ಯಾವ ಮಾಸದಲ್ಲಿ ಮನೆ ಕಟ್ಟಿದರೆ ಯಾವ ಫಲ ಸಿಗುತ್ತದೆ
ಯಾವ ಮಾಸದಲ್ಲಿ ಮನೆ ಕಟ್ಟಿದರೆ ಯಾವ ಫಲ ಸಿಗುತ್ತದೆ ಚೈತ್ರ ಮಾಸದಲ್ಲಿ ಮನೆಯನ್ನು ಕಟ್ಟಿದರೆ ಧನಹಾನಿಯೂ ಮತ್ತು ಮಹಾಭೀತಿಯೂ ಉಂಟಾಗುವದು ವೈಶಾಖ ಮಾಸದಲ್ಲಿ ಶುಭದಾಯಕವು ಜೇಷ್ಠ ಮಾಸದಲ್ಲಿ ಮರಣಕ್ಕೆ ಸಮನಾದ ಭೀತಿಯು ಆಷಾಢ ಮಾಸದಲ್ಲಿ ಮನೆ ಕಟ್ಟಲು ಪ್ರಾರಂಭಿಸಿದರೆ ದನ, ಕರು, ಗೋಮಹಿಷ್ಯಾದಿಗಳ ನಾಶವು ಶ್ರಾವಣದಲ್ಲಿ ಸಂತಾನ ವೃದ್ಧಿಯು ಭಾದ್ರಪದದಲ್ಲಿ ರೋಗೋಪದ್ರಗಳು ಕಾಡುವವು ಆಶ್ವೇಜ ಮಾಸಗಳಲ್ಲಿ ಕಲಹ (ವೈರತ್ವ)ಗಳು ಕಾರ್ತಿಕದಲ್ಲಿ ದ್ರವ್ಯ ಲಾಭವು ಮಾರ್ಗಶಿರದಲ್ಲಿ (ನಾನಾರೀತಿ ಯಿಂದ) ಭಯವು. ಪುಷ್ಯಮಾಸದಲ್ಲಿ ಅಗ್ನಿ ಭೀತಿ ಬಾಧೆಯು ಮಾಘ ಮಾಸದಲ್ಲಿ ಸಂತಾನ ವೃದ್ಧಿಯು, ಫಾಲ್ಗುಣದಲ್ಲಿ ಸಂಪತ್ತು ಐಶ್ವರ (ರತ್ನ)ಗಳ ಲಾಭ ಈ ಪ್ರಕಾರ ಆಯಾ ಮಾಸಗಳಲ್ಲಿ ಈ ಪ್ರಕಾರ ಫಲಾಫಲಗಳುಂಟಾಗುವವು.