Posts

Showing posts from October, 2012

ಸಹಾರ one ಸುರ್ ಕ್ಷೇತ್ರ ಸಂಗೀತ ಕಾರ್ಯಕ್ರಮದಲ್ಲಿ

ಸಹಾರ one ಸುರ್ ಕ್ಷೇತ್ರ ಸಂಗೀತ ಕಾರ್ಯಕ್ರಮ- ಪಾಕಿಸ್ತಾನ ಮತ್ತು ಭಾರತದ ಹಾಡುಗಾರರ ನಡುವಿನ ಸ್ಪರ್ಧೆ. ಮಾತೃ ಪ್ರಧಾನ ಹಾಡುಗಳು ಈ ದಿನದ ಕಾರ್ಯಕ್ರಮದ ವಿಶೇಷವಾಗಿದ್ದಿತು. ಪ್ರತಿಯೊಬ್ಬ ಸ್ಪರ್ಧಿಯು ಮನಮೋಹಕವಾಗಿ ಹಾಡಿ, ತಾಯಿಗೆ ಸೀಮೆಯ ಅಂತರವಿಲ್ಲ. ಬಡತನ, ಸಿರಿತನದ ಪರಿಧಿಗೆ ಸಿಳುಕಿದವಳಲ್ಲ ಎಂದು ಸಾರಿದರು. ಪ್ರತಿಯೊಂದು ಹಾಡು ಹಾಡುಗಾರರ, ತೀರ್ಪುಗಾರರ, ನಿರೂಪಕಿಯ ಕಣ್ಣಿನಲ್ಲಿ ಮಮತೆಯ ಕಣ್ಣೀರಿಗೆ ಸಾಕ್ಷಿಯಾಯಿತು. ಜೀವನದಲ್ಲಿ ನಮ್ಮ ಜೊತೆ ಯಾರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾಯಿಯ ಆಶೀರ್ವಾದ, ಅವಳ ನಿಸ್ವಾರ್ಥ ಪ್ರೀತಿ ಮಮತೆ ನಮ್ಮನ್ನು ಸದಾ ಕಾಪಾಡುತ್ತದೆ ಹಾಗು ಕತ್ತಲೆಯಲ್ಲಿ ಮುನ್ನಡೆಸುತ್ತದೆ. ನಮ್ಮಲ್ಲಿ ನಂಬಿಕೆಯನ್ನು ಕಳೆದುಕೊಂಡಾಗ, ಸುತ್ತಲ ಸಮಾಜವು ನಮ್ಮನ್ನು ಕಡೆಗಣಿಸಿದಾಗ ನಮ್ಮಲ್ಲಿ ನಂಕೆಯಿಡುವವಳು ಅಮ್ಮ ಮಾತ್ರ. ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿ ಮುನ್ನಡೆಸುತ್ತಾಳೆ. ಅಮ್ಮ ಜಗತ್ತಿನ ದೊಡ್ಡ ನಿಧಿ. ಈ ಕಾರ್ಯಕ್ರಮವನ್ನು ಪ್ರಕಟಿಸಿದ ಸಹಾರ one ಗೆ ನನ್ನ ನಮನಗಳು.

ಕಾಯಕ ಯೋಗಿ ನುಲಿಯ ಚಂದಯ್ಯನವರ ಸುಕ್ಷೇತ್ರ ನಂದಿ.

Image
ಕಾಯಕ ಯೋಗಿ ನುಲಿಯ ಚಂದಯ್ಯನವರ ಸುಕ್ಷೇತ್ರ ನಂದಿ. ವಚನಗಳ ಕಾಲಕ್ಕೆ ನಮ್ಮನ್ನು ಸೆಳೆದೊಯ್ಯುವ ಕಾಯಕ ಕ್ಷೇತ್ರ. ನುಲಿಯ ಚಂದಯ್ಯನವರ ದಾಸೋಹ ಹಾಗು ಸಿದ್ದೇಶ್ವರ ಸ್ವಾಮಿಯ ರುದ್ರಾಭಿಷೇಕ ಮತ್ತು ದುಗ್ಗಳದ  ಸೇವೆ ಇಲ್ಲಿಯ ವಿಶೇಷ. ಇಲ್ಲಿ ಮೊದಲಿಗೆ ದುಗ್ಗಳಮಾರುವವರು ಬರಿ ಜಂಗಮರಾಗಿದ್ದರು, ಆದರೆ ಇಂದು ಎಲ್ಲ ವರ್ಗದ ಜನ ಮಾರುತ್ತಾರೆ. ದುಗ್ಗಳದ ಕಟ್ಟಿನಲ್ಲಿ ಸಾಂಬ್ರಾಣಿ, ಕರ್ಪೂರ ಮತ್ತು ಒಣ ಕೊಬ್ಬರಿಯಿರುತ್ತದೆ. ಊದುಬತ್ತಿ, ಬಾಳೆ ಹಣ್ಣು, ಕಾಯಿಯನ್ನು ಪ್ರತ್ಯೇಕವಾಗಿ ಕೊಳ್ಳಬೇಕು. ಊಟ ತಯಾರಿಸುವವರು ಗಂಡಸರು. ಹೆಣ್ಣು ಮಕ್ಕಳಿಗೆ ಅ ಡುಗೆ ಮನೆಗೆ ಪ್ರವೇಶವಿಲ್ಲ. ಮಾಂಸ ಮದ್ಯ ಸೇವನೆ ನಿಷೇದಿಸಿದೆ. ಇಲ್ಲಿಗೆ ಬರುವವರು ಕೂಡ ಆ ದಿನದ ಮಟ್ಟಿಗೆ ಮಾಂಸ ಮದ್ಯ ಸೇವನೆಯನ್ನು ವರ್ಜಿಸುವುದು ಉತ್ತಮ. ಏಕೆಂದರೆ ಇದು ಪೂಜನೀಯ ಸ್ಥಳವಾಗಿದೆ. ಇದು ತರೀಕೆರೆ ತಾಲ್ಲೂಕ್, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ ರಾಜ್ಯದಲ್ಲಿದೆ. ಇಲ್ಲಿಗೆ ನೆರೆಯ ಪಟ್ಟಣವಾದ ತರೀಕೆರೆಯಿಂದ ವಾಹನ ಸೌಕರ್ಯವಿದೆ.

ಯಶ್ ರಾಜ್

Image
ಹಲವರ ದೇಹ ನಮ್ಮಿಂದ ಮರೆಯಾದರು ಅವರು ಬಿಟ್ಟು ಹೋದಂತಹ ದಾಖಲೆಗಳು ಅವರನ್ನು ಚಿರಸ್ಥಾಯಿಗೊಳಿಸುತ್ತವೆ. ಅಂತಹ ವ್ಯಕ್ತಿಗಳ ನಡುವೆ ಮತ್ತೆ ಮತ್ತೆ ನಮ್ಮ ಮನಸ್ಸನ್ನು ಕಾಡುವವರು, ಯಶ್ ರಾಜ್ ಚೋಪ್ರಾ. "ಜಬ್ ತಕ್ ಹೈ ಜಾನ್" ಇವರು ನಿರ್ದೇಶಿಸಿದ ಕೊನೆಯ ಚಿತ್ರ.

ಶ್ರೀ 420 - ರಾಜ್ ಕಪೂರ್

ಶ್ರೀ 420 . 1955 ರಲ್ಲಿ ಬಾಲಿಹುಡ್ ನ ಮಹಾನ್ ನಟ ರಾಜ್ ಕಪೂರ್ ನಟಿಸಿ, ನಿರ್ದೇಶಿಸಿ,ನಿರ್ಮಿಸಿದ ಚಿತ್ರ. ಈ  ಚಿತ್ರದಲ್ಲಿಯ ಹಾಡು "ಜೂತಾ ಹೇ ಜಪಾನಿ .." ಇಂದಿಗೂ ಎಲ್ಲರ ಮನಸೆಳೆಯುವಂತ ಹಾಡಾಗಿದೆ.  ಇಂದಿಗೂ ಈ ಚಿತ್ರವು ಪ್ರಸ್ತುತವೆನಿಸಿದೆ.  ಅದರಲ್ಲಿಯ ಪ್ರತಿಯೊಂದು ಪಾತ್ರ, ಕಥೆಯನ್ನು ಹೇಳುತ್ತದೆ. ಮುಂಬಾಯಿಯಲ್ಲಿ ಹಣ ಮಾತಾಡುತ್ತದೆ. ಜನ ಸಿಮೆಂಟ್ ನಲ್ಲಿ ಮನೆ ಕಟ್ಟುತ್ತಾರೆ ಹಾಗು ಜನರ ಮನಸ್ಸು ಕಲ್ಲಿನದಾಗಿದೆ ಎಂದು ಹೇಳುವ ಬಿಕ್ಷುಕನ ಮಾತು ನಿಜ ಎನಿಸುತ್ತದೆ.  footpath ಮೇಲೆ ಮಲಗಲು ಕೂಡ ಹಣ ಕೊdaಬೇಕಾಗುತ್ತದೆಂಬುದು ಎಷ್ಟು ವಿಪರ್ಯಾಸ! 3ಹಣ್ಣಿಗೆ 2 ಆಣೆ ಎಂದರೆ ದುಡ್ಡಿಲ್ಲದ ನಾಯಕ 3 ಆನೆಗೆ 2 ಹಣ್ಣು ಎಂದು ಹೇಳಿ ತನ್ನ ಹಸಿವನ್ನು ನಿಗಿಸಿಕೊಳ್ಳುವ ದೃಶ್ಯ ಮನಸ್ಸಿಗೆ ನಾಟುತ್ತದೆ.  ಹಣ್ಣಿನ ವ್ಯಾಪಾರಿ ಮಹಾನಗರದಲ್ಲಿ ಇನ್ನು ಮಾನವತ್ವ ಮರೆಯಾಗಿಲ್ಲ ಎಂಬುದರ ಪ್ರತೀಕವಾಗಿದ್ದರೆ 

ಅಂತರರಾಷ್ಟ್ರೀಯ ಅರ್ಥಶಾಸ್ತ್ರ

Image
ಅಂತರರಾಷ್ಟ್ರೀಯ ಅರ್ಥಶಾಸ್ತ್ರ : ಅಂತರ ರಾಷ್ಟ್ರೀಯ ಸಂಬಂಧಗಳ ಕ್ಷೇತ್ರಕ್ಕೆ ಆರ್ಥಿಕ ತತ್ವ ಮತ್ತು ನಿಯಮಗಳನ್ನು ಅನ್ವಯಿಸುವ ಹೆಗ್ಗುರಿಯನ್ನು ಹೊಂದಿದೆ. ಅಂತರರಾಷ್ಟ್ರೀಯ ಅರ್ಥಶಾಸ್ತ್ರವು ಸಾರ್ವಭೌಮ ರಾಷ್ಟ್ರಗಳ ಆರ್ಥಿಕ ಸಂಬಂಧಗಳನ್ನು ಕುರಿತು ಅಧ್ಯಯನ ಮಾಡುತ್ತದೆ. :- ಆರ್ಥಿಕ ಸಂಬಧಗಳ ಕೂಲಂಕುಶ ಅಧ್ಯಯನ . :-ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಇದರ ಕೇಂದ್ರ ಬಿಂದು. :-ವಿಭಿನ್ನ ರಾಷ್ಟ್ರಗಳ ನಡುವಿನ ವ್ಯಾಪಾರ, ಹಣಕಾಸು, ಪಾವತಿ ಮುಂತಾದ ಅರ್ಥಿಕ ವಿಚಾರಗಳನ್ನು ಕುರಿತು ಅಭ್ಯಸಿಸುತ್ತದೆ. ವ್ಯಾಪ್ತಿ ಮತ್ತು ಅಭ್ಯಾಸ ವಿಷಯ  1. ವ್ಯಾಪಾರ ಸಿದ್ಧಾಂತಗಳು. 2.ವಾಣಿಜ್ಯ ನೀತಿ 3.ವಿದೇಶಿ ವಿನಿಮಯ 4.ಪಾವತಿ ಶಿಲ್ಕು 5. ಉತ್ಪಾದನಂಗಗಳ ಚಲನೆ 6.ವ್ಯವಹಾರ ತಂತ್ರಗಳು 7. ಹಣಕಾಸಿನ ಸಂಬಂಧ ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಅಧ್ಯಯನದ ಮಹತ್ವ. ಅಂತರರಾಷ್ಟ್ರೀಯ ಆರ್ಥಿಕ ವಿಚಾರಗಳ ಅರಿವು  ಅಂತರರಾಷ್ಟ್ರೀಯ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ  ಅಂತರರಾಷ್ಟ್ರೀಯ ಆರ್ಥಿಕ  ಸಹಕಾರದ ಹರಿವು  ಅಂತರರಾಷ್ಟ್ರೀಯ ಆರ್ಥಿಕತೆಯ ತಿಳುವಳಿಕೆ ಹಾಗು ಮಾನಸಿಕ ಶಿಸ್ತು. ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ವ್ಯಾಪ್ತಿಯ  ಅರಿವು. ಆಂತರಿಕ ಮತ್ತು ಅಂತರರಾಷ್ಟ್ರೀಯ ವ್ಯಾಪಾರಗಳ ನಡುವಿನ ವ್ಯತ್ಯಾಸಗಳು. ಆಂತರಿಕ ವ್ಯಾಪಾರ:- ಒಮ್ಡಿ ದೇಶದ ಸರಹದ್ದಿನ ಒಳಗಡೆ ನಡೆಯುವ ವಿವಿಧ ಪ್ರದೇಶಗಳ ನಡುವೆ ನಡೆ...

ಕರಾಟೆ ಕಿಂಗ್ ಶಂಕರ ನಾಗ್

Image
ಕನ್ನಡಕ್ಕೊಬ್ಬನೆ ಆಟೋ ರಾಜ - ನಮ್ಮ "ಶಂಕರ" ಶಂಕರ ನಾಗರ ಕಟ್ಟೆ. ಅಭಿನಯಿಸಿದ ಚಿತ್ರಗಳೆಲ್ಲವೂ ಕೂಡ ವಿಭಿನ್ನವು ವೈಶಿಷ್ಟ್ಯ ಪೂರ್ಣವಾಗಿದ್ದವು.  ಅಭಿನಯಿಸಿದ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ಅಪ್ರತಿಮ ಕಲಾ ಕೌಸ್ತುಭ. ಇವರು ಅನಂತನಾಗ್ ಅವರ ಸಹೋದರ. 9ನೇ ನವಂಬರ್ 1954ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಮಲ್ಲಾಪುರದಲ್ಲಿ ಜನಿಸಿದರು.  ಸದಾನಂದ ಹಾಗು ಆನಂದಿ ನಾಗರಕಟ್ಟೆ ಇವರ ತಂದೆ ತಾಯಿಯರು. ಪ್ರಥಮ ಚಿತ್ರವಾದ " ಒಂದಾನೊಂದು ಕಾಲದಲ್ಲಿ " ಅತ್ಯುತ್ತಮವಾದ ಚಿತ್ರ. ಇದು ಮಹಾನ್ ನಿರ್ದೇಶಕ 'ಅಕಿರಾ ಕುರೊಸಾವಾ' ರ "7 ಸಮುರಾಯ್ ' ಚಿತ್ರದಿಂದ ಪ್ರೆರಿತವಾಗಿದ್ದುದು. ನಂತರ ಬಂದ ಅಂತ, ಮೂಗನ ಸೇಡು, ಗೀತಾ, ಆಕ್ಸಿಡೆಂಟ್.ವಿಬಿನ್ನತ್ತೆಯಿಂದ ಕೂಡಿದ್ದು ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವು. ಸಾಂಗ್ಲಿಯಾನ ಪೋಲಿಸ್ ಇಲಾಖೆಯ ಬಗ್ಗ್ಗೆ ಗೌರವವ ಮೂಡುವಂತೆ ಮಾಡಿತು.( Akira Kurosawa 's masterpiece, Seven Samurai . ) ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ವಹಿಸಿದರು. ನಿರ್ದೇಶಕರಾಗಿ ಕನ್ನಡದ ಚಿತ್ರರಂಗದಲ್ಲಿ ಹೊಸ ಅಲೆಯು ನಿರ್ಮಾಣವಾಗಲು ಕಾರಣರಾದವರು. ನಿರ್ದೇಶನದ ಧಾರಾವಾಹಿ "ಮಾಲ್ಗುಡಿ ಡೇಸ್" ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ನೀಡಿತು. ಅರುಂದತಿ ನಾಗ್ ಇವರ ದಂಪತಿ. 30ನೆ ಸ...