ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ.

 ನಿಮ್ಮ ಜಮೀನಿಗೆ ಪೋಡಿ ಇಲ್ಲದಿದ್ದರೆ ನೀವು ಮಾಲಿಕರಲ್ಲ…. ಪೋಡಿ ಹೇಗೆ ಮಾಡಿಸಬೇಕು, ಪೋಡಿಯಿಂದಾಗುವ ಉಪಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ

On August 13, 2021 By ramlinganna


ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ. ಒಬ್ಬರಿಗಿಂತ ಹೆಚ್ಚು ಆರ್.ಟಿ.ಸಿ ದಾರರ ಹೆಸರು ಒಂದೇ ಸರ್ವೇ ನಂಬರ್ ನಲ್ಲಿ ಇದ್ದರೆ ಅದನ್ನು ಬಹುಮಾಲಿಕತ್ವದ ಆರ್.ಟಿಸಿ ಎನ್ನಲಾಗುತ್ತದೆ. ಒಂದು ಸರ್ವೆನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎನ್ನುವರು.


 

ಪೋಡಿಯಲ್ಲಿ ನಾಲ್ಕು ವಿಧಗಳಿವೆ. 1. ತತ್ಕಾಲ್ ಪೋಡಿ 2.ದರ್ಖಾಸ್ ಪೋಡಿ 3. ಅಲಿನೇಷನ್ ಪೋಡಿ, ಮುಟೇಷನ್ ಪೋಡಿ


 

ನಾಲ್ಕರಲ್ಲಿ ತತ್ಕಾಲ್ ಪೋಡಿ ಬಗ್ಗೆ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕು. ಹಾಗಾದರೆ ತತ್ಕಾಲ್ ಪೋಡಿ  ಏಕೆ ಮಾಡಿಸಿಕೊಳ್ಳಬೇಕೆಂಬುದುರ ಸಂಪೂರ್ಣ ಮಾಹಿತಿ ಇಲ್ಲಿದೆ..


ಪೋಡಿ ಏಕೆ ಮಾಡಿಸಬೇಕು?

ಒಂದು ಸರ್ವೆನಂಬರ್ ನಲ್ಲಿ ಸುಮಾರು ಹಿಸ್ಸಾ ಸರ್ವೆ ನಂಬರ್ ಇರುತ್ತದೆ. ಆದರೆ ಭೂ ಮಾಲಿಕತ್ವದ ಹೆಸರು ಒಂದೇ ಪೋಡಿಯಲ್ಲಿ ಬಂದಿರುತ್ತದೆ. ಜಮೀನು ಕಾನೂನಿನ ಪ್ರಕಾರ ವಿಭಾಗಿಸಿ ಹೊಸ ಹಿಸ್ಸಾ ಸಂಖ್ಯೆ ಅಥವಾ ತಾತ್ಕಾಲಿಕ ಪೋಡಿ ಸಂಖ್ಯೆ ನೀಡಲಾಗುತ್ತದೆ. ಹಾಗೆಯೇ ಪೋಡಿ ಮಾಡಿರುವ ಜಮೀನಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಪ್ರತ್ಯೇಕ ಪಹಣಿ ಅಥವಾ ಏಕ ಮಾಲಿಕತ್ವದ ಪಹಣಿ ಮಾಡಲಾಗವುದು.


ಉದಾಹರಣೆಗೆ ಒಂದು ಸರ್ವೆ ನಂಬರ್ ನಲ್ಲಿ ಐದು ಹಿಸ್ಸಾಗಳಿವೆ ಎಂದಿಟ್ಟುಕೊಳ್ಳೋಣ. ಆದರೆ ಪ್ರತ್ಯೇಕ ಪಹಣಿ ಇರುವುದಿಲ್ಲ. ಒಂದು ಪಹಣಿಯಲ್ಲಿ ಎಲ್ಲರ ಹೆಸರು ಇರುತ್ತದೆ. ಸರ್ವೆ ನಂಬರ್ ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತಾತ್ಕಾಲಿಕ ಪೋಡಿ ಮಾಡಿಸಬಹುದು.


ಪೋಡಿ ಮಾಡಿಸುವುದಕ್ಕಾಗಿ ಬೇಕಾಗುವ ದಾಖಲೆಗಳು

ಪೋಡಿ ಮಾಡಿಸುವ ಜಮೀನಿನ ಆಧಾರ್ ಕಾರ್ಡ್ ಹಾಗೂ ಪಹಣಿ ಬೇಕು. ಇನ್ನೂ ದಾಖಲೆಗಳು ಬೇಕಾಗಬಹುದು. ನಾಡಕಚೇರಿ ಅಥವಾ ತಹಸೀಲ ಕಚೇರಿಗೆ ಸಂಪರ್ಕಿಸಬಹುದು. ಪಹಣಿ ಪ್ರತ್ಯೇಕ ಮಾಡಲು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಪೋಡಿ ಮಾಡಿಸಲು 1200 ರಿಂದ 1500 ರೂಪಾಯಿಯೊಳಗೆ ಖರ್ಚು ಬರಬಹುದು. ತತ್ಕಾಲ್ ಪೋಡಿಯಲ್ಲಿ ನಿಮ್ಮ ಹೆಸರು ಬದಲಾವಣೆಯಾಗುವುದಿಲ್ಲ. ಬೋಂಡ್ರಿ ಫಿಕ್ಸ್ ಮಾಡಿ ಪಹಣಿ ಪ್ರತ್ಯೇಕವಾಗಿ ಮಾಡಲಾಗುವುದು.


ಪೋಡಿ ಮಾಡುವುದರಿಂದ ಆಗುವ ಪ್ರಯೋಜನ

ಏಕ ಮಾಲಿಕತ್ವವಿದ್ದರೆ ಕಿಸಾನ್ ಕ್ರೇಡಿಟ್ ಕಾರ್ಡ್, ಬೆಳೆ ಸಾಲ ಸಿಗುತ್ತದೆ. ಭೂಮಿ ಮಾಲಿಕತ್ವ ಖಾತ್ರಿ ಪಡೆದುಕೊಳ್ಳಬಹುದು. ಅಕ್ರಮಣ ಆಗುವುದಿಲ್ಲ. ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ. ಸರ್ಕಾರದಿಂದ ಸಿಗುವ ಎಲ್ಲಾ  ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿ ಹಾಗೂ ಮಾರಾಟ ಮಾಡಲು ಪೋಡಿ ಮಾಡುವುದು ಕಡ್ಡಾಯವಾಗಿದೆ. ಪೋಡಿ ಮಾಡಿಸುವುದರಿಂದ ಒಂದು ಆರ್.ಟಿ.ಸಿ ಒಂದ ನಕ್ಷೆ ಒದಗಿಸಲಾಗುವುದು. ಬಹುಮಾಲಿಕತ್ವದ ಪಹಣಿ ಪತ್ರಗಳನ್ನು ಹೊಂದಿರುವ ರೈತರಿಗೆ ಪ್ರತ್ಯೇಕ ಪಹಣಿ ನಕಾಶೆ ಒದಗಿಸುವ ಕೆಲಸವನ್ನು ಮಾಡಲಾಗುವುದು.


ಇದನ್ನೂ ಓದಿ : ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಅತ್ಯಂತ ಸರಳ ವಿಧಾನದ ಮಾಹಿತಿ

ದರ್ಖಾಸ್ ಪೋಡಿಯನ್ನು ಸಕರ್ಕಾರದ ಜಮೀನು ಗಡಿ ಭಾಗ ಗುರುತಿಸಲು ಬಳಸುತ್ತಾರೆ. (ಉದಾಹರಣೆ ಗೋಮಾಳ ಭೂಮಿ) ಅಥವಾ ಸರ್ಕಾರದ ಅಧಿನದಲ್ಲಿರುವ ಭೂಮಿಯಾಗಿರಬಹುದು.


ಪೋಡಿ ಮಾಡಿಸದೆ ಇರುವುದಕ್ಕೆ ಕಾರಣಗಳೇನು

ಅವಿಭಕ್ತ ಕುಟುಂಬಗಳು ಬೇರೆ ಬೇರೆಯಾದ ನಂತರ ಜಮೀನು ಖಾತಾಗಳು ಇನ್ನೂ ಜಂಟಿಯಾಗಿರುತ್ತವೆ. ಸಹೋದರರ ನಡುವೆ ವ್ಯಾಜ್ಯ, ಸೂಕ್ತ ದಾಖಲೆಗಳ ಕೊರತೆ ಮೊದಲ ಕಾರಣಗಳಿಂದ ಪ್ರತ್ಯೇಕ ಆರ್.ಟಿ.ಸಿ ಪಡೆದುಕೊಳ್ಳುವುದ0ಕ್ಕೆ ಸಾಧ್ಯವಾಗಿರುವುದಿಲ್ಲ. ಬಹುತೇಕ ಮಂದಿ ಪ್ರತ್ಯೇಕ ಆರ್.ಟಿ.ಸಿ ಪಡೆಯುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನ ಸರ್ವೆ ನಂಬರ್ ಗಳಲ್ಲಿ ಬಹುಮಾಲಿಕತ್ವವೇ ಉಳಿದುಕೊಂಡಿರುತ್ತದೆ. ಬೇರೆಯವರಿಗೆ  ನೀಡುವುದಕ್ಕಾಗಲಿ, ಮಾರಾಟ ಮಾಡುವುದಕ್ಕಾಗಲಿ, ವ್ಯಾಜ್ಯಮುಕ್ತ ಪಹಣ ಹೊಂದುವುದಕ್ಕಾಗಲಿ ಅವಕಾಶವಿರುವುದಿಲ್ಲ. ಈ ಉದ್ಯೇಶದಿಂದ ಪ್ರತ್ಯೇಕ ಆರ್.ಟಿ.ಸಿ ಮಾಡಿಕೊಳ್ಳುವುದು ಅಗತ್ಯವಾಗಿದೆ.


Facebook collection

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva