ಅದು ಆಗ ಬೇಕು ಇದು ಆಗ ಬೇಕು ಅಂತ ಕನಸು ಕಾಣ್ತೇನೆ ಆದ್ರೆ ಅದು ಆಗಲಿಕ್ಕೆ ಪ್ರಯತ್ನ ಪಡಲಿಲ್ಲ ಅನ್ಸುತ್ತೆ

ನಾನು ನನ್ನ ಜೀವನದಲ್ಲಿ ಅದು ಆಗ ಬೇಕು ಇದು ಆಗ ಬೇಕು ಅಂತ ಕನಸು ಕಾಣ್ತೇನೆ ಆದ್ರೆ ಅದು ಕನಸಾಗೆ ಉಳಿಯುತ್ತೆ ಅಷ್ಟೊತ್ತಿಗೆ ಮತ್ತೊಂದು ಕನಸ್ನೊಂದಿಗೆ ಮುಂದೆ ಹೋಗ್ತೇನೆ. ಕೊರಳ ಪಟ್ಟಿ ಇಡಿದವರು , ಕುಡಿದು ಬಂದು ನಾಳೆ ಎನ್ಮಾಡ್ತಿನಿ ನೋಡು ಎಂದವ್ರು, ಅಪ್ಫಂಗೆ ಒಡೆದವರನ್ನು ಸಾಯಿಸ ಬೇಕು ಅಂದ್ಕೋಂಡವ್ರು ಎಲ್ಲ ಮರ್ತು, ಮೌನಿ ಮುನಿ ಅಂಗ ಕಾಲ  ತಳ್ತ ಇದೀನಿ ಅದು ಇದು ಆಗಲಿಕ್ಕೆ ಪ್ರಯತ್ನ ಪಡಲಿಲ್ಲ ಅನ್ಸುತ್ತೆ.

ದೊಡ್ಡವ್ರಿಗೆ ಮರ್ಯಾದೆ ಕೊಡಬೇಕು ಅಂತ ಮನೆಯವ್ರು ಹೇಳಕೊಟ್ಟು ತಪ್ಮಾಡಿದ್ರು ಅನ್ಸುತ್ತೆ ಯಾಕಂದರೆ ಇವರಿಗೆ ಮರ್ಯಾದೆ ಕೊಟ್ರೆ ತುಳಿಯಾಕೆ ಬರ್ತಾರೆ ನಾಲಾಯಕ್ಕಗಳು.

ಹಿಂಗ ಇರ್ಬೇಕು ಅಂತೇನು ಇಲ್ಲಿ ವರ್ಗೂ ಇರ್ಲಿಲ್ಲ ಆದ್ರೆ ಕಂಡಿತವಾಗ್ಲೂ ಮುಂದೆ ನನ್ನ ನಿಯಮಗಳಂತೆ ಬದುಕುವಂತೆ ಪ್ರಯತ್ನಿಸ್ತೇನೆ. 2ನೇ ದಿನ ನನ್ನ ನಿರ್ಧಾರದಲ್ಲಿ ಸೋತೆ, ನೋಡೋಣ ಈ ದಿನ  ಇನ್ನು ಮುಗಿದಿಲ್ಲ ನಾಳೆ ಶುರುವಾಗುವ ದಿನದಲ್ಲಿ ನನಗೆ ನಾನು ವಿಧಿಸಿದಂತಹ ಕಟ್ಟಲೆಗಳಿಗೆ ತಲೆ ಬಾಗಿ ನಡಿತೀನ  ಇಲ್ವಾ ಅನ್ನೋದನ್ನ ನೋಡ್ಬೇಕು.


Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk