಕವು  ಪೀಠದ 34 ನೇ ಪೀಠಾಧಿಪತಿಗಲಾದ ಜಗದ್ಗುರು ಶ್ರೀ ಚಂದ್ರಶೇಖರಬಾರತೀ ಮಹಾಸ್ವಾಮಿಗಲವರಿಂದ ಕ್ರ. ಶ.1916 ರಲ್ಲಿ ನೆರವೇರಲ್ಪಟ್ಟಿತು. ನಂತರದಲ್ಲಿ 35 ನೇ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಮತ್ತು 36 ನೇ ಪೀಠಾಧಿಪತಿಗಳಾದ ಜಗದ್ಗುರು ಶ್ರಿ ಬಾರತೀ ತೀರ್ಥ ಮಹಾಸ್ವಾಮಿಗಳವರು ಕ್ರಮವಾಗಿ 1963 ಮತ್ತು 1993ರಲ್ಲಿ ಕುಂಬಾಭಿಷೇಕವನ್ನು ನೆರವೇರಿಸಿದರು. 
          ಪ್ರಸ್ತುತ ದಕ್ಷಿಣಾಮ್ನಾಯ ಶ್ರೀಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ. ಭಾರತೀತೀರ್ಥ ಮಹಾಸ್ವಾಮಿಗಳವರ ಮತ್ತು ಸನ್ನಿದಾನಂಗಳ ಮಹಾಸ್ವಾಮಿಗಳಾದ ಶ್ರೀವಿಧುಶೇಖರ ಬಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ದಿನಾಂಕ 01-02-2017 ರಂದು ಶ್ರೀ ಶಾರದಾ ದೇವಾಲಯದ ಸ್ವರ್ಣಲೇಪಿತ ವಿಮಾನ ಗೋಪುರಕ್ಕೆ ಕುಂಬಾಭಿಷೇಕವನ್ನು ನೆರವೇರಿಸಲಾಯಿತು. 

        ವರ್ಷದಲ್ಲಿ 3 ಬಾರಿ ವಿಶೇಷ ಅಭಿಷೇಕ ನೆರವೇರುವುದು. ಪ್ರತಿವರ್ಷ ಶ್ರೀ ಶಾರದಾಂಬೆಯ ರಥೋತ್ಸವವು ಮಾಘಮಾಸದ  ಕೃಷ್ಣಪಕ್ಷದ  ತದಿಗೆಯಂದು ನೆರವೇರುವುದು.
                        
'(ಪ್ರಕಾಶ ಬಾಬು ಕೆ.ಆರ್. ಸಂಯುಕ್ತ ಕರ್ನಾಟಕ ಸಿಂಧೂರ 18-02-2019)

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva