ಪ್ರಾಣಿ ಸಂಪತ್ತಿನ ಕೀಲಿ ಕೈ ಪ್ರಾಣಿಗಳ ಆರೋಗ್ಯ

ಪ್ರಾಣಿ ಸಂಪತ್ತಿನ ಕೀಲಿ ಕೈ ಪ್ರಾಣಿಗಳ ಆರೋಗ್ಯ ಡಾ. ಎಂ.ಜೆ ಖಾನ್, ಅಗ್ರಿಕಲ್ಚರ್ ಟುಡೇ VOLUME XXV | ISSUE 7 | JULY 2022 ಪಶುಸಂಗೋಪನಾ ಉದ್ಯಮವು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರಿಕೃತವಾಗಿದ್ದು, ಇದು ಲಾಭದಾಯಕ ಉದ್ಯೋಗವನ್ನು ನೀಡುತ್ತದೆ ಜೊತೆಗೆ ವರ್ಷ ಪೂರ್ತಿ ಆದಾಯವನ್ನು ನೀಡುತ್ತದೆ, ಈ ವಲಯದ ಉದ್ಯಮಿದಾರ ಹಿತಾಸಕ್ತಿಯನ್ನು ಜತನದಿಂದ ಕಾಪಾಡಬೇಕಾದ ಅವಶ್ಯಕತೆ ಇದೆ. ಪಶುಸಂಗೋಪನಾ ಉದ್ಯಮ ವಲಯವು, ಫಲಿತಾಂಶ ಮತ್ತು ಕಾರ್ಯಕ್ಷಮತೆಯಲ್ಲಿ ಸ್ಥಿರ ಉದ್ಯಮ ವಲಯವಾಗಿ ಗುರುತಿಸಿಕೊಂಡಿದೆ. ಸಮಾಜದ ದುರ್ಬಲ ವರ್ಗ ಮತ್ತು ಕಡೆಗಣನೆಗೊಳಗಾದ ಹಿಂದುಳಿದ ವರ್ಗದ ಜನರ ಉದ್ಯಮದ ಉತ್ತಮ ಆಯ್ಕೆಯಾಗಿದೆ. ಪ್ರಾಣಿಗಳ ಆರೋಗ್ಯವು, ಪ್ರಾಣಿಗಳ ಸಂಪತ್ತಿನ ಪ್ರಮುಖ ಅಂಶವಾಗಿದ್ದು ಪ್ರಾಣಿಗಳ ಆರೋಗ್ಯಕ್ಕೆ ಸೂಕ್ತ ಕ್ರಮವಹಿಸಬೇಕು. ನಾವು ಆರ್ಥಿಕವಾಗಿ ಪ್ರಾಣಿಗಳ ಮೇಲೆ ಅವಲಂಭಿತರಾಗಲು ಬಯಸಿದಲ್ಲಿ, ಅವುಗಳನ್ನು ರಕ್ಷಿಸಬೇಕು, ಪೋಷಿಸಬೇಕು ಹಾಗೂ ಅಗತ್ಯ ಪೋಷಕಾಂಶಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. “ಒನ್ ಹೆಲ್ತ್ ಒಂದೇ ಆರೋಗ್ಯ” ಪರಿಕಲ್ಪನೆಯನ್ನು ಏಕರೂಪವಾಗಿ ಎಲ್ಲ ರಾಷ್ಟ್ರಗಳಲ್ಲಿ ತರಲಾಗುತ್ತಿದೆ. ಜನರ, ಪ್ರಾಣಿಗಳ, ಮತ್ತು ಪರಿಸರ ವ್ಯವಸ್ಥೆ ಆರೋಗ್ಯವನ್ನು ಸಮರ್ಥನೀಯವಾಗಿ ಸಮತೋಲನಗೊಳಿಸಿ ಉತ್ತಮಗೊಳಿಸುವ ಏಕೀಕೃತ ವಿಧಾನವನ್ನು ಬಳಸಲು ನಾವು ಬದ್ಧರಾಗಿರಬೇಕು. ಮನುಷ್ಯರು, ಪ್ರಾಣಿಗಳು ಮತ್ತು ಪರಿಸರ ವ್ಯವಸ್ಥೆಯು ಒಂದಕ್ಕೊಂದು ನಿಕಟರೂಪದಲ್ಲಿ ಬೆಸೆದುಕೊಂಡಿದೆ ಮತ್ತು ಅವಲಂಭಿತವಾಗಿವೆ. ಪ್ರಾಣಿಗಳ ಆರೋಗ್ಯದ ವಿಷಯಕ್ಕೆ ಬಂದಾಗ, ಈ ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ, ಜೈವಿಕ ತಂತ್ರಜ್ಞಾನ ಅವಿಷ್ಕಾರಗಳು ಸೇವೆಗೆ ಲಭ್ಯವಿವೆ. ರೋಗಗಳನ್ನು ತಡೆಗಟ್ಟುವಲ್ಲಿ ಆತ್ಯಾಧುನಿಕ ಹೊಸ ಪೀಳಿಗೆಯ ಲಸಿಕೆಗಳ ಕೀಲಿ ಕೈ ನಮ್ಮ ಬಳಿ ಇದೆ. ರೋಗನಿರೋಧಕ ಪ್ರತಿರೋಧವನ್ನು ಎದುರಿಸಲು, ರೋಗನಿರೋಧಕ ಪರ್ಯಾಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ದಿನಗಳಲ್ಲಿ ರೋಗನಿರೋಧಕ ಪ್ರತಿರೋಧ ಎಚ್ಚುತ್ತಿದೆ. ರೋಗ ನಿರೋದಕ ಪ್ರತಿರೋಧ ಜಾಗತಿಕವಾಗಿ ಮಾನವರು, ಪ್ರಾಣಿಗಳು ಮತ್ತು ಪರಿಸರಕ್ಕೆ ಅಪಾಯವನ್ನು ಉಂಟುಮಾಡುತ್ತದೆ. ಆ್ಯಂಟಿಬಯೋಟಿಕ್ ಪ್ರತಿರೋಧವನ್ನು ಎದುರಿಸಲು ಆ್ಯಂಟಿಬಯೋಟಿಕ್ ಪರ್ಯಾಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲಸಿಕೆಗಳು, ಪ್ರೋಬಯಾಟಿಕ್ಗಳು ಮತ್ತು ರೋಗನಿರೋಧಕ ಮಾಡ್ಯುಲೇಟರ್ಗಳು ಸೇರಿದಂತೆ ಪರ್ಯಾಯ ಉತ್ಪನ್ನಗಳು ಪಶುವೈದ್ಯರು ಮತ್ತು ರೈತರಿಗೆ ಪ್ರತಿಜೀವಕ ಬಳಕೆಯನ್ನು ಕಡಿಮೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿವೆ. ಪೌಷ್ಠಿಕಾಂಶ, ಆಹಾರದ ಪ್ರಮಾಣ ಮತ್ತು ಗುಣಮಟ್ಟ ಪಶುಪಾಲನೆಯಲ್ಲಿ ಮುಖ್ಯವಾದ ಅಂಶಗಳಾಗಿವೆ. ಮಣ್ಣಿನ ಸೂಕ್ಷ್ಮಜೀವಿಗಳ ವರ್ಧನೆ, ಹಾಳಾಗುವುದನ್ನು ತಡೆಗಟ್ಟುವ ವಿಧಾನಗಳು, ಪ್ರಾಣಿಗಳ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸೂಕ್ಷ್ಮ ಜೀವಿಗಳ ಬಳಕೆ, ಖನಿಜ ಮತ್ತು ಕಿಣ್ವ ಪೂರಕಗಳು, ಮತ್ತು ಜೀನ್ ಎಡಿಟಿಂಗ್ ತಂತ್ರಜ್ಞಾನಗಳ ಬಳಕೆಯು ಸಸ್ಯಗಳಲ್ಲಿನ ಪೋಷಕಾಂಶಗಳ ಮಟ್ಟವು, ಪ್ರಾಣಿಗಳ ಪೋಷಣೆಯನ್ನು ಹೆಚ್ಚಿಸುವಲ್ಲಿ ಮಹತ್ವಪೂರ್ಣವಾಗಿವೆ. ಕ್ರಿಕೆಟ್-ಆಧಾರಿತ ಬೇಕಿಂಗ್ ಹಿಟ್ಟಿನಿಂದ ಹಿಡಿದು ಜೀವಕೋಶ-ಆಧಾರಿತ ಕಲ್ಚರ್ ನಿಂದ ಪ್ರಾಣಿ ಪ್ರೋಟೀನ್ನ ತಯಾರಿಕೆಯವರೆಗೆ ನವೀನ ಪ್ರೋಟೀನ್ ಮೂಲಗಳಿಗೆ ಹೊಸ ಮಾರುಕಟ್ಟೆಗಳು ಹೊರಹೊಮ್ಮುತ್ತಿವೆ. ಪ್ರಾಣಿಗಳ ಮಧ್ಯಸ್ಥಗಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರಾಣಿಗಳ ಆರೋಗ್ಯದಲ್ಲಿ ಸುಧಾರಿತ ತಂತ್ರಜ್ಞಾನಗಳ ಜ್ಞಾನವನ್ನು ಹರಡಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ಪ್ರಾಣಿಗಳ ಆರೋಗ್ಯವು ಸರ್ಕಾರದ ಅವಿಭಜಿತ ಗಮನದ ಅಗತ್ಯವಿರುವ ಒಂದು ಪ್ರಮುಖ ವಿಭಾಗವಾಗಿದೆ. ಭಾರತವು ಹೇರಳವಾದ ಪ್ರಾಣಿ ಸಂಪತ್ತನ್ನು ಹೊಂದಿದೆ. ನಮ್ಮ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಲು, ನಾವು ಪ್ರಾಣಿಗಳ ಆರೋಗ್ಯದಲ್ಲಿ ಹೂಡಿಕೆ ಮಾಡಬೇಕು. ಕನ್ನಡಕ್ಕೆ ಅನುವಾದ: ಮಲ್ಲಿಕಾರ್ಜುನಯ್ಯ. ಎಸ್. ಎನ್ 20-Jul-22

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva