Swamy Ayyappa ಶಬರಿಗಿರಿವಾಸನ ಪ್ರಯಾಣ 2019-20

          ಕೇರಳ ರಾಜ್ಯ ಪ್ರಕೃತಿ ಸೊಬಗಿನ ಅನನ್ಯ ರತ್ನ. ಎತ್ತ ನೋಡಿದರತ್ತ ಹಸಿರಿನಿಂದ ಕಂಗೊಳಿಸುತ್ತ. ತೆಂಗು, ರಬ್ಬರ್, ಟೀ ಗೆ ಹೆಸರುವಾಸಿಯಾದ ರಾಜ್ಯ. ಪ್ರತಿ ಬಾರಿ ಶಬರಿ ಮಲೆಗೆ ಬೇಟಿ ನೀಡಿದಾಗ ಗಮನಿಸುವುದು ಪ್ರಕೃತಿಗೆ ಮಾನವ ಕೊಡುಗೆ ಪ್ರಕೃತಿಯ ನಾಶ. ಹಸಿರು ಕಾಡಿನ ನಡುವೆ ಕಾಂಕ್ರಿಟ್ ಲೋಕ. ಕೇರಳಿಗರು ವೃತ್ತಿಪರ ವ್ಯಾಪಾರಸ್ಥರು. ಏರುಮಲೆಯಲ್ಲಿ ಒಂದು ರೂಪಾಯಿಯ ಶಾಂಪುವಿಗೆ 5 ರೂಪಾಯಿ ಪಡೆಯುವ ವ್ಯಾಪಾರಸ್ತ ಮನೋಭಾವದವರು. ಮಲೆಯಾಳಂ ಭಾಷೆ ಒರತು ಪಡಿಸಿ ಬೇರೆ ಭಾಷೆ ಬಳಸಲು ಆಸಕ್ತಿ ತೋರಿಸದ ವ್ಯಾಪಾರಸ್ತ ಮನೋಭಾವದವರು. ತಟ್ಟೆಯಲ್ಲಿ ಕೈ ತೊಳೆಯುವಂತಿಲ್ಲ. 
           
         ಶಬರಿ ಮಲೆ ಯಾತ್ರೆ ಪ್ರತಿ ವರ್ಷವು ಒಂದು ಹೊಸತನವನ್ನು ನೀಡುತ್ತದೆ. ಪ್ರತಿ ಬಾರಿಯು ಹೊಸತನವನ್ನು ನೀಡುತ್ತದೆ. ಈ ಬಾರಿ ನಮ್ಮ ಪ್ರಯಾಣ ಜಯನಗರ ಟಿ.ಬ್ಲಾಕ್ ನ ಶ್ರೀ. ಕರುಮಾರಿಯಮ್ಮ ದೇವಸ್ಥಾನದಿಂದ ಶುರುವಾಯಿತು. ರಾಹುಕಾಲವನ್ನು ಮುಗಿಸಿಕೊಂಡು ನಮ್ಮ ವಾಹನ ಮುನ್ನಡೆಯಿತು. ವಾಹನ ಚಾಲಕ ಕುಂಕನಾಡಿನವನಾಗಿದ್ದ, ಸಂಬಂಧಿಯಾಗಿದ್ದ. ಅಲ್ಲಿಂದ ಮೈಸೂರಿಗೆ ಪ್ರಯಾಣ ಅಲ್ಲಿ ಸ್ವಲ್ಪ ಒತ್ತು ಕಾಯಲಾಯಿತು ಬೀರೂರು ಹಾಗೂ ಚಿಕ್ಕಾನವಂಗಲದಿಂದ ಬಂದ ಸಂಬಂಧಿಕರನ್ನು ಕರೆದುಕೊಂಡು ಮುನ್ನಡೆಯಲಾಯಿತು. ನಂಜನಗೂಡಿನಲ್ಲಿ ನಂಜುಂಡೇಶ್ವರನ ದರ್ಶನಕ್ಕಾಗಿ ಬೇಟಿ ನೀಡಿದೆವು. ಹೊಳೆಯ ದಡದಲ್ಲಿ ಕಾಮಗಾರಿ ಚಾಲ್ತಿಯಲ್ಲಿದ್ದಿತು. ಕೈ ಕಾಲು ತೊಳೆದುಕೊಂಡು ಶ್ರೀ ನಂಜುಂಡೇಶ್ವರನ ಸನ್ನಿಧಿಗೆ, ಅಮ್ಮನ ಸನ್ನಿಧಿಗೆ, ಟಿಪ್ಪುಸುಲ್ತಾನನ ಪಚ್ಚೆ ಲಿಂಗಕ್ಕೆ ಬೇಟಿ ನೀಡಿದೆವು. ಬಸವನ ಸನ್ನಿಧಿಯಲ್ಲಿ ಕೈಗೆ ಹರಿಶಿನ ದಾರವನ್ನು ಕಟ್ಟಿಕೊಂಡು ಪ್ರಯಾಣವನ್ನು ಮುನ್ನಡೆಸಿದೆವು.

       ಕೇರಳದ ಚೆಕ್ ಪೋಸ್ಟನಲ್ಲಿ ನಿಲ್ಲಲಾಯಿತು.  ಪರ್ಮಿಟ್ ಪಡೆಯಲು ನಿಲ್ಲಲಾಯಿತು. ಪ್ರತಿ ವರ್ಷ ಮರಗಳು ಕಡಿಮೆಯಾಗುತ್ತಿವೆ ಮನೆಗಳು ಈ ಪ್ರದೇಶದಲ್ಲಿ ಹೆಚ್ಚುತ್ತಿವೆ. ಪ್ರತಿ ಬಾರಿ ಈ ಪ್ರದೇಶದಲ್ಲಿ ಆನೆಗಳು ಕಾಣಸಿಗುತ್ತಿದ್ದವು ಈ ಬಾರಿ ಆನೆಗಳು ನೋಡಲು ಸಿಗಲಿಲ್ಲ.  ಕಾಡನ್ನು ಉಳಿಸಿ ಬೆಳೆಸಲು ಬೇಕಾಗಿರುವ ಒಂದೆ ಒಂದು ನೀತಿಯೆಂದರೆ ಕಾಡಿಗೆ ಮನುಷ್ಯ ಕಾಲಿಡದಿರುವುದು.   ಅಲ್ಲಿ ಮಲೆಯಾಳಿ ಅಜ್ಜನ ಅಂಗಡಿಯಲ್ಲಿ ಟೀ, ಕಾಫಿ  ಕುಡಿದು  ಮುನ್ನಡೆಯಲಾಯಿತು. 

           ಏರುಮಲೆ ತಲುಪುವ ವೇಳೆಗೆ ಬೆಳಕರಿದಿತ್ತು. ಅಲ್ಲಿ ರೂ.20 ನೀಡಿ ಮಲ ಮೂತ್ರ ವಿಸರ್ಜನೆ ಮಾಡಿದೆವು. ಬಣ್ಣ ಹಾಗೂ ಚಿತ್ತಾರದ ಕಿರೀಟ ರೀತಿ ಹಣೆಗೆ ಪಟ್ಟಿಯನ್ನು ಧರಿಸಿಕೊಂಡು ಮಸೀದಿ ಮತ್ತು ಶಬರಿ ಪೀಠಕ್ಕೆ ನಮಿಸಿ ಕುಣಿಯುತ್ತ ಸಾಗಿದೆವು. ಸ್ನಾನ ಮಾಡಿ ಮತ್ತೆ ಪಂಪಾಗೆ ತೆರಳಿದೆವು.  ದಾರಿಗುಂಟ ತೆರಳಿದಾಗ ಎತ್ತರವಾದ ಮರಗಳ ನಡುವೆ ರಬ್ಬರ್ ಮರಗಳು, ತೆಂಗಿನ ಮರಗಳು ನಿಸರ್ಗದ ಕಾಡುಮರಗಳ ಜಾಗವನ್ನು ಆಕ್ರಮಿಸಿಕೊಂಡಿವೆ.

           ಪಂಪಾ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದಿತು. ಮಳೆಗಾಲದ ಭೀಕರ ಮಳೆ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ನದಿಯು ತನ್ನ ನೈಜ ಹರಿಯುವ ದಾರಿಯನ್ನು ಬದಲಿಸಿರುವ ಸಾಧ್ಯತೆಗಳಿರುವ ಕಾರಣ ನೀರಿನ ಹರಿವು ಕಡಿಮೆ ಇದ್ದಿತು. ನದಿಯಲ್ಲಿ ಸೋಪು, ಶಾಂಪು ರಹಿತ ಸ್ನಾನವನ್ನು ಮಾಡಿದೆವು. ಶಬರಿ ಗಿರಿ ಸ್ವಾಮಿ ಅಯ್ಯಪ್ಪನ ದರುಶನಕ್ಕೆ ಇರುಮುಡಿಯನ್ನು ತಲೆಯ ಮೇಲೆ ಹೊತ್ತು ತೆರಳಿದೆವು. ಗಣಪತಿಗೆ ಕರ್ಪೂರವನ್ನು ಹಚ್ಚಿ ಮುನ್ನಡೆದೆವು. ಗಣಪತಿ, ಪಾರ್ವತಿ ಮಾತಾ, ನಾಗ ದೇವತಾ, ಶ್ರೀರಾಮ, ಆಂಜನೇಯ ಸ್ವಾಮಿಗೆ ನಮಸ್ಕರಿಸಿ ಮೊದಲ ಕಾಯಿಯನ್ನು ಹೊಡೆದು ಮುಂದೆ ಸಾಗಿದೆವು.

            ಪೋಲಿಸ್ ತಪಾಸಣೆ, ಮಹಿಳಾ ಪೊಲಿಸ್ ಗಳ ಕಣ್ಗಾವಲಿನ ನಡುವೆ ಮುಂದೆ ಸಾಗುತ್ತ ಮುನ್ನಡೆದೆವು. ಸ್ವಲ್ಪ ದೂರ ಜೋರಾಗಿ, ಸ್ವಲ್ಪ ದೂರ ನಿಧಾನವಾಗಿ, ಸ್ವಲ್ಪ ದೂರ ನಿಂತು, ಕೆಲವು ಕಡೆ ಕುಳಿತು, ಕೆಲವು ಕಡೆ ಹಣ್ಣು ಹಂಪಲುಗಳನ್ನು ತಿಂದು ಮುನ್ನಡೆದೆವು. ಸೌತೆಕಾಯಿ, ಕರಬೂಜ ಸ್ವೀಕರಿಸಿ ಮುನ್ನಡೆದೆವು. ಶರಂಗುತ್ತಿಯಲ್ಲಿ ಮೊದಲ ಬಾರಿಯ ಸ್ವಾಮಿಗಳು ಶರವನ್ನು ಚುಚ್ಚಿದರೆ ಎಲ್ಲರು ಕಾಯಿ ಹೊಡೆದು ಮುನ್ನಡೆದೆವು.  ಸ್ವಾಮಿಯ ಸನ್ನಿಧಿಯಲ್ಲಿ  Virtual Queue  ಕೂಡ ಇದ್ದಿತು.  Queue ಗಳಲ್ಲಿ ನಿಂತು ಮೇಲೆ  ಸ್ವಾಮಿಯ ಪವಿತ್ರ 18 ಮೆಟ್ಟಿಲುಗಳಿಗೆ ನಮಸ್ಕರಿಸಿ ಮುನ್ನಡೆದೆವು.
     
           ಸ್ವಾಮಿಯ ದರುಶನವು ಅಧ್ಭುತವಾಗಿದ್ದಿತು ದೀಪಗಳ ಪ್ರಕಾಶಮಾನವಾದ ಬೆಳಕಿನಲ್ಲಿ ಸ್ವಾಮಿಯ ದರುಶನವು ಅತ್ಯಧ್ಬುತ ಮತ್ತು ಅವರ್ಣನೀಯವಾದುದಾಗಿತ್ತು. ಇರುಮುಡಿ ಹೊತ್ತು ಸ್ವಾಮಿಯ ಸನ್ನಿಧಿಯಲ್ಲಿ ಮುನ್ನಡೆದು ಜೀವನದ  ಉನ್ನತಿಗೆ  ಪ್ರಾರ್ಥಿಸಿ ಮುನ್ನಡೆದೆವು. ನಂತರ  ಒಂದೆಡೆ ಕುಳಿತು ಇರುಮುಡಿಯನ್ನು ಕೆಳಗಿರಿಸಿ ತುಪ್ಪ ತುಂಬಿದ ಕಾಯಿಗಳನ್ನು ಒಡೆದು ತುಪ್ಪದ ಅಭಿಷೇಕಕ್ಕೆ ನೀಡಲಾಯಿತು ಮತ್ತು ನಮ್ಮ ನಮ್ಮ ಡಬ್ಬಿಗಳಿಗೆ ತುಪ್ಪವನ್ನು ಭರ್ತಿಮಾಡಿಕೊಂಡು. ಅಮ್ಮನ ಗುಡಿಗೆ ತೆರಳಿ ಕಾಯಿ ಉರುಳಿಸಿದೆವು ಮಹಾಪೂಜೆಯಲ್ಲಿ ಭಾಗವಹಿಸಿದೆವು.

       ಡಾ. ವಿಜಯ ಮಲ್ಯರವರು ದೇವಸ್ಥಾನಕ್ಕೆ ಚಿನ್ನ ಲೇಪನ ವನ್ನು ಮಾಡಿಸಿದ್ದು ಅವರನ್ನು ನೆನಪಿಸಿತು. ಅವರ ಕಷ್ಠಕೋಠಲೆಗಳು ತೀರಿ ಮತ್ತೆ King of Good Times ಮೊದಲಿನಂತೆ ದೇದಿಪ್ಯಮಾನವಾಗಿ ಉದ್ಯಮಿಗಳ ಪಟ್ಟಿಯಲ್ಲಿ ರಾರಾಜಿಸಲಿ ಎಂದು ಪ್ರಾರ್ಥಿಸಿದೆ.

          ಊಟದ ವಿಷಯಕ್ಕೆ ಬಂದಾಗ ಮಾತ್ರ ಏನೋ ಒಂದು ರೀತಿಯ ಅಸಮಾಧಾನ, ಪೂರ್ಣ ಪ್ರಮಾಣದಲ್ಲಿ ಬೇಯದ ಚಪಾತಿ, ಪೂರ್ಣ ಪ್ರಮಾಣದಲ್ಲಿ ತಿಂಡಿಗಳನ್ನು ಬಡಿಸದ ಹೋಟೆಲ್ ಗಳು

                 ಅಲ್ಲಿಂದ ತಿರುವನಂಥಪುರಂ,ಶುಚಿಂದ್ರಮ್, ಕನ್ಯಾಕುಮಾರಿ, ಮಧುರೈ ಮೀನಾಕ್ಷಿ ದೇವಸ್ಥಾನಗಳಿಗೆ ಬೇಟಿ ನೀಡಿ ಮರಳಿದೆವು. ಒಂದು ಅದ್ಭುತ ಪ್ರಯಾಣ. 

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva