ನಾನು ಬೇಟಿ ನೀಡಿದ ಒಂದು ಸರಕಾರಿ ಶಾಲೆ.
ಇತ್ತೀಚೆಗೆ ಕಾರ್ಯಕ್ರಮ ನಿಮಿತ್ಯ ಒಂದು ಸರ್ಕಾರಿ ಶಾಲೆಗೆ ಬೇಟಿ ನೀಡಿದೆ. ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಕಲಿತ ಹಳ್ಳಿ ಹುಡುಗ. ಸರ್ಕಾರಿ ಶಾಲೆಗಳಿಗೆ ಪ್ರತಿಬಾವಂತ ಶಿಕ್ಷಕರು ಆಯ್ಕೆಯಾಗಿರುತ್ತಾರೆ. ಈ ಶಾಲೆಯಲ್ಲಿ ಗಮನಿಸಿದ ವಿಷಯಗಳು ಮಕ್ಕಳು ನೆಲದ ಮೇಲೆ ಕುಳಿತಿದ್ದರು. ಸ್ವ ನೈರ್ಮಲ್ಯಕ್ಕೆ ಆದ್ಯತೆ ಇರಲಿಲ್ಲ. ಅಥವಾ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಶಿಕ್ಷಕರು ಬಿಟ್ಟಿರಬೇಕು. ಬರಿಗಾಲಿನಲ್ಲಿ ಬಂದಿದ್ದ ವಿದ್ಯಾರ್ಥಿಗಳು.
ನಾನು ಶಾಲೆಗೆ ಹೋಗುವಾಗ ಕೂರಲು ಮರದ ಮಣೆಗಳಿದ್ದವು. ಆದರೆ ಇವತ್ತು ಅದು ಕೂಡ ಇಲ್ಲದೆ ನೆಲದ ಮೇಲೆ ಕುಳಿತಿದ್ದು ಭ್ರಷ್ಟಚಾರ ತಾಂಡವವಾಡುತ್ತಿರುವುದಕ್ಕೆ ಒಂದು ಉದಾಹರಣೆಯಾಗಿದೆ. ಶಿಕ್ಷಕರು ತಾವು ಟಾಕು ಟೀಕಾಗಿ ಶಾಲೆಗೆ ಬರುವುದರ ಜೊತೆಗೆ ತಮ್ಮ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ನೈರ್ಮಲ್ಯ, ಶುಚಿತ್ವದಲ್ಲಿ, ಶಿಕ್ಷಣದಲ್ಲಿ ರಾಜಿ ಇಲ್ಲದೆ ಇರಬೇಕು ಎಂದು ಬಾವಿಸಬೇಕಾದ ಅವಶ್ಯಕತೆ ಇದೆ.
ಯಾವ ಸರಕಾರಿ ಶಿಕ್ಷಕ/ಶಿಕ್ಷಕಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ ಅಂತಹವರು ತಾವು ಮಾಡುವ ಶಿಕ್ಷಣದ ಕುರಿತು ಯೋಚಿಸಬೇಕಾದ ಸಂದಿಗ್ದತೆ ಇದೆ. ಈ ರೀತಿಯ ಪರಿಸರವನ್ನು ಗಮನಿಸಿದಾಗ ಸರಕಾರಿ ಶಾಲೆಗೆ ಕಳುಹಿಸಿಕೊಡಬೇಕೆಂದು ಯೋಚಿಸುವ ನನ್ನಂತವರು ಎರಡು ಬಾರಿ ಯೋಚಿಸುವಂತಾಗುತ್ತದೆ.
ಶಿಕ್ಷಣ, ಶುಚಿತ್ವದ ಕಡೆಗೆ ಮಕ್ಕಳಲ್ಲಿ ಹರಿವು ಮೂಡಿಸಬೇಕಾದ ಅಗತ್ಯತೆ ಇದೆ. Expenditure Expenditure ಎಂದು ಬೊಂಬಡ ಬಡಿದುಕೊಳ್ಳುವ ಐ.ಎ.ಎಸ್ ಅಧಿಕಾರಿಗಳು Expenditure ಜೊತೆಗೆ Actual Implementation ಆಗಿರುವುದರ ಕಡೆಗೆ ಗಮನ ಹರಿಸಬೇಕು. Technically ಮುಂದುವರೆದಿದ್ದರು ಒಂದು ಉತ್ತಮ ಗುಣಮಟ್ಟದ ಸಾಫ್ಟ ವೇರ್ ಸರ್ಕಾರಿ ಇಲಾಖೆಗಳು ಒಂದದೆ Documentation ವೈಫಲ್ಯತೆಗೆ ಇಡಿದ ಕನ್ನಡಿಯಾಗಿದೆ.
ಮಕ್ಕಳಿಗೆ ಕೂರಲು ಉತ್ತಮ ವ್ಯವಸ್ಥೆ, ತೊಡಲು ಉತ್ತಮ ಗುಣಮಟ್ಟದ ಸಮವಸ್ತ್ರ, ಉತ್ತಮ ಗುಣಮಟ್ಟದ ಶಿಕ್ಷಣ ಈ ದಿನದ ಅವಶ್ಯಕತೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಬಡ ಜನರಿಗೆ ವಿದ್ಯಾಭ್ಯಾಸವನ್ನು ನೀಡಲು ಹಾಗೂ ಸರಕಾರಿ ಇಲಾಖೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಮನೋಭಾವ ಇರುವವರಿಗೆ ಕಡ್ಡಾಯವಾಗಿ ಸರಕಾರಿ ಶಾಲೆಗಳು ಇರಬೇಕು.
Comments