ಶ್ರೀಯುತ ಚಂದ್ರಶೇಖರ ಪಾಟಿಲ ರವರೇ ನಾನು ತಿಳಿದಂತೆ ವೀರಶೈವ ಧರ್ಮ

ದಿನಾಂಕ 14/09/2015 ರಂದು ರಾತ್ರಿ ಟಿವಿ ಚಾನೆಲ್  ಒಂದರಲ್ಲಿ ಮಾನ್ಯ ಬುದ್ಧಿ ಜೀವಿಗಳು, ಹಿರಿಯ ಲೇಖಕರು, ವಿಮರ್ಶಕರು ಆದ ಶ್ರೀ ಚಂದ್ರಶೇಖರ ಪಾಟಿಲ್ ಇವರು ಚರ್ಚೆಯೊಂದರಲ್ಲಿ ಭಾಗವಹಿಸಿದ್ದರು. ಚರ್ಚೆ ಶ್ರೀ ಎಂ.ಎಂ ಕಲಬುರ್ಗಿ ರವರ ಹತ್ಯೆಯ ಕುರಿತಾಗಿದ್ದಿತು.

ವೀರಶೈವ ಧರ್ಮದ ಬಗ್ಗೆ ಚಂಪಾ ರವರು ಸಂಕುಚಿತ ಮನೋಭಾವದಿಂದ ಮಾತಾನಾಡಿದ್ದು ನೋಡಿ ಖೇದವಾಯಿತು.  " :ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಎಂದು ಶ್ರೀ ಗುರು ಗಂಗಾಧರರು ಜಗಕ್ಕೆ ಕರೆ ನೀಡಿದ್ದಾರೆ. ವೀರಶೈವ  ಎಂದರೆ ಯಾರು? ವಿಕಲ್ಪ ರಹಿತನಾದವನು ಶೈವ.

ವೀರ ಶೈವ ಧರ್ಮದ ಬಗ್ಗೆ ಮಾತಾನಾಡುವವರು ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಧರ್ಮವೇ ತಪ್ಪು ಎನ್ನುವುದಾದರೇ ತಾವು ಪಾಲಿಸುತ್ತಿರುವ ಧರ್ಮ ಯಾವುದು? ನೀವು ಯಾವ ಧರ್ಮಕ್ಕೂ ಸೇರದವರಾಗಿದ್ದೀರಾ? ಯಾವ ದೇಶದಲ್ಲಿ ಯಾವ ಜಾತಿಯಲ್ಲಿ ಧರ್ಮ ಹಾಸುಹೊಕ್ಕಾಗಿಲ್ಲ.

ಲಿಂಗ ಪೂಜೆಯ ಮಹತ್ವ ಲಿಂಗ ಪೂಜೆಯನ್ನು ಮಾಡುವವರಿಗೆ ಗೊತ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ನಡೆಯುತ್ತಾರೆ. ಪೂಜಿಸುತ್ತಾರೆ.  ಶ್ರೀ ಬಸವಣ್ಣನವರು ಲಿಂಗ ಪೂಜೆ ಮಾಡಲಿಲ್ಲವೇ? ಬಸವಣ್ಣನವರ ಮೇಲೆ ತಮಗೆ ಗೌರವವಿಲ್ಲವೇ?




Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva