ವಿಷ್ಣು ಸಹಸ್ರನಾಮ ಪಾರಾಯಣದ ಮಹಿಮೆಗಳು

ವಿಷ್ಣು ಸಹಸ್ರನಾಮ ಪಾರಾಯಣದ ಮಹಿಮೆಗಳು !

ಧರ್ಮರಾಜ ಕೇಳಿದರು " ಕಿಂ ಜಪನ್ ಮುಚ್ಯತೇ ಜಂತುಃ ಜನ್ಮ ಸಂಸಾರ ಬಂಧನಾತ್" ಅಂದರೆ "ಮನುಷ್ಯ ಜನ್ಮ ಸಂಸಾರ ಬಂಧನಗಳಿಂದ ಮುಕ್ತಿ ಹೊಂದಿ - ಭಗವಂತನ ಸಾಕ್ಷಾತ್ಕಾರ ಪಡೆಯಲು ಸರ್ವ ಶ್ರೇಷ್ಟ ಜಪ ಯಾವುದು?"
ಭೀಷ್ಮರು ಉತ್ತರಿಸಿದರು. ಜಪಗಳಲ್ಲಿ "ವಿಷ್ಣು ಸಹಸ್ರನಾಮ ಜಪ" ಸರ್ವಶ್ರೇಷ್ಠ ಎಂದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವಾಗ ನಾಮ ಮಂತ್ರ ತರಂಗಗಳು ಪರಿಸರ ಶುದ್ದಿ ಮಾಡಿ, ಅಪೂರ್ವ ಸನ್ನಿದಾನ ನಿರ್ಮಾಣ ಮಾಡುತ್ತವೆ.
ವಿಷ್ಣು ಸಹಸ್ರನಾಮ ಚಕ್ರ:
ಹನ್ನೊಂದರ ಮಹತ್ವ: ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ, ಸ್ಥಿತಿ, ಬಲ, ಶ್ರವಣ, ಶೀಲ , ವಿದ್ಯೆ ಇವಿಷ್ಟು ವಿಷ್ಣು ಸಹಸ್ರನಾಮದ ಚಕ್ರದಿಂದ ಅಂದರೆ ಹನ್ನೊಂದು ದಿನ. ಪ್ರತಿದಿನ 11 ಬಾರಿ ಪಾರಾಯಣ ಮಾಡುವುದರಿಂದ ಲಭ್ಯವಾಗುತ್ತವೆ. ಹನ್ನೊಂದು ಚಕ್ರ ಮುಗಿಸಿದವರಿಗೆ ಪುನರ್ಜನ್ಮವಿಲ್ಲ ಎಂದು ಹೇಳುವರು. ವಿಷ್ಣು ಸಹಸ್ರನಾಮವು ಪವಿತ್ರಕ್ಕೆ- ಪವಿತ್ರವಾಗಿ..
ಮಂಗಳಕ್ಕೆ- ಮಂಗಳ ವಾಗಿದೆ. ವಿಷ್ಣುವಿನ ಪಾರಾಯಣ ಮಾಡುವವರ ಮನೆ ಪಾವನವಾಗುತ್ತದೆ.
ಸಂವಿಧಾನ:
ಮಹಾಮಂತ್ರವಾದ ವಿಷ್ಣು ಸಹಸ್ರನಾಮದ ದೈವ ಮಹಾವಿಷ್ಣು.
ಇದನ್ನು ನೀಡಿದವರು ವೇದ ವ್ಯಾಸರು.
ಇವರ ಛಂಧಸ್ಸು ಅನುಷ್ಟಪ್ ಛಂದಃ
ಈ ಮಂತ್ರದ ಬೀಜಭಾಗ , ಅಮೃತಾಂಶೂದ್ಭವೋ ಭಾನುಃ ಸ್ತೋತ್ರ .
ಈ ಮಂತ್ರದ ಮಹಾಶಕ್ತಿ ದೇವಕೀ ನಂದನಃ ಸ್ರಷ್ಟಾ ಸ್ತೋತ್ರ.
ಇದರ ಪರಮಂತ್ರ ಉದ್ಭವಃ ಕ್ಷೋಭಣೋ ದೇವಃ ಸ್ತೋತ್ರ.
ಈ ಮಂತ್ರದ ಅನಾವರಣ ಭಾಗ ಶಂಖ ಭೃತ್ ನಂದಕೀ ಚಕ್ರೀ ಸ್ತೋತ್ರ.
ಈ ಮಂತ್ರದ ಅಸ್ತ್ರ ಭಾಗ ಶಾಂಗ ಧನ್ವಾಗದಾದರಃ ಸ್ತೋತ್ರ.
ಈ ಮಂತ್ರದ ಜಾಗೃತಿಭಾಗ ರಥಾಂಗಪಾಣಿಃ ಅಕ್ಷೋಭ್ಯ .
ಇದರ ಕವಚ ಭಾಗ ತ್ರಿಸಾಮಾಸಾಮಗಸಾಮ.
ಇಡೀ ಮಂತ್ರದ ಮೂಲಪ್ರೇರಣೆ
ಆನಂದಂ ಪರಬ್ರಹ್ಮ.
ಈ ಮಂತ್ರದ ಪಹರೆ ಋತುಃ ಸುದರ್ಶನಃ ಕಾಲ ಸ್ತೋತ್ರ.
ವಿಷ್ಣುವೇ ಜಗದೊಡೆಯ ಎಂಬುದೇ ದ್ಯಾನ.
ಇದರ ಪಠಣ, ಜಪ, ಪಾರಾಯಣವು ವಿಷ್ಣು ಪ್ರೇರಣೆಯಾಗಿದ್ದು, ಅದರಿಂದ ವಿಷ್ಣು ಪ್ರೀತನಾಗಲೀ ಎಂಬ ಭಾವನೆಯೇ ಇದರ ಪ್ರಯೋಜನ.
ಸಕಲ ಪುರುಷಾರ್ಥ ಸಿದ್ದಿ:
ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ "ಇಡೀ ಜಗತ್ತಿನ ಧೈವ ಯಾವುದು?, ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ಶ್ರೇಯಸ್ಸಾಗುತ್ತದೆ ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಯಾವುದು. ಯಾರ ಜಪ ಮಾಡುವುದರಿಂದ, ಸಂಸಾರ ಚಕ್ರದ ಬಂದನದಿಂದ , ಜನನ - ಮರಣಗಳ ಚಕ್ರದಿಂದ ಮುಕ್ತರಾಗಬಹುದು?.
ಈ ಎಲ್ಲಾ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಒಂದೇ ಉತ್ತರ ಹೇಳುತ್ತಾರೆ.
ಜಗತ್ ಪ್ರಭುವೂ, ದೇವ ದೇವನೂ, ಅನಂತನೂ, ಪುರುಷೋತ್ತಮನೂ ಆದ ಮಹಾವಿಷ್ಣುವನ್ನು ವಿಷ್ಣು ಸಹಸ್ರನಾಮದ ಮೂಲಕ ಸ್ತುತಿ ಮಾಡುವ ಎಲ್ಲರೂ ಸರ್ವ ದುಃಖಗಳಿಂದ ಪಾರಾಗುತ್ತಾರೆ. ಅಷ್ಟೇ ಅಲ್ಲದೇ ಅಂತಹವರು ನಿರಂತರವಾಗಿ ಪ್ರಗತಿಯ ಅಭ್ಯುದಯದ, ಯಶಸ್ಸಿನ ಹಾದಿಯಲ್ಲಿ ಇರುತ್ತಾರೆ.
ಶನಿಮಹಾತ್ಮನ ಸಾಡೇಸಾತಿಯ ಪ್ರಭಾವವಿರುವಾಗ ಸದಾ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವವರಿಗೆ, ಹೆಚ್ಚಿನ ತೊಂದರೆ ಇರುವುದಿಲ್ಲ. ಎಲ್ಲ ತಾಪತ್ರಯಗಳ ಪರಿಹಾರಕ, ಇಷ್ಟಪ್ರದ, ಅನಿಷ್ಟ ನಿವಾರಕ, ನಾದ ಪವಿತ್ರ ಮಹಾವಿಷ್ಣುವಿನ ಸಹಸ್ರನಾಮ ಒಂದೇ ವಿಶಿಷ್ಠವಾಗಿರುವಂಥದ್ದು.
ಸ್ವರ ತರಂಗಗಳ ಪ್ರಭಾವ:
ಬೃಹಸ್ಪತಿ (ಗುರು)ಸಹಸ್ರ ಶಾಸ್ತ್ರ ಗ್ರಥವು ಸುಂದರ ಹಾರವಾಗಿದೆ. ಬೃಹಸ್ಪತಿ ಛಂಧಸ್ಸಿನಲ್ಲಿ ಪ್ರತೀ ಸ್ತೋತ್ರದಲ್ಲಿಯೂ 36 ಸ್ವರಾಕ್ಷರ ಹಾಗೂ 36 ವ್ಯಂಜನಾಕ್ಷರಗಳಿವೆ. ಅಂದರೆ ಪ್ರತೀ ಸ್ತೋತ್ರದಲ್ಲಿ 72 ಅಕ್ಷರಗಳಿವೆ. ಒಂದು ಸಾವಿರ ಸ್ತೋತ್ರಗಳಲ್ಲಿ 72 ಸಾವಿರ ಅಕ್ಷರಗಳು. ಬೃಹಸ್ಪತಿ ಸಹಸ್ರದ ವ್ಯಾಖ್ಯಾನವೇ ವಿಷ್ಣು ಸಹಸ್ರನಾಮ ಸ್ತೋತ್ರವಾಗಿರುತ್ತದೆ. ವಿಷ್ಣು ಸಹಸ್ರನಾಮ 72 ಸಾವಿರ ನಾಡಿಗಳನ್ನು ಸಂಸ್ಕಾರ ಮಾಡಿ, ನಾಡೀಶುದ್ದಿ , ದೇಹಶುದ್ದಿ, ಮನ ಶುದ್ದಿ ಮಾಡುತ್ತದೆ.
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva