7 ವರ್ಷದ ಪಯಣ

7 ವರ್ಷ ಆರೋಗ್ಯ ಇಲಾಖೆಯೊಂದಿಗೆ ಪಯಣ,
ವೈದ್ಯಲೋಕದ ಒಳ ಪ್ರಪಂಚದ ದರ್ಶನ
ಹೊಂದಾಣಿಕೆಯಾಗದ ಸ್ವಭಾವ ನಡುವೆ ಬದುಕು ಕಟ್ಟಿಕೊಳ್ಳುವ ಹಠ.||
ಕಾಯಂ ನೌಕರರು ಗುತ್ತಿಗೆ ನೌಕರರು,
ಯಾರು ಎಚ್ಚು ಯಾರು ಕಡಿಮೆ?
ಧನದಾಹದ ಮುಂದೆ, ಮತ್ತೊಬ್ಬರ ಮಾನ ತೃಣಕ್ಕೆ ಸಮ
ನಡುವೆ ಬದುಕು ಕಟ್ಟಿಕೊಳ್ಳುವ ಹಠ.||
ಹಸಿದಾಗ ಅನ್ನದ ಮುಂದೆ ತಟ್ಟೆ ಹಿಡಿದಾಗ
ನನಗನಿಸಿದ್ದು ಹಸಿವಿನ ಮುಂದೆ ಎಲ್ಲರು ಒಂದು
ಬದಲಾಗಬೇಕಾದ ವ್ಯವಸ್ಥೆ, ಬದಲಾಗದ ಮನಸ್ಥಿತಿ
ಸ್ಥಳೀಯತೆಯ ವೈಭವೀಕರಣದ ನಡುವೆ ಬದುಕು ಕಟ್ಟಿಕೊಳ್ಳುವ ಹಠ.||
ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ
ಕಾಲದ ಮುಂದೆ ನಾವ್ಯಾರು
ಕಾಸಿಗೆ ಖಾಸಗಿ ಆಸ್ಪತ್ರೆ, ಸೇವೆಗೆ ಸರ್ಕಾರಿ ಆಸ್ಪತ್ರೆ
ನಡುವೆ ಬದುಕು ಕಟ್ಟಿಕೊಳ್ಳುವ ಹಠ.||
ಗುಣಮಟ್ಟದ ಲಸಿಕೆ, ಲಕ್ಷಯ, ಕಾಯಕಲ್ಪ ಕಾರೋಬಾರ್
ದೆಹಲಿ ನೋಡುವ ಯೋಗವಿಲ್ಲ, ಕಾನ್ಪೆರೆನ್ಸ್ ಗಂತು ಇಲ್ಲವೆ ಇಲ್ಲ.
Supporting staff prepare ppt, reports set right files.
ನಡುವೆ ಬದುಕು ಕಟ್ಟಿಕೊಳ್ಳುವ ಹಠ.
ತರಕಾರಿ, ದಿನಸಿ ಹೋಟೆಲ್ ಕಾಫಿ ಚಾ ರೇಟು ಎಚ್ಚಾಯ್ತು
ಖಾಸಗಿ ಶಿಕ್ಷಣ ಗಗನ ಮುಖಿ ಆಯ್ತು
ಸಮಾನ ಕೆಲಸಕ್ಕೆ ಸಮಾನ ವೇತನ ಇನ್ನು
ಡಿ.ಡಿ/ಜೆ.ಡಿ/ ಐ.ಎ.ಎಸ್ ಅಧಿಕಾರಿಗಳ ಮನದಲ್ಲಿಯೇ ಉಳಿಯಿತು
ನಡುವೆ ಬದುಕು ಕಟ್ಟಿಕೊಳ್ಳುವ ಹಠ. ||
ಕಾಯಂ ಅಲ್ಲದ ಕಾಯಂ ಅಧಿಕಾರಿಗಳು
ಬದಲಾವಣೆ ತರಲು ಹವಣಿಸುವ ಅಧಿಕಾರಿಗಳು
ಬದಲಾದರು ದಿನಬೆಳಕರಿಯುವದರೊಳಗಾಗಿ
ನಡುವೆ ಬದುಕು ಕಟ್ಟಿಕೊಳ್ಳುವ ಹಠ. ||
ನಾಳೆಗಾಗಿ ಈ ದಿನ ಕಳೆದುಕೊಳ್ಳುವ ನಾವುಗಳು
ನೆಮ್ಮದಿಯನ್ನು ದುಡ್ಡಿನಲ್ಲಿ ಕಾಣುವುದು
ಒಂದು ವಿಚಿತ್ರ ನಡುವೆ ಬದುಕು ಕಟ್ಟಿಕೊಳ್ಳುವ ಹಠ. ||

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva