ಡಾ. ಬಿ.ಆರ್.ಅಂಬೇಡ್ಕರ್‌ರವರು
ಓಂ
ಶ್ರೀಯುತರಾದ ಡಾ. ಬಿ.ಆರ್.ಅಂಬೇಡ್ಕರ್‌ರವರು ಭಾರತ ದೇಶದ ಓರ್ವ ಮಹಾನ್ ನಾಯಕ. ಒಬ್ಬ ಮೇಧಾವಿ ವಿದ್ವಾಂಸರಾಗಿ, ಹೆಸರಾಂತ ನ್ಯಾಯವಾದಿಯಾಗಿ , ಶಿಕ್ಷಣ ತಜ್ಞರಾಗಿ , ಕಾರ್ಮಿಕರ, ಮಹಿಳೆಯರ, ಹರಿಜನರ, ಶೋಷಿತರ ಹಕ್ಕುಗಳಿಗಾಗಿ ಜೀವನ ಪರ್ಯಂತ ಹೋರಾಡಿದ ಆದರ್ಶ ಪುರುಷ. ಡಾ.ಅಂಬೇಡ್ಕರ್ ರವರ ಕೆಲಸಗಳು ಯಾವುದೇ ಒಂದು ಜನಾಂಗ, ಜಾತಿ, ವರ್ಗ, ದೇಶಕ್ಕೆ ಮೀಸಲಾಗಿರುವುದಿಲ್ಲ. ಮಾನ್ಯರ ಕೆಲಸಗಳು ಪ್ರೇರೇಪಣೆಯ ಶಕ್ತಿಯಾಗಿವೆ. ಹಲವಾರು ಶತಮಾನಗಳಿಂದ ಮೂಲೆಗುಂಪಾಗಿದ್ದ ಜನ ತಲೆ ಎತ್ತಿ ಜಗದ ಎಲ್ಲ ಕೆಲಸ ಕಾರ್ಯಗಳಲ್ಲಿ ಎಲ್ಲರೊಂದಿಗೆ ಸರಿ ಸಮರಾಗಿ ಹಾಗೂ ಹಲವು ಬಾರಿ ಇನ್ನು ಹೆಚ್ಚಿಗೆ ಕೆಲಸ ನಿರ್ವಹಿಸುವ ಶಕ್ತಿಯನ್ನು ನೀಡಿದೆ.
Industrialization ದೇಶದಲ್ಲಿ ಹಾಗೂ ಪ್ರಪಂಚದಾದ್ಯಂತ ವಿವಿಧ ರೀತಿಯಲ್ಲಿ ಬೇರು ಬಿಟ್ಟಿದ್ದಂತಹ ಅಸಮಾನತೆಯನ್ನು ಅಲುಗಾಡಿಸುವಲ್ಲಿ ತನ್ನ ಕಾಣಿಕೆಯನ್ನು ನೀಡಿದೆ. ಜೊತೆಯಲ್ಲಿ ಕೂರಲು ವರ್ಣ ಭೇದ, ಜಾತಿ ಭೇದವನ್ನು ಅನುಸರಿಸುತ್ತಿದ್ದ ಸಮಾಜದಲ್ಲಿ ಬೇಡ ಎನಿಸಿದರು, ವೇತನಕ್ಕಾಗಿ ಒಂದೇ ರೀತಿಯ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆ ಏರ್ಪಟ್ಟಿತು, ಸಾರ್ವಜನಿಕ ಬಸ್ ಸೇವೆಗಳು ಶುರುವಾದ ನಂತರ, ಉಳಿತಾಯ ಮಾರ್ಗವಾಗಿ ಒಂದೇ ಬಸ್ಸಿನಲ್ಲಿ ಸಂಚರಿಸಬೇಕಾಯಿತು. ಹಣದ ಮಹತ್ವ ಹಾಗೂ ಜೀವನೋಪಾಯದ ಹೊಂದಾಣಿಕೆಗಾಗಿ ಜನ ಸಾಮಾನ್ಯರು ಜಾತಿ ಭೇದ, ವರ್ಣ ಭೇದ ಗಳ ಕಟ್ಟಳೆಗಳ ಸಂಕೋಲೆಯಿಂದ ನಿಧಾನವಾಗಿ ಹೊರಬರಲು ಪ್ರಾರಂಭಿಸಿದರು.
ಡಾ. ಅಂಬೇಡ್ಕರ್ ರವರು ತಮ್ಮ ಜೀವನದ ಪ್ರಾರಂಭದ ಹಂತದಲ್ಲಿ ಹಲವರು ಸಾಮಾಜಿಕ, ಸಾಂಸ್ಕೃತಿಕ, ವಿದ್ಯಾಭ್ಯಾಸ, ಬಾಲ್ಯ ವಿವಾಹ, ಬಹು ಸಂತಾನ, ಆರೋಗ್ಯ ವ್ಯವಸ್ಥೆ, ಜಾತಿ ಭೇದ, ಶಿಕ್ಷಣದಲ್ಲಿ ಪ್ರತ್ಯೇಕತೆ, ಕಾರ್ಮಿಕ ವ್ಯವಸ್ಥೆಯ ಸಮಸ್ಯೆಗಳು, ಮಹಿಳೆಯರ ಶೋಷಣೆ, ಸಮಾಜದಲ್ಲಿ ಆರ್ಥಿಕ ವ್ಯವಸ್ಥೆ ಗಳನ್ನು ಗಮನಿಸಿದರು. ಶ್ರೀಮಂತರು ಶ್ರೀಮಂತರಾದರು ಬಡವರು ಹೆಚ್ಚು ಬಡವರಾದರು, ಬಡವರಿಗೆ ಶೋಷಣೆಯ ಪರ ಧ್ವನಿ ಎತ್ತು ಅವಕಾಶವು ಇಲ್ಲದಿರುವುದನ್ನು ಗಮನಿಸಿದರು.
ಡಾ. ಅಂಬೇಡ್ಕರ್ ರವರು ವಿದ್ಯಾಭ್ಯಾಸದ ಮಹತ್ವವನ್ನರಿತು ತಾವು ಶಿಕ್ಷಿತರಾದರು, ಸುಶಿಕ್ಷಿತರಾದರು, ಹಲವಾರು ವಿಷಯಗಳಲ್ಲಿ ಪದವಿಗಳನ್ನು, ಡಾಕ್ಟರೇಟ್ ಪಡೆದರು. ತಮ್ಮ ಸಮಾಜದ, ಜಾತಿಯ, ತಮ್ಮಂತ ಹಲವು ಕೋಟಿ ಶೋಷಿತರಿಗೆ ವಿದ್ಯಾಭ್ಯಾಸದ ಮಹತ್ವವನ್ನು ತಿಳಿಸಿ ವಿದ್ಯಾವಂತರಾಗಿ ಸಮಾಜದಲ್ಲಿ ಗೌರವಯುತರಾಗಿ ಜೀವಿಸಲು ವೇದಿಕೆಯನ್ನು ಸೃಷ್ಟಿಸಿಕೊಟ್ಟರು. ಈ ದಿನ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಆಳುವ ಸರ್ಕಾರಗಳು ಹಲವು ರೀತಿಯ ವ್ಯವಸ್ಥೆಯನ್ನು ಮಾಡಿವೆ. ಅವುಗಳಲ್ಲಿ ಉಚಿತ ಶಾಲೆ, ಕಾಲೇಜು ಗಳಿರಬಹುದು, ವಸತಿ ನಿಲಯಗಳಿರಬಹುದು, ಉಚಿತ ಸಮವಸ್ತ್ರ, ಪುಸ್ತಕ, ಲೇಖನಿ, ಅಗತ್ಯ ಅನುದಾನವಿರಬಹುದು. ಬ್ಯಾಂಕ್ ಗಳ ಮುಖೇನ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಲೋನ್ ಇರಬಹುದು. ಇಂದು ಕೋಟ್ಯಾಂತರ ಶೋಷಿತ ಸಮುದಾಯದ ಮಕ್ಕಳು ವಿದ್ಯಾವಂತರಾಗಿದ್ದಾರೆ, ವಿದ್ಯಾಭ್ಯಾಸದ ಮಹತ್ವದಿಂದ ರಾಜ್ಯ, ದೇಶ, ವಿದೇಶ, ಅಂತರ ರಾಷ್ಟ್ತೀಯ ಮಟ್ಟದಲ್ಲಿ ವಿವಿಧ ಉದ್ಧೆಗಳನ್ನು ಅಲಂಕರಿಸಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ವಿದ್ಯಾಭ್ಯಾಸ ಮೊದಲು ಜಾತಿ ವ್ಯವಸ್ಥೆಯಡಿ ಸಿಲುಕಿ ನಲುಗಿತ್ತು ಇಂದು ವ್ಯವಹಾರವಾಗಿ ಬದಲಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಹಣವನ್ನು ನೀಡಬೇಕಾದ ಅನಿವಾರ್ಯತೆ ಇದೆ. ಇವತ್ತು ಹಲವಾರು ಸರಕಾರಿ ಶಾಲೆಗಳು ಶಾಲೆಗಳಲ್ಲಿ ಮಕ್ಕಳಿಲ್ಲದೇ ಮುಚ್ಚಿವೆ. ಕಾಂಚಾಣದ ಖಾಸಗಿ ಸಂಸ್ಥೆಗಳು ವಿವಿಧ ಆಮಿಷಗಳನ್ನೊಡ್ಡಿ ಮಕ್ಕಳನ್ನು ಸೆಳೆಯುತ್ತಿವೆ. ಖಾಸಗಿ ಶಾಲೆಯಲ್ಲಿ ಓದಿಸುವುದು ಒಂದು ಪ್ರೆಸ್ಟೀಜ್ ಎಂದು ಭಾವಿಸುವ ತಂದೆ ತಾಯಿ, ಅಂಬೇಡ್ಕರ ಅಂತವರ ಶ್ರಮವನ್ನು ಮರೆಯುತ್ತಿದ್ದಾರೆ. ಪ್ರೆಸ್ಟಿಜ್ ಎಂದು ತಾವು ತಮ್ಮ ಬಳಕೆಗೆ ಮಿಗಿಲಾಗಿ ಖಾಸಗಿ ಶಾಲೆಗಳಿಗೆ, ಕಾಲೇಜುಗಳಿಗೆ ವಿವಿಧ ರೀತಿಯಲ್ಲಿ ಫೀಸುಗಳ ರೂಪದಲ್ಲಿ ಹಣವನ್ನು ಕಟ್ಟುತ್ತಿದ್ದಾರೆ. ಧನದಾಹ ಅಗಾಧವಾದಾಗ ಕ್ರಾಂತಿಗಳು ಸಂಭವಿಸುತ್ತವೆ ಮತ್ತು ವ್ಯವಸ್ಥೆ ಬದಲಾಗುತ್ತದೆ.
ವಿದ್ಯಾವಂತರಾದವರೆಲ್ಲರಿಗು ಸರ್ಕಾರಿ ಕೆಲಸ ಸಿಗುವುದಿಲ್ಲ. ಕೆಲವರು ಗುತ್ತಿಗೆ, ಅರೆಗುತ್ತಿಗೆ, ಖಾಸಗಿ ಸಿಬ್ಬಂದಿಗಳಾಗಿ, ಕೆಲವರು ರೈತರಾಗಿ, ರಾಜಕಾರಣಿಗಳಾಗಿ, ಉದ್ಯಮಿಗಳಾಗಿ, ನಿರುದ್ಯೋಗಿಗಳಾಗಿ, ಜಿಗುಪ್ಸೆಗೊಳಗಾಗಿ ಜೀವಿಸುತ್ತಾರೆ. ದೊಡ್ಡ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಹೆಚ್ಚು ಸಂಬಳ ಅನ್ನು ವಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದುವವರಿಗೆ ಯಾವ ಇನ್ಫೋಸಿಸ್, ವಿಪೃೋ, ಓರೇಕಲ್, ಟಿ.ಸಿ.ಎಸ್, ಗೂಗಲ್, ಫೇಸ್ಬುಕ್ ಇತರೆ ಯಾವ ಕಂಪನಿಗಳು ಪ್ರತಿ ಮಾಹೆ ಕೋಟಿ ರೂ ವೇತನಕ್ಕೆ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡಿವೆ! ಡಾ. ಅಂಬೇಡ್ಕರ್ ರವರೇ ಈ ವ್ಯವಸ್ಥೆಯನ್ನು ಸರಿ ಮಾಡಲು ಮತ್ತೊಮ್ಮೆ ಹುಟ್ಟಿ ಬನ್ನಿ. ಸರ್ಕಾರ ಈ ಕುರಿತು ಖಾಸಗಿ ಸಂಸ್ಥೆಗಳೊಂದಿಗೆ ಸೂಕ್ತ ಒಡಂಬಡಿಕೆಗಳನ್ನು ಮಾಡಿಕೊಳ್ಳಬೇಕು.
ಎಲ್ಲ ಸರ್ಕಾರಿ ಪದವಿ ಕಾಲೇಜುಗಳಲ್ಲಿಯು ಪ್ರತಿಭಾನ್ವಿತರಿದ್ದಾರೆ. ಈ ಪ್ರತಿಭೆಗಳಿಗೆ ಆರ್ಹವೇತನ ದೊರಕಬೇಕು. ಖಾಸಗಿ ಕಂಪನಿಗಳು ಸರ್ಕಾರಿ ಕಾಲೇಜುಗಳಲ್ಲಿ ಪ್ರತಿಭಾನ್ವಿತರ ಆಯ್ಕೆಗೆ ಅವಕಾಶ ಮಾಡಿಕೊಡಬೇಕು. ತಮ್ಮ 100% ಆಡಳಿತಾತ್ಮಕ ಮಾನವ ಸಂಪನ್ಮೂಲದಲ್ಲಿ ಕನಿಷ್ಠ 10 % ಮಾನವ ಸಂಪನ್ಮೂಲ ಆಯ್ಕೆ ಸರಕಾರಿ ಕಾಲೇಜುಗಳ ಮುಖೇನ ಮಾಡಿದರು ಕೂಡ, ಈ ದೇಶದ ಶೋಷಿತ ವರ್ಗಕ್ಕೆ ನೀಡಿದ ಮಹತ್ವದ ಕೊಡುಗೆಯಾಗಲಿದೆ.
ಹಲವಾರು ಸಮಾನತೆಗಳು ವ್ಯಕ್ತಿಯ ಬಳಿ ಸಂಪತ್ತು ಕ್ರೂಢೀಕರಣವಾದಾಗ ತಾನಾಗಿಯೇ ಬರುತ್ತವೇ. ಸಂಪತ್ತು ಗಳಿಕೆಗೆ ಹಲವಾರು ಮಾರ್ಗಗಳು. ಉದ್ಯಮಶೀಲತೆಯಲ್ಲಿ ಯಶಸ್ಸನ್ನು ಗಳಿಸಿ ಹಲವಾರು ಜನರಿಗೆ ಉದ್ಯೋಗ ನೀಡುವುದು ಹಲವು ಜನರ ಕನಸು, ಕೆಲವರು ಈ ಪ್ರಯತ್ನದಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಶೋಷಿತ ವರ್ಗದ ಜನರಲ್ಲಿ ಕೆಲವರು ಸಮ್ಮ ಸ್ವಂತಿಕೆಯ ಮೇಲೆ, ವಿದ್ವತ್ತಿನ ಮೇಲೆ, ಜ್ಞಾನದ ಮೇಲೆ ಹಾಗೂ ಆರ್ಹರ ನೆರವನ್ನು ಪಡೆದು ದೇಶದ ಪ್ರತಿಷ್ಠಿತ ಸಂಸ್ಥೆಗಳ ಮಾಲಿಕರಾಗಿದ್ದಾರೆ. ಹಲವಾರು ಲಕ್ಷ ಜನರಿಗೆ ಕೆಲಸವನ್ನು ನೀಡಿ ದೇಶದ ಆರ್ಥಿಕತೆಗೆ ತಮ್ಮ ನೆರವು ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಸ್ಟಾರ್ಟಅಪ್ ಗಳು ಹೆಚ್ಚು ಹೆಚ್ಚು ಬರುತ್ತಿವೆ. ಸ್ಟಾರ್ಟ ಅಪ್ ಗಳು ಫ್ಯಾಕ್ಟರಿಯಲ್ಲಿ ಇರುವ ಮಾರುಕಟ್ಟೆಯಲ್ಲಿ ಹೊಸ ನಾವೀನ್ಯತೆಯೊಂದಿಗೆ ಉತ್ಪನ್ನವನ್ನು/ಸೇವೆಯನ್ನು ಗ್ರಾಹಕರಿಗೆ ಪರಿಚಯಿಸುತ್ತವೆ. ಇಲ್ಲಿ ನಾವೀನ್ಯತೆ ಮಹತ್ವವನ್ನ ಪಡೆದಿದೆ. ಹೊಸ ಉತ್ಪನ್ನ ವಾಗಿರಬಹುದು ಅಥವಾ ಇರುವ ಉತ್ಪನ್ನ ಮತ್ತು ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಯೊಂದಿಗೆ reintroduce ಮಾಡುವುದಾಗಿರಬಹುದು. ಉದಾಹರಣೆಗೆ: ಜನರು ಪ್ರವಾಸಕ್ಕೆ ತೆರಳುವಾಗ ಬಾಡಿಗೆಗೆ ವಾಹನವನ್ನು ಪಡೆಯುತ್ತಿದ್ದರು. ಓಲಾ ಮತ್ತು ಊಬರ್ ಗಳು ಬಾಡಿಗೆ ವಾಹನದ ಕುರಿತು ಇದ್ದಂತಹ ಸೇವೆಯಲ್ಲಿ ಮಹತ್ವಪೂರ್ಣ ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ಮಾಡಿವೆ. ಜನರು ಇವುಗಳನ್ನು ಹೆಚ್ಚಿನ ಮಟ್ಟದಲ್ಲಿ ಒಪ್ಪಿಕೊಂಡು ಸೇವೆಗೆ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ಜನರು ತಮ್ಮ ಸ್ಥಳ ಹಾಗೂ ಪೋನಿನ ಮೂಲಕ App ನ ಮೂಲಕ ವಾಹನವನ್ನು ಬುಕ್ ಮಾಡಿ ಮುಂಗಡವಾಗಿ ಪ್ರಯಾಣದ ಖರ್ಚು ತಿಳಿಯುವ ವ್ಯವಸ್ಥೆಯಿರುತ್ತದೆ. ಕೆಲವೊಮ್ಮೆ ಸಂಸ್ಥೆಗಳು ನೀಡಲಾಗುವ Offer ಗಳ ಮುಖೇನ ಪ್ರಯಾಣದ ದರದಲ್ಲಿ ಪ್ರಯಾಣಿಕರಿಗೆ ತುಂಬ ಉಳಿಕೆಯಾಗುತ್ತದೆ ಮತ್ತು ಸಮಯವು ಉಳಿಯುತ್ತದೆ.
ಶೋಷಿತ ಸಮುದಾಯ ಜನರು ಹೆಚ್ಚಿನ ಮಟ್ಟದಲ್ಲಿ ಸ್ಟಾರ್ಟ ಅಪ್ ಗಳಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರವು ಜನರ ಅನುಕೂಲಕ್ಕಾಗಿ Incubation Center ಗಳನ್ನು ತೆರೆದಿದೆ. Incubation center ಗಳು ನವೋದ್ಯಮಿಗಳಿಗೆ ಮಾರ್ಗದರ್ಶನವನ್ನು, ಕ್ಷೇತ್ರದಲ್ಲಿರುವ ತಜ್ಞರ ಮಾರ್ಗದರ್ಶನದಲ್ಲಿ ಸಹಕಾರ, ತರಬೇತಿ, ಉತ್ಪನ್ನ ಪರೀಕ್ಷೆಗೆ ಸಹಕಾರ, ಉತ್ಪನ್ನ ಅಭಿವೃಧ್ಧಿಗೆ ನೆರವು, Grant-in̲-Aid ಮೂಲಕ ಹಣಕಾಸು ನೆರವನ್ನು ನೀಡುತ್ತಿದೆ. ಕೆಲಸದ ಸ್ಥಳ, ಮೀಟಿಂಗ್ ಹಾಲ್, Promotion & ಭrandiņ̧g, Regulatory & Advisory Serviçe, Networkiņg, Linkagȩs, Mentoring Specific & Grou̧p Intellectual Property rights serviçȩs, Capacity building activities.
ಕೃಷಿ ಕ್ಷೇತ್ರದಲ್ಲಿ ICAR ̲ India Council of Agriculture Research ಮುಖೇನ RKVY̲-RAFTAA̧ NAIF ̲ABI ಮುಖೇನ ಸ್ಟಾರ್ಟ ಅಪ್ ಗಳಿಗೆ ನೆರವು ನೀಡುತ್ತಿವೆ. ಹೆಚ್ಚಿನ ಸಾರ್ವಜನಿಕರು ಈ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಬೇಕು.
Startupindia seed fund schem̧e,
BIRAC ignite innovate incubate,
Nidhi Prayas,
Mudŗa,
Elevate 100,
Department of Bio technoloģy Government of India
RKVY̲-RAFTAA̧
NAIF ̲ABI
ಪ್ರತಿಷ್ಠಿತ ಕಾಲೇಜುಗಳಲ್ಲಿಯೂ ಕೂಡ Incubation Center ಗಳು ಶುರುವಾಗಿವೆ ಮತ್ತು ವಿದ್ಯಾರ್ಥಿಗಳ ಆಸೆ, ಆಕಾಂಕ್ಷೆಗಳಿಗೆ ಅಗತ್ಯ ನೆರವು ನೀಡುವಲ್ಲಿ, ಹೊಸ ಉತ್ಪನ್ನ ಪ್ರೋಟೋಟೈಪ್ ಮಾಡುವಲ್ಲಿ, ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿವೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ಡಾ.ಅಂಬೇಡ್ಕರ್ ರವರು ಜನರಲ್ಲಿ ಈ ದೇಶದ ನಾಗರೀಕರಾಗಿ ತಮ್ಮ ಹಕ್ಕುಗಳು ಯಾವ್ಯಾವು ಎನ್ನುವ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಹಲವಾರು ಸಂಘಟನೆಗಳು ಈ ದಿನ ಹಕ್ಕುಗಳ ಅರಿವು ಮೂಡಿಸುವ ಪ್ರಯತ್ನದಲ್ಲಿ ಮಹತ್ವ ಪೂರ್ಣ ಪಾತ್ರವನ್ನು ಪ್ರತಿ ಗ್ರಾಮ, ಹೋಬಳಿ, ತಾಲೂಕ, ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಸಂಘಟನೆಗಳು ಶೋಷಿತರ ಧ್ವನಿಯಾಗಿ ಬಹಳ ಪ್ರಬುಧ್ಧವಾಗಿ ನ್ಯಾಯೋಚಿತ ಮಾರ್ಗದಲ್ಲಿ ಸಮಾಜದಲ್ಲಿ ಸಮಾಜವನ್ನು ಕಟ್ಟುವ ಸಂಘಟಿತ ಪ್ರಯತ್ನವನ್ನು ಮಾಡುತ್ತಿವೆ. ಶೋಷಿತರ ಪರವಾಗಿ ಧ್ವನಿಯಾಗಿ ವಸತಿ, ಆಹಾರ, ಭೂಮಿ ಹಾಗೂ ಇತರೆ ವಿಚಾರಗಳ ಕುರಿತು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.
ಹಲವಾರು ಜನ ನಾಯಕರ ಹೆಸರಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಇವರ ಆಶಯಗಳಿಗೆ ಪರಿಪೂರ್ಣವಾಗಿ ಕೆಲಸ ನಿರ್ವಹಿಸಿದ ವ್ಯಕ್ತಿಗಳಿಗೆ, ಸಂಘ, ಸಂಸ್ಥೆಗಳಿಗೆ ವಾರ್ಷಿಕ ಡಾ. ಬಿ.ಆರ್. ಅಂಬೇಡ್ಕರ್ ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಇದು ಶ್ರೀಯುತರಿಗೆ ನೀಡುವ ಗೌರವವೂ ಕೂಡ ಆಗಿದೆ. ಡಾ. ಬಿ.ಆರ್. ಅಂಬೇಡ್ಕರ್ ರವರು ಒಂದು ಶಕ್ತಿ, ಯಾವುದೇ ಒಂದು ಜಾತಿ, ಪಂಗಡಗಳಿಗೆ ಮೀಸಲಿರಿಸದೇ ಯಾವುದೇ ಜಾತಿಯಲ್ಲಿರುವ ಅಶಕ್ತ, ಶೋಷಿತರಿಗೆ ಸಮಾನತೆ, ಸಾಮಾಜಿಕ ನ್ಯಾಯ, ದೊರಕಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಜರುಗಬೇಕು.
ಮಲ್ಲಿಕಾರ್ಜುನಯ್ಯ ಎಸ್ಎನ್
Comments