ಶಿವ ಅಷ್ಟೋತ್ತರ ಶತ ನಾಮಾವಳಿ
*ಇಷ್ಟಾರ್ಥ ಸಿದ್ಧಿಗಾಗಿ ನಿತ್ಯ ಪಠಿಸಿ ಶಿವ ಅಷ್ಟೋತ್ತರ ಶತ ನಾಮಾವಳಿ..!*
ಪ್ರತಿನಿತ್ಯ ನಾವು ಶಿವ ಅಷ್ಟೋತ್ತರ ಶತ ನಾಮಾವಳಿಯನ್ನು ಪಠಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುತ್ತದೆ. ಜೀವನದ ನೋವುಗಳು ದೂರಾಗಿ ಸಂತೋಷ, ಶಾಂತಿ ಸಿಗುತ್ತದೆ.
ಶಿವನನ್ನು ಒಲಿಸಿಕೊಳ್ಳುವುದು ತುಂಬಾ ಸರಳ. ಭಕ್ತಿಯೊಂದಿದ್ದರೆ ಆತ ಯಾರಿಗೆ ಬೇಕಾದರೂ ಒಲಿಯುವಾತ. ಶಿವನಿಗೆ ಆಡಂಭರದ ಪೂಜೆ - ಪುನಸ್ಕಾರಗಳ ಅವಶ್ಯಕತೆಯಿಲ್ಲ. ಶ್ರದ್ಧಾ - ಭಕ್ತಿಯಿಂದ, ನಿಷ್ಕಲ್ಮಶ ಮನಸ್ಸಿನಿಂದ ಒಮ್ಮೆ ಓಂ ಎಂದರೆ ಸಾಕು ಆತ ನಿಮ್ಮತ್ತ ತಿರುಗಿ ನೋಡುವನು. ಶಿವನನ್ನು ಒಲಿಸಿಕೊಳ್ಳಲು ಓಂ ಮಾತ್ರವಲ್ಲ, ಅನೇಕ ಮಂತ್ರಗಳು, ಸ್ತೋತ್ರಗಳು ಇವೆ. ಆದರೆ ಅವುಗಳಲ್ಲಿ ಪ್ರಮುಖವಾದುದ್ದು, ಶಿವನಿಗೆ ಅತ್ಯಂತ ಪ್ರಿಯವಾದ ಆತನ 108 ನಾಮಗಳ ಅಷ್ಟೋತ್ತರ ನಾಮಾವಳಿಗಳು. ಇದನ್ನೇ ಶಿವ ಅಷ್ಟೋತ್ತರ ಶತ ನಾಮಾವಳಿಗಳೆಂದು ಕರೆಯಲಾಗುತ್ತದೆ. ಶಿವ ಅಷ್ಟೋತ್ತರ ಶತ ನಾಮಾವಳಿಯನ್ನು ಪ್ರತಿನಿತ್ಯ ನೀವು ಮಡಿಯಿಂದ ಪಠಿಸಬಹುದು ಅಥವಾ ಪ್ರತೀ ಸೋಮವಾರ ಕೂಡ ಮುಂಜಾನೆ ಮಡಿಯಿಂದ ಪಠಿಸಬಹುದು. ಶಿವನ 108 ನಾಮಾವಳಿಗಳನ್ನು ಜಪಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುವುದು.
*ಶಿವ ಅಷ್ಟೋತ್ತರ ಶತ ನಾಮಾವಳಿಯ ಪ್ರಯೋಜನ:*
🚩ನಮ್ಮೆಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಶಿವ ಅಷ್ಟೋತ್ತರ ಶತ ನಾಮಾವಳಿ ಪಠಿಸಿ.
🚩ಎಷ್ಟೇ ಕಠಿಣ ದುಃಖವಾದರೂ ಇದು ತೊಡೆದುಹಾಕುತ್ತದೆ.
🚩ಆರೋಗ್ಯದ ಸಮಸ್ಯೆಗಳನ್ನು ದೂರಾಗಿಸುತ್ತದೆ.
🚩ಮಾನಸಿಕ ಶಾಂತಿಯನ್ನು ನೀಡುವುದು
ಅದೃಷ್ಟ ಮತ್ತು ಸಮೃದ್ಧಿ ಹೆಚ್ಚಾಗುವುದು
🚩ಸ್ವ ಅಭಿವೃದ್ಧಿಗೆ ಸಹಕಾರಿ
ಪ್ರಜ್ಞಾವಂತರನ್ನಾಗಿಸುತ್ತದೆ. 🚩 ಇಷ್ಟು ಮಾತ್ರವಲ್ಲ, ಇನ್ನೂ ಅನೇಕ ಪ್ರಯೋಜನವನ್ನು ನಾವು ಶಿವ ಅಷ್ಟೋತ್ತರ ಶತ ನಾಮಾವಳಿಯಿಂದ ಪಡೆದುಕೊಳ್ಳಬಹುದು. *ಶಿವ ಅಷ್ಟೋತ್ತರ ನಾಮಾವಳಿ* ಓಂ ಶಿವಾಯ ನಮಃ |
ಓಂ ಮಹೇಶ್ವರಾಯ ನಮಃ |
ಓಂ ಶಂಭವೇ ನಮಃ |
ಓಂ ಪಿನಾಕಿನೇ ನಮಃ |
ಓಂ ಶಶಿಶೇಖರಾಯ ನಮಃ |
ಓಂ ವಾಮದೇವಾಯ ನಮಃ |
ಓಂ ವಿರೂಪಾಕ್ಷಾಯ ನಮಃ |
ಓಂ ಕಪರ್ದಿನೇ ನಮಃ |
ಓಂ ನೀಲಲೋಹಿತಾಯ ನಮಃ | ೯
ಓಂ ಶಂಕರಾಯ ನಮಃ |
ಓಂ ಶೂಲಪಾಣಿನೇ ನಮಃ |
ಓಂ ಖಟ್ವಾಂಗಿನೇ ನಮಃ |
ಓಂ ವಿಷ್ಣುವಲ್ಲಭಾಯ ನಮಃ |
ಓಂ ಶಿಪಿವಿಷ್ಟಾಯ ನಮಃ |
ಓಂ ಅಂಬಿಕಾನಾಥಾಯ ನಮಃ |
ಓಂ ಶ್ರೀಕಂಠಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಭವಾಯ ನಮಃ | ೧೮
ಓಂ ಶರ್ವಾಯ ನಮಃ |
ಓಂ ತ್ರಿಲೋಕೇಶಾಯ ನಮಃ |
ಓಂ ಶಿತಿಕಂಠಾಯ ನಮಃ |
ಓಂ ಶಿವಾಪ್ರಿಯಾಯ ನಮಃ |
ಓಂ ಉಗ್ರಾಯ ನಮಃ |
ಓಂ ಕಪಾಲಿನೇ ನಮಃ |
ಓಂ ಕಾಮಾರಯೇ ನಮಃ |
ಓಂ ಅಂಧಕಾಸುರಸೂದನಾಯ ನಮಃ |
ಓಂ ಗಂಗಾಧರಾಯ ನಮಃ | ೨೭
ಓಂ ಲಲಾಟಾಕ್ಷಾಯ ನಮಃ |
ಓಂ ಕಾಲಕಾಲಾಯ ನಮಃ |
ಓಂ ಕೃಪಾನಿಧಯೇ ನಮಃ |
ಓಂ ಭೀಮಾಯ ನಮಃ |
ಓಂ ಪರಶುಹಸ್ತಾಯ ನಮಃ |
ಓಂ ಮೃಗಪಾಣಯೇ ನಮಃ |
ಓಂ ಜಟಾಧರಾಯ ನಮಃ |
ಓಂ ಕೈಲಾಸವಾಸಿನೇ ನಮಃ |
ಓಂ ಕವಚಿನೇ ನಮಃ | ೩೬
ಓಂ ಕಠೋರಾಯ ನಮಃ |
ಓಂ ತ್ರಿಪುರಾಂತಕಾಯ ನಮಃ |
ಓಂ ವೃಷಾಂಕಾಯ ನಮಃ |
ಓಂ ವೃಷಭಾರೂಢಾಯ ನಮಃ |
ಓಂ ಭಸ್ಮೋದ್ಧೂಲಿತವಿಗ್ರಹಾಯ ನಮಃ |
ಓಂ ಸಾಮಪ್ರಿಯಾಯ ನಮಃ |
ಓಂ ಸ್ವರಮಯಾಯ ನಮಃ |
ಓಂ ತ್ರಯೀಮೂರ್ತಯೇ ನಮಃ |
ಓಂ ಅನೀಶ್ವರಾಯ ನಮಃ | ೪೫
ಓಂ ಸರ್ವಜ್ಞಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ |
ಓಂ ಹವಿಷೇ ನಮಃ |
ಓಂ ಯಜ್ಞಮಯಾಯ ನಮಃ |
ಓಂ ಸೋಮಾಯ ನಮಃ |
ಓಂ ಪಂಚವಕ್ತ್ರಾಯ ನಮಃ |
ಓಂ ಸದಾಶಿವಾಯ ನಮಃ |
ಓಂ ವಿಶ್ವೇಶ್ವರಾಯ ನಮಃ | ೫೪
ಓಂ ವೀರಭದ್ರಾಯ ನಮಃ |
ಓಂ ಗಣನಾಥಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಹಿರಣ್ಯರೇತಸೇ ನಮಃ |
ಓಂ ದುರ್ಧರ್ಷಾಯ ನಮಃ |
ಓಂ ಗಿರೀಶಾಯ ನಮಃ |
ಓಂ ಗಿರಿಶಾಯ ನಮಃ |
ಓಂ ಅನಘಾಯ ನಮಃ |
ಓಂ ಭುಜಂಗಭೂಷಣಾಯ ನಮಃ | ೬೩
ಓಂ ಭರ್ಗಾಯ ನಮಃ |
ಓಂ ಗಿರಿಧನ್ವನೇ ನಮಃ |
ಓಂ ಗಿರಿಪ್ರಿಯಾಯ ನಮಃ |
ಓಂ ಕೃತ್ತಿವಾಸಸೇ ನಮಃ |
ಓಂ ಪುರಾರಾತಯೇ ನಮಃ |
ಓಂ ಭಗವತೇ ನಮಃ |
ಓಂ ಪ್ರಮಥಾಧಿಪಾಯ ನಮಃ |
ಓಂ ಮೃತ್ಯುಂಜಯಾಯ ನಮಃ |
ಓಂ ಸೂಕ್ಷ್ಮತನವೇ ನಮಃ | ೭೨
ಓಂ ಜಗದ್ವ್ಯಾಪಿನೇ ನಮಃ |
ಓಂ ಜಗದ್ಗುರುವೇ ನಮಃ |
ಓಂ ವ್ಯೋಮಕೇಶಾಯ ನಮಃ |
ಓಂ ಮಹಾಸೇನಜನಕಾಯ ನಮಃ |
ಓಂ ಚಾರುವಿಕ್ರಮಾಯ ನಮಃ |
ಓಂ ರುದ್ರಾಯ ನಮಃ |
ಓಂ ಭೂತಪತಯೇ ನಮಃ |
ಓಂ ಸ್ಥಾಣವೇ ನಮಃ |
ಓಂ ಅಹಿರ್ಬುಧ್ನ್ಯಾಯ ನಮಃ | ೮೧
ಓಂ ದಿಗಂಬರಾಯ ನಮಃ |
ಓಂ ಅಷ್ಟಮೂರ್ತಯೇ ನಮಃ |
ಓಂ ಅನೇಕಾತ್ಮನೇ ನಮಃ |
ಓಂ ಸಾತ್ವಿಕಾಯ ನಮಃ |
ಓಂ ಶುದ್ಧವಿಗ್ರಹಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಖಂಡಪರಶವೇ ನಮಃ |
ಓಂ ಅಜಾಯ ನಮಃ |
ಓಂ ಪಾಶವಿಮೋಚಕಾಯ ನಮಃ | ೯೦
ಓಂ ಮೃಡಾಯ ನಮಃ |
ಓಂ ಪಶುಪತಯೇ ನಮಃ |
ಓಂ ದೇವಾಯ ನಮಃ |
ಓಂ ಮಹಾದೇವಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಹರಯೇ ನಮಃ |
ಓಂ ಪೂಷದಂತಭಿದೇ ನಮಃ |
ಓಂ ಅವ್ಯಗ್ರಾಯ ನಮಃ |
ಓಂ ದಕ್ಷಾಧ್ವರಹರಾಯ ನಮಃ | ೯೯
ಓಂ ಹರಾಯ ನಮಃ |
ಓಂ ಭಗನೇತ್ರಭಿದೇ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಪದೇ ನಮಃ |
ಓಂ ಅಪವರ್ಗಪ್ರದಾಯ ನಮಃ |
ಓಂ ಅನಂತಾಯ ನಮಃ |
ಓಂ ತಾರಕಾಯ ನಮಃ |
ಓಂ ಪರಮೇಶ್ವರಾಯ ನಮಃ | ೧೦೮
Facebook collection
Comments