ಸಹಾರ one ಸುರ್ ಕ್ಷೇತ್ರ ಸಂಗೀತ ಕಾರ್ಯಕ್ರಮದಲ್ಲಿ

ಸಹಾರ one ಸುರ್ ಕ್ಷೇತ್ರ ಸಂಗೀತ ಕಾರ್ಯಕ್ರಮ- ಪಾಕಿಸ್ತಾನ ಮತ್ತು ಭಾರತದ ಹಾಡುಗಾರರ ನಡುವಿನ ಸ್ಪರ್ಧೆ.

ಮಾತೃ ಪ್ರಧಾನ ಹಾಡುಗಳು ಈ ದಿನದ ಕಾರ್ಯಕ್ರಮದ ವಿಶೇಷವಾಗಿದ್ದಿತು. ಪ್ರತಿಯೊಬ್ಬ ಸ್ಪರ್ಧಿಯು ಮನಮೋಹಕವಾಗಿ ಹಾಡಿ, ತಾಯಿಗೆ ಸೀಮೆಯ ಅಂತರವಿಲ್ಲ. ಬಡತನ, ಸಿರಿತನದ ಪರಿಧಿಗೆ ಸಿಳುಕಿದವಳಲ್ಲ ಎಂದು ಸಾರಿದರು.

ಪ್ರತಿಯೊಂದು ಹಾಡು ಹಾಡುಗಾರರ, ತೀರ್ಪುಗಾರರ, ನಿರೂಪಕಿಯ ಕಣ್ಣಿನಲ್ಲಿ ಮಮತೆಯ ಕಣ್ಣೀರಿಗೆ ಸಾಕ್ಷಿಯಾಯಿತು.

ಜೀವನದಲ್ಲಿ ನಮ್ಮ ಜೊತೆ ಯಾರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾಯಿಯ ಆಶೀರ್ವಾದ, ಅವಳ ನಿಸ್ವಾರ್ಥ ಪ್ರೀತಿ ಮಮತೆ ನಮ್ಮನ್ನು ಸದಾ ಕಾಪಾಡುತ್ತದೆ ಹಾಗು ಕತ್ತಲೆಯಲ್ಲಿ ಮುನ್ನಡೆಸುತ್ತದೆ.

ನಮ್ಮಲ್ಲಿ ನಂಬಿಕೆಯನ್ನು ಕಳೆದುಕೊಂಡಾಗ, ಸುತ್ತಲ ಸಮಾಜವು ನಮ್ಮನ್ನು ಕಡೆಗಣಿಸಿದಾಗ ನಮ್ಮಲ್ಲಿ ನಂಕೆಯಿಡುವವಳು ಅಮ್ಮ ಮಾತ್ರ. ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿ ಮುನ್ನಡೆಸುತ್ತಾಳೆ.

ಅಮ್ಮ ಜಗತ್ತಿನ ದೊಡ್ಡ ನಿಧಿ.

ಈ ಕಾರ್ಯಕ್ರಮವನ್ನು ಪ್ರಕಟಿಸಿದ ಸಹಾರ one ಗೆ ನನ್ನ ನಮನಗಳು.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva