ದೀಪಾವಳಿ ಸ್ವಲ್ಪ ತಡವಾಗಿ ಬರಬಾರದಾಗಿತ್ತೆ.
ನನ್ನ ಮಗಳಿಗೆ ಇದು ಮೊದಲ ದೀಪಾವಳಿ. ಮನೆಗೆ ಲಕ್ಷ್ಮಿ ಸ್ವರೂಪಳಾಗಿ ಮಗಳು ಬಂದಿದ್ದಾಳೆ. ನನ್ನ ಹೆಂಡತಿ ತನ್ನ ಮಗಳಿಗೆ ಒಳ್ಳೆಯ ಬಟ್ಟೆಯನ್ನು ನನ್ನ ಗಂಡ ತರುತ್ತಾನೆ ಎಂದು ಕಾಯುತ್ತಿದ್ದಳು. ನನ್ನ ಹೆಂಡತಿಗೆ ದೀಪಾವಳಿಗಾಗಲೀ ಮತ್ಯಾವುದೇ ಹಬ್ಬಕ್ಕೆ ಅವಳಿಗೆ ಹೊಸ ಬಟ್ಟೆಯನ್ನಾಗಲೀ, ಒಡವೆಯನ್ನಾಗಲೀ ಕೊಡಿಸಿಲ್ಲ. ನನ್ನ ಗಂಡ ಆರೋಗ್ಯ ಇಲಾಖೆಯಲ್ಲಿ ಡಿ.ಪಿ.ಎಂ ಎಂದು ಎಲ್ಲರಿಗೂ ಹೇಳುತ್ತಾಳೆ ಆದರೆ ಯಾರಾದರೂ ನೆರೆಹೊರೆಯವರು ಬಂದು ನಿನ್ನ ಗಂಡ ಹಬ್ಬಕ್ಕೆ ನಿನಗೆ ಮತ್ತು ನಿನ್ನ ಮಗಳಿಗೆ ಏನನ್ನು ತಂದಿದ್ದಾರೆ ತೋರಿಸು ಎಂದರೆ ಮನದಲ್ಲಿ ದುಗುಡ ಗಂಡ ಡಿಸ್ಟ್ರಿಕ್ಟ ಪ್ರೋಗ್ರಾಂ ಮ್ಯಾನೆಜರ್ ಆದರೆ ಬರುವಾಗ ಕೈ ಬೀಸ್ಕೊಂಡು ಕಾಲಿ ಕೈ ಯಲ್ಲಿ ಬರ್ತಾರೆ.
ಖಾಯಂ ನೌಕರರಾದರೂ 25 ನೇ ತಾರೀಖಿನಂದೆ ಸಂಬಳ ಪಡೆದರೂ ದೀಪಾವಳಿ ಹಬ್ಬಕ್ಕಾಗಿ ಆದರೆ, ಎನ್.ಎಚ್.ಎಂ ಅಡಿ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಈ ಭಾಗ್ಯ ಇಲ್ಲ. ತಿಂಗಳ ಕೊನೆಯ ದಿನಗಳು. ಹಬ್ಬಕ್ಕಾಗಿ ಉಳಿಸಿದ ಮೊತ್ತ ದುತ್ತೆಂದು ಮಿಂಚಂಚೆಯ ಮೂಲಕ ಬಂದ ಬೆಂಗಳೂರಿನ ಮೀಟಿಂಗ ಗೆ ಖರ್ಚಾಯಿತು. ಹಬ್ಬ ಬಸ್ ನವರಿಗೂ ಲಾಭದಾಯಕ ದಿನಗಳು ಅವರು ಮಾರಿದ್ದೆ ಟಿಕೆಟ್. ಸದರಿ ಮೀಟಿಂಗ್ ನಲ್ಲಿ ಸಭೆಯನ್ನು ನಡೆಸಿಕೊಟ್ಟ ಮಹಾತ್ಮ ಎಲ್ಲರಿಗೂ ಸಭೆಗೆ ಬಂದಿದ್ದಕ್ಕೆ ಸಂಜೆ ಧನ್ಯವಾದಗಳನ್ನೆಳಿದರು ಆದರೆ ಎಂ.ಬಿ.ಎ ಮಾಡಿ ಡಿಸ್ಟ್ರಿಕ್ಟ ಪ್ರೋಗ್ರಾಂ ಮ್ಯಾನೆಜರ್ ಆದ ನಮಗೆ ಮಾತ್ರ ಧನ್ಯವಾದಗಳನ್ನು ಹೇಳದಿದ್ದದ್ದು ಮನಸ್ಸಿಗೆ ನೋವನ್ನುಂಟುಮಾಡಿದ್ದಂತು ಸತ್ಯ. ಗುತ್ತಿಗೆ ನೌಕರರಿಗೆ ಮಲತಾಯಿ ಧೋರಣೆ ತೋರುವ ಅಧಿಕಾರಿಗಳು 5 ನಿಮಿಷ 15 ನಿಮಿಷ ದೊಳಗೆ ವರದಿಗಳನ್ನು ಕಳುಹಿಸಲು ಮಾತ್ರ ನೀವುಗಳು ಲಾಯಕ್ಕೆ ಎಂಬಂತ್ತಿದ್ದದ್ದು ನಮ್ಮ ದೌರ್ಬಾಗ್ಯವೇ ಸರಿ.
ಮಗಳಿಗೆ ಒಳ್ಳೆಯ ಬಟ್ಟೆ ತರಲಾಗಲಿಲ್ಲ ಎಂದು ಮೊದಲ ದಿನ ಶುರುವಾದ ಕೋಪ ಕೊನೆಯ ದಿನ ನಿಮ್ಮ ಬಡತನವೇ ಇದಕ್ಕೆಲ್ಲ ಕಾರಣ.ನಮ್ಮಪ್ಪ ಸಂಪತ್ತಿರುವವರ ಮನೆಗೆ ಕೊಟ್ಟು ಮದುವೆ ಮಾಡಿದ್ದಿದ್ದರೆ ನನಗೂ ನನ್ನ ಮಗಳಿಗೂ ಹಬ್ಬಕ್ಕೆ ಏನಾದರೂ ಗಿಫ್ಟ ತರುತ್ತಿದ್ದರು ಎಂದು ಅತ್ತಾಗ ನಾನು ಜೀವಂತ ಶವವಾಗಿದ್ದು ಸುಳ್ಳಲ್ಲ. ನೀವು ಮೂರ್ಕರಿದ್ದೀರಿ ನಿಮ್ಮನ್ನ ಮದುಯಾಗಬಾರದಾಗಿತ್ತು ಎಂದು ನನ್ನ ಹೆಂಡತಿ ದೂರಿದಾಗ ಅದು ಸರಿ ಎನಿಸಿದ್ದು ಸುಳ್ಳಲ್ಲ. ಇಲ್ಲದಿದ್ದರೆ ಯಾದಗಿರಿಯಲ್ಲಿ ಕಛೇರಿಯಲ್ಲಿ ಎದುರಾದ ಆರೋಪ ಸುಳ್ಳು ಎಂದು ಗೊತ್ತಿದ್ದರು, ಸುಮಾರುರೂ50000(ಅರ್ಧ ಲಕ್ಷಗಳನ್ನು) ಪಡೆಯಲು ಯಾವುದೇ ರೀತಿ ಕ್ರಮ ತೆಗೆದುಕೊಳ್ಳದಿರುವುದು ನನ್ನದೇ ಮೂರ್ಖ ತನ.
ದೀಪಾವಳಿ ಎಲ್ಲರ ಬಾಳಿನ ಕತ್ತಲೆಯನ್ನು ದೂರ ಸರಿಸಿ ಹೊಸ ಜೀವನವನ್ನು ನೀಡುವ ಬೆಳಕಿನ ಹಬ್ಬ. ನನ್ನ ಜೀವನದಲ್ಲಿ ನನ್ನ ಮಗಳ ರೂಪದಲ್ಲಿ ಬದುಕುವ ಆಸೆಯನ್ನು ನೀಡಿದೆ. ಮುಂದಿನ ದೀಪಾವಳಿಗಾದರೂ ಒಳ್ಳೆ ಬಟ್ಟೆ ಕೊಡಿಸುವಷ್ಟು ಹಣವನ್ನು ಸಂಪಾದಿಸುವ ಶಕ್ತಿಯನ್ನು ಆ ದೇವರು ಕೊಡಲಿ.
ದೀಪಾವಳಿ ಎಲ್ಲರ ಬಾಳಿನ ಕತ್ತಲೆಯನ್ನು ದೂರ ಸರಿಸಿ ಹೊಸ ಜೀವನವನ್ನು ನೀಡುವ ಬೆಳಕಿನ ಹಬ್ಬ. ನನ್ನ ಜೀವನದಲ್ಲಿ ನನ್ನ ಮಗಳ ರೂಪದಲ್ಲಿ ಬದುಕುವ ಆಸೆಯನ್ನು ನೀಡಿದೆ. ಮುಂದಿನ ದೀಪಾವಳಿಗಾದರೂ ಒಳ್ಳೆ ಬಟ್ಟೆ ಕೊಡಿಸುವಷ್ಟು ಹಣವನ್ನು ಸಂಪಾದಿಸುವ ಶಕ್ತಿಯನ್ನು ಆ ದೇವರು ಕೊಡಲಿ.
Comments