ನಮ್ಮದೇ ಕನಸಿನ ಓಟದಲ್ಲಿ ಸೋಲೋದಕ್ಕಿಂತ
ಯಾವುದೋ ಫಂಕ್ಷನ್ ನಲ್ಲಿ ಯಾರೋ ಒಬ್ಬರು ನಿನ್ನ ಕೈಯಲ್ಲಿ ಕಾರ್ ತಗೊಳ್ಳೋಕೆ ಆಗೋದಿಲ್ಲ ಎಂದು ಹಂಗಿಸಿರುತ್ತಾರೆ. ಅವತ್ತೇ ಕಾರ್ ನಮ್ಮದಾಗಿಸಿಕೊಳ್ಳುವ ಹಠಕ್ಕೆ ಬೀಳ್ತಿವಿ.ಇಎಂಐ ನಲ್ಲಿ ಸಾಲ ಸೋಲ ಎಲ್ಲಾ ಸೇರಿ ಕಾರು ಮನೆ ಮುಂದೆ ನಿಲ್ಲುತ್ತೆ. ಅವತ್ತು ಹಂಗಿಸಿದವರ ವಿರುದ್ದ ಗೆದ್ದ ಖುಷಿ ಇರುತ್ತೆ.
ಅವತ್ತು ಹಂಗಿಸಿದವರು ಮತ್ತೆಲ್ಲೋ ಸಿಕ್ಕಿದಾಗ ಏನೋ ಕಾರ್ ಗೀರ್ ತಗೊಂಡ್ ಜೋರಾಗಿದ್ಯಾ.. ಸ್ವೀಟ್ ಎಲ್ಲೋ? ಅಂತಾರೆ.
ಆದರೆ ಒಮ್ಮೆ ಹಿಂದಿರುಗಿ ನೋಡಿದ್ರೆ ನಮಗೆ ಕಾರಿನ ಆಗತ್ಯವೇ ಇರೋದಿಲ್ಲ. ಹಾಗಂತ ಈಗ ಕಾರನ್ನು ಮಾರೋಕೂ ಆಗಲ್ಲ.
ಆದ್ದರಿಂದ ಯಾವುದೇ ವಿಷಯದಲ್ಲಿ ಗೆಲ್ಲಲು ಹೊರಡುವ ಮುಂಚೆ "ಈ ಗೆಲುವು ನನಗೆಷ್ಟು ಅನಿವಾರ್ಯ"? ಅಂತ ಒಮ್ಮೆ ನೋಡಬೇಕು. ಯಾರದ್ದೋ ಮೇಲಿನ ಹಠಕ್ಕೆ ಗೆಲ್ಲೋದು "ನಮ್ಮದೇ ಕನಸಿನ ಓಟದಲ್ಲಿ ಸೋಲೋದಕ್ಕಿಂತ" ಅಪಾಯಕಾರಿ.
- ಸದ್ಗುರು ಜಗ್ಗಿ ವಾಸುದೇವ್
Comments