Refrigerator mechanic NHM


·         ಗುತ್ತಿಗೆ ಆಧಾರದ ನೌಕರರ  ನೇಮಕಾತಿಯು 1 ವರ್ಷದ ಅವಧಿಗೆ ಸೀಮಿತವಾಗಿರುತ್ತದೆ. 
·         ಆಯ್ಕೆಯ ಅವಧಿಯಲ್ಲಿ ಚಾಲ್ತಿಯಲ್ಲಿರುವ ಹಾಗೂ ಸರ್ಕಾರವು ಆಗಿಂದ್ದಾಗ್ಗೆ ಸೂಚಿಸುವ ಎಲ್ಲಾ ಸೇವಾ ನಿಯಮಗಳನ್ನು ಪಾಲಿಸತಕ್ಕದ್ದು.
·         ಖಾಯಂ ನೇಮಕಾತಿಗಾಗಲಿ, ನಿವೃತ್ತ ಉಪದಾನ, ವೇತನ ಶ್ರೇಣಿ ಅಥವಾ ಇನ್ನಿತರ ಯಾವುದೇ ಭತ್ಯೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುವುದಿಲ್ಲ ಮತ್ತು ಆರ್ಹರಿರುವುದಿಲ್ಲ. ಹಾಗೂ ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
Refrigerator mechanic  ನಿರ್ವಹಿಸ ಬೇಕಾದ  ಕೆಲಸ ಹಾಗೂ ಜವಾಬ್ದಾರಿಗಳು:
ಜಿಲ್ಲೆಯಲ್ಲಿರುವ  ILR/DF ಹಾಗೂ ಇತರೆ ಶೀತಲ ಸರಪಳಿ ಉಪಕರಣಗಳ ಮಾಹಿತಿ ಸಂಗ್ರಹಿಸಿ, ಕೆಲಸ ನಿರ್ವಹಿಸುತ್ತಿರುವ , ನಿರ್ವಹಿಸದೆ ಇರುವ ಉಪಕರಣಗಳ ಬಗ್ಗೆ ಪ್ರತಿ ತಿಂಗಳ ಕೊನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ/ ಆರ್ಸಿಹೆಚ್ ಅಧಿಕಾರಿ/ಶೀತಲ ಸರಪಳಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು. ಹಾಗೂ NCCMIS ನಲ್ಲಿ ಮಾಹಿತಿ ಸಂಗ್ರಹಣೆ ಮಾಡುವುದು. ಕಾರ್ಯ ನಿರ್ವಹಿಸುತ್ತಿರುವ  ILR/DF ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ದುರಸ್ತಿ ತಡೆಯುವ (Preventive Maintenance) ಕ್ರಮವನ್ನು ಅನುಸರಿಸಿ ನಿರ್ವಹಣೆ ಮಾಡತಕ್ಕದ್ದು. Preventive Maintenance ನ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಂಬಂಧಪಟ್ಟ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ/ ಸಂಭಂಧಪಟ್ಟ ಸಿಬ್ಬಮದಿಯ ಸಹಿ ಪಡೆದು ಸಲ್ಲಿಸತಕ್ಕದ್ದು ಹಾಗೂ ಯಾವುದೇ ಆರೋಗ್ಯ ಕೇಂದ್ರದಿಂದ  ಶೀತಲ ಸರಪಣಿ ಉಪಕರಣದ ದುರಸ್ತಿಯ ಕರೆ ಬಂದಲ್ಲಿ ಎರಡು ದಿನದೊಳಗಾಗಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದು.  ಪ್ರತಿ ಮಾಹೆ ಕನಿಷ್ಠ ಎಂಟು (8) ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿ ಉಪಕರಣ ಪರಿಶೀಲನೆ, ಲಸಿಕೆಗಳನ್ನು ಸಂಗ್ರಹಿಸಿರುವ ವಿಧಾನ ಹಾಗೂ ಶೀತಲ ಸರಪಣಿ ವಿಷಯಕ್ಕೆ ಸಂಭಂಧಿಸಿದ ಪರಿಶೀಲನಾ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡತಕ್ಕದ್ದು  ಮತ್ತು ಜಿಲ್ಲೆಯ ಲಸಿಕಾ ಉಗ್ರಾಣದಲ್ಲಿರುವ  ILR,DF,WIC,WIF ಗಳನ್ನು ಸುಸ್ಥಿಯಲ್ಲಿಟ್ಟುಕೊಳ್ಳುವುದು, ಸ್ವಚ್ಚತೆ ಕಾಪಾಡುವುದು defrosting  ಮಾಡುವುದು, ಲಸಿಕೆಗಳ ಸಂಗ್ರಹಣಾ ಉಷ್ಣಾಂಶ ಗಮನಿಸುವುದು. ಯಾವುದೇ ಸಮಯದಲ್ಲಿ ಶೀತಲ ಸರಪಣಿ ಉಪಕರಣಗಳ Break down Rate 2 ಮೀರದಂತೆ ನಿರ್ವಹಣೆ ಮಾಡತಕ್ಕದ್ದು. ಪ್ರತಿವಾರ ಜಿಲ್ಲೆಯ NCCMIS ಮಾಹಿತಿಯನ್ನು  WEBSITE  ನಲ್ಲಿ update ಮಾಡುವುದು. ಪ್ರತಿ ಮುರು ತಿಂಗಳಿಗೊಮ್ಮೆ ರೆಫ್ರಿಜರೇಟರ್ ಮೆಕ್ಯಾನಿಕ್ ಪ್ರತಿ ಮಾಹೆ ನಿರ್ವಹಿಸಿದ ಕೆಲಸದ ವಿವರವನ್ನು ಆರ್.ಸಿ.ಹೆಚ್ ಅಧಿಕಾರಿಗಳ ದೃಢೀಕರಣದೊಂದಿಗೆ ನಿರ್ದೇಶನಾಲಯದ ಶೀತಲ ಸರಪಣಿ ಅಧಿಕಾರಿಗಳಿಗೆ ಕಳುಹಿಸತಕ್ಕದ್ದು. ಅದರ ಒಂದು ಪ್ರತಿಯನ್ನು ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸತಕ್ಕದ್ದು.

ಎನ್.ಎಚ್.ಎಂ ಗುತ್ತಿಗೆ ಸಿಬ್ಬಂದಿಗೆ ಅನ್ವಯಿಸುವ ಷರತ್ತು ಮತ್ತು ನಿಬಂಧನೆಗಳಿಗೆ ಬದ್ದರಾಗಿ ಕೆಲಸ ನಿರ್ವಹಿಸಲು ಒಪ್ಪಿರುತ್ತೇನೆ.






Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva