ಮಹಿಳೆಯ ಮೇಲಿನ ದೌರ್ಜನ್ಯ- ಆಶಾ ಕನ್ನಡಕ್ಕೆ ಅನುವಾದ ಮಲ್ಲಿಕಾರ್ಜುನಯ್ಯ ಎಸ್.ಎನ್


ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ವಿರುದ್ಧ ಸಜ್ಜುಗೊಳಿಸುವಿಕೆ:
  1. 1.      ದೌರ್ಜನ್ಯದ ವಿಧಗಳು ಮತ್ತು ಕೊಡುಗೆ ನೀಡುವ ವಿಷಯಗಳು  ಸಂಗತಿಗಳು
  2. 2.     ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಯಾರು?
  3. 3.     ಮಹಿಳೆಯರ ಮೇಲೆ ದೌರ್ಜನ್ಯ ಲಕ್ಷಣಗಳು ಮತ್ತು ಗುರುತುಗಳು ನಿಮ್ಮನ್ನು ಎಚ್ಚರಿಸಬೇಕು
  4. 4.    ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು
  5. 5.     ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ, ನಿರ್ವಹಿಸುವಲ್ಲಿ ಆಶಾ ಪಾತ್ರ
  6. 6.     ನಿಮ್ಮನ್ನು ನೀವು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ?
  7. 7.     ಚರ್ಚಿಸಬೇಕಾದ ಸನ್ನಿವೇಶಗಳು

**********

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣುತ್ತಿರುವುದಿಲ್ಲ ಹಾಗೂ ಪುರುಷನಿಗಿಂತ ಕೀಳೆಂಬಂತೆ ಭಾವಿಸಲಾಗುತ್ತದೆ. ಇಂತಹ ಸಮಾಜದಲ್ಲಿ  ಪುರುಷರಿಗೆ ಹೋಲಿಸಿದಲ್ಲಿ ಸಂಪನ್ಮೂಲಗಳ ಮೇಲಿನ ಹಿಡಿತ ಹಾಗೂ ಕುಟುಂಬದಲ್ಲಿ ತೀರ್ಮಾನ ಕೈಗೊಳ್ಳುವಲ್ಲಿ ಮಹಿಳೆಯರಿಗೆ ಅತೀ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ಸ್ವಾತಂತ್ರ್ಯ ಸಮಾನತೆಯನ್ನು ಕಾಣಬಹುದಾಗಿದೆ. ಇದು ಸಮುದಾಯದಲ್ಲಿ ಮಹಿಳೆಯರ ಮೇಲಿನ ಪ್ರಭುತ್ವ ಸಾಧಿಸುವಿಕೆ ಹಾಗೂ ತಾರತಮ್ಯಕ್ಕೆ ಕಾರಣವಾಗಿದೆ. ಸಾಮಾಜಿಕ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ethos ಗಳನ್ವಯ ಇದು  ಮತ್ತು ಬಲಗೊಳೊಸಿದಂತಾಗುತ್ತಿದೆ. ಇದು ಮಹಿಳೆಯರ  ಪರಿಪೂರ್ಣ ಅಭಿವೃದ್ಧಿಯನ್ನು ತಡೆಗಟ್ಟುತ್ತದೆ.
ಈ ಒಂದು ತಾರತಮ್ಯ ಚಕ್ರವನ್ನು ಗರ್ಭಾವಸ್ಥೆಯಿಂದ ಸಾಯುವವರೆಗೂ ಕಾಣಬಹುದಾಗಿದೆ. ಗರ್ಭಾವಸ್ಥೆಯಲ್ಲಿ ಲಿಂಗ ಪತ್ತೆ ಮಾಡುವುದು,  ಗಂಡು ಮಕ್ಕಳನ್ನು ಹೆಣ್ಣು ಮಕ್ಕಳಿಗಿಂತ ಹೆಚ್ಚು ಮೌಲ್ಯವನ್ನು ನೀಡುವುದನ್ನು ಕಾಣಬಹುದಾಗಿದೆ. ಹೆಣ್ಣು ಭ್ರೂಣ ಹತ್ಯೆ ಹಾಗೂ selective elimination of female  ಭ್ರೂಣವನ್ನು ಗಮನಿಸಬಹುದಾಗಿದೆ. ಈ ತಾರತಮ್ಯ ಹಾಗೂ ಅಸಮಾನತೆಯ ಸಾಮಾಜಿಕ ಅಂತಸ್ತು/ದರ್ಜೆ  ಮಹಿಳೆಯರ ಮೇಲಿನ ದೌಜ್ಯನ್ಯದ ಮೂಲಕಾರಣವಾಗಿದೆ.
ಮಹಿಳೆಯರ ಮೇಲಿನ ದೌರ್ಜನ್ಯವು ಭಾರತವು ಸೇರಿದಂತೆ ವಿಶ್ವದಾದ್ಯಂತ ಗಂಭೀರ ತರವಾಗಿ ಪರಿಣಾಮವನ್ನುಂಟು ಮಾಡುತ್ತಿದೆ. ಸಾಮಾಜಿಕ ಸ್ತರಗಳಲ್ಲಿ ಇದು ತನ್ನ ಬೇರುಗಳನ್ನು ಹೊಂದಿದ್ದು. ಇದಕ್ಕೆ ವಯಸ್ಸಿನ ಹಂತರ, ಸಂಸ್ಕೃತಿ, ಜಾತಿ, ಧರ್ಮ, ವಿದ್ಯಾರ್ಹತೆ ಮತ್ತು ಭೌಗೊಳಿಕ  ಹಿನ್ನೆಲೆಗಳ ಪರಿವೆ ಇಲ್ಲದೇ ಸಮಾಜದ ಎಲ್ಲ ವರ್ಗಗಳಲ್ಲಿ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ಗಂಡಸರು ಮಹಿಳೆಯರ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂಬ ನಂಬಿಕೆ ಇದ್ದರು ಎಲ್ಲ ಸಂದರ್ಭಗಳಲ್ಲಿ ಇದು ಸತ್ಯವಿರುವುದಿಲ್ಲ. ಆಗಾಗ್ಗೆ ಮನೆಯ ಇತರೆ ಮಹಿಳಾ ಸದಸ್ಯೆಯರಿಂದ  ನಿಂದನೆ ಮತ್ತು ದೌರ್ಜನ್ಯಕ್ಕೆ ಮಹಿಳೆಯರು ಒಳಗಾಗಿರುತ್ತಾರೆ.  ಹೆಚ್ಚು  ದೌರ್ಜನ್ಯಗಳು  ಮನೆ ಮತ್ತು ನೆರೆಹೊರೆಗೆ ಸೀಮಿತವಾಗಿರುತ್ತವೆ.
 Sex ಮತ್ತು Gender ಗಳು  Sex ದೌರ್ಜನ್ಯದ ಸಣಕೀರ್ಣ ನಿರ್ಧಾರಕಗಳಾಗಿವೆ. ಲಿಂಗವು ದೈಹಿಕ ಮತ್ತು ಜೈವಿಕ ಗುಣ ಲಕ್ಷಣಗಳನ್ನು ಸೂಚಿಸಿ, ಮಹಿಳೆ ಮತ್ತು ಪುರುಷ ಎಂದು ಪ್ರತ್ಯೇಕಿಸುತ್ತವೆ. Gender  ಕಾರ್ಯಗಳು, ವರ್ತನೆಗಳು, ಚಟುವಟಿಕೆಗಳು, ಮತ್ತು ಸಮಾಜ ಮಹಿಳೆ ಮತ್ತು ಪುರುಷರಿಗೆ ಸೂಕ್ತವೆಂದು ಪರಿಗಣಿಸಿ ನೀಡಿದ ಗುಣಲಕ್ಷಣಗಳನ್ನು  ಸೂಚಿಸುವ  ಗುಣಲಕ್ಷಣಗಳಾಗಿವೆ.
1)      ಮಹಿಳೆಯರು ಋತುಮತಿಗಳಾಗುತ್ತಾರೆ. ಪುರುಷರಿಗೆ ಋತುಸ್ರಾವ ಇರುವುದಿಲ್ಲ.
2) ಮಹಿಳೆಯರಿಗೆ ಹಾಲುತ್ಪತ್ತಿಯಾಗುವ ಮೊಲೆಗಳಿರುತ್ತವೆ. ಪುರುಷರಿಗೆ ಹಾಲುತ್ಇಪತ್ಲ್ಲತಿ ಮಾಡುವ ಮೊಲೆಗಳು ಇರುವುದಿಲ್ಲ


Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva