ncovid-19


ನೋವೆಲ್ ಕರೋನಾ ವೈರಸ್
ರಾಜಕೀಯ ದೊಂಬರಾಟಗಳ ನಡುವೆ ಜಗತ್ತನ್ನು ಪ್ರಕೃತಿ ದತ್ತವಾಗಿ ತನ್ನೆಡೆ ಸೆಳೆದುಕೊಂಡು ವೈದ್ಯಕೀಯ ಜಗತ್ತಿಗೆ, ಜಗತ್ತಿನ ವೈದ್ಯಕೀಯ ವ್ಯವಸ್ಥೆಯ ಗುಣಮಟ್ಟವನ್ನು, ವೈದ್ಯಕೀಯ ಸೇವೆ ನೀಡುವಲ್ಲಿ ರಾಷ್ಟ್ರ ರಾಷ್ಟ್ರಗಳ ನಡುವಿನ ಹಂತರ, ವೈದ್ಯಕೀಯ ಸಿದ್ಧತೆಗಳನ್ನು ಜಗತ್ತಿಗೆ ಸಾರಿ, ಪಂಜಾಬ್ ನಿಂದ ಹಿಮಾಲಯ ವನ್ನು ನೋಡುವಷ್ಟು ವಾತಾವರಣವನ್ನು ತಿಳಿಗೊಳಿಸಿ ಕಲುಷಿತ ಮುಕ್ತ ಗೊಳಿಸಿದ ಕರೋನಾ, ಗಂಗಾ ನದಿಯ ನೀರು ಶುಭ್ರವಾಗಿ ಸ್ವಚ್ಚವಾಗಿ ಹರಿಯುವಂತೆ ಮಾಡಿದ ಕರೋನಾ ವೈರಸ್ ಮಾನವನ ಅನಾರೋಗ್ಯಕರ ವರ್ತನೆಗಳ ವಿರೋಧಿಯಾದರು ಕರೋನಾ ಪ್ರಕೃತಿ ಪ್ರೀತಿ, ನಿಸರ್ಗ ಪ್ರಿಯರಿಗೆ ಸಂತಸವನ್ನು ತಂದಿದೆ.
ಶಾಲೆಗೆ ತೆರಳಿದ ಮಕ್ಕಳು ಪರೀಕ್ಷೆ ಇಲ್ಲದೆ ಪಾಸಾಗಿದ್ದಾರೆ, ರಜೆ ಎಂದರೆ ಸಮ್ಮರ್ ಕ್ಯಾಂಪ್, ಕೋಚಿಂಗ್ ತರಗತಿಗಳಿಗೆ ಸೇರಿಕೊಳ್ಳುತ್ತಿದ್ದ ಮಕ್ಕಳು ಇಂದು ಅಜ್ಜ, ಅಜ್ಜಿಯರ ಮನೆಗೆ ತೆರಳಿದ್ದಾರೆ ಇದರಿಂದ ಅಜ್ಜ, ಅಜ್ಜಿಯರಿಗೆ ಮಕ್ಕಳನ್ನು ನೋಡುವ ಭಾಗ್ಯ ದೊರೆತಿರುವುದರ ಜೊತೆಗೆ ಮೊಮ್ಮಕ್ಕಳೊಡನೆ ಕಾಲಕಳೆಯುವ ಸಮಯವು ಲಭ್ಯವಾಗಿದೆ, ಮೊಮ್ಮಕ್ಕಳಿಗೆ ಯಾವ ಸಂಸ್ತೆಯು ನೀಡಲಾಗದ ಪ್ರೀತಿ ಶಿಕ್ಷಣ ದೊರೆತಿದೆ. ಕೆಲವು ಅಜ್ಜ ಅಜ್ಜಿಯಂದಿರು ಖುಷಿಯಿಂದ ದೈವಾಧೀನರಾಗಿದ್ದಾರೆ.
ಜನರಲ್ಲಿ ಕಾಣೆಯಾಗಿದ್ದ ಸಹಬಾಳ್ವೆ, ಸಹನೆ, ಕೂಡು ಕುಟುಂಬ, Self Hygiene, ಹೊರಗಿನಿಂದ ಬಂದಾಗ ಕೈ ಕಾಲು ತೊಳೆಯುವ ಅಭ್ಯಾಸ, ಮನೆಯ ಹೊರಗಡೆ ಪಾದರಕ್ಷೆಗಳನ್ನು ಬಿಡುವ ವ್ಯವಸ್ಥೆ ತುಂಬ ಸೂಕ್ಷ್ಮವಾದ ಬದುಕಿನ ಪಾಠಗಳನ್ನು ಕಲಿಸುವುದರ ಜೊತೆಗೆ, ತಂತ್ರಜ್ಞಾನವನ್ನು ಬಳಸಿ ಮನೆಯಿಂದಲೇ ಕೆಲಸ ನಿರ್ವಹಿಸುವ ಮೂಲಕವು ಕಂಪನಿಗಳು ಕೆಲಸ – ಕಾರ್ಯಗಳ ಸೇವೆಯನ್ನು ನೀಡಬಹುದಾಗಿದ್ದು ಇದರಿಂದ ಹಣವನ್ನು ಕಂಪನಿಗಳು ಉಳಿಸಬಹುದಾಗಿದೆ ಎಂಬ ಆರ್ಥಿಕ ನೀತಿಯನ್ನು ಜಗತ್ತಿಗೆ ಪರಿಚಯಿಸಿದೆ. ಜನರು ಅತಿಥಿಗಳನ್ನು ಸ್ವಾಗತಿಸಲು ಮುತ್ತಿಕ್ಕುವ, ತಬ್ಬಿಕೊಳ್ಳುವ ಪಾಶ್ಚಾತ್ಯ ಪದ್ದತಿಯ ಬದಲು ಭಾರತೀಯ ಹಾಗೂ ಜಪಾನೀಸ್ ಪದ್ಧತಿಯಾದ ನಮಸ್ತೆ ಆರೋಗ್ಯಕರವಾದುದಾಗಿದೆ ಎಂಬುದರ ವೈಜ್ಞಾನಿಕ ಮಹತ್ವವನ್ನು ಜಗತ್ತಿಗೆ ಸಾರಿದೆ. ರೋಗದ ಹತೋಟಿಯಲ್ಲಿ ಸಾಮಾಜಿಕ ಹಂತರದ ಮಹತ್ವವನ್ನು ಜನರಿಗೆ ತಿಳುವಳಿಕೆ ನೀಡಿದೆ.
ಕೋಟ್ಯಾಂತರ ರೂಪಾಯಿ ವಸೂಲಿ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳು ಬಂದಾಗಿವೆ, ತಜ್ಞ ವೈದ್ಯರು ಚಿಕಿತ್ಸೆ ನೀಡಲು ಹಿಂದೇಟು ಆಕುವ ಸಮಯವೆದುರಾಗಿದೆ. ಸರಕಾರಿ ಆಸ್ಪತ್ರೆ ಹಾಗೂ ವೈದ್ಯರು ಮಾತ್ರ ಸೇವೆಯನ್ನು ನೀಡುವ ಹಾಗೂ ಸೇವೆಯನ್ನು ಪಡೆಯುವ ಕೇಂದ್ರಗಳಾಗಿ ಮಾರ್ಪಾಡಾಗಿರುವುದು, ಮರೀಚಿಕೆಯಾಗಿದ್ದ ವೆಂಟಿಲೇಟರ್ ಸೌಲಭ್ಯ, ಉನ್ನತ ಮಟ್ಟದ ಪ್ರಯೋಗಾಲಯಗಳು ಈ ದಿನ ಪ್ರತಿ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿಯು ಲಭ್ಯವಾಗುವಂತೆ ಸಾಧ್ಯವಾಗಿದ್ದು ಕರೋನಾ ದಿಂದಲೇ ಎಂಬುದನ್ನು ತಳ್ಳಿ ಆಕಲು ಸಾಧ್ಯವಿಲ್ಲ. ಸರ್ಕಾರ, ಜನಪ್ರತಿನಿಧಿಗಳು, ಕಾರ್ಪೋರೇಟ್ ಜಗತ್ತಿನ ಮಹಾನುಭಾವರು, ಉತ್ತಮ ಅಧಿಕಾರಿಗಳ ತಂಡ ಮನಸ್ಸು ಮಾಡಿದರೆ ಒಂದು ವ್ಯವಸ್ಥೆಯನ್ನು ಹೇಗೆ ಸರಿ ಪಡಿಸಬಹುದಾಗಿದೆ ಎಂಬುದನ್ನು ಕರೋನಾ ವೈರಸ್ ಹತೋಟಿಯ ವಿವಿಧ ಹಂತಗಳಲ್ಲಿ ಗಮನಿಸಬಹುದಾಗಿದೆ.
ಟಾಟಾ ಕಂಪನಿಯವರು 1500 ಕೋಟಿ ದೇಣಿಗೆ, ರಿಲಾಯನ್ಸ್ ಇಂಡಸ್ಟ್ರೀಸ್ ನವರು ಉತ್ತಮ ದರ್ಜೆಯ ಆಸ್ಪತ್ರೆಯನ್ನು ಅತೀ ಕಡಿಮೆ ಅವಧಿಯಲ್ಲಿ ಕಟ್ಟಿಸಿ ಕಾರ್ಯಗತಗೊಳಿಸಿದ್ದು, ಇನ್ಫೋಸಿಸ್, ವಿಪ್ರೋ, ಮಹಿಂದ್ರಾ ಕಂಪನಿಗಳು ಹಾಗೂ ವಿವಿಧ ಕಂಪನಿಗಳು, ರಾಜಕಾರಣಿಗಳು, ಸಮಾಜ ಸುಧಾರಕರು, ಚಲನ ಚಿತ್ರ ನಟ ನಟಿಯರು ಉಧಾರವಾಗಿ ಧನ ಸಹಾಯ, ಅನ್ನದ ಸಹಾಯವನ್ನು ನೀಡಿ ಕಾರ್ಮಿಕ ವರ್ಗ, ಬಡ ಜನತೆ, ಮಧ್ಯಮ ವರ್ಗವನ್ನು ಈ ಸಮಯದಲ್ಲಿ ಸಂಧಿಗ್ದ ಪರಿಸ್ಥಿತಿಯಿಂದ ಪಾರು ಮಾಡಿರುತ್ತಾರೆ.
ಊರು ಬಿಟ್ಟು ಜೀವನವನ್ನು ಕಟ್ಟಿಕೊಳ್ಳಲು ಪಟ್ಟಣಕ್ಕೆ ಬಂದ ಜನರು ವಿಧಿ ವಿಪರ್ಯಾಸಕ್ಕೆ ಸಿಲುಕಿದರು. ಕಾರ್ಖಾನೆಗಳು ಬಾಗಿಲು ಮುಚ್ಚಿದವು, ಕೆಲಸ ನಿರ್ವಹಿಸುತ್ತಿದ್ದ ಫ್ಯಾ ಕ್ಟರಿಗಳು ಕರೋನಾ ಹಂಚುವ ಕೇಂದ್ರಗಳಾದವು, ಕೆಲಸವನ್ನು ಕಳೆದುಕೊಂಡು ಮನೆ ಸೇರಿದರಾಯಿತು ಎಂದು ದೂರದೂರಿಗೆ ಪ್ರಯಾಣ ಬೆಳೆಸಿದುದು ಒಂದು ದಶಕದಷ್ಟು ಹಿಂದಕ್ಕೆ ದೇಶದ ಆರ್ಥಿಕ ಪರಿಸ್ಥಿಯನ್ನು ಹಿಂದಕ್ಕೆ ತಳ್ಳಿರುತ್ತದೆ. ಉತ್ಪಾದಕತೆಯನ್ನು ಶೂನ್ಯ ಮಾಡಿ ಹಲವಾರು ಆರ್ಥಿಕ, ಕಾರ್ಮಿಕ, ನೀತಿಗಳ ಬದಲಾವಣೆಗೆ ಕಾರಣವಾಗಿದೆ.
ತಾನೇ ಶ್ರೇಷ್ಟ ಎಂದು ಎದೆಯುಬ್ಬಿಸಿ ಮಾತಾಡುತ್ತಿದ್ದ ಅಮೇರಿಕಾ, ಸೂಕ್ತ ಸಮಯದಲ್ಲಿ ಕ್ವಾರಂಟೈನ್ ಜಾಗ್ರತೆ ವಹಿಸದೆ ಲಕ್ಷಾಂತರ ಜನರನ್ನು ಕಳೆದುಕೊಂಡಿತು. ಅಮೇರಿಕಾ ಯಾವುದೇ ಯುದ್ದದಲ್ಲಿಯೂ ಈ ರೀತಿ ಕೈಚೆಲ್ಲಿ ಕುಳಿತ ಘಟನೆ ಜಗತ್ತಿನಲ್ಲಿ ಯಾವ ದೇಶವು ಎಲ್ಲ ವಿಷಯದಲ್ಲಿಯೂ ಬಲಿಷ್ಠನಲ್ಲ ಎಂಬ ವಿಷಯವನ್ನು ಜಗತ್ತಿಗೆ ಸಾದರಪಡಿಸಿತು. ಚೀನಾ ತನಗೂ ಇದಕ್ಕು ಸಂಬಂಧವೇ ಇಲ್ಲ ಎನ್ನುವಂತೆ ಇದ್ದು ಜಗತ್ತಿಗೆ ಕಳಪೆ ಗುಣಮಟ್ಟದ ಪಿ.ಪಿ.ಈ ಕಿಟ್, ಟೆಸ್ಟಿಂಗ್ ಕಿಟ್ ಕಳುಹಿಸಿದ್ದು ಯಾವುದೇ ಸಂದರ್ಭದಲ್ಲೂ ಲಾಭ ಮಾಡಿಕೊಳ್ಳುವ ಮನೋಭಾವವನ್ನು ತೋರ್ಪಡಿಸಿದ್ದು ಮಾತ್ರ ಖೇದಕರ. ಭಾರತ ದೇಶದಲ್ಲಿ ದನದ ಮಾಂಸವನ್ನು ರದ್ದು ಮಾಡಬೇಕು ಎಂದು ಧ್ವನಿ ಎತ್ತಿದಾಗ ಅದು ಊಟದ ಪ್ರಕಾರ ಎಂದು ಧ್ವನಿಯೇರಿಸಿದ್ದ ಪ್ರಗತಿಪರ ಚಿಂತಕರು, ಚೀನಾ ಹಸಿ ಮಾಂಸ, ಕಾಡು ಪ್ರಾಣಿ ಮಾರುಕಟ್ಟೆ ಕುರಿತು ಧ್ವನಿ ಎತ್ತಿದ್ದು ವಿಪರ್ಯಾಸ. ಯಾವುದೇ ದೇಶದ ಶಕ್ತಿ ಆ ದೇಶದ ಮಾನವ ಸಂಪನ್ಮೂಲ. ಚೀನಾ ಹಾಗೂ ಭಾರತ ದೇಶವು ಜಗತ್ತಿನಲ್ಲಿಯೇ ಅತಿ ಹೆಚ್ಚು ಮಾನವ ಸಂಪನ್ಮೂಲವನ್ನೊಳಗೊಂಡಿದೆ. ಪ್ರತಿಯೋರ್ವರಿಗೂ ಪೂರ್ಣ ಪ್ರಮಾಣದಲ್ಲಿ ಆಹಾರವನ್ನು ನೀಡುವುದು ಆ ದೇಶದ ಸರ್ಕಾರದ ಕಾರ್ಯವಾಗಿರುತ್ತದೆ.
ಭಾರತ ದೇಶವು ಪ್ರಧಾನಮಂತ್ರಿಗಳಾದ ಶ್ರೀಯುತರಾದ ನರೇಂದ್ರ ಮೋದಿರವರ ಮಾರ್ಗದರ್ಶನದಲ್ಲಿ ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ಕರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಪಸರಿಸುವುದುನ್ನು ಹತೋಟಿಗೆ ತರಲು. ದೇಶದಲ್ಲಿ ಕರ್ಪ್ಯೂ ರೀತಿ ದೇಶವನ್ನು ಬಂದ್ ಮಾಡಲಾಯಿತು. ಗಡಿಗಳನ್ನು ಮುಚ್ಚಲಾಯಿತು. ದೃಶ್ಯ, ಮುದ್ರಣ, ರೇಡಿಯೋ, ಕಾಲರ್ ಟ್ಯೂನ್ ಗಳ ಮೂಲಕ ಕರೋನಾ ಕುರಿತು ಹರಿವು ಮೂಡಿಸಲಾಯಿತು. ಕೆಲವು ರಾಜ್ಯಗಳು ಆರಂಭದಲ್ಲಿ ಸಾಕಷ್ಟು ಮುಂಜಾಗ್ರತೆಯನ್ನು ತೆಗೆದುಕೊಳ್ಳದೆ ಕರೋನಾ ವೈರಸ್ ಉಲ್ಭಣಗೊಳ್ಳಲು ಕಾರಣವಾದವು. ಕೆಲವು ಕೋಮಿನ ಜನರು ಕರೋನಾ ವೈರಸ್ ಬಗ್ಗೆ ಮುಂಜಾಗ್ರತೆ, ತಪಾಸಣೆ ಮಾಡಿಸಿಕೊಳ್ಳದೆ ಇತರರಿಗೆ ಹರಡಲು ಕಾರಣರಾಗಿದ್ದು ತಾಂಡವವಾಡುತ್ತಿರುವ ಜಾತಿ, ಧರ್ಮಾಂಧತೆಯನ್ನು ಕರೋನಾ ವೈರಸ್ ಎತ್ತಿ ತೋರಿಸಿತು.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva