ನೇರ ನಿಷ್ಠುರವಾದಿ ಎಂ.ಎಂ. ಕಲಬುರ್ಗಿ
- Get link
- X
- Other Apps
ಶ್ರೀ. ಎಂ.ಎಂ ಕಲಬುರ್ಗಿಯವರ ಕೊಲೆ ಸಮಾಜದಲ್ಲಿ ಈ ದಿನ ನೆಲೆಸಿರುವ ಅರಾಜಕತೆಯ ಪ್ರತೀಕ ಎಂಬಂತಿದೆ. ನೇರ, ನಿಷ್ಠುರವಾಗಿ ನುಡಿಯುವುದಕ್ಕಿಂತ ಮಹಾತ್ಮ ಗಾಂಧಿಜಿಯವರ ಕುರು, ಕಿವುಡ, ಮೂಕ ಕೋತಿಗಳ ತರಹ ಇರಬೇಕೆ ಎಂಬ ಸಂಧಿಗ್ಧ ಪ್ರಶ್ನೆ ಏರ್ಪಟ್ಟಿದೆ.
ಲಂಚಕೋರ ಭ್ರಷ್ಟ ಸರ್ಕಾರದ ಕೆಲ ಅಧಿಕಾರಿಗಳು, ಇವರುಗಳಿಗೆ ಬೆಂಗಾವಲಾಗೋ ಪುಡಾರಿಗಳು ಜೀವನವೇ ಒಂದು ಜಿಗುಪ್ಸೆ.
ರಾಜ್ಯ ರಾಷ್ಟ್ರ ಮಟ್ಟದಲ್ಲಿ ಲೇಖಕ ವರ್ಗದಲ್ಲಿ, ಸಮಾಜದ ಜನತೆಯಲ್ಲಿ ಈ ಬಗ್ಗೆ ಬಹು ವಿಧವಾಗಿ ಚರ್ಚೆಗಳಾಗ ಬೇಕಿತ್ತು. ಸಾಮಾನ್ಯರನ್ನು ಅಸಮಾನ್ಯರನ್ನಾಗಿ ಕೇಸುಗಳಿಗೆ ಟ್ವಿಸ್ಟ ಕೊಡೊ ಟಿ.ವಿ.ಚಾನೆಲ್ ಗಳು ಈ ಬಗ್ಗೆ ಎಚ್ಚು ಚರ್ಚೆಗೆ ಆಸ್ಪದ ನೀಡದಿರುವುದು ಕೂಡ ಬೇಜಾರು ತರುವಂತಹ ಸಂಗತಿ.
ಅಪರಾಧ ವೆಸಗಿರುವವರನ್ನು ಶೀಘ್ರವಾಗಿ ಪೋಲಿಸರು ಬಂಧಿಸ ಬೇಕು. ಮತ್ತು ಎಂ.ಎಂ ಕಲಬುರ್ಗಿಯವರಮತಹ ಸಜ್ಜನ ಹಿರಿಯ ನಿಷ್ಠುರವಾದಿಗಳಿಗೆ ಪೋಲಿಸರು ಆರಕ್ಷಣೆ ನೀಡಬೇಕು. ಇಂದು ರಾಷ್ಟದಾದ್ಯಂತ ಅರಾಜಕತೆ ತಾಂಡವವಾಡಲು ಸನ್ನಿವೇಶಗಳು ಪ್ರೇರೇಪಿಸುತ್ತಿವೆ.
ರಿಸರ್ವೇಶನ್, ಡಿ.ಎನ್.ಎ, ನದಿ ಜೋಡಣೆ, ಹತ್ಯಾಚಾರ, ಕೋಮು ಗಲಭೆ, ರೈತರ ಆತ್ಮ ಹತ್ಯೆ ಜೊತೆಗೆ ಬೆಳೆದಾಗ ಬೆಲೆ ಸಿಗದೇ ರೈತನಿಗೆ ಕಣ್ಣೀರು ತರಿಸಿದ ಈರುಳ್ಳಿ ಇಂದು ಗ್ರಾಹಕರಿಗೆ ಕಣ್ನೀರು ತರಿಸುತ್ತಿದೆ. ದೇಶದ ಪ್ರಗತಿ ಒಂದೆಡೆ ಶ್ರಮಿಸುತ್ತಿದ್ದರೆ ಮತ್ತೊಂದೆಡೆ ಅಧಿಕಾರ ದಾಹದಿಂದ ರಾಜ್ಯ ರಾಷ್ಟ್ರದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ರಾಜಕೀಯ ಪಕ್ಷಗಳು. ಬಿ.ಜೆ.ಪಿ ಕೋಮು ವಾದಿ ಆದರೆ ಕಾಂಗ್ರೆಸ್ ? ಜೆ.ಡಿ.ಎಸ್? ಭಾರತದಲ್ಲಿ ಭಾರತೀಯರು, ಭಾರತೀಯತೆಯೇ ಕೋಮುವಾದವೇ? ಒಬ್ಬರಿಗೆ ಇಚ್ಚಾ ಮರಣ ಸಿಗಲಿಲ್ಲ ಎಂದು ಕ್ರೈಸ್ತ ಧರ್ಮ ಮೇಲೆನ್ನುವ ಸಾಹಿತಿ , ಇದು ನಮ್ಮ ಮುಂದಿರುವ ಚಿತ್ರಣ
Comments