ಬಾಹ್ಯಾಕಾಶ ಕ್ಷೇತ್ರದಲ್ಲಿ ISRO ಸಾಧನೆ ಭಾರತದ ಮೈಲಿಗಲ್ಲು

Indian Space Research Organization - ISRO, ವಿಶ್ವ ಬಾಹ್ಯಾಕಾಶ ಜಗತ್ತಿನಲ್ಲಿ ಭಾರತವನ್ನು ಭದ್ರವಾಗಿ ನೆಲೆನಿಲ್ಲಿಸಿ ಚಂದ್ರನಂಗಳದಿಂದ ಮಂಗಳನವರೆಗೆ ಭಾರತದ ಬಾಹ್ಯಾಕಾಶ ಯಾತ್ರೆಯನ್ನು ಚಿರಸ್ಥಾಯಿಯಾಗಿಸಿದ ಸಂಸ್ಥೆ. ಇದು ನಮ್ಮ ಬೆಂಗಳೂರು, ಕರ್ನಾಟಕ ರಾಜ್ಯದಲ್ಲಿರುವುದು ಕನ್ನಡಿಗನಾದ ನನಗೆ ಹೆಮ್ಮೆಯ ವಿಷಯ ಮತ್ತು ವಿಚಾರ. 

ಈ ದಿನ ಏಕೆ ನಾನು ಈ ಚುಟುಕು ಲೇಖನವನ್ನು ಬರೆಯಲು ತೊಡಗಿದೆ? ಒಂದು ಪ್ರಶ್ನೆ 

ದಿನಾಂಕ15/02/2017 . ಪ್ರೇಮಿಗಳ ದಿನದ ಮರುದಿನ ಇಸ್ರೋ ತನ್ನ ಉಪಗ್ರಹ ಉಡಾವಣ ವಾಹಕ ಪಿ.ಎಸ್.ಎಲ್.ವಿ -ಸಿ37 ನಿಂದ ನಭದ ಸೌರ ಕಕ್ಷೆಗೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಸೇರಿಸಿತು. 

ಮಾಧ್ಯಮಗಳು ಮನಸ್ಸು ಮಾಡಿದ್ದಲ್ಲಿ ಈ ವಿಷಯವನ್ನು ಹೆಚ್ಚು ಚರ್ಚೆಯ ವಿಷಯವನ್ನಾಗಿ ಮಾಡಬಹುದಾಗಿದ್ದಿತು. ಈ ವಿಚಾರವಾಗಿ ಉತ್ತಮವಾದ ಚರ್ಚೆ ಮಾಡಬಹುದಾಗಿತ್ತು, ಗಹನವಾದ ವಿಸ್ತೃತವಾದ ಚೆರ್ಚೆಗೆ ಅವಕಾಶವನ್ನು ನೀಡಿ ಶಾಲಾ ಮಕ್ಕಳಲ್ಲಿ ಬಾಹ್ಯಾಕಾಶ ಯಾನದಲ್ಲಿಯ ಅವಕಾಶಗಳ ಬಗ್ಗೆ ಎಚ್ಚು ಬೆಳಕು ಚೆಲ್ಲುವಂತ ಅವಕಾಶವಿದ್ದಿತು. ವಿಜ್ಞಾನಿಗಳನ್ನು ಕರೆಸಿ ಅವರ ಮೂಲಕ ಬಾಹ್ಯಾಕಾಶ ಯಾನದ ಬಗ್ಗೆ , ಗಗನ ನೌಕೆಗಳ ಬಗ್ಗೆ, ಉಪಗ್ರಹ ುಟಾಯಣ ವಾಹನಗಳ ಬಗ್ಗೆ ಚರ್ಚೆ ಇರಬೇಕಿತ್ತು. ಈಗಿನ ಮಕ್ಕೆಳೆ ನಾಳಿನ ಬಾಹ್ಯಾಕಾಶ ತಜ್ಞರು ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಈ ಬಗ್ಗೆ ಒಲವು ಮೂಡಿಸುವಲ್ಲಿ ಮಾಧ್ಯಮಗಳು ಪ್ರಾಮಾಣಿಕ ಯತ್ನವನ್ನು ಮಾಡಬಹುದಗಿದ್ದಿತೇನೋ!

ಆದರೆ ಮಾಧ್ಯಮಗಳು ಪರ ರಾಜ್ಯದ ರಾಜಕಾರಣದ ಬಗ್ಗೆ ಬೆಳಕು ಸೂಸುತ್ತ ಚರ್ಚೆ ಮಾಡುತ್ತಿರುವಾಗ ಮೇಲ್ಕಾಣಿಸಿದ ವಿಷಯ ಅಷ್ಟು ಸಮಂಜಸ ಎಂದು ಮಾಧ್ಯಮಗಳಿಗೆ ತೋರಿರದಿರಬಹುದು. 


ಇಸ್ರೋ ನಿನಗೆ ನನ್ನ ಸಲಾಮು.
ಜೈ ಹಿಂದ್



Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva