ಎನ್.ಎಚ್.ಎಂ ಅಡಿ ಬರುವ ನಿರ್ವಹಣ ಘಟಕಗಳಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆ ಆಧಾರಿತ ಸಿಬ್ಬಂದಿಗಳು ಮತ್ತು ಮೂಲಭೂತ ಸೌಕರ್ಯಗಳು
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ನಿರ್ವಹಿಸುವ ಜಿಲ್ಲಾ ಮತ್ತು ತಾಲೂಕ ಯೋಜನೆ ಘಟಕಗಳ ಗುತ್ತಿಗೆ ಆಧಾರಿತ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ಸೂಕ್ತ ಕೊಠಡಿ ಇಲ್ಲ. ಸ್ವಚ್ಚ ಕುಡಿಯುವ ನೀರಿನ ಸೌಕರ್ಯವಿಲ್ಲ, ಸೂಕ್ತ ಶೌಚಾಲಯವಿಲ್ಲ, ಇದ್ದ ಕಡೆ ಸ್ವಚ್ಚತೆ ಇಲ್ಲ, ಸ್ವಚ್ಚತೆ ಇದ್ದರು ನೀರಿಲ್ಲ, ಆದರೆ ಎಲ್ಲರಿಗೂ ನೆನಪಾಗುವುದು ಡಿ.ಪಿ.ಎಂ/ಬಿ.ಪಿಎಂ.
ಮೊದಲು ಸಿಬ್ಬಂದಿಗಳ ತೀರ ಅವಶ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು. 2005 ರಲ್ಲಿ ಎನ್.ಆರ್.ಎಚ್.ಎಂ ಶುರುವಾದಾಗಲಿಂದಲೂ ಡಿ.ಪಿ.ಎಂ.ಯು/ಬಿ.ಪಿಎಂ.ಯು ಶೆಡ್ ನಲ್ಲಿ, ಉಪಯೋಗಕ್ಕೆ ಭಾರದ ರೂಮಿನಲ್ಲಿ, ಗಾಳಿ ಬೆಳಕು ಇಲ್ಲದ ಚಿಕ್ಕ ರೂಮಿನಲ್ಲಿ ಕೆಲಸ ನಿರ್ವಹಿಸುತ್ತಿರುವುದು ತುಂಬ ಸೋಜಿಗದ ವಿಚಾರ. ಎಲ್ಲರಿಗೂ ವರದಿ ಬೇಕು ಆದರೆ ಗುತ್ತಿಗೆ ಆಧಾರಿತ ಸಿಬ್ಬಂದಿಗಳ ಅವಶ್ಯಕತೆಗಳು ಯಾರಿಗೂ ಬೇಡ.
ಶೌಚಾಲಯಕ್ಕೆ ಹೋಗಿ ತೊಳೆಯಲು ನೀರಿಲ್ಲದಿದ್ದರೆ ಆಗುವ ಅವಮಾನ ಯಾವ ಶತ್ರುವಿಗೂ ಬೇಡ, ಸಿಬ್ಬಂದಿಗೆ ನೀರು ಕೊಡದ ಅಧಿಕಾರಿಗಳು ಜಿಲ್ಲೆಯ ಉದ್ದಾರ ಹೇಗೆ ಮಾಡಿಯಾರು? ಅನುದಾನ ತಮಗೆ ಸಾಲುವುದಿಲ್ಲ ಎನಿಸುತ್ತದೆ.
ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಆದರೆ ಸರ್ಕಾರ ಇದರ ಕಡೆ ಗಮನಹರಿಸಲು ಅವರೇನು ಖಾಯಂ ನೌಕರರೇ?
Comments