ವಿವಿಧ ರೀತಿಯ ವಿಶೇಷ "ಶಿವಲಿಂಗಗಳು" ಮತ್ತು ಪೂಜೆಯ ಫಲ..
*ವಿವಿಧ ರೀತಿಯ ವಿಶೇಷ "ಶಿವಲಿಂಗಗಳು" ಮತ್ತು ಪೂಜೆಯ ಫಲ..*
೧. *ಕಲ್ಲಿನ ಲಿಂಗ* - ನಾನಾ ಶಿಲೆಗಳಿಂದ ಮಾಡಿದ್ದು - "ಮೋಕ್ಷಪ್ರಾಪ್ತಿ"ಯ ಫಲ..
೨. *ಪುಷ್ಪಲಿಂಗ* - ಹೂವಿನಿಂದ ಮಾಡಿದ್ದು - ಯಶಸ್ಸು, ಸುಖ, ಶಾಂತಿ..
೩. *ದಾರುಲಿಂಗ* - ಮರದಿಂದ ಮಾಡಿದ್ದು - ಇಷ್ಟಾರ್ಥ ಸಿದ್ಧಿ..
೪. *ಕೆಂಪುಚಂದನ* - ರಕ್ತ ಚಂದನ ಪುಡಿಯಿಂದ ಮಾಡಿದ್ದು - ರೋಗಮುಕ್ತಿ, ಅಪಮೃತ್ಯು ನಿವಾರಣೆ..
೫. *ಕಾಶ್ಮೀರ ಲಿಂಗ* - ಕುಂಕುಮ, ಕೇಸರಿ - ಆರೋಗ್ಯಭಾಗ್ಯ..
೬. *ಗಂಧದ ಲಿಂಗ* - ಶ್ರೀಗಂಧದ ಪುಡಿಯಿಂದ ಮಾಡಿದ್ದು - ಗಂಧರ್ವಲೋಕ ಪ್ರಾಪ್ತಿ, ಆರೋಗ್ಯ ಭಾಗ್ಯ..
೭. *ಲೋಹಲಿಂಗ* - ಯಾವುದಾದರೂ ಲೋಹದಿಂದ ಮಾಡಿದ್ದು - ಶತೃನಾಶ..
೮. *ಸೂರ್ಯಲಿಂಗ* - ತಾಮ್ರದಿಂದ ಮಾಡಿದ್ದು - ಆರೋಗ್ಯಪ್ರಾಪ್ತಿ..
೯. *ಸುವರ್ಣಲಿಂಗ* - ಚಿನ್ನದಿಂದ ಮಾಡಿದ್ದು - ಸ್ವರ್ಗಪ್ರಾಪ್ತಿ..
೧೦. *ರಜತಲಿಂಗ* - ಬೆಳ್ಳಿಯಿಂದ ಮಾಡಿದ್ದು - ಪಿತೃದೋಷ, ಶಾಪ ನಿವಾರಣೆಯಾಗುವುದು..
೧೧. *ಸ್ಫಟಿಕಲಿಂಗ* - ಸ್ಫಟಿಕದಿಂದ ಮಾಡಿದ್ದು - ಶಾಂತಿ, ನೆಮ್ಮದಿ ಕೊಡುತ್ತದೆ, ಬಿ.ಪಿ ಖಾಯಿಲೆ ಬೇಗ ವಾಸಿಯಾಗುತ್ತದೆ..
೧೨. *ಶರ್ಕರಲಿಂಗ* - ಸಕ್ಕರೆಯಿಂದ ಮಾಡಿದ್ದು - ಸಕ್ಕರೆ ಖಾಯಿಲೆ ನಿವಾರಣೆ ಹಾಗೂ ಸಂತೋಷ ನೀಡುತ್ತದೆ..
೧೩. *ದೂರ್ವಾಲಿಂಗ* - ಗರಿಕೆಯಿಂದ ಮಾಡಿದ್ದು - ಅಪಮೃತ್ಯು ನಿವಾರಣೆ, ರೋಗ ನಿವಾರಣೆ..
೧೪. *ಮೃತ್ತಿಕಾ ಲಿಂಗ* - ಹುತ್ತದ ಮಣ್ಣಿನಿಂದ ಮಾಡಿದ್ದು - ದೇವರಲ್ಲಿ ಭಕ್ತಿ ವೃದ್ಧಿ, ಆರೋಗ್ಯ ಭಾಗ್ಯ..
೧೫. *ಲವಣ ಲಿಂಗ* - ಉಪ್ಪಿನಿಂದ ಮಾಡಿದ್ದು, - ಋಣಭಾದೆ ನಿವಾರಣೆ..
೧೬. *ಗೋಮಯ ಲಿಂಗ* - ಬಿಳಿ ಹಸುವಿನ ಸಗಣಿ - ಸಕಲ ಪಾಪನಾಶ, ಇಷ್ಟಾರ್ಥ ಸಿದ್ಧಿ..
೧೭. *ತಂಡುಲ ಲಿಂಗ* - ಅಕ್ಕಿರಾಶಿಯಿಂದ ಮಾಡಿದ್ದು - ಸಂತಾನಭಾಗ್ಯ, ಸರ್ವಸಮಸ್ಯೆ ನಿವಾರಣೆ..
೧೮. *ಹರಿದ್ರಾಲಿಂಗ* - ಅರಿಸಿನದಿಂದ ಮಾಡಿದ್ದು - ವಿವಾಹದೋಷಗಳ ನಿವಾರಣೆಯಾಗಿ ವಿವಾಹವಾಗುವುದು..
೧೯. *ಕುಂಕುಮ ಲಿಂಗ* - ಕುಂಕುಮದಿಂದ ಮಾಡಿದ್ದು - ಸಕಲ "ದೃಷ್ಟಿದೋಷ" ನಿವಾರಣೆ ..
೨೦. *ಕೂಷ್ಮಾಂಡಲಿಂಗ* - ಬೂದ ಕುಂಬಳಕಾಯಿಯನ್ನು ಪೂಜಿಸುವುದು - ಅಪಮೃತ್ಯು ನಿವಾರಣೆ ಹಾಗೂ ಸಕಲಪಾಪ ನಿವಾರಣೆಯಾಗುವುದು..
An facebook collection.
Comments