ಶ್ರೀಮದ್ ಉಜ್ಜಯಿನಿ ಪೀಠದ 108ನೇ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಜೀವನ ದರ್ಶನ

ಶ್ರೀಮದ್ ಉಜ್ಜಯಿನಿ ಪೀಠದ 108ನೇ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಜೀವನ ದರ್ಶನ ಜಗದಾದಿ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಪರಶಿವನ ಪಂಚಮುಖಗಳಿಂದ ಅವತರಿಸಿದ ಪಂಚಗಣಾಧೀಶ್ವರೇ ಭೂಲೋಕದಲ್ಲಿ ಯುಗಾಂತರದಲ್ಲಿ ಶ್ರೀ ರೇಣುಕಾಚಾರ್ಯ,ಶ್ರೀ ದಾರುಕಾಚಾರ್ಯ, ಶ್ರೀಘಂಟಾಕರ್ಣಚಾರ್ಯ,ಶ್ರೀ ಧೇನುಕರ್ಣಚಾರ್ಯ ಮತ್ತು ವಿಶ್ವಕರ್ಣಾಚಾರ್ಯರೆಂದು ಬೇರೆಬೇರೆಲಿಂಗಗಳಿಂದ ದಿವ್ಯದೇಹಧಾರಿಗಳಾಗಿ ಉದ್ಬಸಿರುತ್ತಾರೆ. ಆ ಪಂಚಾಚಾರ್ಯರೇ ಮುಂದೆ ಕಲಿಯುಗದಲ್ಲಿ ಶ್ರೀ ರೇಣುಕಾರಾಧ್ಯ,ಶ್ರೀ ಮರುಳಾರಾಧ್ಯ, ಏಕೋರಾಮರಾಧ್ಯ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯರೆಂಬ ಹೆಸರುಗಳಿಂದ ಭರತಖಂಡದಲ್ಲಿ ಲಿಂಗೋದ್ವವರಾಗಿ ಅತೀ ಪುರಾತನ ಧರ್ಮವಾದ ವೀರಶ್ವೆವ ಧರ್ಮಾಚಾರ್ಯರು (ಜಗದ್ಗುರು ಪಂಚಾಚಾರ್ಯರು) ಆಗಿ ಉಧ್ವವಿಸಿದರು. ಶ್ರೀ ಶಂಕರಾಚಾರ್ಯರಿಂದ ಅದ್ವೈತ, ರಾಮಾನುಜರಿಂದ ವಿಶಿಷ್ಟಾದ್ವೈತ , ಮಧ್ವಾಚಾರ್ಯರಿಂದ ದ್ವೈತಮತಗಳು ಉದಯಿಸಿದಂತೆ ಶ್ರೀ ರೇಣುಕಾದಿ ಪಂಚಾಚಾರ್ಯರಿಂದ "ಶಿವಾದ್ವೈತ ಅಂದರೆ "ವೀರಶ್ವೆವ" ಧರ್ಮ ಭೂತಲದಲ್ಲಿ ಸ್ಠಾಪನೆಯಾಯಿತು. ಅಖಂಡ ಭಾರತದ ನಾನಾ ಭಾಗಗಳಾದ ಬಾಳೆÉಹೊನ್ನೂರು, ಉಜ್ಜೈಯಿನಿ, ಕೇದಾg, ಶ್ರೀಶೈಲ ಮತ್ತು ಕಾಶಿ ಸ್ಥಳಗಳಲ್ಲಿ ಪೀಠಗಳನ್ನು ಸ್ಥಾಪನೆಗೈದು ಮಾನವಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಇಂಥ ಪಂಚಪೀಠಗಳಲ್ಲಿ ಒಂದಾದ ಉಜ್ಜೈಯಿನಿ ಪೀಠವು ಸದ್ಧರ್ಮ ಸ್ಥಾನವಾಗಿದ್ದು, ಇದು ಮೂಲತಃ ಮಧ್ಯಪ್ರದೇಶದ ಮಾಳವದ ಮಹಾಕಾಲ ಉಜ್ಜೈಯಿನಿಯಲ್ಲಿತ್ತು, ಕ್ಷಿಪ್ರಾ ನದಿಯ ದಂಡೆಯ ಮೇಲೆ ಇರುವ ಈಗಿನ ಸಿದ್ಧವಟ ಕ್ಷೇತ್ರವೇ ಮೂಲಪೀಠ. ಅಲ್ಲಿನ ಆಲದಮರದ ಹತ್ತಿರವಿರುವ ಈ ಸದ್ಧರ್ಮಸಿದ್ಧೇಶ್ವರಲಿಂಗದಿಂದ ಕಲಿಯುಗದಲ್ಲಿ ಶ್ರೀ ಮರುಳಸಿದ್ಧ ಜಗದ್ಗುರುಗಳು ಉಧ್ವವಗೊಂಡರೆಂದು ಆಗಮಗಳು ಸಾರುತ್ತಿವೆ. ಆಕಾಲದಲ್ಲಿ ಜೈನ ಅರಸರು ರಾಜ್ಯವನ್ನು ಆಳುತಿದ್ದರು,ಅವರ ಧಾರ್ಮಿಕ ದಬ್ಭಾಳಿಕೆಯ ಉಪಟಳಗಳನ್ನು ಸಹಿಸಿಕೊಳ್ಳಲಾರದೇ ಬೇಸತ್ತು, ತಮ್ಮ ಸಿದ್ಧಾಂತ ಸ್ಥಾಪನೆಗಾಗಿ ದಕ್ಷಿಣಕ್ಕೆ ವೀರಶೈವ ಧರ್ಮದ ತತ್ವಪರಂಪರೆಗಳನ್ನು ಪ್ರಸಾರಗೈಯುತ್ತ ಆಗಿನ ಜಗದ್ಗುರುಗಳಾದ ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಲಸೆ ಬಂದು ಇಲ್ಲಿ ತುಂಗಭದ್ರಾ ನದಿಯ ಸಮೀಪದಲ್ಲಿರುವ ಚಿಕ್ಕಗ್ರಾಮವಾದ ಉಜ್ಜೈಯಿನಿ ಎಂಬಲ್ಲಿ ತಮ್ಮ "ಸದ್ಧರ್ಮಪೀಠ'ವನ್ನು ಮರುಸ್ಢಾಪಿಸಿದರು. ಈ ಪೀಠವನ್ನು ಕುರಿತು ಮೂಲಪೀಠವಾದ ಮಧ್ಯಪ್ರದೇಶದ ಉಜ್ಜೈಯಿನಿ ಮತ್ತು ಈಗಿನ ಕೂಡ್ಲಗಿ ತಾಲೂಕಿನ ಉಜ್ಜೈಯಿನಿ ಪೀಠದ ಬಗ್ಗೆ ಇಲ್ಲಿಯ ವರೆಗೆ 19 ಶಿಲಾಶಾಸನಗಳು ಲಭ್ಯವಾಗಿವೆ ಮತ್ತು ಇನ್ನು ಎಷ್ಟೋ ಶಿಲಾಶಾಸನಗಳ ಸಂಶೋಧನೆಗಾಗಿ ಇತಿಹಾಸಕಾರರಿಂದ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಈ ಪೀಠವು 2800 ಶಾಖಾಮಠಗಳನ್ನು ದೇಶದಾದ್ಯಂತ ಹೊಂದಿದ್ದು, ಸದ್ಯ 6000 ಮಠಗಳು ಚಾಲ್ತಿಯಲ್ಲಿರುತ್ತಿವೆ. ಈಗ ದೊರೆತ 19 ಶಾಸನಗಳಲ್ಲಿ ಕ್ರತಯುಗದಲ್ಲಿ ದ್ವೈಕ್ಷರ, ತೇತ್ರಾ ಯುಗದಲ್ಲಿ ದ್ವಿವಕ್ತ್ರ, ದ್ವಾಪರಯುಗದಲ್ಲಿ ದಾರುಕ, ಕಲಿಯುಗದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರಾಗಿ ಅವತರಿಸಿದರೆಂದು ಶಿಲಾಶಾಸನಗಳಿಂದ ತಿಳಿದುಬರುತ್ತಿದೆ ಮತ್ತು "ವೀರಶ್ವೆವ ಸದಾಚಾರ ಸಂಗ್ರಹ"ದಲ್ಲಿ ಚಾತುರ್ಯುಗಗಳಲ್ಲಿ ಈ ಅವತಾರಗಳ ಬಗ್ಗೆ ವಿವರಣೆಗಳು ಲಭ್ಯವಾಗಿವೆ.ಇಲ್ಲಿಯ ವರೆಗೆ ಶ್ರೀ ಪೀಠದ ಗುರುಪಟ್ಟವಲ್ಲರಿಯಲ್ಲಿ 112 ಜಗದ್ಗುರುಗಳು ಅಧಿಕಾರ ವಹಿಸಿಕೊಂಡು ಬಂದ ಪರಂಪರೆಗಳಿವೆ, ಇವರುಗಳಿಗೆ 72 ಬಿರುದಾವಳಿಗಳಿವೆ. ಉಜ್ಜೈಯನಿಯಲ್ಲಿ ಶ್ರೀ ಮರುಳಸಿದ್ಧೇಶ್ವರ ಹೆಸರಿನಿಂದ ಶಿವಾಲಯವಿದ್ದು,ದಕ್ಷಿಣೋತ್ತರವಾಗಿ ಕಟ್ಟಲ್ಪಟ್ಟಿದೆ,ಉತ್ತರಕ್ಕೆ ಮುಖವಿದ್ದು,ಮೂರುಕಡೆ ಪ್ರವೇಶದ್ವಾರಗಳಿವೆ. ಈ ಉಜ್ಜೈಯಿನಿ ಸದ್ಧರ್ಮ ಪೀಠದ 108ನೇ ಜಗದ್ಗುರುಗಳಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಕಿರುಪರಿಚಯ ಹಾಗೂ ಮಹಾಸಾಧನೆ ಬಗ್ಗೆ ತಿಳುವಳಿಕೆಗಳನ್ನು ಮೂಡಿಸುವುದಕೊಸ್ಕರ ಈ ಸಂಕ್ಷಿಪ್ತ ಲೇಖನ. ಜನನ ಹಾಗೂ ಬಾಲ್ಯ: ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಎಂಬ ಹಳ್ಳಿಯಲ್ಲಿ ಗುರುಸ್ಥಲ ಹಿರೇಮಠದ ಪುಣ್ಯ ದಂಪತಿಗಳಾದ ಶ್ರೀ ಚೆನ್ನಬಸವಾರ್ಯ(ಚೆನ್ನಬಸಯ್ಯ) ಹಾಗೂ ಶ್ರೀಮತಿ ಗುರುಸಿದ್ಧಾಂಬೆ(ಗುರುಸಿಧ್ದಮ್ಮ)ಅವರಿಗೆ ಇಬ್ಬರು ಮಕ್ಕಳು,ಅವರಲ್ಲಿ ಮೊದಲನೆಯವ ಮರುಳಾರಾಧ್ಯ ಎರಡÀನೆಯವ ಸಿದ್ಧಲಿಂಗ,ಶ್ರೀ ಸಿದ್ಧಲಿಂಗನು ಶ್ರೀ ಶಾಲಿವಾಹನ ಶಕೆ 1812 ನೇ ವಿಕೃತಿನಾಮ ಸಂವತ್ಸರದ ಮಾಘ ಬಹುಳ ಸಪ್ತಮಿ ತಿಥಿಯಂದು ಅಂದರೆ ಕ್ರಿ.ಶ 1890 ನೇ ಇಸ್ವಿಫೆಬ್ರುವರಿ ತಿಂಗಳ 1ನೇದಿನಾಂಕದಂದು ರವಿವಾರ ರಾತ್ರಿ ಅವರ ಜನನವಾಯಿತು,ತಾಯಿ ಗುರುಸಿದ್ಧಮ್ಮನವರು ಮಗನನ್ನು ತೊಟ್ಟಿಲಲ್ಲಿ ಮಲಗಿಸಿ, ಗುರುಗಳಿಂದ ಲಿಂಗಧಾರಣ ಮತ್ತು ನೆರೆದ ಮುತ್ಯೆದೆ ಹೆಣ್ಣುಮಕ್ಕಳಿಂದ ನಾಮಕರಣ ಕ್ರಿಯೆಗಳನ್ನು ಪೂರೈಸಿ, ಮಗನಿಗೆ "ಸಿದ್ಧಲಿಂಗೇಶ" ಎಂದು ನಾಮಕರಣ ಮಾಡಿದರು." ಭವಿಷ್ಯದ ಗುರುಗಳ ಲಕ್ಷಣಗಳನ್ನು ಅವರ ಬಾಲ್ಯದಲ್ಲಿ ನೋಡು" ಎಂಬ ವಾಕ್ಯದಂತೆ ಸಿದ್ಧಲಿಂಗನ ಆಟಪಾಟಗಳೇ ಬೇರೆ, ರುದ್ರಾಕ್ಷಿ,ಭಸ್ಮ, ಲಿಂಗದಕಾಯಿ, ಹೂಪತ್ರಿ, ಗಂಟೆ ಜಾಗಟೆ ಸಿಕ್ಕರೆ ಸಾಕು, ಮೈದುಂಬಿ ಕುಣಿದುಪ್ಪಳಿಸಿ ಆಡುತಿದ್ದನು, ಪ್ರಾಣಿಪಕ್ಷಿಗಳ ಮೇಲೆ ಎಲ್ಲಿಲ್ಲದ ದಯೆ,ಸುತ್ತಮುತ್ತಲಿನ ಗಿಡಗಂಟಿಗಳ ನೆರಳಲ್ಲಿ ಕುಳಿತು, ಧ್ಯಾನಸಕ್ತನಾಗಿ ಜೊತೆಗೆ ಒಬ್ಬನೇ ಆಡುವ ಆಟಪಾಟಗಳು ತಂದೆತಾಯಿಗಳಿಗೆ ಮತ್ತು ಹಳ್ಳಿಯ ಜನರಿಗೆ ವಿಚಿತ್ರವಾಗಿ ತೋರುತಿದ್ದವು. ಈ ಮಧ್ಯ ಸಿದ್ಧಲಿಂಗೇಶನಿಗೆ ಅಕ್ಷರಜ್ಞಾನ ಅಂದರೆ "ಓಂ"ಕಾರ ದರ್ಶನವನ್ನು ಮಾಡಿಸಲಾಯಿತು. ಬಂಗಾರಕ್ಕನಹಳ್ಳಿಯ ಸಮೀಪದಲ್ಲಿರುವ ಚಿಕ್ಕಗೊಂಡನಹಳ್ಳಿ (ಚಿಕ್ಕನಳ್ಳಿ)ಯಲ್ಲಿ ಪವಾಡ ಪುರುಷರಾದ ಕೆಂಡಪ್ಪಸ್ವಾಮಿಗಳೆಂಬುವವರು ಪ್ರತಿದಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿಯ ಜಂಗಮರನ್ನು ಆಹ್ವಾನಿಸಿ, ಅವರ ಪರಂಪರೆಯಾದ "ನಿತ್ಯಹೋಳಿಗೆ" ಪ್ರಸಾದವನ್ನಿತ್ತು, ದಾನದಕ್ಷಿಣೆಗಳನ್ನಿತ್ತು ಸಂತೃಪ್ತಿ ಪಡಿಸುವದು ಅವರ ಸಂಪ್ರದಾಯ. ಅದರಂತೆ ಒಮ್ಮೆ ಬಂಗಾರಕ್ಕನಹಳ್ಳಿಯ ಚನ್ನಬಸಯ್ಯನವರನ್ನು ಆಹ್ವಾನಿಸಲಾಗಿ,ಅವರು ತಮ್ಮ ಇಬ್ಬರು ಮಕ್ಕಳಾದ ಮರುಳಾಧ್ಯ ಹಾಗೂ ಸಿದ್ಧಲಿಂಗರ ಜೊತೆಗೆ ಕುದುರೆಯ ಮೇಲೆ ಪ್ರಯಾಣ ಬೆಳೆಯಿಸಿದರು, ದಾರಿಯಲ್ಲಿ ಚಿಕ್ಕನಳ್ಳಿ ಸಮೀಪ ಶ್ರೀ ಕೆಂಡದಸ್ವಾಮಿಗಳನ್ನು ಕಂಡು ಪರಸ್ಪರ ಶರಣಾರ್ಥಿಗಳನ್ನು ಹಂಚಿಕೊಂಡರು, ಹಿರಿಯ ಮಗ ಚಿ.ಮರುಳರಾಧ್ಯ ತಂದೆಯ ಅಪ್ಪಣೆಯಂತೆ ಗುರುಗಳನ್ನು ನಮಸ್ಕರಿಸಿದ, ಆದರೆ ಚಿಕ್ಕಮಗ ಚಿ ಸಿದ್ಧಲಿಂಗನು ಮಾತ್ರ ಕುದುರೆಯನ್ನು ಬಿಟ್ಟು ಕೆಳಗಿಳಿಯದೇ ಹಟಮಾಡಿದನು, ತ್ರಿಕಾಲಜ್ಞಾನಿಯಾದ ಕೆಂಡಪ್ಪಸ್ವಾಮಿಗಳು ಬಾಲಕನ ಸಮೀಪಬಂದು ಹರ್ಷಿತರಾಗಿ," ನೀನು ಜಗತ್ತನ್ನು ಆಳುವ ದೊರೆ ನನಗಿಂತಲೂ ನೀನು ದೊಡ್ಡ ಸ್ಥಾನವನ್ನು ಪಡೆಯುತ್ತಿ" ಎಂದು ಉದ್ಗಾರತೆಗೆದರು. ಶ್ರೀ ಸಿದ್ಧಲಿಂಗೇಶನು ಯಾವಾಗಲೂ ತನ್ನಷ್ಡ್ಟಕ್ಕೆ ತಾನು ಇರುತ್ತಿದ್ದನು, ಆದರೆ ಮೂಗಿನ ತುದಿಯ ಮೇಲೆ ಕೋಪ, ಹೀಗಾಗಿ ಯಾರು ಅವನ ತಂಟೆಗೆ ಹೋಗುತ್ತಿರಲಿಲ್ಲ, ಆತನ ಸೀಮಿತ ನುಡಿಗಳು ತಂಗಾಳಿಯಂತೆ ಕೇಳಿದವರ ಮನ ಮಡಿಯಾಗಿರುತ್ತಿದ್ದವು. ಶ್ರೀಸಿದ್ಧಲಿಂಗನಿಗೆ ವಯಸ್ಸು 12 ತುಂಬಿದಮೇಲೆ ವೀರಶ್ವೆವ ಧಾರ್ಮಿಕ ಪರಂಪರೆಗಳಂತೆ "ಶಿವದೀಕ್ಷಾ ಅಯ್ಯಾಚಾರದ "ಸಂಸ್ಕಾರವಾದ ಮೇಲೆ ಯಾವಗಲೂ ತ್ರಿಕಾಲ ಶಿವಧ್ಯಾನದಲ್ಲಿ ಮುಳುಗಿರುತ್ತಿದ್ದನು. ತಮ್ಮೂರಿನ ಸಮೀಪದ ಪಟ್ಟಣವಾದ ಜಗಳೂರು ಶಿಕ್ಷಣಕೇಂದ್ರವಾಗಿತ್ತು, ಶ್ರೀ ಸಿದ್ಧಲಿಂಗನು ಅಲ್ಲಿಯೇ ಕನ್ನಡ ,ಸಂಸ್ಕøತ,ಸಂಗೀತ,ಯೋಗ,ಮತ್ತು ಪ್ರಾಣಾಯಾಮಗಳನ್ನು ಕಲಿಯ ತೊಡಗಿದನು, ಸದಾ ಏಕಾಂತವನ್ನು ಪ್ರೀತಿಸುತ್ತಿದ್ದ,ಈತ ಲೋಕಾಂತವನ್ನು ಮರೆತು ದುಃಖದ ಮಡುವಾದ ಸಂಸಾರದ ಬೇಲಿಯನ್ನು ಜಿಗಿದು,ಸುಖದ ದಾರಿ ಪಾರಮಾರ್ಥದ ಸಂಸ್ಕಾರದಲ್ಲಿ ಮುಳುಗಿ ಹೋದನು.ಒಂದು ಸಲ ತಮ್ಮುರಿಗೆ ಶ್ರೀ ಮದುಜ್ಜೈಯಿನಿ ಸದ್ಧರ್ಮಸಿಂಹಾಸನಾಧೀಶ್ವರ ಶ್ರೀ.ಶ್ರೀ.ಶ್ರೀ.1008 ಜಗದ್ಗುರು ಮರುಳಸಿದ್ಧರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಆಗಮಿಸುವ ಸಂದರ್ಭ ಬಂದಿತು, ಊರಲ್ಲಿಯ ಹಿರೇಮಠದಲ್ಲಿ ಶ್ರೀಪಾಂಗಳವರನ್ನು ಬರಮಾಡಿಕೊಳ್ಳಲು ಊರಿಗೆ ಊರೇ ಜನಜಾತ್ರೆ ನೆರೆದಿತ್ತು.ಆದಿನ ರಾತ್ರಿ ಓಡಾಡುತ್ತಿರುವ ಸಿದ್ಧಲಿಂಗೇಶನನ್ನು ಕಂಡು ಶ್ರೀಗಳು ಈತ ಯಾರು ಎಂದು ಕೆಲಹಿರಿಯರನ್ನು ಕೇಳಲಾಗಿ,ಅವರು ಆ ಬಾಲಕನನ್ನೆ ಕೇಳಿರೆಂದು ಉತ್ತರಿಸಿದರು,ಕೊನೆಗೆ ಶ್ರೀಪಾದಂಗಳು ಆತನನ್ನೆ ಕರೆದು "ನೀನು ಯಾರು? ಉತ್ತರವಾಗಿ ಬಾಲಕನು "ಬುದ್ಧಿ ನಾನು ಈಪ್ರಶ್ನೆಯನ್ನೆ ತಮ್ಮನ್ನು ಕೇಳುವವನಿದ್ದೆ ಎಂಬ ಉತ್ತರಕ್ಕೆ ಜಗದ್ಗುರುಗಳು ನಿಬ್ಬೆರಗಾಗಿ ಆ ಬಾಲಕನ ತಂದೆ ಚನ್ನಬಸಯ್ಯನವರನ್ನು"ಈ ನಿಮ್ಮ ಮಗ ಅವನು ಜಗವನ್ನು ಬೆಳಗಲು ಉದ್ಭವಿಸಿರುವ ಸೂರ್ಯನಗಿಂತಪ್ರಖರವಾದ ಬೆಳಕು,ಅದನ್ನು ನಮ್ಮ ಸಂಸ್ಕಾರದ ಜೊಳಿಗೆಗೆ ಹಾಕು ಎಂದು ಆಜಾÐಪಿಸಿದರು,,ಶ್ರೀ ಚನ್ನಬಸಯ್ಯನವರು ಆನಂದಭಾಷ್ಪಗಳಿಂದ ಭಾವೋದ್ರಿಕರಾಗಿ ತಮ್ಮ ಸಾರ್ಥಕ ಕಂದನನ್ನು ಸ್ವಾರ್ಥಕ್ಕೆ ಬಳಿಸದೇ ಪಾರಮಾರ್ಥಕ್ಕೆ ಕೊಡಲು ನಿಶ್ಚಯಿಸಿದರು.ಸದ್ಗುರು ಪೀಠದಲ್ಲಿ ಸಂಸ್ಕಾರಗೊಂಡ"ಸ್ವಾತಿ ಮಳೆಯ ಹನಿ ಸ್ವಾಮಿ ಪಾದದಲ್ಲಿ ಹೊಳೆಯುವ ಮುತ್ತು ಅಗಿ ಬೆಳೆಯುತ ್ತಹೋಯಿತು. ಶ್ರೀ ಸಿದ್ಧಲಿಂಗೇಶನಿಗೆ 16 ವರುಷಗಳ ಹದಿಪ್ರಾಯದಲ್ಲಿ ಶ್ರೀ ಉಜ್ಜೈಯಿನಿ ಪೀಠಕ್ಕೆ ಉತ್ತರಾಧಿಕಾರಿ ಸ್ಥಾನಕ್ಕೆ É್ಕಅವರ ಹೆಸರು ಪ್ರಸ್ತಾವನೆಗೆ ಬಂದು,ಅವರನ್ನೇ ಚರಪಟ್ಟಾಧಿಕಾರಿಂiÀiನ್ನಾಗಿ ಮಾಡಲು ಎಲ್ಲ ಪೀಠಾಧಿಪತಿಗಳು ಹಾಗೂ ಧರ್ಮದ ಮುಖಂಡರು ನಿರ್ಣಯಿಸಿದರು,ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ಅವರಿಗೆ ಪಟ್ಟಾಧಿಕಾರದ ಯೋಗ ಬರುವದು,ತೀರಾ ವಿರಳ.ಆಗಿನ ಜಗದ್ಗುರುಗಳಾದ ಶ್ರೀ ಮರುಳಸಿದ್ಧ ಶಿವಾಚಾರ್ಯರ ಇಚ್ಛೆಯಂತೆ, ಆಗಿನ ಚರಪಟ್ಟಾಧಿಕಾರಿಗಳಾದ ಶ್ರೀ,ಶ್ರೀ.ಶ್ರೀ ಜಗದ್ಗುರು ಚನ್ನಬಸವಶಿÀವಾಚಾರ್ಯ ಅಪೇಕ್ಷೆಯಂತೆ üüದೈವದವರ ಅಭಿಲಾಷೆಯಂತೆ ಮತ್ತು ಬಳ್ಳಾರಿ ಜಿಲ್ಹೆಯ ಕೂಡ್ಲಿಗಿ ತಾಲೂಕಿನ ತುಂಬರಗುದ್ದಿ ಗ್ರಾಮದ ದಿವ್ಯ ಪಂಡಿತರು, ತ್ರಿಕಾಲಜ್ಞಾನಿಗಳಾದ ವೇ!! ಮು !! ಶ್ರೀ ವಿರುಪಾಕ್ಷಶಾಸ್ತ್ರಿಗಳು ಕೂಡಿಕೊಂಡು ಶ್ರೀ ಸಿದ್ಧಲಿಂಗೇಶನಿಗೆ ಚರಪಟ್ಟಾಧಿಕಾರವನ್ನು ಮತ್ತು ಹಿರಿಯ ಜಗದ್ಗುರುಗಳಾದ ಶ್ರೀ.ಶ್ರೀ.ಶ್ರೀ ಚನ್ನಬಸವ ಶಿವಾಚಾರ್ಯರಿಗೆ ಸ್ಥಿರಪಟ್ಟಾಧಿಕಾರವನ್ನು ಕೊಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ದಿನಾಂಕ 13-5-1906 ನೇ ಇಸ್ವಿ ಭಾನುವಾರ ಅಂದರೆ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನಶೆಕೆ 1828 ನೇ ಪರಾಭವನಾಮ ಸಂವತ್ಸರದ ವೈಶಾಖ ಬಹುಳ ಪಂಚಮಿ ಶುಭ ಮುಹೂರ್ತದಲ್ಲಿ ವೀರಶೈವ ಧರ್ಮದ ವಿಧಿವಿಧಾನಗಳನ್ವಯ ರಾಜೋಚಿತ ಪಟ್ಟಾಧಿಕಾರಮಹೋತ್ಸವ ನಡೆಯಿತು. ಕೇವಲ 16 ನೇ ವರುಷದಲ್ಲಿ ಶ್ರೀ ಉಜ್ಜೈಯಿನಿ ಮಹಾಪೀಠದ ಚರಪಟ್ಟಾಧಿಕಾರವನ್ನು ಸಮಾಜದ ಧಾರ್ಮಿಕ, ಸಾಂಪ್ರದಾಯಿಕ ಹಾಗೂ ಪಾರಂಪರಿಕ ಭಾರಗಳನ್ನು,ಇದೂಅಲ್ಲದೇ ಧಾರ್ಮಿಕ ಆಂತರಿಕ ಹಲವು ದುಷ್ಟಶಕ್ತಿಗಳ ಪ್ರಭಾವಗಳನ್ನುಮೆಟ್ಟಿನಿಂತು,ಶ್ರೀ ಮಠದ ಜವಾಬ್ದಾರಿಗಳನ್ನು ನಿರ್ವವಹಿಸುವದು ಅತೀ ಕಷ್ಟದ ಕೆಲಸವೆಂದು ಬೇರೆ ಹೇಳುವದು ಅನಾವಶ್ಯ. ಶ್ರೀ ಸಿದ್ಧಲಿಂಗ ಗುರುಗಳು ತಮ್ಮ ಚಿಕ್ಕವಯಸ್ಸಿನಲ್ಲಿ ಸಂಸ್ಕøತ ಧಾರ್ಮಿಕ ಸಾಕಷ್ಟು ವಿಷಯಗಳನ್ನು ಅಭ್ಯಶಿಸುವದು ಅಸಾಧ್ಯವಾದ ಕಾರಣ ಅವುಗಳನ್ನು ಮುಂದುವರಿಸುವದು ಅತೀ ಅವಶ್ಯವಾಗಿತ್ತು.ಈ ದೆಶೆಯಲ್ಲಿ ಗೊಂಡಬಾಳದ ವೇ! ಮೂ!ಬಸವಪ್ಪಶಾಸ್ತ್ರಿಗಳು ಮತ್ತು ಉಜ್ಜೈಯಿನಿಯ ವೇÀ!!ಬಿ.ಎಂ.ಗುರುಸಿದ್ಧಶಾಸ್ತ್ರಿಗಳು ತೀರಾ ಆಸಕ್ತಿವಹಿಸಿ ಶ್ರೀಗಳನ್ನು ಒಬ್ಬ ಪಂಡಿತಪಾಮರರನ್ನಾಗಿ ಮಾಡಲು ಆ ಇಬ್ಬರ ಪರಿಶ್ರಮ ತೀರಾ ಶ್ರೇಷ್ಟವಾದದ್ದು.ಶ್ರೀ ಪೀಠದ ಚರ ಹಾಗೂಸ್ಥಿರಾಸ್ತಿಗಳಮಾಹಿತಿಬಗ್ಗೆ,ಶ್ರೀಮರುಳಸಿದ್ಧೇಶ್ವರದೇವಾಲಯದಜಾವಿಧಿವಿಧಾನ,ಧಾರ್ಮಿಕ,ಸಾಂಸ್ಕøತಿಕ,ಸಾಮಾಜಿಕ,ಆರ್ಥಿಕ,ಸಾಹಿತ್ಯಿಕವಿವರಗಳು,ಪೀಠದ ವಿಸ್ತಾರ ಕುರಿತು, 9 ಪಾದಗಟ್ಟೆಗಳ ಬಗ್ಗೆ ಹಾಗು ವೀರಶ್ವೆವದ ಇತಿಹಾಸ,ಪಂಚಪೀಠಗಳ ಹಾಗೆಯೇ ಪೀಠಾಚಾರ್ಯರ ಪರಂಪರೆ ಇವೆಲ್ಲ ವಿಷಯಗಳನ್ನು ಕುರಿತು ಶ್ರೀಗಳಿಗೆ ತಿಳಿಸುವ ಎಲ್ಲ ವಿದ್ವಾಂಸರ ಜೊತೆಗೆ ಶ್ರೀ ಮಠದ ಕಾರಭಾರಿಗಳಾದಶ್ರೀ ಜಿ.ಎಂ.ಸಿದ್ಧಯ್ಯನವರ ಪರಿಶ್ರಮಗಳು ತೀರಾ ಶ್ಲಾಂಘನೀಯವಾದವುಗಳು. ವೀರಶ್ವೆವ ಧರ್ಮದ ದಾರಿದೀಪವಾದ"ಶ್ರೀ ಸಿದ್ಧಾಂತ ಶಿಖಾಮಣ Â"ಗ್ರಂಥದ ಅಧ್ಯಯನ ನಿರಂತರವಾಗಿ ಸಾಗಿತು,ವೇ!! ಬಸವಪ್ಪಶಾಸ್ತ್ರೀ ಮತ್ತು ವೇ!! ಗುರುಸಿದ್ಧಶಾಸ್ತ್ರಿಗಳೊಂದಿಗೆ ಊರಹೊರಗಿನ ಪ್ರಶಾಂತ ವಾತಾವರಣದಲ್ಲಿ ಶ್ರೀಗಳ ಪಾಠಕ್ರಮಗಳು ಅವ್ಯಾಹಿತವಾಗಿ ನಡೆಯುತ್ತಿದ್ದವು,ಅವರ ಸಹಜ ಹಾಗೂ ತರ್ಕದ ನುಡಿಗಳು, ಚಿಕಿತ್ಸಿಕ ಬುದ್ಧಿ, ಜ್ಞಾನಧಾರಣ, ದಿಟ್ಟತನ, ಯೋಗ, ಧ್ಯಾನಲಿಂಗಾ ನಂದಾನುಷ್ಠಾನಗಳು ಈ ವರೀರ್ವರನ್ನು ಆಶ್ಚರ್ಯಗೊಳಿಸುತಿದ್ದವು ಪ್ರತಿದಿನ ಬ್ರಾಹ್ಮೀಮಹೋರ್ತದಲ್ಲಿ ಎದ್ದು, ಯೋಗಾಸನ ಪ್ರಾಣಾಯಾಮಗಳ ಜೊತೆಗೆ, ಸಂಸ್ಕøತ ಗ್ರಂಥಗಳ ಅಧ್ಯಯನಗಳು ನಡೆಯುತ್ತಿದ್ದವು. ಪವಾಡ ಪುರುಷ ಶ್ರೀ ಸಿದ್ಧಲಿಂಗೇಶ: ಶ್ರೀಗಳ ಪೂರ್ವಾಶ್ರಮದ ಊರು ಬಂಗಾರಕ್ಕನಹಳ್ಳಿಭಕ್ತರಿಂದಊರಿಗೆಬಂದಆಮಂತ್ರಣದಮೇರೆಗೆ,ತಮ್ಮೂರಿಗೆಜÀಯಮಾಡಿಸಿದರು.ಅಲ್ಲಿಯ ಹಳ್ಳಿಯಲ್ಲಿ ಮಳೆಯಿಲ್ಲದೇ ಬರಗಾಲಕ್ಕೆ ತುತ್ತಾಗಿದ್ದರು, ಭಾವಿ, ಹೊಳೆಹಳ್ಳಗಳಲ್ಲಿ ಒಂದು ತೊಟ್ಟು ನೀರಿರಲಿಲ್ಲಾ, ಶ್ರೀಗಳು ಅಲ್ಲಿಯ ಪರಿಸ್ಥಿತಿಯನ್ನು ಮನಗಂಡು ಪೂಜಾ ವಿಧಿವಿಧಾನಗಳೊಂದಿಗೆ ಅನುಷ್ಠಾನದಲ್ಲಿ ಮಗ್ನರಾದರು.ಕತ್ತಲಾಗುತ್ತ ಬಂತು,ಜುಳು ಜುಳು ಎಂದು ನೀರು ಭಾವಿಯಲ್ಲಿ ಚಿಮ್ಮುತ್ತಿರುವ ಸಪ್ಪಳ ಕೇಳಿ ನೆರೆದ ಜನರೆಲ್ಲ ಹರ್ಷಿತರಾಗಿ ಕುಣಿದುಕುಪ್ಪಳಿಸಿದರು. 1920-21 ನೇ ಇಸ್ವಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮಾರಕವಾದಂತಹ ಬರಬಿದ್ದಿತು, ಎಲ್ಲಿನೋಡಿದಲ್ಲೆಲ್ಲಾ ನೀರು ಆಹಾರಕ್ಕಾಗಿ ಆಹಾಕಾರ, ದನಕರುಗಳಿಗೆ ತಿನ್ನಲು ಮೇವು ಇಲ್ಲದೇ ಜೀವನ ಬಹಳ ಕಠಿಣವಾಯಿತು, ರೈತರು, ಜನಸಾಮಾನ್ಯರು ಹೊಟ್ಟೆಪಾಡಿಗಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವ ಪರಿಸ್ಥಿತಿ ಬಂದೊಗಿತು,ಇಂತಹ ಸಂದಿಗ್ಧ ಸ್ಥಿತಿಯು ಶ್ರೀಗಳನ್ನು ಬಳ್ಳಾರಿಯತ್ತ ಪ್ರಯಾಣ ಬೆಳೆಸಬೇಕಾಯಿತು,ನೊಂದಜನರು ಅವರ ಆಗಮನದಿಂದ ಹರ್ಷಿತರಾಗಿ ತಮ್ಮ ಅಳಿಲನ್ನುತೋಡಿಕೊಂಡು, ಕಾಪಾಡುವಂತೆ, ಬೇಡಿಕೊಂಡರು. ಕರುಣಾನಿಧಿಯಾದಶ್ರೀ ನೆರೆದ ಜನಸ್ತೋಮವನ್ನು ಮನವಲಿಸಿ,ಸಿಕ್ಕಷ್ಟು ಪದಾರ್ಥಗಳಲ್ಲಿಯೇ ಅನ್ನಸಂತರ್ಪಣೆಯನ್ನು ಮಾಡಲು ನಿರ್ಧರಿಸಿದರು. ಆದರೆ ಕಲಿಯುಗಕಲ್ಪತರಾದ ಶ್ರೀಗಳ ಆಶೀರ್ವಾದಗಳೊಂದಿಗೆ,ಅನ್ನಪ್ರಸಾದ ರಾಶಿರಾಶಿಯಲ್ಲಿ ತಯಾರಾಗಿತ್ತು,ಅದನ್ನು ನೋಡಿ ಜನ ನಿಬ್ಬೆರರಾದರು. ಆ ಶುಭದಿನ ಅಂದರೆ 4-8-1921 ರಂದು 10 ಗಂಟೆಗೆ ದಾಸೋಹದೆಡೆಗೆ ಸನ್ನಿಧಿಯವರು ಬಂದು ಅನ್ನಪ್ರಸಾದದಲ್ಲಿ "ಓಂ"ಕಾರ ಬರೆದು,ಪ್ರಸಾದವನ್ನು ವಿನಿಯೋಗಿಸಲು ಆಜ್ಞೆಮಾಡಿ,ತಾವು ಮೇಘರಾಜನ ಪ್ರಾರ್ಥನೆಯಲ್ಲಿ ಅನುಷ್ಠಾನಗೈದರು,ಆಗಸದಲ್ಲಿ ಒಂದು ಸ್ವಲ್ಪು ಮೋಡಗಳ ಸುಳಿವೇ ಇರಲಿಲ್ಲ,ಶ್ರೀಗಳು ತಮ್ಮ ದಿವ್ಯದೃಷ್ಠಿಯಿಂದ ಆಕಾಶ ಕಡೆಗೆ ನೋಡಲು,ಕ್ಷಣಾರ್ದದಲ್ಲಿಯೇ ಮೋಡಗಳೆಲ್ಲಾ ಶೇಖರಣೆಯಾಗಿ ಜಲಪ್ರಳಯವಾಗುವಂತೆ ಮಳೆ ಜೋರಾಗಿ ಸುರಿಯಿತು,ಬಳ್ಳಾರಿ ಪ್ರಾಂತದಜನಸ್ತೋಮವೆಲ್ಲಾ ಶ್ರೀಗಳಿಗೆ ಜೈಜೈಕಾರ ಹಾಕುತ್ತ ಗುಣಗಾನ ಮಾಡಿದರು. ಜಗದ್ಗುರುಗಳಿಗೆ ಕೃಷಿಯಲ್ಲಿ ಬಹಳ ಆಸಕ್ತಿ,ತಾವೇ ಸ್ವತಃ ನೇಗಿಲು ಹಿಡಿದು ಊಳುತ್ತಿದ್ದರು .ಒಂದು ಸಲ ಮಠದ ರೈತ ರಾಮಪ್ಪ ಹೊಲದಲ್ಲಿ ರೆಂಟೆ ಹೊಡೆಯುತ್ತಿದ್ದ, ಆ ಸಮಯದಲ್ಲಿ ಆತನಿಗೆ ತೀವ್ರ ಚಳಿಜ್ವರ ಬಂದರೂ ಲೆಕ್ಕಿಸದೇ,ಗುರುಸೇವೆಯನ್ನು ನಿಲ್ಲಿಸಬಾರದೆಂಬ ಸಂಕಲ್ಪದಿಂದ ಕೆಲಸವನ್ನು ಮುಂದುವರೆಸಿದ್ದ, ಆತನ ಶೃದ್ಧಾನಿಷ್ಠೆಯನ್ನು ಗಮನಿಸಿದಶ್ರೀಗಳು ಆತನಿಗೆ ಭಸ್ಮೋಪಚಾರವನ್ನು ನೀಡಿ,ಅಲ್ಲಿಯೇ ಮಲಗಿಸಿ,ತಾವೇ ಗಂಡುಗಚ್ಚೆಯನ್ನು ಹಾಕಿ ರೆಂಟೆ ಹೊಡೆಯುವದನ್ನು ಪ್ರಾರಂಭಿಸಿದರು. ಕೇವಲ ಮೇಣೆಪಲ್ಲಕ್ಕಿಯಲ್ಲಿ ಕುಳಿತು ಮೆರೆಯದೇ ನೇಗಿಲುಯೋಗಿಯಾದ, ಮಹಾಮುರ್ತಿಗಳಾದ ಶ್ರೀಗಳು. ರೈತ ರಾಮಪ್ಪ ಗಡಬಡಿಸಿ ಎಚ್ಚತ್ತು ನೋಡಿದಾಗ ಅವನ ಚಳಿ ಜ್ವರಮಾಯವಾಗಿತ್ತು. ಶ್ರೀಗಳುರೈತರೊಡಗೂಡಿ ತಾವೇ ಹೊಲಕ್ಕೆ ಹೋಗುವ ವಾಡಿಕೆ,108 ಎತ್ತುಗಳ ಕಮತ, ಒಂದು ಸಲ ಶ್ರೀಮಠಕ್ಕೆ ಡಾವಣಗೆರೆ ನವದಂಪತಿಗಳು ವಿದೇಶಯಾತ್ರೆಗೆ ಹೋಗುವವರಿದ್ದ ಕಾರಣ ಹಿರಿಯ ಹಾಗೂ ಕಿರಿಯ ಗುರುಗಳ ದರ್ಶನಕ್ಕೆ ಬಂದಿದ್ದರು,ಆಗ ಸಿದ್ಧಲಿಂಗಶ್ರೀಗಳು ಆ ಯುವಕನ ಪತ್ನಿಯನ್ನೇ ದಿಟ್ಟಿಸಿ ನೋಡುತ್ತ À್ತಕುಳಿತಿದ್ದರು,ನೆರೆದ ಜನರು ಮುಜುಗರದಿಂದ ಕಕ್ಕಾಬಿಕ್ಕಿಯಾಗಿ ಕುಳಿತರು,ಹಿರಿಯ ಜಗದ್ಗುರುಗಳು ತಾಳ್ಮೆಮೀರಿ, ಕಿರಿಯರನ್ನು ಗದರಿಸಿದರು. ಎಚ್ಚರಾದ ಕಿರಿಯ ಗುರುಗಳು ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗಗದಿತರಾಗಿ ತಮ್ಮ ದಿವ್ಯದೃಷ್ಠಿಯಿಂದ"ಮಠದಿಂದತಿರುಗಿಹೋಗುವಾಗಈತಾಯಿvisÀವೆಯಾಗುತ್ತಾಳೆ"ಎಂದುಉಚ್ಚರಿಸಿದರು, ಅವರವಾಣಿಯಂತೆ ನವದಂಪತಿಗಳು ತಿರುಗಿಹೋಗುವಾಗ ಆ ಯುವಕ ಕುಸಿದು ಬಿದ್ದು,ಆ ಸತಿಯ ಕುಂಕುಮ ಅಳಿಸಿತು. ಅಂದಿನಿಂದ ಶ್ರೀ ಸಿದ್ಧಲಿಂಗನÀನಡುವಳಿಕೆಯ ಬಗ್ಗೆ ಅಪಾರ್ಥ ಕಲ್ಪಿಸದೇ ಅವರ ದಿವ್ಯದೃಷ್ಠಿಯನ್ನು ಜನರು ಮನಗಂಡರು. ವಿದ್ವಾನ್ ಚೆನ್ನಬಸಯ್ಯನವರು ಪ್ರಖ್ಯಾತ ಪೀಟಿಲುವಾÀದಕರು,ಅವರು ಶ್ರೀUಳÀನ್ನು ಒಮ್ಮೆ ಭೆಟ್ಟಿಯಾದಾಗ ಒಂದು ಸಸ್ಯದ ಬೇರನ್ನುಕೊಟ್ಟು,ಇದನ್ನು ಜೋಪಾನವಾಗಿ ಇಟ್ಟುಕೊಳ್ಳಿರೆಂದು ತಿಳಿಸಿ,ಎಂತಹ ವಿಷಜಂತು ಕಚ್ಚಿದರೂ ಇದನ್ನು ತೇಯ್ದು ರಸ ಹಚ್ಚಿದರೆಏರಿz ವಿÀಷಇಳಿಯುವದೆಂದರು.ಒಂದು ಸಲ ಚನ್ನಬಸಯ್ಯನವರು ರಾಯಚೂರಿಗೆ ನಾಟಕ ಕಲಿಸಲು ಹೋದಾಗ,ಅವರಿಗೆ ರಾತ್ರಿವೇಳೆಯಲ್ಲಿ ನಾಗರಹಾವು ಕಚ್ಚಿತು,ನಾಟಕದ ಹುಡುಗರು ಗಾಬರಿಯಾಗಿ, ದಿಕ್ಕುತೋಚದೇ ಹೌಹಾರಿದರು, ಆಗ ಚನಬಸಯ್ಯನವರಿಗೆ ಶ್ರೀಗಳು ಕೊಟ್ಟ ಸಸ್ಯದ ಬೇರಿನ ನೆನಪಾಗಿ, ಅದನ್ನು ತೇಯ್ದು ರಸ ಹಚ್ಚಲು ಹೇಳಿದರು,ಆಗ ಅವರಿಗೆ ಹಾವಿನ ವಿಷವಿಳಿದು ಗುಣಮುಖರಾದರು. ಅನಂತಪುರ ಜಿಲ್ಹೆಯ ಗುತ್ತಿ ತಾಲೂಕಿನ ಪಾತ್ತೂರ ಹಳ್ಳಿಯಲ್ಲಿ ಶ್ರಾವಣ ಮಾಸದಲ್ಲಿ ಗುರುಗಳು ದಯಮಾಡಿಸಿದ್ದರು.ಊರಲ್ಲಿ ಶ್ರಾವಣ ನಿಮಿತ್ತ ರುದ್ರಾಧ್ಯಾಯ ಪಠಣ ಮಾಹಾಭಿóಷೇಕಪೂಜೆಯ ಜೊತೆಗೆ ಶಾಂತಿಗಾಗಿ ಮಹೇಶ್ವರರಾಧನೆ ಪೂರ್ವಕ ಅನ್ನಸಂತರ್ಪಣೆಯನ್ನು ಈ ವiಹಾಗಣಾರಾಧನೆ ನಿಮಿತ್ತ ಶ್ರೀಗಳುಪ್ರತಿಗಣಂಗಳಿಗೆ ಒಂದೊಂದು ಬೆಳ್ಳಿರೂಪಾಯಿ ದಕ್ಷಿಣೆಯನ್ನು ಸ್ವತಃ ಶ್ರೀಗಳು ನೀಡಿದರು,ದಕ್ಷಿಣೆಯ ಒಟ್ಟು ಲೆಕ್ಕಹಾಕಿದಾಗಮೂರುಸಾವಿರಕ್ಕೂ ಮಿಕ್ಕಿತ್ತು. ಅದೇ ಗ್ರಾಮದ ಕೆಂಡಪ್ಪನೆಂಬ ಸಾಮಾನ್ಯರೈತ ಜಗದ್ಗುರಿನಲ್ಲಿ ಅಪಾರ ಶೃದ್ಧೆ,ಅವರನ್ನುನೆನೆಯದೇ ಒಂದು ಹನಿ ನೀರನ್ನುಬಾಯಿಗೆ ಹಾಕುತ್ತಿರಲಿಲ ್ಲಒಂದು ಸಲ ಕೆಂಡಪ್ಪ ಹೊಲದಲ್ಲಿ ರಾತ್ರಿ ಮಲಗಿದಾಗ ಕಲವು ಹೊಟ್ಟೆಕಿಚ್ಚಿನ ದುಷ್ಟರು ಆತನನ್ನು ಹೊಡೆದು ಕೊಲ್ಲಲು ಹೊಲಕ್ಕೆ ಬಂದಾಗ,ಒಂದು ಭಯಂಕರ ಸರ್ಪೊಂದು ಕೆಂಡಪ್ಪನನ್ನು ಕಾಯುವದೊಸ್ಕರ ಹೆಡೆಯತ್ತಿ ನಿಂತ್ತಿತ್ತು,ಇದು ಗುರುಕೃಪೆಯಲ್ಲದೇ ಮತ್ತೇನೂ? ಕತ್ತೆಬೆನ್ನೂರು ಗ್ರಾಮದ ಗೌರಮ್ಮ ಎಂಬ ಹೆಣ್ಣುಮಗಳು ಭಯಂಕರ ಹುಣ್ಣಿನಿಂದ ಬಳಲುತ್ತಿದ್ದಳು.ಯಾವುದೇವೈದ್ಯರಿಂದ ಅವಳು ಗುಣÀವಾಗಲಿಲ್ಲ,ಸಾವಿನಂಚಿನಲ್ಲಿ ಇದ್ದವಳನ್ನು ಕೆಲವು ಊರಿನ ಜನರು ಶ್ರೀ ಸಿದ್ಧಲಿಂಗನ ದರ್ಶನಕ್ಕೆ ಹೋಗಲು ತಿಳಿಸಿದರು, ಆಕೆ ಹಾಗೇ ಹೋಗಲು, ಸ್ವಾಮಿಗಳು ಅವಳ ಮರಣಾಂತಿಕ ಹುಣ್ಣನ್ನು ನೋಡಿ,ಭವರೋಗ ವೈದ್ಯಭಸ್ಮ ವನ್ನು ಮಂತ್ರಿಸಿ ಕೊಟ್ಟು,"ಇದರೊಳಗೆಜೀವಕೊಡುವ ಶಕ್ತಿಯಿದೆ, ಇಷ್ಠಲಿಂಗಪೂಜೆಗ್ಯೆಯ್ದು, ಹುಣ್ಣಿಗೆ ಲೇಪಿಸು,ಹಾಗೆಯೇ ಭಸ್ಮವನ್ನು ನೀರಿನಲ್ಲಿ ಕಲಿಸಿಕುಡಿ"ಎಂದರು.ಶ್ರೀಸದ್ಗುರುವಿನ ಕೃಪೆಯಿಂದ ಮಾಯವಾಯಿತು. ಬಳಲಿಬಂದ ಬಡಜೀವಗಳಿಗೆ ಸಾಂತ್ವನಹೇಳಿ ಅವರ ಕಷ್ಟಗಳನ್ನು ದೂರಮಾಡಿದ ಅವರು ದೇವರಲ್ಲದೇ ಬೇರೆ ಎನು? ಒಂದು ಸಲ ಹನಗೋಡು ಮಠಾಧೀಶರಾದ ಶ್ರೀ ರುದ್ರಮುನಿ ದೇವರು ಜಗದ್ಗುರು ಸಿದ್ಧಲಿಂಗೇಶ ಪ್ರಭಾವಕೇಳಿ ಅವರನ್ನು ಪರೀಕ್ಷಿಸಲು ಸನ್ನಿಧಿಗೆ ಆಗಮಿಸಿದರು,ಆಗ ಶ್ರಾವಣಮಾಸವಿದ್ದ ಕಾರಣ ಶ್ರೀಗಳು ಅವರನ್ನು ತಮ್ಮಜೊತೆಗೆ ಇಷ್ಟಲಿಂಗಾರಾಧನೆಯಲ್ಲಿ ತೊಡಗಿಸಿಕೊಂಡ ಮೇಲೆ, ಮಹಾಪೂಜೆಯಲ್ಲಿ ಹಾಲುಪಾಯಸದ ನೈವೇದ್ಯವನ್ನು ಮಾಡಲಾಯಿತು, ಆಗ ಅತಿಥಿ ರುದ್ರಮುನಿಗಳು ಶ್ರೀಗಳನ್ನು ಕುರಿತು"ಇಂದು ಮಾವಿನಹಣ್ಣಿನ ಶೀಕರಣೆ ಪ್ರಸಾದವಾಗಿದ್ದರೆ "ಎಂದು ನಸುನಕ್ಕರು.ಆಗ ಶ್ರೀಗಳು ರೇಣುಕಾದಿ ಪಂಚಾಚಾರ್ಯರನ್ನು ಮನದಲ್ಲಿ ನೆನೆದು,ವಸ್ತ್ರಮುಚ್ಚಿದ ನೈವೇದ್ಯದ ತಟ್ಟೆಯನ್ನುಶ್ರೀ ರುದ್ರಮುನಿ ಸ್ವಾಮಿಗಳಿಗೆ ಕೊಟ್ಟರು, ನಂತರ ಅತಿಥಿ ಶ್ರೀಗಳುಮುಚ್ಚಿದ ವಸ್ತ್ರವನ್ನು ತೆಗೆಯಲಾಗಿ,ಪಾಯಸವು ಮಾವಿನಹಣ್ಣಿನ ಶೀಕರಣೆಯಾಗಿ ಪರಿವರ್ತನೆಗೊಂಡಿತ್ತು.ರುದ್ರಮುನಿಗಳು ತಮ್ಮ ತಪ್ಪನ್ನರಿತು ಜಗದ್ಗುರುಗಳಿಗೆ ಸಾಷ್ಟಾಂಗವೆರಗಿ ಅಪರಾಧವನ್ನು ಕ್ಷಮಿಸಲು ಬೇಡಿಕೊಂಡರು,ಪರಮಾತ್ಮನನ್ನು ಪರೀಕ್ಷಿಸಲು ಹೋಗಿ,ಪಶ್ಚಾತಾಪಪಡಬೇಕಾಯಿತು. ಚಳ್ಳಕೇರಿ ಹತ್ತಿರ ನುಂಕಿಮಲೆ ಎಂಬ ಚಿಕ್ಕ ಗ್ರಾಮ,ಇಲ್ಲಿಯ ಜನ ತಮ್ಮಲ್ಲಿ ಬೆಳೆಯುತ್ತಿರುವ ಸೀತಾಫಲ ಹಣ್ಣನ್ನು ಮಾರಿ,ಜೀವನ ನಡೆಸುತ್ತಿದ್ದರು. ಒಮ್ಮೆ ಕಾಗೆಗಳ ಕಾಟ ಹೆಚ್ಚಾಗಿ,ಬೆಳೆದ ಫಲಗಳು ಹಾಳಾಗಿ ಹೋಗುವದರಲ್ಲಿತ್ತು,ಬಡಜನರು ಶ್ರೀಗಳನ್ನು ಮೊರೆಹೊಕ್ಕರು.ಗುರುಗಳು ನುಂಕಿಮಲೆ ಗ್ರಾಮಕ್ಕೆ ದಯಮಾಡಿಸಿ,ತಮ್ಮ ಅಘೋರಶಕ್ತಿಯಿಂದ ಬೇಸತ್ತಜನರನ್ನು ಕಾಗೆಗಳ ಕಾಟದಿಂದ ರಕ್ಷಿಸಿದರು.ಈಗಲೂ ಆಊರಿನಲ್ಲಿ ಕಾಗೆಗಳ ಸುಳಿವೆ ಇಲ್ಲವಂತೆ. ಜಗಳೂರಿನ ಸಿದ್ಧವೀರಪ್ಪನ ಮಗಳಿಗೆ ಭೂತಹಿಡಿದಿದೆಂದು ಮೂಢನಂಬಿಕೆಲ್ಲಿದ್ದಾಗ ಶ್ರೀಗಳು ಅವರ ಮನೆಯನ್ನು ಪ್ರವೇಶಿಸಿ,ಮನೆಯವರ ಮಾನಸಿಕಚಿಂತೆಯನ್ನು ದೂರಮಾಡಲು ಅವಳಿಗೆ "ಕರಣುಪ್ರಸಾದ"ಕೊಟ್ಟು ಭೂತಚೇಷ್ಟೆಯಿಂದ ದೂರಮಾಡಿದರು. ಜಾಗಟಗೇರಿ ಕೊಟ್ರಪ್ಪನ ಮನೆಯಲ್ಲಿ ಅವನ ಹೆಂಡತಿ ಪ್ರಸಾದ ತಯಾರಿಸುವಾಗ ಅದರ ರುಚಿನೋಡಲು,ಒಮ್ಮೇಲೆ ಸಾರಿನ ಗಡಿಗೆ ಸಿಡಿದು ಅವಳ ಮೈಮೇಲೆ ನೀರಿನಗುಳ್ಳೆಗಳಾಗಿ ಒದ್ದಾಡಹತ್ತಿದಳು.ಈ ಸುದ್ಧಿ ಕೊಟ್ರಪ್ಪನಿಗೆ ತಿಳಿದಕ್ಷಣ ಶ್ರೀಗಳಲ್ಲಿ ಅರುಹಿದಾಗ, ಕರುಣಪ್ರಸಾದೊಂದಿಗೆ ಭಸ್ಮಕೊಟ್ಟು ಅವಳ ಗಾಯಗಳಿಗೆ ಹಚ್ಚಲು ಹೇಳಿದರಂತೆ,ನಂತರಕೆಲವು ದಿನಗಳಲ್ಲಿ ಚರ್ಮದ ಮೇಲಿನ ಗಾಯಗಳು ಮಾಯವಾಗಿ ಬಿಟ್ಟವಂತೆ. ಒಂದು ಸಲ ಹೊಸಪೇಟೆಯ ಶ್ರೀಮಂತ ಜಡೆಯಪ್ಪನ ಮನೆಯಲ್ಲಿ ಶ್ರೀಗಳು ಪ್ರಸಾದ ಸ್ವೀಕರಿಸಿದ ನಂತರಧಾರ್ಮಿಕ ಪದ್ಧತಿಯಂತೆ ಗಂಗಾಳವನ್ನು ತೊಳೆದ ನೀರನ್ನು ಕುಡಿಯುವಾಗ ಒಬ್ಬಕಿಡಿಗೇಡಿ ವ್ಯಂಗ್ಯವಾಡಿದನು,ಆ ಮಾತು ಸನ್ನಿಧಿಕಿವಿಗಳಿಗೆ ಬಿತ್ತು, ಅವರು ಮುಗುಳನಕ್ಕರು,ಆ ಅಜ್ಞಾನಿ ಮುಂದೆ ತುತ್ತು ಅನ್ನಕ್ಕೆ ಗತಿಯಿಲ್ಲದೆ ತೀರಿಹೊದನಂತೆ. ಮಾಡ್ರಳ್ಳಿ ಗ್ರಾಮದ ಚೌಡಮ್ಮದೇವಿಯ ದರ್ಶನಕ್ಕೆ ಗುರುಗಳು ದೇವಸ್ಥಾನಕ್ಕೆ ಭೆಟ್ಟಿಕೊಟ್ಟರು,ಆ ದೇವಸ್ಥಾನದಬಾಗಿಲು ಅರ್ಧಶತಮಾನದಿಂದ ಬೀಗವನ್ನು ಹಾಕಲ್ಪಟ್ಟಿತಂತೆ,ಬಾಗಿಲು ತೆರೆಯಲು ಊಹಾಪೋಹಗಳಿಗೆ ಹೆದರಿದಜನರುಹಿಂದೇಟು ಹಾಕುತಿದ್ದರು,ಇದನ್ನು ತಿಳಿದ ಶ್ರೀಗಳು ದೇವಸ್ಥಾನ ಬಾಗಿಲನ್ನು ದೃಷ್ಟಿಸಿ ನೋಡಲು ಹಾಕಿದ ಬೀಗ ಕಳಚಿಬಿತ್ತು,ಜನರು ನಿಬ್ಬೆರಗಾಗಿ,ತಾಯಿ ಚೌಡಮ್ಮನನ್ನು ಪೂಜೆಪುನಸ್ಕಾರಗಳಿಂದ ಚೈತನ್ಯಗೊಳಿಸಿದರು. ತರೀಕೆರೆ ಸಮೀಪ ದೋರನಾಳ ಗ್ರಾಮದಲ್ಲಿ ಜಗದ್ಗುರುಗಳು ವಾಸ್ತವ್ಯ ಮಾಡಿದ್ದರು,ರುದ್ರಯ್ಯನೆಂಬಅವಿವೇಕಿ ಕುಹಕಜನಗಳ ಮಾತುಕೇಳಿ,ಶ್ರೀಗಳನ್ನು ಬಾಯಿಗೆ ಬಂದಂತೆ ಬೈಯ್ದು ಊರಾಚೆ ಹಾಕಿದನಂತೆ.ಮುಂದೆ ಸ್ವಲ್ಪುದಿನಗಳಲ್ಲಿಯೇ ರುದ್ರಯ್ಯನ ನಾಶವಾಗಿ ಹೋದಾಗ,ಅವನು ತನ್ನ ತಪ್ಪಿನ ಅರಿವಾಗಿ,ಗುರುಗಳನ್ನು ಕ್ಷಮೆಯಾಚಿಸಲು,ಅವರು ಆಶೀರ್ವದಿಸಿ ಕಳುಹಿಸಿದರಂತೆ. ಈಗಿನ ಭದ್ರಾವತಿ(ಬೆಂಕಿಪುರ)ಯಲ್ಲಿ ಶ್ರೀಗಳು ವಾಸ್ತವ್ಯ ಮಾಡಿದ್ದರು, ಅಲ್ಲಿಯ ಶ್ರೀಮಂತ ಶಿವರಾಯ ತನ್ನಗುಣವಂತೆಯಾದ ಪತ್ನಿ ಪಾರ್ವತಿಯನ್ನು ಸಂಶಯದಿಂದ ಕಾಣುತಿದ್ದನು,ಈ ವಿಷಯ ಗುರುಗಳ ಕಿವಿಗೆ ಬಿತ್ತು,ಶಿವರಾಯನನ್ನು ಕರೆಸಿ,ಅವನ ಮನೆಯಲ್ಲಿ ಪಾದಪೂಜೆಗೆ ಬರುವದಾಗಿ ತಿಳಿಸಿ, ವ್ಯವಸ್ಥೆಮಾಡಲು ಆಜ್ಷೆಯಿತ್ತರು, ಅವರ ಆಜ್ಷೆಯನ್ನು ಸ್ವೀಕರಿಸಿ, ಗುರುಗಳು ಅವನ ಮನೆಪ್ರವೇಶಮಾಡಿ ,ಪಾದ ಪೂಜೆಯೊಂದಿಗೆ ಸತಿಪತಿಗಳ ಬದುಕನ್ನು ಹಸನಗೊಳಿಸಿದರು. ವಿಜಯನಗರದ ಅರಸು ಬುಕ್ಕರಾಜನು ಮಲೆನಾಡಿನಲ್ಲಿ ಒಂದು ದೊಡ್ಡ ಕೆರೆಯನ್ನು ಕಟ್ಟಿಸಿದನು,ಅದರ ಹೆಸರು "ಬುಕ್ಕಾಂಬುಧಿ",ಆ ಹೆಸರಿನಿಂದಲೇ ಆ ಗ್ರಾಮವು ಪ್ರಸಿದ್ಧಿಪಡೆಯಿತು.ಆ ಗ್ರಾಮದಲ್ಲಿ ಎರಡು ದಿನಗಳ ಕಾಲ ಶ್ರೀಗಳು ತಂಗಿದ್ದರು.ಒಂದು ದಿನ ಚುಕ್ಕನಳ್ಳಿ ಹಿರೇಮಠದ ರೇವಣಸಿದ್ಧಯ್ಯನನ್ನು ಕರೆದುಕೊಂಡು ಬೆಟ್ಟವನ್ನೇರಿದರು, ಸಂಜೆಯಾಗುತ್ತ ಬಂದಾಗ ಜೊತೆಗಿದ್ದ ರೇವಣಸಿದ್ಧನನ್ನು ತಿರುಗಿ ಊರಿಗೆ ಕಳುಹಿಸಿದರು,ಆತ ಒಪ್ಪದ ಮನಸ್ಸಿಂದ ತಿರುಗಿ ಬಂದು, ಗುರುಗಳು ಬೆಟ್ಟದಲ್ಲಿರುವ ಬಗ್ಗೆ ಸುದ್ದಿ ಎಲ್ಲರಿಗೂ ತಿಳಿಸಿದಾಗ,ಊರಿನ ಭಕ್ತರು,ಅಲ್ಲಿಯ ಆಡಳಿತಾಧಿಕಾರಿಗಳು ಚಿಂತಿತರಾದರು.ಯಾಕೆಂದರೆ ಬೆಟ್ಟದಲ್ಲಿ ಹುಲಿಗಳು ವಾಸಿಸುತ್ತಿದ್ದವು, ಬೆಳಕು ಮೂಡುತ್ತಿರುವಂತೆ, ಒಬ್ಬ ಬೆಟ್ಟದ ಅನುಭವವಿರುವಂತಹ ಬೇಡನನ್ನು ಜೊತೆಗೆ ಕರೆದುಕೊಂಡು ಭಕ್ತರು,ಕಾರಭಾರಿಗಳು, ರಕ್ಷಣಾಪಡೆಯವರು ಕೂಡಿಕೊಂಡು,ಬೆಟ್ಟದಮೇಲಿರುವಂತಹ ದಟ್ಟವಾದ ಅರಣ್ಯದಲ್ಲಿಕಾಲಿಟ್ಟರು, ಬೆಟ್ಟದಾವರೆ ಮರದಕೆಳಗೆ ಕಲ್ಲಿನ ಮೇಲೆ ಪದ್ಮಾಸನದಲ್ಲಿ ಶ್ರೀಗಳುಕುಳಿತಿದ್ದರು,ಹುಲಿಗಳೆರಡು ಕಾವಲುಗಾರರಂತೆ ಅತ್ತಿಂದಿತ್ತ ಇತ್ತಿಂದತ್ತ ಶತಪಥ ನಡೆಸಿದ್ದವು,ಭಯಂಕರವಾದ ಘಟಸರ್ಪೊಂದು ಹೆಡೆಯೆತ್ತಿ,ಅವರ ರಕ್ಷಣೆ ಮಾಡುತಿದ್ದವು. ಹೋದಜನರು ಗುರುಗಳ ಪರಿಸ್ಥಿತಿಯನ್ನು ಕಂಡು ಹೌಹಾರಿದರು,ಅವರ ರಕ್ಷಣೆಗಿದ್ದ,ಹುಲಿಗಳ ಜೊತೆಗಿದ್ದ ಘಟಸರ್ಪಗಳು ಕೂಡಲೇ ಮಾಯವಾದವು. ಗುರುಗಳು ನೆರೆದ ಜನರನ್ನುದ್ಧೇಶಿಸಿ,ಇಲ್ಲಿತಾವು ಅನುಷ್ಠಾನ ಕೈಕೊಳ್ಳುವದಾಗಿ ತಿಳಿಸಿ,ತಕ್ಕವ್ಯವಸ್ಥೆಯನ್ನು ಮಾಡಬೇಕೆಂದು ಆಜ್ಷಾಪಿಸಿ,ಅಲ್ಲಿ ಯಾರು ಇರಬಾರದೆಂದುತಿಳಿಸಿದರು.ಬುಕ್ಕಾಂಭುದಿ ಬೆಟ್ಟದಲ್ಲಿ6 ತಿಂಗಳುಕಾಲ ಘೋರತಪಸ್ಸನ್ನಾಚಿರಿಸಿ, ಸಾಕಾರದಿಂದ ನಿರಾಕಾರದತ್ತ ಪ್ರಯಾಣ ಬೆಳೆಸಿದರು,ಇಹಪರ ಅಪೇಕ್ಷೆಗಳನ್ನು ಕಳೆದುಕೊಂಡರು. ಇವರ ಈ ಘೋರತಪಸ್ಸಿನಿಂದ ಜಗದ ಜನತೆಯಲ್ಲ ಪಾವನರಾದರು,ಪೀಠದ ಮೇಲಿನ ಎಲ್ಲ ಕಂಟಕಗಳು ಮಾಯವಾದವು,ಮೈಸೂರಿನ ಶ್ರೀ ಮನ್ಮಹಾರಾದ ನಾಲ್ವಡಿ ಕೃಷ್ಣರಾಜವಡೆಯರು ದಿವಾನರಾದಕೆ. ಸಿ.ಪುಟ್ಟಣ್ಣಯ್ಯಶೆಟ್ಟರನ್ನುಕರೆಯಿಸಿ,ಉಜ್ಜೈಯನಿಗುರುಗಳಿಗೆಎಲ್ಲರಾಜಾನುಕೂಲತೆಗಳನ್ನುಒದಗಿಸಿಕೊಡಲು ಆಜ್ಷಾಪಿಸಿ,ಧರ್ಮಸಂಚಾರವನ್ನು ನಡೆಯಿಸುತ್ತಿರುವ ಶ್ರೀಗಳಿಗೆ ದೇಶದ ಎಲ್ಲಾಭಾಗಗಳಲ್ಲಿಯೂ ನಿರಂತರವಾಗಿ ತಮ್ಮ ಸಕಲ ಬಿರುದಾವಳಿಗಳೊಂದಿಗೆ ಧರ್ಮದ ಪ್ರಚಾರಗೈಯ್ಯಲು ದಿನಾಂಕ 11-7-1925ರಂದು ಮೈಸೂರು ಸೀಮೆಯಮುಜರಾಯಿ ಕಮೀಶನ್ ರ ಕಛೇರಿಯಿಂದ ಪತ್ರಕಳಿಸಿಕೊಟ್ಟರು.ಅದೂ ಅಲ್ಲದೇ ಮಹಾರಾಜರು ರಂಭಾಪುರಿ ಪೀಠಕ್ಕೆಸೂಕ್ತ ನೂತನ ಜಗದ್ಗುರುಗಳಿಗೆ ಪಟ್ಟಾಧಿಕಾರವನ್ನು ನೆರವೇರಿಸುವ ಜವಾದ್ಬಾರಿಗಳನ್ನು ಸ್ವಾಮಿಗಳಿಗೆ ವಹಿಸಿದರು.ದಿನಾಂಕ25-10-1920 ರಂದು ಸಕಲ ಬಿರುದಾವಳಿಗಳೊಂದಿಗೆ ಬುಕ್ಕಾಂಬುಧಿಯಲ್ಲಿ ಅವರ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.ಶ್ರೀಗಳು ಆನೆಕುದುರೆ ಒಂಟೆ, ರಥಪಥಿಕರು ಸಾರೋಟಪಲ್ಲಕ್ಕಿ ಪರಿವಾರ ಮತ್ತು ತಮ್ಮ 72 ಬಿರುದಾವಳಿಗಳೊಂದಿಗೆ ಶ್ರೀ ಮದ್ರಂಭಾಪುರಿ ಪೀಠಕ್ಕೆ ನೂತನ ಜಗದ್ಗುರುಗಳಪೀಠಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೋಂಡು,ದಿನಾಂಕ 23-11-1925 ರಂದು ಪೀಠಾರೋಹಣ ರಾಜ ವೈಭವಗಳೊಂದಿಗೆ ನೆರೆವೇರಿಸಿದರು. ಮಾಹಿತಿ ಸಂಗ್ರಹ - - ಸಿರಿಮನೆ

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva