ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ

ತಾಯಿ ಮರಣ ದೇಶದ ಪ್ರಗತಿಗೆ ಮಾರಕವಾಗಿದೆ. ಭಾರತದಲ್ಲಿ ವೈದ್ಯರ ಕೊರತೆ ಇದೆ. ಬದಲಾದ ಕಾಲ ಘಟ್ಟದಲ್ಲಿ ಸೂಕ್ತ ಸಮಯದಲ್ಲಿ ಗುಣಮಟ್ಟದ ಚಿಕಿತ್ಸೆ ವೈದ್ಯಕೀಯ ಆರೈಕೆ ದೊರಕುತ್ತಿಲ್ಲ. ಸೂಕ್ತ ಆರೈಕೆ ಸಿಗದ ಕಾರಣ ದೇಶದಲ್ಲಿ ತಾಯಿ ಮರಣ ಸಂಭವಿಸುತ್ತಿವೆ. ತಾಯಿ ಮರಣಕ್ಕೆಕಾರಣಗಳನ್ನು ವೈದ್ಯಕೀಯ, ಅವೈದ್ಯಕೀಯ ಎಂದು ವಿಂಗಡಿಸಬಹುದು. ವೈದ್ಯಕೀಯ ಕಾರಣಗಳಲ್ಲಿ ಬಹಳಷ್ಟುಮರಣಗಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ಆರೈಕೆ ದೊರಕದೆ ಸಂಭವಿಸಿರುತ್ತವೆ ಎಂಬುದು ವಿಷಾಧನೀಯವಾದ ಸಂಗತಿಯಾಗಿದೆ.

ಭಾರತದಲ್ಲಿ ಈ ದಿನವೂ ಕೂಡ 2 ಬಾರಿ ಊಟಕ್ಕೆ ಗತಿ ಇಲ್ಲದ ಜನರು ಇದ್ದಾರೆ. ವರ್ಷವಿಡಿ ಕಷ್ಟಪಟ್ಟು ದುಡಿಯುವ ರೈತಾಪಿ ವರ್ಗ ವೈದ್ಯಕೀಯ ವೆಚ್ಚಗಳನ್ನು ಬರಿಸಲು ಹೆದರುತ್ತಿದ್ದಾರೆ. ವೈದ್ಯಕೀಯ ರಂಗ ಈ ದಿನ ವೃತ್ತಿಯಾಗಿ ವ್ಯಾಪಾರೀಕರಣವಾಗಿದೆ. 

ಪ್ರತಿ ಗರ್ಭಿಣಿಯು ಕನಿಷ್ಠ 4 ಬಾರಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಂಡು ರಕ್ತದಲ್ಲಿ ಹಿಮೊಗ್ಲೊಬಿನ್ ಪ್ರಮಾಣ, ಬಿ.ಪಿ, ಕಬ್ಬಿಣಾಂಶ ಮತ್ತಿತರ ವಿಷಯಗಳ ಕಡೆ ಗಮನ ಹರಿಸಬೇಕು. ಅನಿಮೀಯಾ ಎಂದು ಕಂಡು ಬಂದಲ್ಲಿ, ಬಿ.ಪಿ ಎಚ್ಚು ಇರುವುದು ಕಂಡು ಬಂದಲ್ಲಿ ಸೂಕ್ತ ಮಾತ್ರೆಗಳನ್ನು ಔಷಧಿಗಳನ್ನು ಪಡೆಯಬೇಕು. ಎಚ್. ಐ.ವಿ ಮತ್ತಿತರ ಪರೀಕ್ಷೆಗೊಳಪಟ್ಟು ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆಯನ್ನು ಪಡೆಯಬಹುದು ಮತ್ತು ಮಗುವಿಗೆ ಹರಡದಂತೆ ತೆಡಯಬಹುದು. ಹಾಗೂ ಮಗುವಿನ ಬೆಳವಣಿಗೆಯ ಬಗ್ಗೆ ಹರಿಸಲು ಅನುಕೂಲವಾಗುತ್ತದೆ.

ಆದರೆ ಸಾಮಾಜಿಕ, ಆರ್ಥಿಕ ಕಾರಣಗಳಿಂದ ಒಬ್ಬಳು ಗರ್ಭಿಣಿ ಒಂದೇ ಊರಿನಲ್ಲಿ ಇರುವುದಿಲ್ಲ. ಬರ ಪೀಡಿತ ಪ್ರದೇಶದ ಜನರು ಕೆಲಸಕ್ಕಾಗಿ ನಗರಗಳ ಕಡೆಗೆ ವಲಸೆ ಹೋಗುತ್ತಾರೆ. ಸೂಕ್ತ ಗರ್ಭಿಣಿ ಆರೈಕೆ ಮಾಡಿಕೊಳ್ಳುವುದಿಲ್ಲ. ಸೂಕ್ತ ವೈದ್ಯಕೀಯ ತಪಾಸಣೆಗೆ ಒಳ ಪಡುವುದಿಲ್ಲ. ಹೆರಿಗೆಗೆ 1 ವಾರ  ಇಲ್ಲವೇ 1 ತಿಂಗಳು ಇರುವಾಗ ತಾಯಿ ಮನೆಗೆ ಹೆರಿಗೆಗೆ ಬರುತ್ತಾರೆ. ಗಂಡಾಂತರ ಹೆರಿಗೆಯ ಲಕ್ಷಣಗಳು ಇದ್ದರೆ ಸ್ಥಳೀಯ ವೈದ್ಯರು ಮೇಲ್ದರ್ಜೆಯ ಅಥವಾ ಇತರೆ ಆಸ್ಪತ್ರೆಗೆ ರೆಫರ್ ಮಾಡುತ್ತಾರೆ. ಈ ಸಂದರ್ಭದಲ್ಲಿ ದಾರಿ ಮಧ್ಯೆ ಸಾವು ಸಂಭವಿಸಬಹುದು. ವೈದ್ಯರ ನಿರ್ಲಕ್ಷತೆಯಿಂದ ಸಾವು ಸಂಭವಿಸಬಹುದಾಗಿದೆ. 

ಈ ಮೇಲ್ಕಂಡ ವಿಷಯಗಳನ್ನು ಪರಿಗಣಿಸಿ ದೇಶದಲ್ಲಿ ತಾಯಿ ಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಆರೋಗ್ಯ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಇದರ ಮೂಲ ಉದ್ಧೇಶ ಪ್ರತಿ ತಿಂಗಳು 9 ನೇ ತಾರೀಖಿನಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕ ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ,  ಸರ್ಕಾರಿ/ ಅರೆ ಸರ್ಕಾರಿ/ಖಾಸಗಿ ಸ್ತ್ರೀ ರೋಗ ತಜ್ಞರು ಗರ್ಭಿಣಿ ಸ್ತ್ರೀಯರ ಪರೀಕ್ಷೆ ಮಾಡಿ ಸೂಕ್ತ ಮಾರ್ಗದರ್ಶನ ನೀಡ ಬೇಕಾಗಿರುತ್ತದೆ ಮತ್ತು ಮುಖ್ಯವಾಗಿ ತಾಯಿ ಮರಣ ಸಂಬವಿಸದಂತೆ ಕ್ರಮ ವಹಿಸಬೇಕಾಗಿರುತ್ತದೆ.

     1 ಬಾರಿಯೂ ವೈದ್ಯಕೀಯ ಪರೀಕ್ಷೆಗೊಳಪಡದ ಗರ್ಭಿಣಿ ಸ್ತ್ರೀ
     1 ಅಥವಾ 2 ಬಾರಿ ವೈದ್ಯಕೀಯ ಪರೀಕ್ಷೆಗೊಳಪಟ್ಟ ಗರ್ಭಿಣಿ ಸ್ತ್ರೀ

ಇದೊಂದು ಗ್ರಾಮೀಣ ಮತ್ತು ಬಡ ಹೆಣ್ಣು ಮಕ್ಕಳ ಪಾಲಿಗೆ ವರವಾಗಿ ಆಗಮಿಸಿರುವ ಹೊಸದಾದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಇದರ ಪೂರ್ಣ ಪ್ರಯೋಜನವನ್ನು ಗರ್ಭಿಣಿಯ ಮಹಿಳೆಯರು ಪಡೆಯಬೇಕು. ವೈದ್ಯರಿಗೆ ಹಣ ನೀಡಬೇಕಾಗಿರುವುದಿಲ್ಲ. ಈ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಅಗತ್ಯ ಇರುವ ಔಷಧಿಯನ್ನು ಜೆ.ಎಸ್.ಎಸ್.ಕೆ ಕಾರ್ಯಕ್ರಮದಡಿ ಬರಿಸ ಬೇಕು. 

ತಾಯ್ತನಕ್ಕೆ ಯಾವುದೇ ಜಾತಿ, ಕುಲದ ಹಂಗು ನೋಡದೇ, ಬಡವ, ಶ್ರೀಮಂತ ಎಂದು ಭೇದವೆಣಿಸದೆ ಉಚಿತವಾದ ಚಿಕಿತ್ಸೆಯನ್ನು ನೀಡಬೇಕು ಮತ್ತು ತಾಯಿ ಮರಣ ಶಿಶು ಮರಣವನ್ನು ತಡೆಗಟ್ಟ ಬೇಕು.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva