ನಗರ ಆರೋಗ್ಯ ಪೋಷಣೆ ದಿನಗಳು ಮತ್ತು ಮಾಸಿಕ ಹೊರ ವಲಯ ಕಾರ್ಯಚಟುವಟಿಕೆಗಳಲ್ಲಿ ಚರ್ಚಿಸಬೇಕಾದ ವಿಷಯಗಳು

ಎ.ಎನ್.ಎಂ ರವರು ಆಶಾ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಭಾಗಿತ್ವದಲ್ಲಿ ಕೊಳಗೇರಿ, ದುರ್ಬಲ ಜನಸಮಖ್ಯೆ ವಾಸಿಸುವ ಸಮುದಾಯದ ರಚನೆಯಿರುವ (ಅಂಗನವಾಡಿ ಕೇಂದ್ರಗಳು, ಶಾಲೆ, ರೈಲು ನಿಲ್ದಾಣ, ಬಸ್ ಸ್ಟಾಪ್,   ಕಡೆ) ಸೇವೆಗಳನ್ನು ನೀಡುತ್ತಾರೆ.
ಕೆಳಕಾಣಿಸಿದ ಸೇವೆಗಳನ್ನು ಒಳಗೊಂಡಿರುತ್ತದೆ.
ಅ. ತಾಯಿ ಆರೋಗ್ಯ:
  • ಗರ್ಭಿಣಿ ಪರೀಕ್ಷೆ ಮತ್ತು ಮುಂಚಿತವಾಗಿ ಗರ್ಭಿಣಿ ನೋಂದಣಿ ಮಾಡಿಸುವುದು.
  • ಗುಣಮಟ್ಟ ಮತ್ತು ನಿಖರತೆಯೊಂದಿಗೆ ಪ್ರಸವ ಪೂರ್ಣ ಸೇವೆಗಳನ್ನು ಸಂಪೂರ್ಣವಾಗಿ ಒದಗಿಸುವುದು.
  • ಪೂರ್ಣ ಪ್ರಮಾಣದಲ್ಲಿ ತಾಯಿ ಮತ್ತು ಮಗುವಿನ ಕಾರ್ಡ
  • ತೀವ್ರ ಗಂಡಾಂತರ ಹೆರಿಗೆಯ ಮಹಿಳೆಯರನ್ನು/ ಹೆರಿಗೆಯ ಸಂದರ್ಭದಲ್ಲಿ ತೊಂದರೆಗಳಾಗಬಹುದಾದ ಲಕ್ಷಣಗಳನ್ನು ಹೊಂದಿರುವವರು/ಮತ್ತು ತುರ್ತು ಆರೈಕೆಯ  ಅವಶ್ಯಕತೆ ಇರುವ ಮಹಿಳೆಯರನ್ನು ಬೇರೆಡೆಗೆ ಉಲ್ಲೇಖಿಸುಹುದು.
  • ಸುರಕ್ಷಿತ ಗರ್ಭಪಾತಕ್ಕೆ ನೋಂದಾಯಿತ ಗರ್ಭಪಾತ ನೋಂದಣಿ ಕೇಂದ್ರಗಳಿಗೆ ರೆಫರ್/ಉಲ್ಲೇಖ ಮಾಡುವುದು.
  • ವಿವಿಧ ವಿಷಯಗಳ ವ್ಯಾಪ್ತಿಯ ಕುರಿತು ಸಮಾಲೋಚಿಸುವುದು:  ಹೆಣ್ಣುಮಕ್ಕಳ ವಿದ್ಯಾರ್ಹತೆ, ಮದುವೆಯ ವಯಸು,ಗರ್ಭಾವಸ್ಥೆಯಲ್ಲಿ ಆರೈಕೆ, ಗರ್ಭಾವಸ್ಥೆಯಲ್ಲಿ ಎದುರಾಗಬಹುದಾದ ಗಂಡಾಂತರಗಳು, ಹೆರಿಗೆ ಅವಧಿಗೆ ಪೂರ್ವಭಾವಿ ಸಿದ್ದತೆ, ಆಹಾರದಲ್ಲಿ ಪೋಷಕಾಂಶಗಳ ಪಾತ್ರ, ಸಾಂಸ್ಥಿಕ ಹೆರಿಗೆ, ಸರಕಾರಿ ಆಸ್ಪತ್ರೆ ಹೆರಿಗೆ, ಜನನಿ ಸುರಕ್ಷಾ ಯೋಜನೆ- ಜನನಿ ಶಿಶು ಸುರಕ್ಷಾ ಕಾರ್ಯಕ್ರಮದ ಹರಿವು, ಪ್ರಸವಾ ನಂತರ ಆರೈಕೆ, ಮೊಲೆ ಉಣಿಸುವುದು, ಪೂರಕ ಆಹಾರಗಳ ಕುರಿತು ಮಾಹಿತಿ, ನವಜಾತ ಶಿಶುವಿನ ಆರೈಕೆ, ಗರ್ಭನಿರೋಧಕಗಳು
ಆ. ಶಿಶು ಆರೋಗ್ಯ.
     ·    ಹೊಸದಾಗಿ ಹುಟ್ಟಿದ ಮಗುವಿನ ನೋಂದಣಿ
     ·    ನವಜಾತ ಶಿಶುವಿನ ಆರೈಕೆ, ಎದೆಹಾಲಿನ ಮಹತ್ವ, 6 ನೇ ತಿಂಗಳಲ್ಲಿ ಪೂರಕ ಆಹಾರದ ಕುರಿತು ಸಮಾಲೋಚನೆ ನೀಡಬಹುದಾಗಿದೆ.
     ·     ಸಂಪೂರ್ಣವಾಗಿ ಲಸಿಕೆಯನ್ನು ಕೊಡಿಸುವುದು, ವಿಟಮಿನ್- ಎ ಯ ಎಲ್ಲ ಪ್ರಮಾಣಗಳು, ಆಶಾ ಕಾರ್ಯಕರ್ತೆಯು ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆಯಿಂದ ವಂಚಿತ ಮತ್ತು ಅರೆ ಲಸಿಕೆ ಪಡೆದ ಮಕ್ಕಳ ಗುರುತಿಸುವುದು ಮತ್ತು ದಾಖಲಿಸುವುದು
     ·    ರಕ್ತಹೀನತೆ, ಪೌಷ್ಟಿಕಾಂಶ ಅಗತ್ಯ ಲವಣಗಳ ನ್ಯೂನ್ಯತೆಗಳನ್ನು ಹೊಂದಿರುವ ಎಲ್ಲ ಮಕ್ಕಳ ತೂಕ ಮತ್ತು ಪೌಷ್ಟಿಕಾಂಶದ ಕಣ್ಗಾವಲು ಪರೀಕ್ಷೆ. ಅನಿಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕ್ಕ – ಐ.ಎಫ್.ಎ ಮಾತ್ರೆ ವಿತರಣೆ
     ·    ಸೌಮ್ಯ ಅಪೌಷ್ಟಿಕ ಶ್ರೇಣಿಯ ಮಕ್ಕಳಿಗೆ ಪೂರಕ ಆಹಾರವನ್ನೊದಗಿಸುವುದು ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ಮೇಲ್ದರ್ಜೆಯ ಆಸ್ಪತ್ರೆಗೆ ಉಲ್ಲೇಖಿಸುವುದು/ರೆಫರ್ ಮಾಡುವುದು.
     ·    ಅತಿಸಾರ ಮತ್ತು ತೀವ್ರ ಉಸಿರಾಟದ ಸೋಂಕುಗಳಿಂದ ಬಳಲುತ್ತಿರುವವರ ನಿರ್ವಹಣೆ ಮತ್ತು ಎಲ್ಲ ತಾಯಂದಿರಿಗೆ ಮನೆಯಲ್ಲಿ ನಿರ್ವಹಣೆ ಮಾಡುವ ವಿಧಾನ ಮತ್ತು ಇಂತಹ ಸಂದರ್ಭದಲ್ಲಿ ತೊಂದರೆಗಳು ಎದುರಾದಲ್ಲಿ ಎಲ್ಲಿಗೆ ಹೋಗಬೇಕು ಎಂದು ಸಮಾಲೋಚನೆ ಮಾಡಬೇಕು.ORS ಪ್ಯಾಕೆಟ್ಗಳನ್ನು ಒದಗಿಸುವುದು, ಪೌಷ್ಠಿಕಾಂಶ ಪೂರೈಕೆ ಮತ್ತು ಸಮತೋಲಿತ ಆಹಾರಗಳ ಮೇಲೆ ಸಲಹೆ ನೀಡುವಿಕೆ, ಹೊಟ್ಟೆ ಉಳುವಿನಂತಹ ಸೋಂಕುಗಳನ್ನು ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಸಮಾಲೋಚನೆಯನ್ನು ನೀಡುವುದು.

ಇ. ಹದಿಹರೆಯದವರು(10-19 ವರ್ಷದವರು)
  • ರಕ್ತಹೀನತೆ, ವಿಟಮಿನ್ ಕೊರೆ, ಮೈಕ್ರೊನ್ಯುಟ್ರಿಯಂಟ್ ಗಳ ಕೊರತೆಗಳ ಕುರಿತು ಪರೀಕ್ಷಿಸುವುದು. ಕಬ್ಬಿಣಾಂಶಯುಕ್ತ ಮಾತ್ರೆಗಳನ್ನು, ವಿಟಮಿನ್ಸ್, ಮೈಕ್ರೋನ್ಯೂಟ್ರಿಯೆಂಟ್ ಗಳ ಪೂರೈಸುವುದು.
  • ಮಾದಕ ವ್ಯಸನದ ವಿರುದ್ಧ ಸಲಹೆ ನೀಡುವಿಕೆ, ಆರೋಗ್ಯಕರ ಜೀವನ ಶೈಲಿ ಮತ್ತು ಜವಾಬ್ದಾರಿಯುತ ಲೈಂಗಿಕ ಮತ್ತು ಸಾಮಾಜಿಕ ನಡವಳಿಕೆ ಮತ್ತು ಆಚರಣೆಗಳನ್ನು ಉತ್ತೇಜಿಸುವುದು
ಈ.ಕುಟುಂಬ ಕಲ್ಯಾಣ
  • ಗರ್ಭ ನಿರೋಧಕಗಳ ಕುರಿತು ಮಾಹಿತಿ ನೀಡುವುದು.
  • ಕಾಂಡೋಮ್ ಮತ್ತು ಓ.ಸಿ.ಪಿ(ಬಾಯಿ ಮೂಲಕ ತೆಗೆದುಕೊಳ್ಲುವ ಗರ್ಬ ನಿರೋಧಕ ಗುಳಿಗೆಗಳು) ವಿತರಣೆ
  • ಗರ್ಭ ನಿರೋಧಕ ಶಸ್ತ್ರ ಚಿಕಿತ್ಸೆಯಿಂದ ಆಗುವ ಕೂಲಿ ನಷ್ಟಕ್ಕೆ ಪರಿಹಾರ, ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ವಿಮಾ ಯೋಜನೆ ಕುರಿತು ಮಾಹಿತಿ ನೀಡುವುದು.
ಉ.ಸಂತಾನೋತ್ಪತ್ತಿ ಪ್ರದೇಶದ ಸೋಂಕುಗಳು ಮತ್ತು ಇತರ ಸಂಬಂಧಿತ ಪರಿಸ್ಥಿತಿಗಳು
  • ಸಂತಾನೋತ್ಪತ್ತಿ ಪ್ರದೇಶ ಸೋಂಕುಗಳು ಮತ್ತು ಲೈಂಗಿಕ ಪ್ರದೇಶದ ಸೋಂಕುಗಳು ತಡೆಯುವಿಕೆ ಕುರಿತು ಸಮಾಲೋನೆ ಮಾಡುವುದು, ಎಚ್.ಐ.ವಿ/ಏಡ್ಸ ಕುರಿತು ಮಾಹಿತಿ ನೀಡುವುದು ಮತ್ತು ಹರಡುವ ವಿಧಾನ ತಡೆಗಟ್ಟುವ ವಿಧಾನಗಳ ಕುರಿತು ಚರ್ಚಿಸುವುದು.
  • ರೋಗನಿರ್ಣಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಮೇಲ್ದರ್ಜೆ ಆಸ್ಪತ್ರೆಗೆ ಉಲ್ಲೇಖಿಸುವುದು, ಮತ್ತು ಉಭಯ ಗಂಡ ಹೆಂಡತಿ ಅಥವಾ ಸ್ದ್ವಂರೀ ಪುರುಷ ರಕ್ಷಣೆಗಾಗಿ ಕಾಂಡೋಮ್ ಗಳ ವಿತರಣೆ.
  • ಐ.ಸಿ.ಟಿ.ಸಿ ಹಾಗು ಪಿಪಿಟಿಸಿಟಿಗೆ ಸೇವೆಗಳಿಗೆ ಸಂಬಂಧಿಸಿದಂತೆ ಸೂಕ್ತ ಸಂಸ್ಥೆಗಳಿಗೆ ರೆಫರ್ ಮಾಡುವುದು.

ಊ. ರೋಗನಿರ್ಣಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಪ್ರಕರಣಗಳ ಉಲ್ಲೇಖ, ಮತ್ತು ದ್ವಂದ್ವ ರಕ್ಷಣೆಗಾಗಿ ಕಾಂಡೋಮ್ಗಳ ವಿತರಣೆ
  • ಸ್ವಚ್ಚ ಕುಡಿಯುವ ನೀರಿನ ಮಹತ್ವ, ಸ್ವಚ್ಚ ರೀತಿಯಲ್ಲಿ ನೀರನ್ನು ಬಳಸುವ ವಿಧಾನ, ನೀರನ್ನು ಶೇಖರಿಸಿ ಬಳಸುವ ಸ್ಥಳದಲ್ಲಿನ ಸ್ವಚ್ಚತೆ, ಕ್ಲೋರಿನ್ ಟ್ಯಾಬ್ಲೆಟ್ಗಳನ್ನು ಬಳಸುವುದು, ಕುದಿಸಿ ಆರಿಸಿದ ನೀರನ್ನು ಬಳಸುವುದು, ವಾಟರ್ ಫಿಲ್ಟರ ಬಳಕೆ ಮುಂತಾದವುಗಳ ಕುರಿತು ಸಮಾಲೋಚನೆ ಮಾಡುವುದು.
  • ಉತ್ತಮ ಆಹಾರ ಅಭ್ಯಾಸಗಳು, ನೈರ್ಮಲ್ಯಯುಕ್ತ ಮತ್ತು ಸರಿಯಾದ ಅಡುಗೆ ಮಾಡುವ ವಿಧಾನ ಮತ್ತು ಕೈ ತೊಳೆಯುವ ವಿಧಾನಗಳ ಕುರಿತು ಸಮಾಲೋಚನೆ ಮಾಡುವುದು.
  • ಅಯೋಡಿನ್ ಗಾಗಿ ಮನೆ ಅಡಿಯನ್ನು ಪರೀಕ್ಷಿಸುವುದು.
  • ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವುದು ಮತ್ತು  ಸಂತಾನೋತ್ಪತ್ತಿ ಸ್ಥಳಗಳನ್ನು ನಿರ್ಮೂಲನೆ ಮಾಡುವುದು.
  • ಮನೆಯಲ್ಲಿ ಉತ್ಪತ್ತಿಯಾಗುವ ನಿರುಪಯುಕ್ತ ಮತ್ತು ಕಸದ ಸುರಕ್ಷಿತ ವಿಲೇವಾರಿಗಾಗಿ ಸಮುದಾಯವನ್ನು ಸಜ್ಜುಗೊಳಿಸುವುದು.
  • ಲಿಂಗ ಸಮಾನತೆಯ ವಿಷಯಗಲ ಕುರಿತು ಚರ್ಚಿಸುವುದು.ಪಿಸಿಪಿಎನ್.ಡಿ.ಟಿ ಕಾರ್ಯಕ್ರಮದ ಕುರಿತು ಚರ್ಚಿಸುವುದು,ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯದ ಕುರಿತು ಚರ್ಚಿಸುವುದು, ಗೃಹ ಹಂಸಾಚಾರ ಖಾಯ್ದೆ 2006 ರ ಕುರಿತು ಚರ್ಚಿಸುವುದು, ಮದುವೆಯ ವಯಸ್ಸು, ಆಲ್ಕೋಹಾಲ್ , ಸೇರಿದಂತೆ ಮದ್ಯಪಾನ , ಧೂಮಪಾನ ವ್ಯಸನದಿಂದಾಗುವ ಹಾನಿಗಳ ಕುರಿತು ಚರ್ಚಿಸುವುದು. ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡಿ ನಡೆಯುತ್ತಿರುವ ಕಾರ್ಯಗಳ ಪರಿಶೀಲನೆ, ಮಕ್ಕಳಿಗೆ, ಗರ್ಭಿಣಿಯರಿಗೆ, ಎದೆ ಹಾಲುಣಿಸುವ ತಾಯಂದಿರಿಗೆ ಪೂರಕ ಆಹಾರ ವಿತರಣೆ ಚಾರ್ಟಗಳ ಪರಿಶೀಲನೆ.
  • ನೈರ್ಮಲ್ಯದ ಕುರಿತು: ಸಮುದಾಯ ಪಾಯಖಾನೆಗಲಿಗೆ ಸ್ಥಳ ಗುರುತಿಸುವುದು, ಸಬಸಿಡಿ/ರಿಯಾಯಿತಿ ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂದು ಮಾಹಿತಿ ನೀಡುವುದು.
                                                                                                                           (ಕನ್ನಡಕ್ಕೆ ಭಾಷಾಂತರಿಸಿದ್ದು)




Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva