ಮೇ 1 ಕಾರ್ಮಿಕ ದಿನಾಚರಣೆ
May 1st is celebrated worldwide as an international day of
labor. The day when 8 hours shift came into the arena of labor workforce.
ಪ್ರತಿ ವರ್ಷ ಮೇ 1 ನೇ ತಾರೀಖಿನಂದು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನ ವಿಶ್ವ ಕಾರ್ಮಿಕ ಬಂಧುಗಳ ದಿನವಾಗಿದೆ. 8 ಗಂಟೆ ಕೆಲಸ, 8 ತಾಸು ಮನರಂಜನೆ, 8 ತಾಸು ವಿಶ್ರಾಂತಿ ಗೆ ದಿನದ 24 ಗಂಟೆಗಳನ್ನು ಮೀಸಲಿರಸಲು ನಡೆಸಿದ ಹೋರಾಟದ ಪ್ರತಿಫಲದ ದಿನವಾಗಿದೆ.
Industrialization ಕಾರ್ಮಿಕ ಸಮುದಾಯದ ಅಭಿವೃದ್ದಿಗೆ ಮಹತ್ವದ ಕಾಣಿಕೆಯನ್ನು ನೀಡಿದೆ. ಕಾರ್ಮಿಕ ಸಮುದಾಯ ಆರ್ಥಿಕವಾಗಿ ಸಮಾಜದಲ್ಲಿ ನೆಲೆ ನಿಲ್ಲಲು ಅನುಕೂಲ ಮಾಡಿಕೊಟ್ಟಿದೆ. ಮೊದಲ ಹಂತದಲ್ಲಿ ಕೆಲಸದ ಜೊತೆ ಜೊತೆಗೆ ಕಾರ್ಮಿಕ ವರ್ಗದ ಶೋಷಣೆಯನ್ನು ಗಮನಿಸಬಹುದಾಗಿದೆ. ಕಡಿಮೆ ವೇತನ, ಹೆಚ್ಚು ಕೆಲಸದ ಅವಧಿ, ಕಾರ್ಮಿಕರಿಗೆ ಸೂಕ್ತ benefits, ವಿಮೆ ಗಳನ್ನು, ಕೆಲಸದ ಸ್ಥಳದಲ್ಲಿ ಆರೋಗ್ಯಕ್ಕೆ ಕಾಳಜಿ ನೀಡದಿರುವುದನ್ನು ಮೊದಲ ಹಂತದಲ್ಲಿ ಗಮನಿಸಬಹುದಾಗಿದೆ.
ನಂತರದ ದಿನಗಳಲ್ಲಿ ಕಾರ್ಮಿಕ ಸಮುದಾಯದ ಜ್ಞಾನ ವಿಸ್ತಾರದಿಂದಾಗಿ ಸಮುದಾಯದಲ್ಲಿ ಅರಿವು ಬೆಳೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಸುಧಾರಣೆ ನೀತಿಗಳು ವಿವಿಧ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ರೂಪಗೊಂಡಿವೆ.
ಅಬ್ರಾಹಂ ಮಾಸ್ಲೋ ರವರ Hierarchy of Needs ನಲ್ಲಿ ಮಾನವನ ಸಹಜ ಆಕಾಂಕ್ಷೆಗನ್ನು ಪಿರಾಮಿಡ್ ರೂಪದಲ್ಲಿ ವಿವರಿಸಿದ ಪ್ರಕಾರವಾಗಿ ಕಾರ್ಮಿಕ ಬೇಡಿಕೆಗಳನ್ನು ಹಂತ ಹಂತವಾಗಿ ತನ್ನ
ಏಳ್ಗೆಗಾಗಿ ಹಂಬಲಿಸುವುದನ್ನು ನಾವು ಕಾಣಬಹುದಾಗಿದೆ. ಖಾಸಗಿ ವಲಯ ಸಂಸ್ಥೆಗಳು, ಸರಕಾರಿ ವಲಯ ಕಛೇರಿಗಳು ತನ್ನದೇ ಆದ ಕಾರ್ಮಿಕ ವರ್ಗದ ಮೇಲಿನ ದೌರ್ಜನ್ಯಕ್ಕೆ ಕೊಡುಗೆಗಳನ್ನು ನೀಡಿವೆ. ಈ ದೌರ್ಜನ್ಯಗಳನ್ನು ಕಾಲಾನುಕ್ರಮವಾಗಿ ತನ್ನ ಉತ್ಪಾದನೆ ಮೇಲೆ ಪ್ರಭಾವ ಬೀರುವುದನ್ನು
ಗಮನಿಸಿದ ಸಂಸ್ಥೆಗಳು ತನ್ನ ಉತ್ಪಾದನೆ ಹಾಗೂ ಲಾಭಾಂಶಕ್ಕೆ ಪ್ರಭಾವ ಬೀರುವ ಮಾರುಕಟ್ಟೆಯ ಇತರ Micro ಹಾಗೂ Micro ಅಮಶಗಳ ಜೊತೆಗೆ ಕಾರ್ಮಿಕರ ಮನೋಬಲ ಪ್ರಾಮುಖ್ಯ ಎನ್ನುವುದನ್ನು ತಿಳಿದಂತಹ ಹಲವು ಖಾಸಗಿ ಕಂಪನಿಗಳು ಜಗತ್ತಿಗೆ ಶ್ರೇಷ್ಠ ಮಟ್ಟದ ಕಾರ್ಮಿಕ ನೀತಿಗಳಿಂದ ಮಹತ್ವದ ಸ್ಥಾನವನ್ನು ಗಳಿಸಿವೆ.
ಈ ದಿನ ಗುತ್ತಿಗೆ, ಹೊರಗುತ್ತಿಗೆ ಎನ್ನುವ ಸರ್ಕಾರದ ನೀತಿ ನಿಯಮಗಳಿಂದ ಕಾರ್ಮಿಕರ ಮೇಲೆ ಶೋಷಣೆಗಳು ಜರುಗುತ್ತಿವೆ. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡದೇ ಕಾರ್ಮಿಕ ವರ್ಗವನ್ನು ಭ್ರಷ್ಟಚಾರಕ್ಕೆ ದೂಡುತ್ತಿದ್ದಾರೆ. ಅಧಿಕಾರಿ ವರ್ಗದ ಭ್ರಷ್ಟಚಾರ ಈ ಸಮಾಜಕ್ಕೆ, ಕಾರ್ಮಿಕ ವರ್ಗಕ್ಕೆ ಕಮಟಕವಾಗಿದೆ. ಆಸ್ಪತ್ರೆಗಳಲ್ಲಿ 01 ಶುಶ್ರೂಷಕಿ ದಿನದ 24 ತಾಸು ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಭಾರತೀಯ ವೈದ್ಯ ಪದ್ದತಿಯಲ್ಲಿ ಕೆಲಸ 12 ಗಂಟೆ ಸೇವೆ ನೀಡುವ ವೈದ್ಯರಿಗೆ ಅಲೋಪತಿಕ್ ವೈದ್ಯರ ವೇತನ 50% ಕಡಿಮೆ ನೀಡುವುದು ಪ್ರಶ್ನಾರ್ಹವಾಗಿವೆ.
ಮುಂದಿನ ದಿನಗಳಲ್ಲಿ ಕೋವಿಡ್-19 ನಂತರದ ದಿನಗಳಲ್ಲಿ ಕಾರ್ಮಿಕ ವರ್ಗದ ಮೇಲೆ ಒತ್ತಡ ಮತ್ತು ನಿರೀಕ್ಷೆಗಳು ಹೆಚ್ಚಿವೆ. ಹೆಚ್ಚು ಜನ ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ, ಕೆಲವು ಜನ ಕೆಲಸ ಕಳೆದುಕೊಂಡಿದ್ದಾರೆ, ಆರ್ಥಿಕ ವ್ಯವಸ್ಥೆ ಮೇಲೆ ಇದು ದುಷ್ಪರಿಣಾಮವನ್ನು ಬೀರುತ್ತದೆ. ಕಾರ್ಮಿಕ ವರ್ಗ ಮತ್ತೊಮ್ಮೆ ಒಗ್ಗಟ್ಟಾಗಿ ಹೋರಾಡಿ ವಿಶ್ವ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರುವುದರ ಜೊತೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕ್ರಮವಹಿಸಬೇಕಾದ ಅವಶ್ಯಕತೆ ಇದೆ.
ಕಾರ್ಮಿಕರಿಗೆ ಜಯವಾಗಲಿ, ಕಾರ್ಮಿಕ ಸಂಘಟನೆಗೆ ಜಯವಾಗಲಿ
Comments