ಒಂದು ದೂರವಾಣಿ ಕರೆ ನೂರು ವಿಚಾರಗಳು
ಸಂಜೆ 7 ರ ಸಮಯ, ದೂರವಾಣಿ ಕರೆ ಬಂದಿತು ನಿಮ್ಮ ಮೇಲೆ ಯಾರೋ ಮೂಕರ್ಜಿಯನ್ನು ಬರೆದಿದ್ದಾರೆ. ನೀವು ಕಡತಕ್ಕೆ ಸಹಿ ಮಾಡಲು ಹಣವನ್ನು ಕೇಳುತ್ತೀರೆಂದು, ಹಾಗೂ ಕಛೇರಿಯಲ್ಲಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತೀರಿ ಎಂದು'. ನನ್ನ ಬಾಯಿಯಿಂದ ಮೊದಲ ಬಂದ ಉತ್ತರ ''I will commit suicide''. ಕರೆ ಮಾಡಿದವರು ಸಂತೈಸಿದರು, ಅಂತಹ Extreme step ತೆಗೆದುಕೊಳ್ಳುವುದು ಏನು ಆಗಿಲ್ಲ, ಇಲಾಖೆಯಲ್ಲಿ ವೇತನ ಹೊರತು ಪಡಿಸಿ ಯಾವುದೇ Procurement, Tender ಗೆ ಹಣದ ಹೊಂದಾಣಿಕೆಯಾಗಿದೆ ಸಹಿ ಮಾಡುವ ಅಧಿಕಾರಿಗಳು ಯಾರಿದ್ದಾರೆ, ಭ್ರಷ್ಟರ ಲೋಕದಲ್ಲಿ ಪ್ರಾಮಾಣಿಕತೆಯ ಬಟ್ಟೆ ತೊಡಲು ಹೊರಟ ಕಾರಣಕ್ಕೆ ಯಾರೋ ಈ ರೀತಿ ಮಾಡಿರಬೇಕು, ಎಚ್ಚರ ದಿಂದಿರಿ ಎಂದು ತಿಳಿಸಿದರು. ಹಣಕಾಸಿನ ವಿಚಾರದಲ್ಲಿ ಖಾಯಂ ನೌಕರರು/ಅಧಿಕಾರಿಗಳು ಗುತ್ತಿಗೆ ಸಿಬ್ಬಂದಿಗಳ ಮೂಲಕ ನೇರವಾಗಿ ಹಣ ಮಾಡುತ್ತಿರುವುದು ಸಾಮಾನ್ಯವಾಗಿದೆ. ನಿಮ್ಮಿಂದ ಯಾರಿಗೊ ಹಣದ ಒಳ ಹರಿವು ಕಡಿಮೆಯಾಗಿರುವುದಕ್ಕೆ ಈ ರೀತಿ ಮಾಡಿದ್ದಾರೆ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬ ಬೇಡಿ ಎಂದು ಹೆಚ್ಚರಿಸಿದರು. ಈ ಕರೆ ಹಲವು ವಿಚಾರಗಳನ್ನು ಇಲ್ಲಿಯವರೆಗೆ ಜರುಗಿದ ವಿಚಾರಗಳ ಕುರಿತು ಮೆದುಳು ಬೇಡವೆಂದರು ಯೋಚಿಸಲು ತೊಡಗಿತು. ಬಂದಾಗ ಕಛೇರಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳು ಹರಿಹರ, ದಾವಣಗೆರ...